KBL ಡೈರೆಕ್ಟ್‌ಪೇ
ಕೆಬಿಎಲ್ ಡೈರೆಕ್ಟ್ ಪೇ ನೀವು ನಿಮ್ಮ ಮನೆಯಲ್ಲಿ ಅಥವಾ ಕಚೇರಿಯಲ್ಲಿಯೇ ಕುಳಿತು ವಿದ್ಯುತ್ ಬಿಲ್, ದೂರವಾಣಿ, ಮೊಬೈಲ್ ವಿಮೆ ರೀತಿಯ ನಿಮ್ಮ ಎಲ್ಲಾ ಯುಟಿಲಿಟಿ ಬಿಲ್ಸ್ ಪಾವತಿಸಲು ಒಂದು ಸರಳ ವಿಧಾನವಾಗಿದೆ. ಈ ಸೇವೆಗಳು ಕೇವಲ ಬಿಲ್ ಗಳ ಪಾವತಿಗಾಗಿ ಮಾತ್ರ ಸೀಮಿತವಾಗದೆ ನೀವು ನಿಮ್ಮ ಮೊಬೈಲ್ ರಿಚಾರ್ಜ್, ವಾರ ಪತ್ರಿಕೆಗಳ ಚಂದಾದಾರಿಕೆ ಮತ್ತು ದತ್ತಿ ಸಂಸ್ಥೆಗಳಿಗೆ ದೇಣಿಗೆ ರೀತಿಯ ಎಲ್ಲವನ್ನೂ ಸುಲಭವಾಗಿ, ಒಂದೇ ಸ್ಥಳದಲ್ಲಿ ಆನ್ಲೈನ್ ಮೂಲಕ ಮಾಡಬಹುದು. ಇದು ಆಧುನಿಕ ಬಳಕೆದಾರರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು ನಿಮ್ಮ ಸಮಯ ಉಳಿಸುತ್ತದೆ, ತಡ ಶುಲ್ಕಗಳನ್ನು ತಪ್ಪಿಸುತ್ತದೆ ಮತ್ತು ಯಾವುದೇ ಸಮಸ್ಯೆಯಿಲ್ಲದೆ ಬಿಲ್ ಪಾವತಿಸುವ ಅನುಭವವನ್ನು ಉತ್ತಮಗೊಳಿಸುತ್ತದೆ.
Bills and recharges of any kind
ನಮ್ಮನ್ನು ಏಕೆ ಆಯ್ಕೆ ಮಾಡಬೇಕು?
1, 2, 3… ರೀತಿಯಾಗಿ ಬಹಳ ಸುಲಭ
3 ಸರಳ ಹಂತಗಳಲ್ಲಿ ನಿಮ್ಮ ಬಿಲ್ ಪಾವತಿಸಿ
ಹಂತ 1
ಲಾಗಿನ್
ಆನ್ಲೈನ್ ಬ್ಯಾಂಕಿಂಗ್ ಅಥವಾ ಕೆಬಿಎಲ್ ಮೊಬೈಲ್ ಪ್ಲಸ್ ಆಪ್ ನಲ್ಲಿ ಲಾಗಿನ್ ಆಗಿ
ಹಂತ 2
ಬಿಲ್ ಪಾವತಿಗಳನ್ನು ಆಯ್ಕೆ ಮಾಡಿ
ನೀವು ಪಾವತಿಸಬೇಕಾದ ಬಿಲ್ ಆಯ್ಕೆ ಮಾಡಿ ಮತ್ತು ನಿಮ್ಮ ವಿವರಗಳನ್ನು ಪರಿಶೀಲಿಸಿ
ಹಂತ 3
ಹಣ ಪಾವತಿಸಿ
ಪಾವತಿ ವಿಧಾನವನ್ನು ಆಯ್ಕೆ ಮಾಡಿ ಮತ್ತು ಪಾವತಿ ಮಾಡಿ
ಪ್ರಶ್ನೆಗಳಿವೆಯೇ? ನಾವು ಉತ್ತರಿಸುತ್ತೇವೆ
ಕೆಬಿಎಲ್ ಡೈರೆಕ್ಟ್ ಪೇ ಸುಲಭವಾಗಿರುವ ಮತ್ತು ಹಿಂದಿನ ಪಾವತಿ ವಿವರಗಳಿರುವ ವೈಶಿಷ್ಟ್ಯ ಸೇವೆಯನ್ನು ಒದಗಿಸುತ್ತದೆ. ನೀವು ಬಿಲ್ ವಿವರಗಳು ಮತ್ತು ಪಾವತಿ ದಿನಾಂಕಗಳು ಸೇರಿಕೊಂಡಂತೆ ನಿಮ್ಮ ಎಲ್ಲಾ ಹಿಂದಿನ ವಹಿವಾಟುಗಳನ್ನು ನೋಡಬಹುದು ಮತ್ತು ನಿಮ್ಮ ಖರ್ಚುಗಳ ಲೆಕ್ಕಮಾಡಬಹುದು.
ಕೆಬಿಎಲ್ ಡೈರೆಕ್ಟ್ ಪೇ ನಲ್ಲಿ ಬಿಲ್ ಪಾವತಿಗಳ ಸಂಖ್ಯೆಯ ಮೇಲೆ ಯಾವುದೇ ಮಿತಿ ಇರುವುದಿಲ್ಲ. ನೀವು ಬಹಳ ಅನುಕೂಲಕರವಾಗಿ ವಿಭಿನ್ನ ಸೇವೆಗಳ ಮೂಲಕ ಅನೇಕ ಬಿಲ್ ಗಳನ್ನು ನಿರ್ವಹಣೆ ಮತ್ತು ಪಾವತಿಸಬಹುದು.
ಹಣ ಕಡಿತಗೊಂಡಿದೆಯೇ ಎಂದು ನಿಮ್ಮ ಬ್ಯಾಂಕ್ ಖಾತೆಯನ್ನು ಒಮ್ಮೆ ನೋಡಿ. ಒಂದುವೇಳೆ ಹಣ ಕಡಿತಗೊಂಡಿದ್ದು, ವಹಿವಾಟು ವಿಫಲವಾದರೆ, ಕೆಲವು ವ್ಯವಹಾರದ ದಿನಗಳೊಳಗಾಗಿ ನಿಮ್ಮ ಖಾತೆಗೆ ಕಡಿತವಾದ ಮೊತ್ತ ಮರುಪಾವತಿಯಾಗುತ್ತದೆ. ತಕ್ಷಣದ ಸಹಾಯಕ್ಕಾಗಿ, ನೀವು ಕರ್ಣಾಟಕ ಬ್ಯಾಂಕಿನ ಗ್ರಾಹಕರ ಸಹಾಯವಾಣಿಯನ್ನು ಸಂಪರ್ಕಿಸಬಹುದು.
ಕೆಬಿಎಲ್ ಡೈರೆಕ್ಟ್ ಪೇ ಯಾವುದೇ ಹೆಚ್ಚುವರಿ ಸೇವಾ ಶುಲ್ಕಗಳನ್ನು ಹೊಂದಿಲ್ಲ, ನಿಮ್ಮ ಬಿಲ್ ಗಳನ್ನು ಪಾವತಿಸುವ ಬಹಳ ಪರಿಣಾಮಕಾರಿ ವಿಧಾನ ಇದಾಗಿದೆ.
ಹೌದು, ನೀವು ನಿಮ್ಮ ನಿಯಮಿತ ಬಿಲ್ ಗಳಿಗಾಗಿ, ನಿಮ್ಮ ಪಾವತಿಯ ಕೊನೆಯ ದಿನಾಂಕವನ್ನು ಎಂದಿಗೂ ತಪ್ಪಿಸದೇ ಇರಲು ಪುನರಾವರ್ತಿತ ಪಾವತಿಗಳನ್ನು ನಿಗದಿಪಡಿಸಬಹುದು.
ನಿಮ್ಮ ಮಾಸಿಕ ಹಣಕಾಸಿನ ಕಾರ್ಯಗಳನ್ನು ಡಿಜಿಟಲ್ ಬಿಲ್ ಪಾವತಿಗಳು ಕರ್ಣಾಟಕ ಬ್ಯಾಂಕ್ ಮೂಲಕ ಸುಗಮಗೊಳಿಸಲಾಗಿದೆ. ಈ ಸೇವೆಯು ಬ್ಯಾಂಕಿನ ಡಿಜಿಟಲ್ ಪ್ಲಾಟ್ಫಾರ್ಮ್ ಮೂಲಕ ನೇರವಾಗಿ ಯುಟಿಲಿಟಿಗಳು, ಕ್ರೆಡಿಟ್ ಕಾರ್ಡ್ಗಳು ಮತ್ತು ಇತರ ಸೇವೆಗಳಿಗೆ ಪಾವತಿಸಲು ನಿಮಗೆ ಅನುಮತಿಸುತ್ತದೆ. ಸ್ವಯಂಚಾಲಿತ ಜ್ಞಾಪನೆಗಳು ಮತ್ತು ಪಾವತಿಗಳನ್ನು ಮುಂಗಡವಾಗಿ ನಿಗದಿಪಡಿಸುವ ಆಯ್ಕೆಯು ವಿಳಂಬ ಶುಲ್ಕವನ್ನು ತಪ್ಪಿಸುವ ಮೂಲಕ ನೀವು ನಿಗದಿತ ದಿನಾಂಕವನ್ನು ಎಂದಿಗೂ
ಡಿಜಿಟಲ್ ಬಿಲ್ ಪಾವತಿ ವ್ಯವಸ್ಥೆಯು ಸಮಯ ಉಳಿಸಲು ಮತ್ತು ನಿಮ್ಮ ದಿನಚರಿಯಲ್ಲಿ ಅನುಕೂಲತೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ನೀವು ಒಂದು ಸ್ಥಳದಲ್ಲಿ ನಿಮ್ಮ ಎಲ್ಲಾ ಬಿಲ್ಸ್ ನಿರ್ವಹಣೆ ಮಾಡಬಹುದು, ಹಿಂದಿನ ಪಾವತಿಗಳನ್ನು ಟ್ರ್ಯಾಕ್ ಮಾಡಬಹುದು ಮತ್ತು ಪುನರಾವರ್ತಿತ ಬಿಲ್ ಪಾವತಿಗಾಗಿ ಸ್ವಯಂಚಾಲಿತ ಪಾವತಿಗಳನ್ನು ನಿಗದಿಪಡಿಸುವುದನ್ನು ಸಹ ಮಾಡಬಹುದು. ಈ ವ್ಯವಸ್ಥೆಯು ಬಿಲ್ ನಿರ್ವಹಣೆಯನ್ನು ಸರಳೀಕೃತಗೊಳಿಸುವ ಜೊತೆಯಲ್ಲಿ ಉತ್ತಮ ಬಜೆಟ್ ಟ್ರ್ಯಾಕಿಂಗ್ ಗೆ ಸಹಾಯ ಮಾಡುತ್ತದೆ.
ಪಾವತಿಯನ್ನು ಮಾಡುವ ಮೊದಲು ಬಿಲ್ ಗಳಲ್ಲಿ ವ್ಯತ್ಯಾಸವಿರುವುದಕ್ಕಾಗಿ ಒಮ್ಮೆ ಪರಿಶೀಲಿಸಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ವಹಿವಾಟುಗಳ ಎಲ್ಲಾ ವರದಿಗಳನ್ನು ಇಟ್ಟುಕೊಳ್ಳಿ. ಪಾವತಿಯನ್ನು ಮಾಡಲು ಕೊನೆಯ ನಿಮಿಷದವರೆಗೆ ಕಾಯಬೇಡಿ ಮತ್ತು ನಿಮ್ಮ ವಹಿವಾಟುಗಳಿಗಾಗಿ ಅಸುರಕ್ಷಿತ ನೆಟ್ವರ್ಕ್ ಗಳನ್ನು ಬಳಸಬೇಡಿ.