ಕೆಬಿಎಲ್ ಆಗ್ರೋ ಪ್ರೊಸೆಸಿಂಗ್ ಲೋನ್
ಪ್ರತಿ ವ್ಯಕ್ತಿ, ರೈತ ಮತ್ತು ಕೃಷಿ ಸಂಸ್ಕರಣೆಯಲ್ಲಿ ತೊಡಗಿಸಿಕೊಂಡಿರುವ ಅನೇಕ ಕಾನೂನಿನ ಮಾನ್ಯತೆ ಪಡೆದ ಘಟಕಗಳಿಗೆ ಹಣಕಾಸು ಸಾಲ ಸೌಲಭ್ಯ ನೀಡುತ್ತದೆ.. ಈ ಯೋಜನೆಯ ಉದ್ದೇಶ ಕೃಷಿ ಸಂಸ್ಕರಣಾ ಘಟಕಗಳ ಸ್ಥಾಪನೆ, ಸುಧಾರಣೆ ಮತ್ತು ವಿಸ್ತರಣೆ. ಇದರಲ್ಲಿ ಯಂತ್ರೋಪಕರಣಗಳ ಖರೀದಿಯಿಂದ ಹಿಡಿದು ವಾಹನಗಳು, ಉಪಕರಣಗಳು ಅಥವಾ ಬಂಡವಾಳವನ್ನು ಪಡೆಯುವುದರವರೆಗೆ ನಮ್ಮ ಯೋಜನೆ ನಿಮ್ಮ ಕೃಷಿ ವ್ಯವಹಾರಗಳಿಗಾಗಿ ಸದೃಢ ಸಹಾಯವನ್ನು ಒದಗಿಸುವುದೂ ಸೇರಿದೆ. ಇದು ಸುಸ್ಥಿರ ಹಣಕಾಸು, ಅನುಕೂಲಕರ ಮರುಪಾವತಿ ಮತ್ತು ಸ್ಪರ್ಧಾತ್ಮಕ ಬಡ್ಡಿ ದರಗಳ ಲಾಭಗಳಿರುವ ಕಾರಣ ನಿಮ್ಮ ಕೃಷಿ ಸಂಸ್ಕರಣಾ ಚಟುವಟಿಕೆಗಳಿಗೆ ಸಹಕಾರಿಯಾಗಿದೆ. ಮತ್ತಷ್ಟು ಓದು ಕಡಿಮೆ ಓದಿ
ನಿಮಗೇಕೆ ಈ ಸಾಲ ಸೂಕ್ತ
ಸರಳ ಪರಿಹಾರಗಳೊಂದಿಗೆ ನಿಮ್ಮ ಕೃಷಿ ಅಗತ್ಯತೆಗಳಿಗೆ ಬೆಂಬಲ
ಅನುಕೂಲಕರ ಕಂತುಗಳೊಂದಿಗೆ ಕಾರ್ಯಾಚರಣೆ ವೆಚ್ಚಗಳಿಗಾಗಿ 18 ತಿಂಗಳುಗಳ ವಿಸ್ತರಣೆಯನ್ನು ಆನಂದಿಸಿ
ಕೃಷಿ ಮತ್ತು ಸಂಬಂಧಿತ ಕೃಷಿ ಚಟುವಟಿಕೆಗಳನ್ನು ಬೆಂಬಲಿಸುತ್ತದೆ
ಭದ್ರತೆ ಮತ್ತು ನಂಬಿಕೆಯನ್ನು ಖಾತ್ರಿಪಡಿಸುತ್ತಾ ಚಿನ್ನಾಭರಣಗಳು ಅಥವಾ ನಾಣ್ಯಗಳನ್ನು ಮೇಲಾಧಾರವಾಗಿ ಬಳಸಿ
ಅರ್ಹತೆ
- ಕೃಷಿ ಸಂಸ್ಕರಣೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳು
- ಸಂಬಂಧಪಟ್ಟ ಯಂತ್ರೋಪಕರಣಗಳು ಅಥವಾ ಉಪಕರಣಗಳ ಮಾಲೀಕರು
- ಗುರುತು ಮತ್ತು ವಿಳಾಸವಿರುವ ಮಾನ್ಯ ದಾಖಲೆಗಳು
- ಕೃಷಿ ಸಂಸ್ಕರಣೆಯಲ್ಲಿ ಕಾನೂನಾತ್ಮಕವಾಗಿ ಗುರುತಿಸಲಾದ ಸಂಸ್ಥೆಗಳು, ಟ್ರಸ್ಟ್ ಗಳು ಮತ್ತು ಸ್ವ-ಸಹಾಯ ಗುಂಪುಗಳು.
- ಉತ್ತಮ ಹಣಕಾಸು ಸ್ಥಿತಿ
- ವ್ಯವಸಾಯದ ಘಟಕದ ಮಾನ್ಯತೆ ಪಡೆದ ಗುರುತು ಮತ್ತು ಪುರಾವೆ
ಅಗತ್ಯವಿರುವ ದಾಖಲೆಗಳು
- CIBIL/CRIF ಮತ್ತು ಕೆವೈಸಿ ದಾಖಲೆಗಳು
- ಯೋಜನೆ ಮತ್ತು ಅಂದಾಜು (ಅನ್ವಯವಾಗುತ್ತಿದ್ದಲ್ಲಿ)
- RTCS
- CERSAI
- EC ಮತ್ತು RTC
- ಆದಾಯ ತೆರಿಗೆ ಪಾವತಿಗಳು, ಆದಾಯ ಪುರಾವೆ
- ಆಸ್ತಿಗಾಗಿ ಕಾನೂನು ದಾಖಲೆಗಳು
- ಯೋಜನೆ ವರದಿ
- ವಾರ್ಷಿಕ ಆದಾಯ ವರದಿ
- ಉದ್ಯಮ್
- ವಿಮೆ ನಕಲು ಪ್ರತಿ ಮತ್ತು ಸ್ಟಾಕ್ ಪ್ರತಿ (ಅನ್ವಯವಾಗುತ್ತಿದ್ದಲ್ಲಿ)
1,2,3...ರೀತಿಯಾಗಿ ಸರಳ
3 ಸರಳ ಹಂತಗಳಲ್ಲಿ ಕೆಬಿಎಲ್ ಆಗ್ರೋ ಪ್ರೊಸೆಸಿಂಗ್ ಲೋನ್ ಗಾಗಿ ಅರ್ಜಿ ಸಲ್ಲಿಸಿ
ಹಂತ 1
ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ
ನಿಮ್ಮ ಹತ್ತಿರದ ಕರ್ನಾಟಕ ಬ್ಯಾಂಕ್ ಶಾಖೆಗೆ ಹೋಗಿ
ಹಂತ 2
ನಿಮ್ಮ ಮೂಲ ವಿವರಗಳೊಂದಿಗೆ ಪ್ರಾರಂಭಿಸಿ
ನಿಮ್ಮ ಮೂಲ ವಿವರಗಳನ್ನು ಒದಗಿಸಿ ಮತ್ತು ನಿಮ್ಮ ದಾಖಲೆಗಳನ್ನು ಕೈಯಲ್ಲಿಡಿ
ಹಂತ 3
ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ
ನಿಮ್ಮ ಖಾತೆಯನ್ನು ತೆರೆದಾಗ ನಮ್ಮ ಶಾಖೆಯ ಅಧಿಕಾರಿಗಳು ನಿಮಗೆ ತಿಳಿಸುತ್ತಾರೆ
ನಿಮಗಾಗಿರುವ ಇತರ ಆಯ್ಕೆಗಳನ್ನು ನೋಡಿ
ಹಣಕಾಸಿನ ಶ್ರೇಷ್ಠತೆಗಾಗಿ ಆರಿಸಲಾಗಿರುವ ಸಾವಿರಾರು ಜನರ ಭರವಸೆ
ಸರಳ ಮಾಹಿತಿಯೊಂದಿಗೆ ಅಗ್ರಿಬ್ಯಾಂಕಿಂಗ್ ಸರಳೀಕೃತಗೊಳಿಸಿ
ಪ್ರತಿ ಕ್ಷಣವೂ ನಿಮಗೆ ಮಾಹಿತಿ ಒದಗಿಸುವ ನಮ್ಮ ಸಂಪನ್ಮೂಲಗಳು
ಪ್ರಶ್ನೆಗಳಿವೆಯೇ? ನಾವು ಉತ್ತರಿಸುತ್ತೇವೆ
ಕೃಷಿ ಸಂಸ್ಕರಣೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬ ವ್ಯಕ್ತಿ, ರೈತ, ರೈತರ ಸಮೂಹ, ಸಂಸ್ಥೆಗಳು, ಪಾಲುದಾರಿಕೆಗಳು, ಟ್ರಸ್ಟ್ ಗಳು, SHG ಗಳು ಮತ್ತು ಇತರ ಯಾವುದೇ ಕಾನೂನು ಘಟಕಗಳು ಈ ಸಾಲವನ್ನು ಪಡೆಯಬಹುದಾಗಿದೆ
ನಿಮ್ಮ ಕೃಷಿ ದಾಖಲೆಗಳೊಂದಿಗೆ ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ. ಅರ್ಜಿ ಪ್ರಕ್ರಿಯೆಯ ಮೂಲಕ ನಮ್ಮ ತಂಡ ನಿಮಗಾಗಿ ಸಹಾಯ ಮಾಡಲು ತಯಾರಿದ್ದು ಸ್ಪಷ್ಟತೆ ಮತ್ತು ಸಮರ್ಥತೆಯನ್ನು ಖಾತ್ರಿಪಡಿಸಿಕೊಳ್ಳುತ್ತದೆ. ತ್ವರಿತ ಪ್ರಕ್ರಿಯೆಗಾಗಿ ನಮ್ಮ ವೆಬ್ಸೈಟ್ ಮೂಲಕ ಸಹ ನೀವು ಅರ್ಜಿ ಸಲ್ಲಿಸಬಹುದು.
ನಿಮ್ಮ ಕೃಷಿ ಸಂಸ್ಕರಣಾ ಕಾರ್ಯಗಳಿಗೆ ಸುಸ್ಥಿರ ಹಣಕಾಸು ಸಹಾಯವನ್ನು ಒದಗಿಸಲು ಈ ಯೋಜನೆಯಡಿಯಲ್ಲಿನ ಗರಿಷ್ಟ ಸಾಲದ ಮೊತ್ತವು ₹15 ಲಕ್ಷಗಳು.
Cಸಾಲದಿಂದ ಪಡೆದ ಯಂತ್ರೋಪಕರಣಗಳು ಅಥವಾ ಸ್ವತ್ತುಗಳ ಹೈಪೋಥಿಕೇಷನ್ ಮತ್ತು ಸಾಲದ ಮೊತ್ತದ ಕನಿಷ್ಠ 75% ಮೌಲ್ಯ ಮಾಡಿದ ಕೃಷಿಯೇತರ ಸ್ಥಿರಾಸ್ಥಿ ಸ್ವತ್ತುಗಳು ಮೇಲಾಧಾರವಾಗಿರುತ್ತದೆ.
ಬಡ್ಡಿಯನ್ನು EBLR ಮಾರ್ಗಸೂಚಿಗಳ ಪ್ರಕಾರ ವಿಧಿಸಲಾಗುತ್ತಿದ್ದು ಇದನ್ನು ಸಾಮಾನ್ಯವಾಗಿ ವರ್ಷಕ್ಕೊಮ್ಮೆ ಅಥವಾ ಕೊನೆಯ ದಿನಾಂಕಕ್ಕೆ ಪಾವತಿಸಬೇಕು.
ಹೌದು, ಸಣ್ಣ ರೈತರು ಈ ಸಾಲ ಪಡೆಯಲು ಅರ್ಹರಿರುತ್ತಾರೆ. ಆದರೆ ಅವರು ಕೃಷಿ ಸಂಸ್ಕರಣೆ ಚಟುವಟಿಕೆಗಳಲ್ಲಿ ಭಾಗಿಯಾಗಿರಬೇಕು ಮತ್ತು ಯೋಜನೆಯ ಇತರ ಅಗತ್ಯತೆಗಳನ್ನು ಸಹ ಪೂರೈಸಬೇಕು.
ಒಂದುವೇಳೆ ಮರುಪಾವತಿಗಳಲ್ಲಿ ಸಮಸ್ಯೆ ಉಂಟಾದರೆ, ಸಮಸ್ಯೆಯನ್ನು ಬಗೆಹರಿಸಲು ಮತ್ತು ಹಣಕಾಸಿನ ಸಮಗ್ರತೆಯನ್ನು ಕಾಪಾಡಲು ನಮ್ಮನ್ನು ತಕ್ಷಣವೇ ಭೇಟಿ ಮಾಡಿ. ನಾವು ನಿಮ್ಮ ವ್ಯವಹಾರ ಚಕ್ರ ಮತ್ತು ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ಅನುಕೂಲಕರ ಮರುಪಾವತಿ ಆಯ್ಕೆಗಳನ್ನು ಒದಗಿಸುತ್ತೇವೆ.
ಕೃಷಿ ಸಂಸ್ಕರಣೆ ಘಟಕಗಳು, ಯಂತ್ರೋಪಕರಣಗಳು ಅಥವಾ ವಾಹನ ಖರೀದಿ ಮತ್ತು ಬಂಡವಾಳ ಅಗತ್ಯತೆಗಳಿಗಾಗಿ ಈ ಸಾಲದ ಮೊತ್ತವನ್ನು ಬಳಸಿಕೊಳ್ಳಬಹುದು.
ಕರ್ನಾಟಕ ಬ್ಯಾಂಕಿನ ಸಾಲಗಳ ವಿಷಯದಲ್ಲಿ, EBLR ಅಥವಾ ಬಾಹ್ಯ ಮಾನದಂಡ ಸಾಲ ದರಗಳು ಒಂದು ನಿರ್ಣಾಯಕ ಉಲ್ಲೇಖ ದರವಾಗಿದೆ. ಈ ಮಾನದಂಡಕ್ಕೆ ಅನುಗುಣವಾಗಿ ಸಾಲಗಳ ಬಡ್ಡಿ ದರಗಳನ್ನು ಅಳೆಯಲಾಗುತ್ತದೆ ಮತ್ತು ಹೊಂದಿಸಲಾಗುತ್ತದೆ. ಈ ದರವನ್ನು ಬಾಹ್ಯ ಮಾರುಕಟ್ಟೆ ಅಂಶಗಳಿಂದ ನಿರ್ಧರಿಸಲಾಗುತ್ತದೆ ಮತ್ತು ಇದು ಪಾರದರ್ಶಕ ಹಾಗೂ ಡೈನಾಮಿಕ್ ಮಾನದಂಡವಾಗಿ ಕಾರ್ಯನಿರ್ವಹಿಸುತ್ತದೆ. EBLR ನೊಂದಿಗೆ ಸಾಲದ ಬಡ್ಡಿ ದರಗಳನ್ನು ಸೇರಿಸುವುದರಿಂದ, ನಾವು ಸಾಲದ ದರಗಳನ್ನು ನ್ಯಾಯೋಚಿತ, ಮಾರುಕಟ್ಟೆ ಸ್ಥಿತಿಗಳಿಗೆ ಪ್ರತಿಕ್ರಿಯಿಸುತ್ತದೆ ಮತ್ತು ನಿಯಂತ್ರಕ ಮಾರ್ಗಸೂಚಿಗಳ ಪ್ರಕಾರವಾಗಿದೆ ಎಂದು ಖಾತ್ರಿಪಡಿಸಿಕೊಳ್ಳುವ ಮೂಲಕ ನಾವು ಸಾಲಗಾರರಿಗೆ ತಮ್ಮ ಸಾಲದ ಬಡ್ಡಿದರಗಳನ್ನು ಹೇಗೆ ಹೊಂದಿಸಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸ್ಪಷ್ಟ ಮತ್ತು ಸ್ಥಿರವಾದ ಆಧಾರವನ್ನು ಒದಗಿಸುತ್ತೇವೆ.
ನಿಮ್ಮ ವ್ಯವಹಾರದ ಮಹತ್ವಾಕಾಂಕ್ಷೆಗಳಿಗೆ ಸಕಾಲಿಕ ಹಣಕಾಸು ನೆರವನ್ನು ಒದಗಿಸುವ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡು ನಾವು ಸಾಲ ಮಂಜೂರಾತಿ ಪ್ರಕ್ರಿಯೆಗೆ ಆದ್ಯತೆ ನೀಡಿದ್ದೇವೆ.
ಕೃಷಿ -ವ್ಯವಹಾರ ಸಾಲಗಳ ಮೇಲೆ ಬಡ್ಡಿ ದರಗಳನ್ನು ಸಾಮಾನ್ಯವಾಗಿ ಕೃಷಿ ಸಮುದಾಕ್ಕೆ ಬೆಂಬಲವಾಗಿ ಇರುವಂತೆ ವಿಶಿಷ್ಟವಾಗಿ ರೂಪಿಸಲಾಗಿದೆ. ಇದರಿಂದ ಇದು ಇತರೆ ಸಾಮಾನ್ಯ ವಾಣಿಜ್ಯ ಸಾಲಗಳಿಗೆ ಹೋಲಿಸಿದರೆ ಬಹಳ ಅನುಕೂಲಕರವಾಗಿರುತ್ತದೆ. ನೀವು ನಿಮ್ಮ ಅರ್ಜಿ ಪ್ರಕ್ರಿಯೆಯನ್ನು ಆರಂಭಿಸುವಾಗ ಈ ದರಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ ಏಕೆಂದರೆ ಇದು ನೇರವಾಗಿ ನಿಮ್ಮ ಮರುಪಾವತಿ ನಿಯಮಗಳು ಮತ್ತು ಸಾಲದ ಒಟ್ಟಾರೆ ವೆಚ್ಚಗಳ ಮೇಲೆ ಪರಿಣಾಮ ಬೀರುತ್ತದೆ
ಕೃಷಿ-ಸಂಸ್ಕರಣೆ ಯೋಜನೆಯನ್ನು ಕೈಗೊಳ್ಳುವುದು ಮಹತ್ವದ ನಿರ್ಧಾರವಾಗಿದೆ ಮತ್ತು ಪ್ರತಿ ಹಂತದಲ್ಲೂ ನಿಮಗೆ ಸಹಾಯ ಮಾಡಲು ನಾವು ಇಲ್ಲಿದ್ದೇವೆ. ನಿಮ್ಮ ಸಾಲವನ್ನು ಬಳಸಿಕೊಳ್ಳಲು ಮತ್ತು ಮರುಪಾವತಿಸಲು ಸ್ಪಷ್ಟವಾದ ಯೋಜನೆಯೊಂದಿಗೆ ಸಿದ್ಧರಾಗಿ ಬರಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ ಮತ್ತು ಅಪ್ಲಿಕೇಶನ್ ಪ್ರಕ್ರಿಯೆಯ ಸಂಕೀರ್ಣತೆಗಳನ್ನು ನಾವು ನಿಭಾಯಿಸುತ್ತೇವೆ. ನಿಮ್ಮ ಸಾಹಸೋದ್ಯಮಕ್ಕೆ ಪ್ರಯೋಜನಕಾರಿಯಾಗಬಹುದಾದ ಸಂಭಾವ್ಯ ಸಬ್ಸಿಡಿಗಳು ಅಥವಾ ವಿಶೇಷ ಕಾರ್ಯಕ್ರಮಗಳ ಕುರಿತು ನಿಮಗೆ ತಿಳಿಸಲು ನಾವು ಸಿದ್ಧರಾಗಿದ್ದೇವೆ. ಒಮ್ಮೆ ನಿಮ್ಮ ಲೋನ್ ಜಾರಿಯಾದರೆ, ನಾವು ನಿಮ್ಮೊಂದಿಗೆ ಪಾಲುದಾರರಾಗಿ ಮುಂದುವರಿಯುತ್ತೇವೆ, ನಿಮ್ಮ ಸಾಲವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಲಹೆ ಮತ್ತು ಸಾಧನಗಳನ್ನು ನೀಡುತ್ತೇವೆ, ನಿಮ್ಮ ಆರ್ಥಿಕ ಆರೋಗ್ಯವನ್ನು ನಮ್ಮ ಪ್ರಮುಖ ಆದ್ಯತೆಯಾಗಿರಿಸಿಕೊಳ್ಳುತ್ತೇವೆ.
ಸಾಲದ ಬಳಕೆ ಮತ್ತು ಮರುಪಾವತಿಯ ಕುರಿತು ನೀವು ಸ್ಪಷ್ಟ ಯೋಜನೆಯನ್ನು ಹೊಂದಿರುವಿರಿ ಎಂದು ಖಚಿತಪಡಿಸಿಕೊಳ್ಳಿ. ಆನ್ಲೈನ್ ಅರ್ಜಿ ಪ್ರಕ್ರಿಯೆಗಾಗಿ ಎಲ್ಲಾ ಅಗತ್ಯ ದಾಖಲೆಗಳನ್ನು ತಯಾರಿಟ್ಟುಕೊಳ್ಳಿ. ಕೃಷಿ-ವ್ಯವಹಾರ ಸಾಲಗಳಿಗಾಗಿ ಲಭ್ಯವಿರುವ ಸರ್ಕಾರೀ ಸಬ್ಸಿಡಿಗಳು ಅಥವಾ ವಿಶೇಷ ಕಾರ್ಯಕ್ರಮಗಳನ್ನು ನಿರ್ಲಕ್ಷಿಸದಿರಿ. ನಿಮ್ಮ ಆರ್ಥಿಕ ಸ್ಥಿತಿಯನ್ನು ನಿರ್ವಹಿಸಲು ನಿಮ್ಮ ಸಾಲವನ್ನು ನಿಯಮಿತವಾಗಿ ನಿಗಾವಣೆ ಮತ್ತು ನಿರ್ವಹಣೆ ಮಾಡಿ.