ಕಿಸಾನ್ ಕ್ರೆಡಿಟ್ ಕಾರ್ಡ್

ನೀವೊಬ್ಬ ರೈತನಾಗಿರಬಹುದು, ಸ್ವ-ಸಹಾಯ ಗುಂಪಿನ ಸದಸ್ಯರಾಗಿರಬಹುದು ಅಥವಾ ಜಂಟಿ ಹೊಣೆಗಾರಿಕಾ ಗುಂಪುಗಳ ಸದಸ್ಯರಾಗಿರಬಹುದು ಈ ಕಿಸಾನ್ ಕ್ರೆಡಿಟ್ ಕಾರ್ಡ್ ನಿಮ್ಮೆಲ್ಲರ ಕೃಷಿ ಸಂಬಂಧಿತ ಅಗತ್ಯತೆಗಳನ್ನು ಪೂರೈಸಲು ರೂಪಿಸಲಾಗಿದೆ. f– ಓವರ್ ಡ್ರಾಫ್ಟ್ ಮತ್ತು ಅವಧಿ ಸಾಲದ ಆಯ್ಕೆಯ ಮೂಲಕವಾಗಿ ಈ ಕಾರ್ಡ್ ಕೃಷಿ, ಸುಗ್ಗಿಯ ನಂತರದ ವೆಚ್ಚಗಳು ಮತ್ತು ಕೃಷಿ ಆಸ್ತಿ ನಿರ್ವಹಣೆಗಾಗಿ ಅನುಕೂಲಕರ ಹಣಕಾಸಿನ ಸಾಲ ಸೌಲಭ್ಯವನ್ನು ಒದಗಿಸುತ್ತದೆ. ಸಾಲಕ್ಕೆ ಸರಳವಾದ ಮಾನದಂಡ, ಕನಿಷ್ಠತಮ ತಕ್ಷಣದ ಹಣ ಪಾವತಿ (ಡೌನ್ ಪೇಮೆಂಟ್), ಅನುಕೂಲಕರ ಮರುಪಾವತಿಯಂತಹ ಅನುಕೂಲಗಳನ್ನು ಹೊಂದಿರುತ್ತಾ, ಕಿಸಾನ್ ಕ್ರೆಡಿಟ್ ಕಾರ್ಡ್(ಕೆಸಿಸಿ) ಒಂದು ನವೀನ ಸಾಲ ಸೌಲಭ್ಯವಾಗಿದೆ. ರೈತರಿಗೆ ಹಣಕಾಸಿನ ಸಾಲ ಸೌಲಭ್ಯವನ್ನು ಕೊಡುವ ಮೂಲಕ ದೇಶದ ಬೆನ್ನೆಲುಬಾದ ರೈತ ಸಮುದಾಯದ ಅಭಿವೃದ್ಧಿಯೇ ಇದರ ಉದ್ದೇಶವಾಗಿದೆ. ಮತ್ತಷ್ಟು ಓದು ಕಡಿಮೆ ಓದಿ

ನಿಮಗೇಕೆ ಈ ಕಾರ್ಡ್ ಸೂಕ್ತ

ಸರಳ ಸಾಲ ಸೌಲಭ್ಯಗಳೊಂದಿಗೆ ನಿಮ್ಮ ಕೃಷಿ ಅಗತ್ಯತೆಗಳಿಗೆ ಬೆಂಬಲ

ಪ್ರತಿಯೊಬ್ಬ ರೈತ ಅಥವಾ ಸಹ-ಭೂ ಮಾಲೀಕರು, ಗುತ್ತಿಗೆ ಬೆಳೆಗಾರರು, ಬೆಳೆ ಹಂಚಿಕೆದಾರರು, ಅಥವಾ ರೈತರ ಜಂಟಿ-ಹೊಣೆಗಾರ ಗುಂಪುಗಳಿಗಾಗಿ ರೂಪಿಸಲಾಗಿದೆ.

EBLR ಮಾರ್ಗಸೂಚಿಗಳಂತೆ ಸ್ಪರ್ಧಾತ್ಮಕ ದರಗಳೊಂದಿಗೆ ಸಕಾಲಿಕ ಹಣಕಾಸಿನ ಸಹಾಯಕ್ಕಾಗಿ ತ್ವರಿತ ಪ್ರಕ್ರಿಯೆ

ನಿಮ್ಮ ವೈವಿಧ್ಯ ಕೃಷಿ ಚಟುವಟಿಕೆಗಳಿಗೆ ಪೂರಕವಾಗುವಂತೆ ನಮ್ಮ ಒವರ್ ಡ್ರಾಫ್ಟ್ ಅಥವಾ ಅವಧಿ ಸಾಲ (ಟರ್ಮ್ ಲೋನ್) ಸೌಲಭ್ಯಗಳಲ್ಲಿ ಒಂದನ್ನು ಆರಿಸಿ

ಡೌನ್ ಪೇಮೆಂಟ್ ಮೊತ್ತ

ಓವರ್ ಡ್ರಾಫ್ಟ್ ಗಾಗಿ ಯಾವುದೇ ಡೌನ್ ಪೇಮೆಂಟ್ ಅಗತ್ಯವಿಲ್ಲ. ಆದರೆ ಅವಧಿ ಸಾಲಗಳಿಗಾಗಿ ಸಾಲದ ಮೊತ್ತವನ್ನು ಆಧರಿಸಿ ಶೇಖಡಾ 10% ರಿಂದ 25%ವರೆಗಿನ ಡೌನ್ ಪೇಮೆಂಟ್  ಬದಲಾಗುತ್ತದೆ.  

ವೈಯಕ್ತಿಕಗೊಳಿಸಿದ ಸೇವೆಗಳು

ನಿಮ್ಮ ದೀರ್ಘಾವಧಿ ಕೃಷಿ ಹೂಡಿಕೆಗಳಿಗಾಗಿ ಮತ್ತು ನಿಮ್ಮ ತಕ್ಷಣದ ಅಗತ್ಯತೆಗಳಿಗಾಗಿ ಒವರ್ ಡ್ರಾಫ್ಟ್ ಸಾಲ ಸೌಲಭ್ಯ ಮತ್ತು ಅವಧಿ ಸಾಲಗಳಲ್ಲಿ ಒಂದನ್ನು ನೀವು ಆಯ್ದುಕೊಳ್ಳಬಹುದು. ವ್ಯಕ್ತಿಯ ಆದಾಯ, ಮರುಪಾವತಿ ಸಾಮರ್ಥ್ಯ ಮತ್ತು ಸಾಲದ ಪ್ರಮಾಣವನ್ನು ಆಧರಿಸಿ ಸಾಲದ ಮೊತ್ತವನ್ನು ನಿರ್ಧರಿಸಲಾಗುತ್ತದೆ.

ಅನುಕೂಲಕರ ಬಳಕೆ

ಕೃಷಿ ಚಟುವಟಿಕೆಗಳಲ್ಲಿ ಹೂಡಿಕೆಗೆ ಅನುಕೂಲಿಸುವಂತೆ ಮತ್ತು ಇನ್ನಿತರ ಕೃಷಿ ಸಂಬಂಧಿತ ಕಾರ್ಯಗಳಿಗೆ ಸಹಕಾರಿಯಾಗುವಂತೆಯೂ ; ಮಾತ್ರವಲ್ಲದೆ ಕೃಷಿ ಕಾರ್ಯಗಳ ವೆಚ್ಚಗಳನ್ನು  ಭರಿಸುವಲ್ಲಿ ಅನುಕೂಲವಾಗುವಂತೆ  ಈ ಸಾಲ ಸೌಲಭ್ಯವನ್ನು ರೂಪಿಸಲಾಗಿದೆ.

ಬಡ್ಡಿ ದರಗಳು

ಬಡ್ಡಿದರಗಳು ಎಕ್ಸ್ಟರ್ನಲ್ ಬೆಂಚ್ ಮಾರ್ಕ್ ಲೆಂಡಿಂಗ್ ರೇಟ್  ಮಾನದಂಡಗಳಿಗೆ ಸರಿಹೊಂದಿಸಿ ಇರಿಸಲಾಗಿದೆ.

ಬೆಳೆ ಹೈಪೋಥಿಕೇಷನ್

ಭದ್ರತಾ ಅಗತ್ಯಗಳು ಬೆಳೆಗಳನ್ನು ಅಡಮಾನ ಇರಿಸುವುದಕ್ಕೆ ಮಾತ್ರ ಸೀಮಿತವಾಗಿದೆ. ಅಂದರೆ ಅಡಮಾನವಿರಿಸಿದ ಬೆಳೆಗಳು  ₹1.6ಲಕ್ಷ ಸಾಲದವರೆಗೆ ಮೇಲಾಧಾರವಾಗಿ ಇರುತ್ತದೆ.. 

ಇತರ ಮೇಲಾಧಾರಗಳು

ಬೆಳೆಯನ್ನು ಭದ್ರತೆಯಾಗಿ ತೆಗೆದುಕೊಳ್ಳುವುದರ ಜೊತೆಗೆ ಕೃಷಿ ಜಮೀನು ಅಥವಾ ಇತರ ಭದ್ರತೆಗಳನ್ನು ಬ್ಯಾಂಕಿನವರು ಮೇಲಾಧಾರವಾಗಿ ಸ್ವೀಕರಿಸುತ್ತಾರೆ. 

ನಿಮಗಾಗಿ ಯಾವ ಉತ್ಪನ್ನ ಸೂಕ್ತವೆಂದು ಖಚಿತವಾಗಿಲ್ಲವೇ?

ನಿಮಗಾಗಿ ಯಾವ ಉತ್ಪನ್ನ ಸೂಕ್ತವೆಂದು ಖಚಿತವಾಗಿಲ್ಲವೇ

  • ಯಾವುದೇ ಸ್ಪ್ಯಾಮ್ ಕರೆಗಳಿಲ್ಲ
  • ಸಮರ್ಪಿತ KBL ತಜ್ಞರು
  • ನಿಮ್ಮ ಸಮಯಕ್ಕೆ ಕರೆಯನ್ನು ಹೊಂದಿಸಿ

ಅರ್ಹತೆ

ಪ್ರತ್ಯೇಕ ರೈತರು ಮತ್ತು ಜಂಟಿ ಬೆಳೆಗಾರರು
  • ತಮ್ಮದೇ ಸ್ವಂತ ಜಮೀನಿನಲ್ಲಿ ಕೃಷಿ ಮಾಡುವ ರೈತರು ಮತ್ತು ಜಂಟಿ ಬೆಳೆಗಾರರು
  • ಬೆಳೆ ಉತ್ಪಾದನೆ ಚಟುವಟಿಕೆಗಳಲ್ಲಿ ನೇರವಾಗಿ ತೊಡಗಿಸಿಕೊಂಡಿರಬೇಕು
  • ಕೃಷಿ ಜಮೀನಿನ ಮೇಲೆ ಮಾಲೀಕತ್ವ ಅಥವಾ ಕೃಷಿ ಹಕ್ಕುಗಳನ್ನು ಸಾಬೀತುಪಡಿಸುವ ಮಾನ್ಯ ದಾಖಲೆಗಳು
  • ಯಾವುದೇ ಖಟಾಬಾಕಿಗಳಿಲ್ಲದ ಪೂರ್ವ ಹಣಕಾಸು ವಿವರಗಳು
  • ಅನುತ್ಪಾದಕ ಸಾಲಗಳಾಗಿರಬಾರದು ಅಥವಾ ಒಟಿಎಸ್ (ಏಕಗಂಟಿನಲ್ಲಿ ಅನುತ್ಪಾದಕ ಸಾಲದ ತೀರುವಳಿ) ಆಗಿರಬಾರದು
  • ಸ್ವಸಹಾಯ ಗುಂಪುಗಳು ಮತ್ತು ಜಂಟಿ ಹೊಣೆಗಾರಿಕೆ ಗುಂಪುಗಳು
  • ಗುಂಪುಗಳಲ್ಲಿ ಬಾಡಿಗೆ ಬೆಳೆಗಾರರು ಮತ್ತು ಬೆಳೆ ಹಂಚಿಕೆದಾರರು ಇರುತ್ತಾರೆ
  • ಈಗಾಗಲೇ ಸಾಲ ಸೌಲಭ್ಯಗಳನ್ನು ಪಡೆದು ಉತ್ತಮ ಸಾಲ ನಿರ್ವಹಣೆಯನ್ನು ಹೊಂದಿದವರಿರಬೇಕು
  • ಗುಂಪಿನ ಚಟುವಟಿಕೆಯ ಕುರಿತು ಮಾನ್ಯ ಗುರುತಿನ ಪುರಾವೆ

ಅಗತ್ಯವಿರುವ ದಾಖಲೆಗಳು

  • ಕೆವೈಸಿ ದಾಖಲೆಗಳ ಸ್ಕ್ಯಾನ್ ಅಥವಾ ನಕಲು ಪ್ರತಿ
  • ಪಹಣಿ, ಪಟ್ಟಾ ಪುಸ್ತಕ, ಭೂ ವ್ಯವಹಾರ ಪತ್ರ ಅಥವಾ ಕೃಷಿ ಜಮೀನಿನ ಯಾವುದೇ ಪುರಾವೆ

1,2,3...ರೀತಿಯಾಗಿ ಸರಳ

3 ಸರಳ ಹಂತಗಳಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿ

ಹಂತ 1

ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ

ನಿಮ್ಮ ಹತ್ತಿರದ ಕರ್ನಾಟಕ ಬ್ಯಾಂಕ್ ಶಾಖೆಗೆ ಹೋಗಿ

ಹಂತ 2

ನಿಮ್ಮ ಮೂಲ ವಿವರಗಳೊಂದಿಗೆ ಆರಂಭಿಸಿ 

ಸಾಲದ ಅಗತ್ಯತೆಗಳೊಂದಿಗೆ ನಿಮ್ಮ ಮೂಲ ವಿವರಗಳನ್ನು ಒದಗಿಸಿ 

ಹಂತ 3

ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ

ನಿಮ್ಮ ಖಾತೆಯನ್ನು ತೆರೆದಾಗ ನಮ್ಮ ಶಾಖೆಯ ಅಧಿಕಾರಿಗಳು ನಿಮಗೆ ತಿಳಿಸುತ್ತಾರೆ

abc

ಸರಳ ಮಾಹಿತಿಯೊಂದಿಗೆ ಅಗ್ರಿಬ್ಯಾಂಕಿಂಗ್ ಸರಳಗೊಳಿಸಿ

ಪ್ರತಿ ಕ್ಷಣವೂ ನಿಮಗೆ ಮಾಹಿತಿ ಒದಗಿಸುವ ನಮ್ಮ ಸಂಪನ್ಮೂಲಗಳು

match-made
ಬ್ಯಾಂಕಿಂಗ್ ಸ್ವರ್ಗದಲ್ಲಿ ಮಾಡಿದ ಹೊಂದಾಣಿಕೆ: ಉಳಿತಾಯ ಖಾತೆ ಆವೃತ್ತಿ

navigating-pers
ನಿಮ್ಮ ಆರಂಭಿಕ 20 ರ ದಶಕದಲ್ಲಿ ವೈಯಕ್ತಿಕ ಸಾಲಗಳನ್ನು ನ್ಯಾವಿಗೇಟ್ ಮಾಡುವುದು- ಇದು ಒಳ್ಳೆಯ ಐಡಿಯಾವೇ?

savings-accoun
ಉಳಿತಾಯ ಖಾತೆ: ರೂಢಿಗಳನ್ನು ಮುರಿಯುವುದು ಮತ್ತು ಸಂಪತ್ತನ್ನು ನಿರ್ಮಿಸುವುದು

vehicle-loans
ಮಹತ್ವಾಕಾಂಕ್ಷೆಯ ಡೆಲಿವರಿ ಪಾಲುದಾರರು ಮತ್ತು ಕ್ಯಾಬ್ ಚಾಲಕರಿಗೆ ವಾಹನ ಸಾಲಗಳು

why-should
ನೀವು ಅರೆ ಸುಸಜ್ಜಿತ ಅಪಾರ್ಟ್ಮೆಂಟ್ಗೆ ಏಕೆ ಹೋಗಬೇಕು?

ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ
ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ

ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ
ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ

the-wisdom
ನಿವೃತ್ತ ಜನರಿಗೆ ತ್ವರಿತ ಚಿನ್ನದ ಸಾಲಗಳ ಬುದ್ಧಿವಂತಿಕೆ - ಆರ್ಥಿಕ ಭದ್ರತೆಯನ್ನು ಅನ್ಲಾಕ್ ಮಾಡಿ

ಪ್ರಶ್ನೆಗಳಿವೆಯೇ? ನಾವು ಉತ್ತರಿಸುತ್ತೇವೆ

ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಯಾರು ಅರ್ಹರಿದ್ದಾರೆ?

ಅಗತ್ಯ ಕೃಷಿ ದಾಖಲೆಗಳನ್ನು ಮತ್ತು ಗುರುತಿನ ಪುರಾವೆಗಳನ್ನು ಒದಗಿಸುವ ರೈತ, ಜಂಟಿ ಬೆಳೆಗಾರರು, ಹಿಡುವಳಿದಾರರು ಮತ್ತು ಕೃಷಿಗುಂಪುಗಳು ಇದನ್ನು ಪಡೆಯಲು ಅರ್ಹರಿದ್ದಾರೆ.

ನಿಮ್ಮ ಕೃಷಿ ದಾಖಲೆಗಳೊಂದಿಗೆ ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ. ಅರ್ಜಿ ಪ್ರಕ್ರಿಯೆಯ ಮೂಲಕ ನಮ್ಮ ತಂಡ ನಿಮಗಾಗಿ ಸಹಾಯ ಮಾಡಲು ತಯಾರಿದ್ದು ಸ್ಪಷ್ಟತೆ ಮತ್ತು ಸಮರ್ಥತೆಯನ್ನು ಖಾತ್ರಿಪಡಿಸಿಕೊಳ್ಳುತ್ತದೆ. ತ್ವರಿತ ಪ್ರಕ್ರಿಯೆಗಾಗಿ ನಮ್ಮ ವೆಬ್ಸೈಟ್ ಮೂಲಕ ಸಹ ನೀವು ಅರ್ಜಿ ಸಲ್ಲಿಸಬಹುದು.

ನಿಮ್ಮ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ತಕ್ಷಣದ ಅಗತ್ಯಗಳಿಗಾಗಿ ಓವರ್ ಡ್ರಾಫ್ಟ್ ಆಯ್ಕೆ ಮಾಡಿ ಮತ್ತು ದೀರ್ಘಾವಧಿಯ, ದೊಡ್ಡ ಕೃಷಿ ಹೂಡಿಕೆಗಳಿಗಾಗಿ ಅವಧಿ ಸಾಲಗಳನ್ನು ತೆಗೆದುಕೊಳ್ಳಿ

ಭದ್ರತೆಯು ಬೆಳೆಗಳ ಅಡಮಾನಕ್ಕೆ ಮಾತ್ರ ಸೀಮಿತವಾಗಿರುತ್ತದೆ ಅಂದರೆ ₹1.6 ಲಕ್ಷದವರೆಗಿನ ಸಾಲಗಳಿಗಾಗಿ ಮೇಲಾಧಾರವಾಗಿ ಬೆಳೆಗಳನ್ನು ಅಡವಿರಿಸಲಾಗುತದೆ. ಬೆಳೆ ಅಡವಿರಿಸುವ ಜೊತೆಯಲ್ಲಿ ಕೃಷಿ ಭೂಮಿ ಅಥವಾ ಬ್ಯಾಂಕ್ ಸ್ವೀಕರಿಸಬಲ್ಲ ಭದ್ರತೆಗಳನ್ನೂ ಸಹ ಮೇಲಾಧಾರವಾಗಿ ತೆಗೆದುಕೊಳ್ಳಬಹುದು.

ಈ ಯೋಜನೆಯು ಐದು ವರ್ಷಗಳವರೆಗೆ ಅನುಕೂಲಕರ ಮರುಪಾವತಿ ಅವಧಿಯನ್ನು ನೀಡುತ್ತದೆ. ಸಾಲದ ಅವಧಿಯು ನಿಮ್ಮ ಇಳುವರಿ ಮತ್ತು ಆದಾಯಕ್ಕೆ ತಕ್ಕಂತೆ ಇರುತ್ತದೆ

ಓವರ್ ಡ್ರಾಫ್ಟ್ ಆಯ್ಕೆಯಲ್ಲಿ ಯಾವುದೇ ರೀತಿಯ ಡೌನ್ ಪೇಮೆಂಟ್ ಅಗತ್ಯವಿರುವುದಿಲ್ಲ. ಅವಧಿ ಸಾಲಗಳಿಗಾಗಿ, ನಿಮ್ಮ ಹೂಡಿಕೆಯನ್ನು ಆಧರಿಸಿ ಶೇಖಡಾ 10% ರಿಂದ 25% ವರೆಗಿನ ಡೌನ್ ಪೇಮೆಂಟ್ ಪಾವತಿಸಬೇಕಾಗುತ್ತದೆ.

ಒಂದುವೇಳೆ ಮರುಪಾವತಿಗಳಲ್ಲಿ ಸಮಸ್ಯೆ ಉಂಟಾದರೆ, ಸಮಸ್ಯೆಯನ್ನು ಬಗೆಹರಿಸಲು ಮತ್ತು ಹಣಕಾಸಿನ ಸಮಗ್ರತೆಯನ್ನು ಕಾಪಾಡಲು ನಮ್ಮನ್ನು ತಕ್ಷಣವೇ ಭೇಟಿ ಮಾಡಿ.

ನಿಮ್ಮ ಕೃಷಿ ಆದಾಯ, ಮರುಪಾವತಿ ಸಾಮರ್ಥ್ಯ ಮತ್ತು ನಿಮ್ಮ ಕೃಷಿ ಚಟುವಟಿಕೆಗಳ ಪ್ರಮಾಣವನ್ನು ಆಧರಿಸಿ ಸಾಲದ ಮೊತ್ತವನ್ನು ನಿರ್ಧರಿಸಲಾಗುತ್ತದೆ.

ನಾವು ನಿಮ್ಮ ವ್ಯವಹಾರದ ಆಕಾಂಕ್ಷೆಗಳಿಗಾಗಿ ಸಕಾಲಿಕ ಹಣಕಾಸು ಬೆಂಬಲವನ್ನು ಒದಗಿಸುವ ಪ್ರಾಮುಖ್ಯತೆವನ್ನು ಅರ್ಥಮಾಡಿಕೊಳ್ಳುತ್ತೇವೆ ಆದ್ದರಿಂದ ಸಾಲದ ಪ್ರಕ್ರಿಯೆಯು ನಮ್ಮ ಮೊದಲ ಆದ್ಯತೆಯಾಗಿರುತ್ತದೆ.

ಹೌದು, ಸಾಲದ ಅವಧಿಗಿಂತ ಮೊದಲೇ ನೀವು ಸಾಲದ ಪೂರ್ಣ ಮರುಪಾವತಿ ಮಾಡಬಹುದು. ಇದರಿಂದ ನಿಮ್ಮ ಬಡ್ಡಿದರಗಳು ಸಹ ಕಡಿಮೆಯಾಗುತ್ತದೆ. ಸಾಲದ ನಿಯಮಗಳು ಮತ್ತು ಷರತ್ತುಗಳನ್ನು ತಿಳಿದುಕೊಳ್ಳಲು ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

ಕಿಸಾನ್ ಕ್ರೆಡಿಟ್ ಕಾರ್ಡ್(ಕೆಸಿಸಿ)ಯೊಂದಿಗೆ ಅನುಕೂಲಕರ ಸಾಲ

ರೈತರ ಕೃಷಿ ಮತ್ತು ಸಂಬಂಧಿತ ಖರ್ಚುಗಳನ್ನು ಪೂರೈಸುವ ಕೆಸಿಸಿ ಸಾಲವು ಕಿಸಾನ್ ಕ್ರೆಡಿಟ್ ಕಾರ್ಡ್(ಕೆಸಿಸಿ) ಒಂದು ಕ್ರಾಂತಿಕಾರಿ ಉಪಕ್ರಮವಾಗಿದೆ. ಈ ಯೋಜನೆಯ ಮೂಲಕ, ರೈತರು ಹಣವನ್ನು ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಬಹಳ ಸರಳ, ನೇರ ಮತ್ತು ಅತ್ಯುತ್ತಮ ಬಡ್ಡಿ ದರ ಹೊಂದಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಗಾಗಿ ಅರ್ಜಿ ಹೇಗೆ ಸಲ್ಲಿಸುವುದು ಮತ್ತು ನಿಮ್ಮ ಕೃಷಿ ಹಣವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ.  

ಸಾಲಗಾರನ ಸಾಲದ ಮೊತ್ತ ಮತ್ತು ಮರುಪಾವತಿ ಸಾಮರ್ಥ್ಯದ ಮೇಲೆ ಮತ್ತು ಕೃಷಿ-ವ್ಯವಹಾರ ಸಾಲಗಳಿಗಾಗಿ ಬಡ್ಡಿ ದರಗಳು ಬದಲಾಗುತ್ತವೆ. ನಿಮ್ಮ ಹಣಕಾಸಿನ ಸಾಮರ್ಥ್ಯಗಳನ್ನು ಆಧರಿಸಿ ಸಾಲದ ಷರತ್ತುಗಳಿವೆ ಎಂದು ಖಾತ್ರಿಪಡಿಸಿಕೊಳ್ಳಲು ನಿಮ್ಮ ಸಾಲದ ಅರ್ಜಿ ಪ್ರಕ್ರಿಯೆಯ ಭಾಗವಾಗಿ ಈ ದರಗಳು ಮುಖ್ಯವಾಗಿವೆ ಎಂದು ಅರ್ಥಮಾಡಿಕೊಳ್ಳಬೇಕು.  

ಯೋಜನೆಯ ಲಾಭಗಳನ್ನು ಗರಿಷ್ಠಗೊಳಿಸಲು ಸಾಲವನ್ನು ಉದ್ದೇಶಿತ ಕೃಷಿ ಉದ್ದೇಶಕ್ಕಾಗಿ ಮಾತ್ರ ಬಳಸಿ. ಉತ್ತಮ ಹಣಕಾಸಿನ ಪಾವತಿಗಳು ನಿಮ್ಮ ಸಾಲದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಒಂದು ಸ್ಪಷ್ಟ ಮರುಪಾವತಿ ಯೋಜನೆಯಿಲ್ಲದೆ ನಿಮ್ಮ ಸಾಲದ ಮಿತಿಯನ್ನು ಹೆಚ್ಚಿಸಬೇಡಿ. ಸಾಲ ಮತ್ತು ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆಗಳ ಕುರಿತು ನವೀನ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳಿ.