ಕೆ‌ಬಿ‌ಎಲ್ ಎಕ್ಸ್‌ಪ್ರೆಸ್ ನಗದು ಸಾಲ

ಈ ಡಿಜಿಟಲ್ ವೈಯಕ್ತಿಕ ಸಾಲವನ್ನು ಶಿಕ್ಷಣ, ವೈದ್ಯಕೀಯ ವೆಚ್ಚಗಳು, ಮದುವೆ, ಮನೆಯ ಸೌಂದರ್ಯವೃದ್ಧಿ ಅಥವಾ ರಜೆಯಂತಹ ವಿವಿಧ ಉದ್ದೇಶಗಳಿಗಾಗಿ ನೀಡಲು ವಿನ್ಯಾಸಗೊಳಿಸಲಾಗಿದೆ. ಗರಿಷ್ಠ 60 ತಿಂಗಳ ಅವಧಿಯೊಂದಿಗೆ ಮತ್ತು ಭದ್ರತೆ ಅಥವಾ ಮಾರ್ಜಿನ್ ಹಣದ ಅಗತ್ಯವಿಲ್ಲದೆಯೆ, ಈ ಸಾಲವು ನಿಮಗೆ ಹೆಚ್ಚು ಅಗತ್ಯವಿರುವಾಗ ದೊರಕುವಂತೆ ಮಾಡುತ್ತದೆ. ಅರ್ಜಿಯ ಪ್ರಕ್ರಿಯೆಯು ತೊಂದರೆ-ಮುಕ್ತವಾಗಿದೆ ಹಾಗೂ ಸಾಲವನ್ನು ವಿವಿಧ ವೈಯಕ್ತಿಕ ಅಗತ್ಯತೆಗಳಿಗಾಗಿ ಬಳಸಿಕೊಳ್ಳಬಹುದು, ನಿಮಗೆ ಅಗತ್ಯವಿರುವಾಗ ನಿಮಗೆ ಹಣಕಾಸಿನ ಬೆಂಬಲವನ್ನು ಒದಗಿಸುತ್ತದೆ. ಕಡಿಮೆ ಓದಿ Read more

ಈ ಸಾಲ ನಿಮಗಾಗಿ ಏಕೆ

ನಿಮಗೆ ಬೇಕಾದುದನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ

ಅನಗತ್ಯ ವಿಳಂಬವಿಲ್ಲದೆ ನಿಮಗೆ ಅಗತ್ಯವಿರುವ ಹಣಕಾಸು ಸೌಲಭ್ಯ ಪಡೆಯಿರಿ

ಸ್ಪರ್ಧಾತ್ಮಕ ಬಡ್ಡಿದರಗಳಿಂದಾಗಿ ಲಾಭ

ಭದ್ರತೆ ಅಥವಾ ಮಾರ್ಜಿನ್ ಇಲ್ಲದೆ ತ್ವರಿತವಾಗಿ ಹಣದ ಸಹಾಯವನ್ನು ಪಡೆಯಿರಿ

ವಿಷಯಗಳನ್ನು ಸರಳ ಮತ್ತು ನೇರಗೊಳಿಸಿ

ಸ್ಮಾರ್ಟ್ ಖರ್ಚು ಮತ್ತು ಉಳಿತಾಯಕ್ಕಾಗಿ ಸ್ಮಾರ್ಟ್ ಕ್ಯಾಲ್ಕುಲೇಟರ್

ಇ ಎಮ್ ಐ ಕ್ಯಾಲ್ಕುಲೇಟರ್

ಸಾಲದ ಮೊತ್ತ
25000 1000000
ಬಡ್ಡಿ ದರ
2% 18%
ಸಾಲದ ಅವಧಿ
1 ತಿಂಗಳುಗಳು 60 ತಿಂಗಳುಗಳು

ನೀವು ಪಾವತಿಸುವಿರಿ

₹13,800/ತಿಂಗಳುಗಳು

ಅರ್ಹತೆ

ಭಾರತೀಯ ನಿವಾಸಿ
  • 18 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳು
  • ಇತ್ತೀಚಿನ 7 ತಿಂಗಳುಗಳಲ್ಲಿ ಕನಿಷ್ಠ ₹20,000 ನಿವ್ವಳ ಮಾಸಿಕ ವೇತನವನ್ನು ಗಳಿಸುತ್ತಿರುವ ಉದ್ಯೋಗಿಗಳು ಮತ್ತು ಕರ್ಣಾಟಕ ಬ್ಯಾಂಕ್‌ನಿಂದ  ವೈಯಕ್ತಿಕ ಸಾಲ ಪಡೆಯದಿರುವವರು
  • ಕೆಳಗಿನ ಯಾವುದೇ 17 ರಾಜ್ಯಗಳಲ್ಲಿ ವಾಸಿಸುತ್ತಿರುವವರು: ಆಂಧ್ರ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ದೆಹಲಿ, ಗುಜರಾತ್, ಹರಿಯಾಣ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳ

ಅಗತ್ಯವಿರುವ ದಾಖಲೆಗಳು

  • ಆಧಾರ್ ಕಾರ್ಡ್
  •  PAN ಕಾರ್ಡ್   
  • ಸಂಬಳ ಖಾತೆಯ ಇಂಟರ್ನೆಟ್ ಬ್ಯಾಂಕಿಂಗ್ ಲಾಗಿನ್ ಕ್ರೆಡೆನ್ಶಿಯಲ್‌ಗಳು ಅಥವಾ ಸಂಬಳ ಖಾತೆಯ ಕೊನೆಯ 7 ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್ (ಮೂಲ ePDF ಫೈಲ್ ಅಥವಾ ಸ್ಕ್ಯಾನ್ ಮಾಡಿದ PDF ಫೈಲ್)
  • ಪ್ರಸ್ತುತ ಮತ್ತು ಶಾಶ್ವತ ವಿಳಾಸ ಪುರಾವೆಯ ಸಾಫ್ಟ್ ಕಾಪಿ
  • ಅರ್ಜಿದಾರರ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರದ ಸಾಫ್ಟ್ ಕಾಪಿ

1,2,3 ಹಂತಗಳು ಅಷ್ಟು ಸುಲಭ...

3 ಸರಳ ಹಂತಗಳಲ್ಲಿ ಕೆ‌ಬಿ‌ಎಲ್ ಎಕ್ಸ್‌ಪ್ರೆಸ್ ನಗದು ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಿ

ಹಂತ 1

ನಿಮ್ಮ ಸಾಲದ ಅವಶ್ಯಕತೆಯೊಂದಿಗೆ ನಿಮ್ಮ ಮೂಲ ವಿವರಗಳನ್ನು ಒದಗಿಸಿ.

ಹಂತ 2

ನಿಮ್ಮ ವಿವರಗಳನ್ನು ಪರಿಶೀಲಿಸೋಣ ಹಾಗೂ ಪ್ರಕ್ರಿಯಾ ಶುಲ್ಕವನ್ನು ಸ್ವೀಕರಿಸೋಣ

ಹಂತ 3      ದಾಖಲೆಗಳನ್ನು ಅಪ್‌ಲೋಡ್ ಮಾಡಿ

ಷರತ್ತುಬದ್ಧ ಅನುಮೋದನೆಗಾಗಿ ಸಂಬಂಧಿತ ದಾಖಲೆಗಳನ್ನು ಅಪ್‌ಲೋಡ್ ಮಾಡಿ

sb

ನಿಮಗಾಗಿ ಇರಬಹುದಾದ ಇತರ ಆಯ್ಕೆಗಳನ್ನು ವೀಕ್ಷಿಸಿ

ಸಾವಿರಾರು ಜನರ ನಂಬಿಕೆಯ ಆರ್ಥಿಕ ಉತ್ಕೃಷ್ಟತೆಗಾಗಿ ಆಯ್ಕೆಯಾಗಿರುವುದು

ಕೆ‌ಬಿ‌ಎಲ್ ಇನ್ಸ್ಟಾ ನಗದು ಸಾಲ

  • ಗರಿಷ್ಠ ₹50 ಲಕ್ಷದವರೆಗಿನ ಸಾಲದ ಮೊತ್ತ
  • ಬಡ್ಡಿ ದರ 13% ವರ್ಷಕ್ಕೆ
  • 24 ರಿಂದ 60 ತಿಂಗಳ ಸಾಲದ ಅವಧಿ

ಸುಲಭವಾಗಿ ತಿಳಿದುಕೊಳ್ಳುವುದರ ಮೂಲಕ ಸಾಲಗಳನ್ನು ಸರಳಗೊಳಿಸಿಕೊಳ್ಳಿ

ನಿಮಗೆ ಮಾಹಿತಿ ನೀಡುವ ಚುಟುಕು ಸಂಪನ್ಮೂಲಗಳು

match-made
ಬ್ಯಾಂಕಿಂಗ್ ಸ್ವರ್ಗದಲ್ಲಿ ಮಾಡಿದ ಹೊಂದಾಣಿಕೆ: ಉಳಿತಾಯ ಖಾತೆ ಆವೃತ್ತಿ

navigating-pers
ನಿಮ್ಮ ಆರಂಭಿಕ 20 ರ ದಶಕದಲ್ಲಿ ವೈಯಕ್ತಿಕ ಸಾಲಗಳನ್ನು ನ್ಯಾವಿಗೇಟ್ ಮಾಡುವುದು- ಇದು ಒಳ್ಳೆಯ ಐಡಿಯಾವೇ?

savings-accoun
ಉಳಿತಾಯ ಖಾತೆ: ರೂಢಿಗಳನ್ನು ಮುರಿಯುವುದು ಮತ್ತು ಸಂಪತ್ತನ್ನು ನಿರ್ಮಿಸುವುದು

vehicle-loans
ಮಹತ್ವಾಕಾಂಕ್ಷೆಯ ಡೆಲಿವರಿ ಪಾಲುದಾರರು ಮತ್ತು ಕ್ಯಾಬ್ ಚಾಲಕರಿಗೆ ವಾಹನ ಸಾಲಗಳು

why-should
ನೀವು ಅರೆ ಸುಸಜ್ಜಿತ ಅಪಾರ್ಟ್ಮೆಂಟ್ಗೆ ಏಕೆ ಹೋಗಬೇಕು?

ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ
ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ

ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ
ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ

the-wisdom
ನಿವೃತ್ತ ಜನರಿಗೆ ತ್ವರಿತ ಚಿನ್ನದ ಸಾಲಗಳ ಬುದ್ಧಿವಂತಿಕೆ - ಆರ್ಥಿಕ ಭದ್ರತೆಯನ್ನು ಅನ್ಲಾಕ್ ಮಾಡಿ

ಪ್ರಶ್ನೆಗಳಿವೆಯೇ? ನಮ್ಮ ಬಳಿ ಉತ್ತರಗಳಿವೆ

ಇತರ ಸಾಲಗಳಿಗೆ ಹೋಲಿಸಿದಲ್ಲಿ ವೈಯಕ್ತಿಕ ಸಾಲದ ಪ್ರಯೋಜನಗಳು ಯಾವುವು?

ವೈಯಕ್ತಿಕ ಸಾಲವು ಮನೆ ನವೀಕರಣ, ಶಿಕ್ಷಣ ಅಥವಾ ಮದುವೆಯಂತಹ ವಿವಿಧ ಉದ್ದೇಶಗಳಿಗಾಗಿ ನೀವು ಬಳಸಬಹುದು. ಮೇಲಾಧಾರವಿಲ್ಲದೆಯೇ ನಿಮ್ಮ ತಕ್ಷಣದ ಹಣಕಾಸಿನ ಅಗತ್ಯತೆಗಳನ್ನು ಪೂರೈಸುವುದಕ್ಕೆ ಇದು ಹೊಂದಿಕೊಳ್ಳುವ ಒಂದು ಪರಿಹಾರವಾಗಿದೆ.

ಈಕ್ವೇಟೆಡ್ ಮಾಸಿಕ ಇನ್‌ಸ್ಟಾಲ್‌ಮೇಂಟ್ ಎನ್ನುವುದು ವಿಶಿಷ್ಟ ಪಾವತಿ ವಿಧಾನವಾಗಿದ್ದು ಅದು ನಿಮ್ಮ ಸಾಲವನ್ನು ಸ್ಥಿರವಾದ ಮಾಸಿಕ ಮೊತ್ತದಲ್ಲಿ ಮರುಪಾವತಿಸಲು ಅನುವು ಮಾಡಿಕೊಡುತ್ತದೆ. ಇದು ಬಡ್ಡಿ ಮತ್ತು ಅಸಲು ಎರಡನ್ನೂ ಒಳಗೊಂಡಿರುತ್ತದೆ, ನಿಮ್ಮ ಮಾಸಿಕ ಬಜೆಟ್‌ಗೆ ಹೊಂದಿಕೊಂಡು ನಿಮ್ಮ ಸಾಲದ ಮೊತ್ತವನ್ನು ಕಡಿಮೆ ಮಾಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಅರ್ಹತೆಯು ನಿಮ್ಮ ಆದಾಯ, ಉದ್ಯೋಗ ಸ್ಥಿತಿ, ಕ್ರೆಡಿಟ್ ಸ್ಕೋರ್ ಹಾಗೂ ವಯಸ್ಸಿನಂತಹ ಅಂಶಗಳನ್ನು ಅವಲಂಬಿಸಿರುತ್ತದೆ. ಸಾಲವನ್ನು ಮರುಪಾವತಿ ಮಾಡುವ ನಿಮ್ಮ ಸಾಮರ್ಥ್ಯವನ್ನು ನಿರ್ಣಯಿಸಲು ಈ ಅಂಶಗಳು ನಮಗೆ ಸಹಾಯ ಮಾಡುತ್ತವೆ.

ವಿಶಿಷ್ಟವಾಗಿ, ನಾವು ಸಾಲದ ಬಾಕಿಯು ಕಡಿಮೆ ಆಗುವ ವಿಧಾನವನ್ನು ಬಳಸುತ್ತೇವೆ. ಇದು ಬಾಕಿ ಇರುವ ಸಾಲದ ಮೊತ್ತಕ್ಕೆ ಮಾತ್ರವೇ ಬಡ್ಡಿಯನ್ನು ಅನ್ವಯಿಸುತ್ತದೆ. ನೀವು ಸಾಲವನ್ನು ಪಾವತಿಸಿದಂತೆ, ಅಸಲು ಮೊತ್ತವು ಕಡಿಮೆಯಾಗುತ್ತದೆ ಹಾಗೂ ನಂತರದ ಅವಧಿಗಳ ಬಡ್ಡಿಯನ್ನು ಈ ಕಡಿಮೆಯಾದ ಬಾಕಿಯ ಮೇಲೆ ಲೆಕ್ಕಹಾಕಲಾಗುತ್ತದೆ.

ಸಾಲಕ್ಕೆ ಬೇಕಾದ ಅರ್ಹತೆಯು ನಿಮ್ಮ ಆದಾಯ, ಉದ್ಯೋಗ ಸ್ಥಿತಿ, ಕ್ರೆಡಿಟ್ ಸ್ಕೋರ್ ಹಾಗೂ ವಯಸ್ಸಿನಂತಹ ಅಂಶಗಳನ್ನು ಅವಲಂಬಿಸಿರುತ್ತದೆ. ಸಾಲವನ್ನು ಮರುಪಾವತಿ ಮಾಡುವ ನಿಮ್ಮ ಸಾಮರ್ಥ್ಯವನ್ನು ನಿರ್ಣಯಿಸಲು ಈ ಅಂಶಗಳು ನಮಗೆ ಸಹಾಯ ಮಾಡುತ್ತವೆ.

ಕೆ‌ಬಿ‌ಎಲ್ ಎಕ್ಸ್‌ಪ್ರೆಸ್ ನಗದು ಸಾಲದ ಪ್ರಯೋಜನಗಳು

ಕೆ‌ಬಿ‌ಎಲ್ ಎಕ್ಸ್ಪ್ರೆಸ್ ನಗದು ಸಾಲವು ಕ್ಷಿಪ್ರ ಹಣಕಾಸಿನ ಬೆಂಬಲಕ್ಕಾಗಿ ಇರುವ ಸೌಲಭ್ಯ. ಶೈಕ್ಷಣಿಕ ವೆಚ್ಚಗಳಿಂದ ಹಿಡಿದು ಮನೆ ಸುಧಾರಣೆಗಳವರೆಗೆ ಅಥವಾ ಅರ್ಹವಾದ ರಜೆಯ ಸಂತೋಷಕ್ಕಾಗಿ ವೈಯಕ್ತಿಕ ಅಗತ್ಯತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಈ ಸಾಲವು ₹ 5 ಲಕ್ಷದವರೆಗೆ ಹಣವನ್ನು ತ್ವರಿತವಾಗಿ ವಿತರಿಸುತ್ತದೆ. ವರ್ಷಕ್ಕೆ 12% ನಿಂದ ಪ್ರಾರಂಭವಾಗುವ ಆಕರ್ಷಕ ಬಡ್ಡಿ ದರದೊಂದಿಗೆ ಹಾಗೂ 60 ತಿಂಗಳವರೆಗಿನ ಮರುಪಾವತಿ ಅವಧಿಯೊಂದಿಗೆ, ಯಾವುದೇ ಮೇಲಾಧಾರದ ಅಗತ್ಯವಿಲ್ಲದೇ ನಿಮ್ಮ ಕನಸುಗಳು ಮತ್ತು ನೀಡಬೇಕಾದ ಹಣಕಾಸು ಸಹಾಯವನ್ನು ಒದಗಿಸಲು ಇದು ಸಹಕಾರಿ. ಕರ್ಣಾಟಕ ಬ್ಯಾಂಕಿನಲ್ಲಿ ನಾವು ನಿಮ್ಮ ಅಗತ್ಯವನ್ನು ಮನಗಂಡಿದ್ದೇವೆ. ಕನಿಷ್ಠ ದಾಖಲಾತಿ ಮತ್ತು ತ್ವರಿತ ಪ್ರಕ್ರಿಯೆ ಸಮಯಗಳೊಂದಿಗೆ ನಮ್ಮ ಪ್ರಕ್ರಿಯೆಯು ಸರಳವಾಗಿದೆ.

ಸಾಲ ಪಡೆಯುವುದು ಒಂದು ತೆರನಾನಾದ ಸವಾಲಾದರೂ ಕರ್ಣಾಟಕ ಬ್ಯಾಂಕ್‌  ನಮ್ಮ ಕೆ‌ಬಿ‌ಎಲ್ ಎಕ್ಸ್‌ಪ್ರೆಸ್ ನಗದು ಸಾಲಕ್ಕಾಗಿ ಸ್ಪಷ್ಟ, ಸ್ಪರ್ಧಾತ್ಮಕ ಬಡ್ಡಿದರವನ್ನು ನೀಡುವ ಮೂಲಕ  ಈ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ. ಕೇವಲ ವರ್ಷಕ್ಕೆ 12% ದಿಂದ  ನಮ್ಮ ಬಡ್ಡಿದರಗಳನ್ನು ಆರಂಭವಾಗುತ್ತದೆ. ನಿಮ್ಮ ಅಗತ್ಯಗಳಿಗೆ ಹೊಂದಿಕೊಂಡು ಈ ದರವನ್ನು ಲೆಕ್ಕಹಾಕಲಾಗುತ್ತದೆ. ನಿಮ್ಮ ಬಜೆಟ್ ಮತ್ತು ಜೀವನಶೈಲಿಗೆ ಸರಿಹೊಂದುವ ಅವಧಿಯಲ್ಲಿ ನಿಮ್ಮ ಮರುಪಾವತಿಯನ್ನು ಆರಾಮದಾಯಕವಾಗಿ ನಿರ್ವಹಿಸುವಂತೆ ಸಹಾಯ ಮಾಡುವುದು ನಮ್ಮ ಗುರಿಯಾಗಿದೆ. ನಿಮ್ಮ ಹಣಕಾಸು ಯೋಜನೆಯನ್ನು ನೇರ ಮತ್ತು ಒತ್ತಡ-ಮುಕ್ತಗೊಳಿಸುತ್ತದೆ.

ಉತ್ತಮ ಸಾಲದ ನಿಯಮಗಳಿಗೆ ಅರ್ಹತೆ ಪಡೆಯುವ ಸಲುವಾಗಿ  ಆರೋಗ್ಯಕರ ಕ್ರೆಡಿಟ್ ಸ್ಕೋರ್ ಅನ್ನು ಕಾಪಾಡಿಕೊಳ್ಳುವುಡ್ ಮುಖ್ಯವಾಗುತ್ತದೆ. ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಿಕೊಲ್ಲಿ ಹಾಗೂ ನೀವು ಮರುಪಾವತಿಸಲು ಸಾಧ್ಯವಾಗುವಷ್ಟನ್ನು  ಮಾತ್ರವೇ ಸಾಲವಾಗಿ ಪಡೆಯಿರಿ. ನಿಮ್ಮ ಮರುಪಾವತಿ ಸಾಮರ್ಥ್ಯದ ಆಧಾರದ ಮೇಲೆ ನಿಮ್ಮ ಸಾಲದ ಅವಧಿ ಮತ್ತು EMI ಗಳನ್ನು ಯೋಜಿಸಿಕೊಳ್ಳಿ. ವಿಶೇಷವಾಗಿ ಶುಲ್ಕಗಳು ಮತ್ತು ಪೆನಾಲ್ಟಿಗಳಿಗೆ ಸಂಬಂಧಿಸಿದಂತೆ ಸಾಲದ ಒಪ್ಪಂದದಲ್ಲಿ ನೀಡಿರುವ ಮುದ್ರಣವನ್ನು ನಿರ್ಲಕ್ಷಿಸಬೇಡಿ. ಹಠಾತ್ ಖರೀದಿಗಳು ಅಥವಾ ಹೆಚ್ಚಿನ ಅಪಾಯದ ಹೂಡಿಕೆಗಳಿಗಾಗಿ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿಕೊಳ್ಳಿ.

ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುವುದು ಒಂದು ಮಹತ್ವದ ಹಣಕಾಸಿನ ಹೆಜ್ಜೆಯಾಗಿರಬಹುದು. ನೀವು ಸಾಲವನ್ನು ಕ್ರೋಢೀಕರಿಸುತ್ತಿರಲಿ, ಪ್ರಮುಖ ಖರೀದಿಗೆ ಹಣಕಾಸು ಒದಗಿಸುತ್ತಿರಲಿ ಅಥವಾ ಅನಿರೀಕ್ಷಿತ ವೆಚ್ಚಗಳನ್ನು ಒಳಗೊಂಡಿರಲಿ, ವೈಯಕ್ತಿಕ ಸಾಲದ ಬಡ್ಡಿ ದರಗಳು ಮತ್ತು ನಿಯಮಗಳ ಸೂಕ್ಷ್ಮ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯವಾಗುತ್ತದೆ. ನಮ್ಮ ಬ್ಯಾಂಕ್ ವಿವಿಧ ತ್ವರಿತ ವೈಯಕ್ತಿಕ ಸಾಲಗಳನ್ನು ನೀಡುತ್ತದೆ. ತ್ವರಿತ ಹಾಗೂ  ಸುಲಭವಾದ ಅನುಮೋದನೆ ಪ್ರಕ್ರಿಯೆಗಳೊಂದಿಗೆ ನಿಮ್ಮ ತುರ್ತು ಹಣಕಾಸಿನ ಅಗತ್ಯತೆಗಳನ್ನು ಪೂರೈಸುತ್ತದೆ. ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ, ನಾವು ಪೇಪರ್‌ಲೆಸ್ ಮತ್ತು ಸೌಹಾರ್ದ ರೀತಿಯ ಸಾಲಸೌಲಭ್ಯ ಒದಗಿಸುತ್ತೇವೆ.  ಆನ್‌ಲೈನ್‌ನಲ್ಲಿ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವುದನ್ನು ಹಿಂದೆಂದಿಗಿಂತಲೂ ಸುಲಭಗೊಳಿಸಿದ್ದೇವೆ. ನಮ್ಮ ಪಾರದರ್ಶಕ ಮಾರ್ಗಸೂಚಿಗಳು ಆನ್‌ಲೈನ್‌ನಲ್ಲಿ ವೈಯಕ್ತಿಕ ಸಾಲವನ್ನು ಹೇಗೆ ತೆಗೆದುಕೊಳ್ಳುವುದು ಎನ್ನುವುದನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತವೆ. ನೀವು ಪ್ರತಿ ಹಂತದಲ್ಲೂ ಉತ್ತಮ ಮಾಹಿತಿಯನ್ನು ಹೊಂದಿರುವಿರಿ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತದೆ.