ಕೆಬಿಎಲ್ ಎಕ್ಸ್ಪ್ರೆಸ್ ಸುಲಭ ಸವಾರಿ ಸಾಲ
ವೇಗವಾದ, ಸರಳ ಮತ್ತು ಅನುಕೂಲ ಸಾಲಸೌಲಭ್ಯವನ್ನು ಒದಗಿಸುವ ಸಾಲಯೋಜನೆಯಿಂದ ದ್ವಿಚಕ್ರ ವಾಹನವನ್ನು ಹೊಂದುವ ನಿಮ್ಮ ಕನಸುಗಳನ್ನು ಸಾಕಾರಗೊಳಿಸಿ. ಹೊಚ್ಚಹೊಸ ಮಾದರಿಯ ಬೈಕ್ ಆಗಿರಬಹುದು ಅಥವಾ ನೆಚ್ಚಿನ ಉಪಯೋಗಿಸಿದ ಬೈಕ್ ಆಗಿರಬಹುದು ತಡೆರಹಿತ ಡಿಜಿಟಲ್ ಪ್ರಕ್ರಿಯೆ ಮತ್ತು ಮಿಂಚಿನ ವೇಗದ ಆರಂಭಿಕ ಅನುಮೋದನೆಯೊಂದಿಗೆ ನಿಮ್ಮ ಸಹಾಯಕ್ಕೆ ನಾವು ಇದ್ದೇವೆ. ನಮ್ಮ ದ್ವಿಚಕ್ರ ವಾಹನದ ಸಾಲವು ನಿಮ್ಮ ವಿವಿಧ ಹಣಕಾಸಿನ ಅಗತ್ಯತೆಗಳಿಗೆ ಸರಿಹೊಂದುತ್ತದೆ. ಹೊಸ ಬೈಕ್‌ಗಳಿಗೆ ಅಥವಾ ಈಗಾಗಲೇ ಉಪಯೋಗಿಸಿದ ಬೈಕ್‌ಗಳಿಗೆ ಆಕರ್ಷಕ ನಿಯಮಾವಳಿಗಳೊಂದಿಗೆ ನಿಮ್ಮ ಬೈಕ್ ಸವಾರಿಯನ್ನು ರೋಚಕ ಅಧ್ಯಾಯವನ್ನಾಗಿಸುವುದಕ್ಕಾಗಿ ನಮ್ಮ ಸಾಲಸೌಲಭ್ಯವಿದೆ.Read more
ಈ ಸಾಲ ನಿಮಗಾಗಿ ಏಕೆ
ನಿಮಗೆ ಬೇಕಾದುದನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ
ವಿವಿಧ ರೀತಿಯ ವೇತನದಾರರು, ಸ್ವಯಂ ಉದ್ಯೋಗಿಗಳು, ವೃತ್ತಿಪರರು ಮತ್ತು ಕೃಷಿಕರಿಗೆ ಇದು ದೊರಕುತ್ತದೆ
ನಿಮ್ಮ ದ್ವಿಚಕ್ರ ವಾಹನದ ಆನ್-ರೋಡ್ ಬೆಲೆಯಲ್ಲಿ ಶೇಕಡಾ 85% ವರೆಗಿನ ಹಣಕಾಸು ಸೌಲಭ್ಯವನ್ನು ಆನಂದಿಸಿ
60 ತಿಂಗಳವರೆಗೆ ಮರುಪಾವತಿ ಆಯ್ಕೆಗಳು ಲಭ್ಯವಿದೆ
ಅರ್ಹತೆ
- ಸಂಬಳ ಪಡೆಯುವ ವ್ಯಕ್ತಿ: ತಿಂಗಳ ಸಂಬಳ ₹ 5,000
- ಸ್ವಯಂ ಉದ್ಯೋಗಿ: ವಾರ್ಷಿಕ ಆದಾಯ ₹4,000
- 18 ರಿಂದ 60 ವರ್ಷ ವಯಸ್ಸಿನ ಅಭ್ಯರ್ಥಿಗಳು
- ಕಂಪನಿ/ಸಂಸ್ಥೆಯು ಅದರ ಕಾರ್ಯನಿರ್ವಾಹಕ, ವ್ಯವಸ್ಥಾಪಕ ನಿರ್ದೇಶಕ ಅಥವಾ ವ್ಯವಸ್ಥಾಪಕ ಪಾಲುದಾರರ ಹೆಸರಿನಲ್ಲಿ
- ಬ್ಯಾಂಕಿನ ಮಾನದಂಡಗಳನ್ನು ಪೂರೈಸುವುದು
- NRI ಹಣಕಾಸು ಮತ್ತು ವಸತಿ ಸ್ಥಿತಿ
ಅಗತ್ಯವಿರುವ ದಾಖಲೆಗಳು
- PAN ಕಾರ್ಡ್d
- ಆಧಾರ್ ಕಾರ್ಡ್ ಅಥವಾ ಚಾಲನಾ ಪರವಾನಗಿ
- KYC ಡಾಕ್ಯುಮೆಂಟ್‌ಗಳ ಸ್ಕ್ಯಾನ್ ಅಥವಾ ಸಾಫ್ಟ್ ಕಾಪಿ
- PAN ಕಾರ್ಡ್d
- ಆಧಾರ್ ಕಾರ್ಡ್ ಅಥವಾ ಚಾಲನಾ ಪರವಾನಗಿ
- KYC ಡಾಕ್ಯುಮೆಂಟ್‌ಗಳ ಸ್ಕ್ಯಾನ್ ಅಥವಾ ಸಾಫ್ಟ್ ಕಾಪಿ
1,2,3 ಹಂತಗಳು ಅಷ್ಟು ಸುಲಭ...
3 ಸರಳ ಹಂತಗಳಲ್ಲಿ ಕೆಬಿಎಲ್ ಎಕ್ಸ್ಪ್ರೆಸ್ ಸುಲಭ ಸವಾರಿ ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಿ
ಹಂತ 1
ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ
ನಿಮ್ಮ ಹತ್ತಿರದ ಕರ್ನಾಟಕ ಬ್ಯಾಂಕ್ ಶಾಖೆಗೆ ಹೋಗಿ
ಹಂತ 2
ನಿಮ್ಮ ಮೂಲ ವಿವರಗಳೊಂದಿಗೆ ಪ್ರಾರಂಭಿಸಿ
ನಿಮ್ಮ ಮೂಲ ವಿವರಗಳನ್ನು ಒದಗಿಸಿ ಮತ್ತು ನಿಮ್ಮ ದಾಖಲೆಗಳನ್ನು ಕೈಯಲ್ಲಿಡಿ
ಹಂತ 3
ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ
ನಿಮ್ಮ ಖಾತೆಯನ್ನು ತೆರೆದಾಗ ನಮ್ಮ ಶಾಖೆಯ ಅಧಿಕಾರಿಗಳು ನಿಮಗೆ ತಿಳಿಸುತ್ತಾರೆ
ನಿಮಗಾಗಿ ಇರಬಹುದಾದ ಇತರ ಆಯ್ಕೆಗಳನ್ನು ವೀಕ್ಷಿಸಿ
ಸಾವಿರಾರು ಜನರು ನಂಬುವ ಹಾಗೂ ಆರ್ಥಿಕ ಉತ್ಕೃಷ್ಟತೆಗಾಗಿ ಆಯ್ಕೆಯಾಗಿರುವುದು
ಸಾಲವನ್ನು ಸರಳೀಕರಿಸಿ- ಸುಲಭ ಓದಿನೊಂದಿಗೆ
ನಿಮಗೆ ಮಾಹಿತಿ ನೀಡುವ ಚುಟುಕಾದ ವಿವರಗಳು
ಪ್ರಶ್ನೆಗಳಿವೆಯೇ? ನಮ್ಮ ಬಳಿ ಉತ್ತರಗಳಿವೆ
ನಿಮ್ಮ ಮರುಪಾವತಿ ಆದ್ಯತೆಗಳ ಮೇಲೆ ನೀವು 1 ರಿಂದ 5 ವರ್ಷಗಳ ಅವಧಿಯನ್ನು ಆಯ್ಕೆ ಮಾಡಬಹುದು.
ದ್ವಿಚಕ್ರ ವಾಹನದ ವೆಚ್ಚ ಹಾಗೂ ರಸ್ತೆ ತೆರಿಗೆ, ವಿಮೆ ಮತ್ತು ನೋಂದಣಿ ಶುಲ್ಕಗಳು ಸೇರಿದಂತೆ ಆನ್-ರೋಡ್ ಬೆಲೆಯ 85% ವರೆಗೆ ಸಾಲ ನೀಡುವುದನ್ನು ಒಳಗೊಂಡಿದೆ.
ಹೌದು, ಎನ್‌ಆರ್‌ಐಗಳು ಕರ್ಣಾಟಕ ಬ್ಯಾಂಕ್‌ನಲ್ಲಿ ಬೈಕ್ ಸಾಲಕ್ಕೆ ಅರ್ಹರಾಗಿರುತ್ತಾರೆ. NRI ಬ್ಯಾಂಕಿಂಗ್ ಸೇವೆಗಳ ಮೂಲಕ ಕಾರು ಅಥವಾ ಸ್ಕೂಟರ್ ಖರೀದಿಸಲು ಆಸಕ್ತಿ ಹೊಂದಿರುವವರಿಗೆ ನಾವು ಸೂಕ್ತವಾದ ಸಾಲಗಳನ್ನು ನೀಡುತ್ತೇವೆ.
ಕರ್ಣಾಟಕ ಬ್ಯಾಂಕ್ ಮೂಲಕ ದ್ವಿಚಕ್ರ ವಾಹನಗಳನ್ನು ಖರೀದಿಸಲು ಸಾಮಾನ್ಯವಾಗಿ ಸಮಗ್ರ ವಿಮೆಯು ಕಡ್ಡಾಯವಾಗಿರುತ್ತದೆ.
ವಾಹನದ ಆನ್-ರೋಡ್ ವೆಚ್ಚದಲ್ಲಿ ನೀವು 15% ತಕ್ಷಣವೇ ನೀಡಬೇಕಾದ ಪಾವತಿಯನ್ನು ಮಾಡಬೇಕಾಗುತ್ತದೆ.
ವಾಹನ ಸಾಲಗಳು, ಕಾರು ಮತ್ತು ದ್ವಿಚಕ್ರ ವಾಹನ ಸಾಲಗಳೆರಡನ್ನೂ ಒಳಗೊಂಡಿದ್ದು, ವ್ಯಕ್ತಿಗಳಿಗೆ ವಾಹನಗಳನ್ನು ಖರೀದಿಸಲು ಸಹಾಯ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ಈ ಸಾಲದ ಪ್ರಮುಖ ಪ್ರಯೋಜನವೇನೆಂದರೆ ಪೂರ್ಣ ಬೆಲೆಯನ್ನು ಮುಂಗಡವಾಗಿ ಪಾವತಿಸದೆ ವಾಹನದ ತಕ್ಷಣದ ಮಾಲೀಕತ್ವವನ್ನು ತಮ್ಮದಾಗಿಸಿಕೊಳ್ಳುವುದು. ಸ್ಪರ್ಧಾತ್ಮಕ ಬಡ್ಡಿದರ ಮತ್ತು ತ್ವರಿತ ಸಾಲ ಪ್ರಕ್ರಿಯೆಯಿಂದ ತ್ವರಿತವಾಗಿ ವಾಹನ ಖರೀದಿಸಬಹುದು. ನಿಯಮಿತ ಮರುಪಾವತಿಯ ಮೂಲಕ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಪಡೆಯಲು ಅಥವಾ ಸುಧಾರಿಸಲು ವಾಹನ ಸಾಲಗಳು ಅವಕಾಶವನ್ನು ಒದಗಿಸುತ್ತವೆ.
ವಾಹನದ ಸಾಲಗಳ ಮೇಲಿನ ಬಡ್ಡಿ ದರಗಳು ಸ್ಥಿರವಾಗಿರಬಹುದು ಅಥವಾ ಫ್ಲೋಟಿಂಗ್ ಆಗಿರಬಹುದು ಹಾಗು ಇದು ವಾಹನದ ಮಾದರಿ, ಸಾಲದ ಅವಧಿ ಮತ್ತು ನಿಮ್ಮ ಕ್ರೆಡಿಟ್ ಇತಿಹಾಸದಂತಹ ಅಂಶಗಳಿಗೆ ಅವಲಂಬಿಸಿರುತ್ತದೆ. ಸಾಲಕ್ಕಾಗಿ EMI (ಸಮಾನ ಮಾಸಿಕ ಕಂತು) ಅಸಲು ಮತ್ತು ಬಡ್ಡಿಯ ಅಂಶಗಳನ್ನು ಒಳಗೊಂಡಿರುತ್ತದೆ ಹಾಗೂ ನೀವು ಮರುಪಾವತಿ ಮಾಡುವಾಗ, ಬಡ್ಡಿಯನ್ನು ಕಡಿಮೆಯಾಗುವ ಬಾಕಿಯ ಮೇಲೆ ಲೆಕ್ಕಹಾಕಲಾಗುತ್ತದೆ. ವಾಹನ ಸಾಲ ಅಥವಾ ದ್ವಿಚಕ್ರ ವಾಹನ ಸಾಲವನ್ನು ಪರಿಗಣಿಸುವಾಗ, ಸಾಲದ ಬಡ್ಡಿ, ವಿಮೆ, ನಿರ್ವಹಣೆ ಮತ್ತು ಇಂಧನ ವೆಚ್ಚಗಳು ಸೇರಿದಂತೆ ಮಾಲೀಕತ್ವದ ಒಟ್ಟು ವೆಚ್ಚವನ್ನು ನೋಡುವುದು ಮುಖ್ಯವಾಗುತ್ತದೆ. ಸಾಲದ ಅವಧಿ ಮತ್ತು EMI ನಿಮ್ಮ ಮಾಸಿಕ ಬಜೆಟ್ ಅನ್ನು ಕಡಿತಗೊಳಿಸದೇ ನಿಮ್ಮ ಹಣಕಾಸಿನ ಸಾಮರ್ಥ್ಯದೊಂದಿಗೆ ಹೊಂದಿಕೆಯಾಗಬೇಕು. ಆಕರ್ಷಕ ಬೈಕ್ ಸಾಲದ ಬಡ್ಡಿ ದರಗಳೊಂದಿಗೆ, ಮೋಟಾರ್‌ಸೈಕಲ್ ಅಥವಾ ಸ್ಕೂಟರ್ ಅನ್ನು ಹೊಂದುವುದು ಕೈಗೆಟುಕುತ್ತದೆ. ನಮ್ಮ ದ್ವಿಚಕ್ರ ವಾಹನ ಸಾಲದ ಬಡ್ಡಿ ದರದ ಯೋಜನೆಗಳನ್ನು ಕೈಗೆಟುಕುವಿಕೆ ಹಾಗೂ ಹೊಂದಾಣಿಕೆ ಆಗುವಂತೆ ವಿನ್ಯಾಸಗೊಳಿಸಲಾಗಿದೆ. ನಿಮ್ಮ ವೈಯಕ್ತಿಕ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿರುತ್ತದೆ ಹಾಗೂ ನೀವು ಯಾವಾಗಲೂ ಬಯಸುವ ದ್ವಿಚಕ್ರ ವಾಹನವನ್ನು ಹೊಂದುವ ಹಾದಿಯಲ್ಲಿ ನಿಮ್ಮನ್ನು ಕೊಂಡೊಯ್ಯುತ್ತದೆ.
ಉತ್ತಮ ಬಡ್ಡಿ ದರ ಮತ್ತು ನಿಯಮಗಳನ್ನು ಪಡೆಯಲು ಹಲವುಕಡೆ ವಿಚಾರಿಸಿ ಹಾಗೂ ಸಾಲನೀಡುವವರೊಂದಿಗೆ ಮಾತುಕತೆಯನ್ನೂ ನಡೆಸಿ. ಸಾಲದ ಮೊತ್ತ ಮತ್ತು ಬಡ್ಡಿ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ಗಣನೀಯವಾದ ತಕ್ಷಣವೇ ಮಾಡಬಹುದಾದ ಡೌನ್ ಪೇಮೆಂಟ್ ಅನ್ನು ಪರಿಗಣಿಸಿ. ಉತ್ತಮ ಕ್ರೆಡಿಟ್ ಸ್ಕೋರ್‌ನ ಪ್ರಾಮುಖ್ಯತೆಯನ್ನು ನಿರ್ಲಕ್ಷಿಸಬೇಡಿ, ಏಕೆಂದರೆ ಇದು ನಿಮಗೆ ನೀಡುವ ಸಾಲದ ನಿಯಮಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಪೆನಾಲ್ಟಿಗಳನ್ನು ತಪ್ಪಿಸಲು ಮತ್ತು ನಿಮ್ಮ ಕ್ರೆಡಿಟ್ ಇತಿಹಾಸದ ಮೇಲೆ ಋಣಾತ್ಮಕ ಛಾಯೆಯನ್ನು ತಪ್ಪಿಸಲು ಸಮಯೋಚಿತ ಮರುಪಾವತಿಗಳನ್ನು ಮಾಡುವುದನ್ನು ಖಚಿತಪಡಿಸಿಕೊಳ್ಳಿ.