KYC ಯನ್ನು ಅರ್ಥಮಾಡಿಕೊಳ್ಳುವುದು
“ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ” (KYC) ನಿಯಂತ್ರಕ ಕಟ್ಟುಪಾಡುಗಳನ್ನು ಪೂರೈಸಲು ಮಾತ್ರವಲ್ಲದೆ ನಿಮ್ಮ ಹಣಕಾಸು ವಹಿವಾಟಿನ ಮಾಹಿತಿ ರಕ್ಷಿಸಲು, ವಿಶೇಷವಾಗಿ ದೇಶ-ವಿದೇಶದಾದ್ಯಂತ ಹಣವನ್ನು ನಿರ್ವಹಿಸುವ NRI ಗಳಿಗೆ ಬೇಕಾದ ಅತ್ಯಗತ್ಯ ಪ್ರಕ್ರಿಯೆಯಾಗಿದೆ. ನಿಮ್ಮ ಭಾರತೀಯ ಪಾಸ್‌ಪೋರ್ಟ್, ಸಾಗರೋತ್ತರ ನಿವಾಸಿ ಕಾರ್ಡ್ ಅಥವಾ ಇತರ ಅಧಿಕೃತ ಗುರುತುಗಳಂತಹ ಮಾನ್ಯ ದಾಖಲೆಗಳನ್ನು ಬಳಸಿಕೊಂಡು ನಿಮ್ಮ ಗುರುತು ಮತ್ತು ಸಾಗರೋತ್ತರ ವಿಳಾಸವನ್ನು ಪರಿಶೀಲಿಸಲು KYC ಸಹಾಯ ಮಾಡುತ್ತದೆ. ಇದು ನಿಮ್ಮ ಗುರುತಿನ ಕಳ್ಳತನ, ಹಣಕಾಸಿನ ವಂಚನೆ ಮತ್ತು ಮನಿ ಲಾಂಡರಿಂಗ್ ಇತ್ಯಾದಿಗಳಿಂದ ರಕ್ಷಿಸಲು ಸಹಕಾರಿಯಾಗಿದೆ. ನಿಮ್ಮ ಆರ್ಥಿಕ ಸುರಕ್ಷತೆಯನ್ನು ಇದು ಖಾತ್ರಿಗೊಳಿಸುತ್ತದೆ. ನಿಯಮಿತ KYC ನವೀಕರಣಗಳು ಎಲ್ಲಾ ಬ್ಯಾಂಕಿಂಗ್ ಸೇವೆಗಳಿಗೆ ತಡೆರಹಿತ ಪ್ರವೇಶವನ್ನು ಕಾಪಾಡಿಕೊಳ್ಳಲು ಮತ್ತು ಜಾಗತಿಕವಾಗಿ ಸುರಕ್ಷಿತ ಬ್ಯಾಂಕಿಂಗ್ ಪರಿಸರವನ್ನು ಒದಗಿಸಲು ಇದು ಪ್ರಮುಖವಾಗಿವೆ.
ನಿಮ್ಮ ಅಗತ್ಯಗಳಿಗಾಗಿ ವಿನ್ಯಾಸಗೊಳಿಸಲಾಗಿದೆ
ಪ್ರಶ್ನೆಗಳಿವೆಯೇ? ನಮ್ಮಲ್ಲಿ ಉತ್ತರಗಳಿವೆ
NRI ಆಗಿ, ನಿಮ್ಮ ಮೂಲ ಶಾಖೆಗೆ ಇಮೇಲ್, ಪೋಸ್ಟ್ ಅಥವಾ ಕೊರಿಯರ್ ಮೂಲಕ ಹೊಸ ವಿವರಗಳನ್ನು ಕಳುಹಿಸುವ ಮೂಲಕ ನಿಮ್ಮ ಸಂವಹನ ವಿಳಾಸ ಮತ್ತು ಇಮೇಲ್ ಅನ್ನು ನೀವು ನವೀಕರಿಸಬಹುದು. ಈ ಹಂತವು ನಮ್ಮ ಇತ್ತೀಚಿನ ಉತ್ಪನ್ನಗಳು ಮತ್ತು ಸೇವೆಗಳ ಕುರಿತು ನಿಮಗೆ ಮಾಹಿತಿ ನೀಡುವುದನ್ನು ಖಚಿತಪಡಿಸುತ್ತದೆ. ಶಾಖೆಯು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಿಮ್ಮ ಮಾಹಿತಿಯನ್ನು ಪರಿಶೀಲಿಸುತ್ತದೆ ಮತ್ತು ನವೀಕರಿಸುತ್ತದೆ.
ನಿಮ್ಮ KYC ಮಾಹಿತಿಯನ್ನು ಪ್ರಸ್ತುತವಾಗಿ ಇರಿಸಿಕೊಳ್ಳಲು, ದಯವಿಟ್ಟು ನಿಮ್ಮ ವೀಸಾ ಮತ್ತು ಪಾಸ್‌ಪೋರ್ಟ್‌ನ ಇತ್ತೀಚಿನ ಪ್ರತಿಗಳನ್ನು ನಿಮ್ಮ ಮೂಲ ಶಾಖೆಗೆ ಕಳುಹಿಸಿ. ನಿಮ್ಮ ಖಾತೆಯ ಸಮಗ್ರತೆ ಮತ್ತು ನಿಖರತೆಯನ್ನು ಕಾಪಾಡಿಕೊಳ್ಳಲು ಈ ನಿರ್ಣಾಯಕ ದಾಖಲೆಗಳು ನಮಗೆ ಸಹಾಯ ಮಾಡುತ್ತವೆ. ಒಮ್ಮೆ ನಾವು ಈ ದಾಖಲೆಗಳನ್ನು ಸ್ವೀಕರಿಸಿದರೆ, ಶಾಖೆಯು ನಿಮ್ಮ ದಾಖಲೆಗಳನ್ನು ಪರಿಶೀಲಿಸುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ನವೀಕರಿಸುತ್ತದೆ.
ಹೌದು, NRIಗಳು ತಮ್ಮ KYC ವಿವರಗಳನ್ನು ನಿಯಮಿತವಾಗಿ ನವೀಕರಿಸುವುದು ಕಡ್ಡಾಯವಾಗಿದೆ. ನಿಯಂತ್ರಕ ಅವಶ್ಯಕತೆಗಳನ್ನು ಅನುಸರಿಸಲು ಮತ್ತು ನಿಮ್ಮ ಹಣಕಾಸಿನ ವಹಿವಾಟಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಅಭ್ಯಾಸವು ಅತ್ಯಗತ್ಯ. ನಿಯಮಿತ KYC ಅಪ್‌ಡೇಟ್‌ಗಳು ಗುರುತಿನ ಕಳ್ಳತನ ಮತ್ತು ಹಣಕಾಸಿನ ವಂಚನೆಯನ್ನು ತಡೆಯಲು ಸಹಾಯ ಮಾಡುತ್ತವೆ ಮತ್ತು ನಮ್ಮ ಎಲ್ಲಾ ಬ್ಯಾಂಕಿಂಗ್ ಸೇವೆಗಳು ಮತ್ತು ಉತ್ಪನ್ನಗಳಿಗೆ ನೀವು ಅಡೆತಡೆಯಿಲ್ಲದ ಪ್ರವೇಶವನ್ನು ಹೊಂದಿರುವಿರಿ ಎಂದು ಖಚಿತಪಡಿಸಿಕೊಳ್ಳಬಹುದು. ನಿಮ್ಮ ವಿವರಗಳನ್ನು ನವೀಕರಿಸುವುದು ಸುರಕ್ಷಿತ ಮತ್ತು ಪಾರದರ್ಶಕ ಬ್ಯಾಂಕಿಂಗ್ ಸಂಬಂಧವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಇಂದಿನ ಈ ಡಿಜಿಟಲ್ ಯುಗದಲ್ಲಿ, ನಿಮ್ಮ ಹಣಕಾಸಿನ ದಾಖಲೆಗಳನ್ನು ನವೀಕೃತವಾಗಿರಿಸುವುದು ಹಿಂದೆಂದಿಗಿಂತಲೂ ಸುಲಭ ಮತ್ತು ಅನುಕೂಲಕರವಾಗಿದೆ. ಆನ್‌ಲೈನ್‌ನಲ್ಲಿ KYC ಅಪ್ಡೇಟ್ ಮಾಡುವ ಆಯ್ಕೆಯೊಂದಿಗೆ, ನಿಮ್ಮ ಹಣಕಾಸು ಸಂಸ್ಥೆಗಳು ನಿಮ್ಮ ಬಗ್ಗೆ ಅತ್ಯಂತ ನಿಖರವಾದ ಮಾಹಿತಿಯನ್ನು ಹೊಂದಿವೆ ಎನ್ನುವುದನ್ನು ನೀವು ಖಚಿತಪಡಿಸಿಕೊಳ್ಳಬಹುದು. ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ತಮ್ಮ ಗ್ರಾಹಕರ ಗುರುತು ಮತ್ತು ನ್ಯಾಯಸಮ್ಮತತೆಯನ್ನು ಪರಿಶೀಲಿಸಲು KYC, ಅಥವಾ ಗ್ರಾಹಕರ ಬಗೆ ಸರಿಯಾದ ತಿಳಿವಳಿಕೆ ಎನ್ನುವುದು ಒಂದು ಬಹು ಮುಖ್ಯ ಪ್ರಕ್ರಿಯೆಯಾಗಿದೆ. KYC ನವೀಕರಣವು, ಈ ಮಾಹಿತಿಯು ಸರಿಯಾಗಿದೆಯೇ ಎಂದು ಮತ್ತು ಇತ್ತೀಚಿನ ನಿಯಂತ್ರಣ ಅಗತ್ಯತೆಗಳ ಅನುಸಾರವಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನೆರವಾಗುತ್ತದೆ. ತಂತ್ರಜ್ಞಾನ ಮತ್ತು ಬಳಕೆದಾರ ಸ್ನೇಹಿ ಆನ್‌ಲೈನ್ ವೇದಿಕೆಗಳಲ್ಲಿನ ಪ್ರಗತಿಗೆ ಧನ್ಯವಾದಗಳು. ನೀವು ಈಗ ನಿಮ್ಮ ಸ್ವಂತ ಮನೆ ಅಥವಾ ಕಚೇರಿಯ ಸೌಕರ್ಯದಿಂದ ನಿಮ್ಮ KYC ಮಾಹಿತಿಯನ್ನು ಸಮರ್ಥವಾಗಿ ನವೀಕರಿಸಬಹುದು, ಸಮಯ ತೆಗೆದುಕೊಳ್ಳುವ ವೈಯಕ್ತಿಕ ಭೇಟಿಗಳ ಅಗತ್ಯತೆ ಇಲ್ಲದಂತೆ ಮಾಡಬಹುದುಇಂದಿನ ಈ ಡಿಜಿಟಲ್ ಯುಗದಲ್ಲಿ, ನಿಮ್ಮ ಹಣಕಾಸಿನ ದಾಖಲೆಗಳನ್ನು ನವೀಕೃತವಾಗಿರಿಸುವುದು ಹಿಂದೆಂದಿಗಿಂತಲೂ ಸುಲಭ ಮತ್ತು ಅನುಕೂಲಕರವಾಗಿದೆ. ಆನ್‌ಲೈನ್‌ನಲ್ಲಿ KYC ಅಪ್ಡೇಟ್ ಮಾಡುವ ಆಯ್ಕೆಯೊಂದಿಗೆ, ನಿಮ್ಮ ಹಣಕಾಸು ಸಂಸ್ಥೆಗಳು ನಿಮ್ಮ ಬಗ್ಗೆ ಅತ್ಯಂತ ನಿಖರವಾದ ಮಾಹಿತಿಯನ್ನು ಹೊಂದಿವೆ ಎನ್ನುವುದನ್ನು ನೀವು ಖಚಿತಪಡಿಸಿಕೊಳ್ಳಬಹುದು. ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ತಮ್ಮ ಗ್ರಾಹಕರ ಗುರುತು ಮತ್ತು ನ್ಯಾಯಸಮ್ಮತತೆಯನ್ನು ಪರಿಶೀಲಿಸಲು KYC, ಅಥವಾ ಗ್ರಾಹಕರ ಬಗೆ ಸರಿಯಾದ ತಿಳಿವಳಿಕೆ ಎನ್ನುವುದು ಒಂದು ಬಹು ಮುಖ್ಯ ಪ್ರಕ್ರಿಯೆಯಾಗಿದೆ. KYC ನವೀಕರಣವು, ಈ ಮಾಹಿತಿಯು ಸರಿಯಾಗಿದೆಯೇ ಎಂದು ಮತ್ತು ಇತ್ತೀಚಿನ ನಿಯಂತ್ರಣ ಅಗತ್ಯತೆಗಳ ಅನುಸಾರವಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನೆರವಾಗುತ್ತದೆ. ತಂತ್ರಜ್ಞಾನ ಮತ್ತು ಬಳಕೆದಾರ ಸ್ನೇಹಿ ಆನ್‌ಲೈನ್ ವೇದಿಕೆಗಳಲ್ಲಿನ ಪ್ರಗತಿಗೆ ಧನ್ಯವಾದಗಳು. ನೀವು ಈಗ ನಿಮ್ಮ ಸ್ವಂತ ಮನೆ ಅಥವಾ ಕಚೇರಿಯ ಸೌಕರ್ಯದಿಂದ ನಿಮ್ಮ KYC ಮಾಹಿತಿಯನ್ನು ಸಮರ್ಥವಾಗಿ ನವೀಕರಿಸಬಹುದು, ಸಮಯ ತೆಗೆದುಕೊಳ್ಳುವ ವೈಯಕ್ತಿಕ ಭೇಟಿಗಳ ಅಗತ್ಯತೆ ಇಲ್ಲದಂತೆ ಮಾಡಬಹುದುಇಂದಿನ ಈ ಡಿಜಿಟಲ್ ಯುಗದಲ್ಲಿ, ನಿಮ್ಮ ಹಣಕಾಸಿನ ದಾಖಲೆಗಳನ್ನು ನವೀಕೃತವಾಗಿರಿಸುವುದು ಹಿಂದೆಂದಿಗಿಂತಲೂ ಸುಲಭ ಮತ್ತು ಅನುಕೂಲಕರವಾಗಿದೆ. ಆನ್‌ಲೈನ್‌ನಲ್ಲಿ KYC ಅಪ್ಡೇಟ್ ಮಾಡುವ ಆಯ್ಕೆಯೊಂದಿಗೆ, ನಿಮ್ಮ ಹಣಕಾಸು ಸಂಸ್ಥೆಗಳು ನಿಮ್ಮ ಬಗ್ಗೆ ಅತ್ಯಂತ ನಿಖರವಾದ ಮಾಹಿತಿಯನ್ನು ಹೊಂದಿವೆ ಎನ್ನುವುದನ್ನು ನೀವು ಖಚಿತಪಡಿಸಿಕೊಳ್ಳಬಹುದು. ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ತಮ್ಮ ಗ್ರಾಹಕರ ಗುರುತು ಮತ್ತು ನ್ಯಾಯಸಮ್ಮತತೆಯನ್ನು ಪರಿಶೀಲಿಸಲು KYC, ಅಥವಾ ಗ್ರಾಹಕರ ಬಗೆ ಸರಿಯಾದ ತಿಳಿವಳಿಕೆ ಎನ್ನುವುದು ಒಂದು ಬಹು ಮುಖ್ಯ ಪ್ರಕ್ರಿಯೆಯಾಗಿದೆ. KYC ನವೀಕರಣವು, ಈ ಮಾಹಿತಿಯು ಸರಿಯಾಗಿದೆಯೇ ಎಂದು ಮತ್ತು ಇತ್ತೀಚಿನ ನಿಯಂತ್ರಣ ಅಗತ್ಯತೆಗಳ ಅನುಸಾರವಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನೆರವಾಗುತ್ತದೆ. ತಂತ್ರಜ್ಞಾನ ಮತ್ತು ಬಳಕೆದಾರ ಸ್ನೇಹಿ ಆನ್‌ಲೈನ್ ವೇದಿಕೆಗಳಲ್ಲಿನ ಪ್ರಗತಿಗೆ ಧನ್ಯವಾದಗಳು. ನೀವು ಈಗ ನಿಮ್ಮ ಸ್ವಂತ ಮನೆ ಅಥವಾ ಕಚೇರಿಯ ಸೌಕರ್ಯದಿಂದ ನಿಮ್ಮ KYC ಮಾಹಿತಿಯನ್ನು ಸಮರ್ಥವಾಗಿ ನವೀಕರಿಸಬಹುದು, ಸಮಯ ತೆಗೆದುಕೊಳ್ಳುವ ವೈಯಕ್ತಿಕ ಭೇಟಿಗಳ ಅಗತ್ಯತೆ ಇಲ್ಲದಂತೆ ಮಾಡಬಹುದು
ನಿಮ್ಮ KYC ಮಾಹಿತಿಯನ್ನು ಆನ್ಲೈನ್ನಲ್ಲಿ ಅಪ್ಡೇಟ್ ಮಾಡುವ ಸಾಮರ್ಥ್ಯವು ಈಗ ಅತ್ಯಂತ ಸುಲಭವಾಗಿ ಅನುಕೂಲತೆಯ ಮಟ್ಟಕ್ಕೆ ತಲುಪಿವೆ. KYC ಅಪ್‌ಡೇಟ್‌ಗಾಗಿ ಇರುವ ಈ ಡಿಜಿಟಲ್ ವಿಧಾನವು ಸಮಯವನ್ನು ಉಳಿಸಲು ಮತ್ತು ದಾಖಲೆಗಳನ್ನು ಕಡಿಮೆ ಮಾಡಲು ನಿಮಗೆ ಅನುಮತಿಯನ್ನು ನೀಡುತ್ತದೆ. ಪ್ರಕ್ರಿಯೆಯನ್ನು ಸುಲಭ ಹಾಗೂ ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ. ಅಗತ್ಯತೆಗೆ ತಕ್ಕಂತೆ ನವೀಕರಿಸಿದ ಗುರುತಿನ ದಾಖಲೆಗಳು ಅಥವಾ ವೈಯಕ್ತಿಕ ವಿವರಗಳನ್ನು ಒದಗಿಸುವ ಮೂಲಕ ನೀವು ಕೆಲವು ಕ್ಲಿಕ್‌ಗಳೊಂದಿಗೆ ಅಗತ್ಯ ಹಂತಗಳನ್ನು ಪೂರ್ಣಗೊಳಿಸಬಹುದು. ಮೇಲಾಗಿ, ಆನ್‌ಲೈನ್ KYC ಅಪ್‌ಡೇಟ್‌ಗಳು ಹಣಕಾಸು ಸಂಸ್ಥೆಗಳು ನಿಯಂತ್ರಣ ಅಗತ್ಯತೆಗಳನ್ನು ಅನುಸರಿಸಲು ಸಹಾಯ ಮಾಡುತ್ತವೆ ಹಾಗೂ ನಿಮ್ಮ ಖಾತೆಯು ಸುರಕ್ಷಿತ ಮತ್ತು ಭದ್ರತೆ ಹೊಂದಿದೆ ಎನ್ನುವುದನ್ನು ಖಚಿತಪಡಿಸುತ್ತದೆ. ಆದ್ದರಿಂದ, ನಿಮ್ಮ KYC ಮಾಹಿತಿಯನ್ನು ಆನ್‌ಲೈನ್‌ನಲ್ಲಿ ನವೀಕರಿಸುವ ಆಯ್ಕೆಯ ಪ್ರಯೋಜನವನ್ನು ನೀವು ಈಗಾಗಲೇ ಪಡೆದುಕೊಂಡಿಲ್ಲದಿದ್ದಲ್ಲಿ, ಆಧುನಿಕ ಬ್ಯಾಂಕಿಂಗ್ ಸೇವೆ ಒದಗಿಸುವ ಈ ಬಳಕೆದಾರ ಸ್ನೇಹಿ ಮತ್ತು ಪರಿಣಾಮಕಾರಿ ವಿಧಾನವನ್ನು ವೀಕ್ಷಿಸಲು ಇದು ಸೂಕ್ತ ಸಮಯವಾಗಿದೆನಿಮ್ಮ KYC ಮಾಹಿತಿಯನ್ನು ಆನ್ಲೈನ್ನಲ್ಲಿ ಅಪ್ಡೇಟ್ ಮಾಡುವ ಸಾಮರ್ಥ್ಯವು ಈಗ ಅತ್ಯಂತ ಸುಲಭವಾಗಿ ಅನುಕೂಲತೆಯ ಮಟ್ಟಕ್ಕೆ ತಲುಪಿವೆ. KYC ಅಪ್‌ಡೇಟ್‌ಗಾಗಿ ಇರುವ ಈ ಡಿಜಿಟಲ್ ವಿಧಾನವು ಸಮಯವನ್ನು ಉಳಿಸಲು ಮತ್ತು ದಾಖಲೆಗಳನ್ನು ಕಡಿಮೆ ಮಾಡಲು ನಿಮಗೆ ಅನುಮತಿಯನ್ನು ನೀಡುತ್ತದೆ. ಪ್ರಕ್ರಿಯೆಯನ್ನು ಸುಲಭ ಹಾಗೂ ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ. ಅಗತ್ಯತೆಗೆ ತಕ್ಕಂತೆ ನವೀಕರಿಸಿದ ಗುರುತಿನ ದಾಖಲೆಗಳು ಅಥವಾ ವೈಯಕ್ತಿಕ ವಿವರಗಳನ್ನು ಒದಗಿಸುವ ಮೂಲಕ ನೀವು ಕೆಲವು ಕ್ಲಿಕ್‌ಗಳೊಂದಿಗೆ ಅಗತ್ಯ ಹಂತಗಳನ್ನು ಪೂರ್ಣಗೊಳಿಸಬಹುದು. ಮೇಲಾಗಿ, ಆನ್‌ಲೈನ್ KYC ಅಪ್‌ಡೇಟ್‌ಗಳು ಹಣಕಾಸು ಸಂಸ್ಥೆಗಳು ನಿಯಂತ್ರಣ ಅಗತ್ಯತೆಗಳನ್ನು ಅನುಸರಿಸಲು ಸಹಾಯ ಮಾಡುತ್ತವೆ ಹಾಗೂ ನಿಮ್ಮ ಖಾತೆಯು ಸುರಕ್ಷಿತ ಮತ್ತು ಭದ್ರತೆ ಹೊಂದಿದೆ ಎನ್ನುವುದನ್ನು ಖಚಿತಪಡಿಸುತ್ತದೆ. ಆದ್ದರಿಂದ, ನಿಮ್ಮ KYC ಮಾಹಿತಿಯನ್ನು ಆನ್‌ಲೈನ್‌ನಲ್ಲಿ ನವೀಕರಿಸುವ ಆಯ್ಕೆಯ ಪ್ರಯೋಜನವನ್ನು ನೀವು ಈಗಾಗಲೇ ಪಡೆದುಕೊಂಡಿಲ್ಲದಿದ್ದಲ್ಲಿ, ಆಧುನಿಕ ಬ್ಯಾಂಕಿಂಗ್ ಸೇವೆ ಒದಗಿಸುವ ಈ ಬಳಕೆದಾರ ಸ್ನೇಹಿ ಮತ್ತು ಪರಿಣಾಮಕಾರಿ ವಿಧಾನವನ್ನು ವೀಕ್ಷಿಸಲು ಇದು ಸೂಕ್ತ ಸಮಯವಾಗಿದೆ.