ಕೆಬಿಎಲ್ ಎಕ್ಸ್‌ಪ್ರೆಸ್ ಹೋಮ್ ಕಂಫರ್ಟ್ ಸಾಲ
ನಿಮ್ಮ ವಾಸ ಸ್ಥಳವನ್ನು ನೆಮ್ಮದಿಯ ತಾಣವನ್ನಾಗಿಸಲು, ಅದರ ಸೌಂದರ್ಯ ವೃದ್ಧಿಸಲು, ಒಳಾಂಗಣದ ಅಂದವನ್ನು ಹೆಚ್ಚಿಸಲು, ಆಪ್ತ ಅಡುಗೆಕೋಣೆ ವಿನ್ಯಾಮಾಡಲು ನಾವು ಹಣಕಾಸಿನ ನೆರವನ್ನು ಕೊಡುತ್ತೇವೆ. ಮನೆಯ ಒಳಾಂಗಣ ನವೀಕರಣ ಸಾಲ ಸೌಲಭ್ಯ ನಿಮ್ಮ ಮನದಿಚ್ಛೆಗೆ ತಕ್ಕಂತೆ ನಿಮ್ಮ ಮನೆಯನ್ನು ರೂಪಿಸಲು ಕಾರಣವಾಗುತ್ತದೆ. ಡಿಜಿಟಲ್ ಪ್ರಕ್ರಿಯೆ ಮತ್ತು ತ್ವರಿತ ಮಂಜೂರಾತಿಯ ಮೂಲಕ ಮನೆ ಮಾಲಿಕರಿಗೆ ಈ ಸೌಲಭ್ಯ ಲಭ್ಯವಾಗುತ್ತದೆ.Read more
ಈ ಸಾಲ ನಿಮಗಾಗಿ ಏಕೆ
ನಿಮಗೆ ಬೇಕಾದುದನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ
ಮನೆಯ ಅಲಂಕಾರಿಕ ಅಗತ್ಯಗಳು ಫರ್ನಿಶಿಂಗ್ ಮತ್ತು ಒಳಾಂಗಣ ನವೀಕರಣವನ್ನು ಈ ಸೌಲಭ್ಯ ಒಳಗೊಂಡಿದೆ.
ಹೊಸದಾಗಿ ಖರೀದಿಸಿದ, ನಿರ್ಮಿಸಿದ ಅಥವಾ ಭವಿಷ್ಯದಲ್ಲಿ ಕಟ್ಟುವ / ಖರೀದಿಸುವ ಮನೆಗಳನ್ನು ನವೀಕರಿಸಿ
ತಕ್ಷಣದ ಸಾಲ ಮಂಜೂರಾತಿಗಾಗಿ ತ್ವರಿತ ಡಿಜಿಟಲ್ ಪ್ರಕ್ರಿಯೆ
ಅರ್ಹತೆ
ಕನಿಷ್ಠ 18 ವರ್ಷ ಮತ್ತು ಗರಿಷ್ಠ 60 ವರ್ಷ (ಕೃಷಿಕರಿಗೆ 70 ವರ್ಷಗಳು)
- ವೇತನಭೋಗಿ ವ್ಯಕ್ತಿ: ಮಾಸಿಕ ವೇತನ ₹ 10,000
- ಸ್ವಯಂ ಉದ್ಯೋಗಿ: ವಾರ್ಷಿಕ ಆದಾಯ ₹1,20,000
- ಸಂಬಳ ಪಡೆಯುವ ವ್ಯಕ್ತಿ: ಮಾಸಿಕ ವೇತನ ₹ 40,000
- ಸ್ವಯಂ ಉದ್ಯೋಗಿ: ಕನಿಷ್ಠ ಒಟ್ಟು ಆದಾಯ ₹4,80,000
ಅಗತ್ಯವಿರುವ ದಾಖಲೆಗಳು
- ಅರ್ಜಿದಾರರ/ಗ್ರಾಹಕರ ಮತ್ತು ಜಾಮೀನುದಾರರ ಆಧಾರ್ ಮತ್ತು ಪಾನ್ ಕಾರ್ಡ್
- ಆದಾಯ ಪುರಾವೆ
- ಅರ್ಜಿದಾರರ ಕೊನೆಯ 12 ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್ (ಈಗಾಗಲೇ ಬ್ಯಾಂಕ್‌ನ ಗ್ರಾಹಕರಾಗಿದ್ದಲ್ಲಿ, ಬ್ಯಾಂಕ್ ಸ್ಟೇಟ್‌ಮೆಂಟ್ ಅನ್ನು ಗಣಕಯಂತ್ರದಿಂದ ಪಡೆಯಬಹುದು)
- RTC ನಕಲು (ಅರ್ಜಿದಾರರು ಕೃಷಿಕರಾಗಿದ್ದಲ್ಲಿ)
- ಕೊಟೇಶನ್
1,2,3 ಹಂತಗಳು ಅಷ್ಟು ಸುಲಭ...
3 ಸರಳ ಹಂತಗಳಲ್ಲಿ ಕೆಬಿಎಲ್ ಗೃಹ ಸಾಲಕ್ಕಾಗಿ ಅರ್ಜಿ ಸಲ್ಲಿಸಿ
ಹಂತ 1
ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ
ನಿಮ್ಮ ಹತ್ತಿರದ ಕರ್ನಾಟಕ ಬ್ಯಾಂಕ್ ಶಾಖೆಗೆ ಹೋಗಿ
ಹಂತ 2
ನಿಮ್ಮ ಮೂಲ ವಿವರಗಳೊಂದಿಗೆ ಪ್ರಾರಂಭಿಸಿ
ನಿಮ್ಮ ಸಾಲದ ಅವಶ್ಯಕತೆಯೊಂದಿಗೆ ನಿಮ್ಮ ಪ್ರಮುಖ ದಾಖಲೆಗಳನ್ನು ಒದಗಿಸಿ.
ಹಂತ 3
ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ
ನಿಮ್ಮ ಖಾತೆಯನ್ನು ತೆರೆದಾಗ ನಮ್ಮ ಶಾಖೆಯ ಅಧಿಕಾರಿಗಳು ನಿಮಗೆ ತಿಳಿಸುತ್ತಾರೆ
ನಿಮಗಾಗಿ ಇರಬಹುದಾದ ಇತರ ಆಯ್ಕೆಗಳನ್ನು ವೀಕ್ಷಿಸಿ
ಸಾವಿರಾರು ಜನರು ನಂಬುವ ಹಾಗೂ ಆರ್ಥಿಕ ಉತ್ಕೃಷ್ಟತೆಗಾಗಿ ಆಯ್ಕೆಯಾಗಿರುವುದು
ತಿಳಿದುಕೊಂಡು ಸಾಲಗಳನ್ನು ಸರಳಗೊಳಿಸಿ
ನಿಮಗೆ ಮಾಹಿತಿ ನೀಡುವ ಚುಟುಕು ಮಾಹಿತಿಗಳು
ಪ್ರಶ್ನೆಗಳಿವೆಯೇ? ನಮ್ಮ ಬಳಿ ಉತ್ತರಗಳಿವೆ
ಭದ್ರತೆಯಾಗಿ ಆಸ್ತಿಯ ಅಡಮಾನದ ಅಗತ್ಯವಿದೆ. ಆಸ್ತಿ ದಾಖಲೆ-ಪತ್ರಗಳು ಕಾನೂನು ಪ್ರಕಾರವಾಗಿ ಸರಿಯಾಗಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳುವುದರ ಮೂಲಕ ನಿಮ್ಮ ಮತ್ತು ನಮ್ಮ ಹಿತಾಸಕ್ತಿಯನ್ನು ಕಾಪಾಡುತ್ತೇವೆ.
ನೀವು ನಮ್ಮ ಗೃಹ ಸಾಲವನ್ನು ಆಯ್ಕೆ ಮಾಡಿದಾಗ, ನೀವು ಆಸ್ತಿಯ ವೆಚ್ಚದ 15% ರಿಂದ 25% ರಷ್ಟು ಹಣವನ್ನು ತಕ್ಷಣವೇ ನೀಡಬೇಕಾದ ಮೊತ್ತವಾಗಿ ಅಥವಾ ಮಾರ್ಜಿನ್ ಮನಿಯಾಗಿ ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ. ನಾವು ಉಳಿದ ಮೊತ್ತಕ್ಕೆ ಹಣಕಾಸಿನ ಸಹಾಯವನ್ನು ಒದಗಿಸುತ್ತೇವೆ.
ಈಕ್ವೇಟೆಡ್ ಮಾಸಿಕ ಇನ್‌ಸ್ಟಾಲ್‌ಮೆಂಟ್ ಎನ್ನುವುದು ಪಾವತಿ ವಿಧಾನವಾಗಿದ್ದು ಅದು ನಿಮ್ಮ ಸಾಲವನ್ನು ಸ್ಥಿರವಾದ ಮಾಸಿಕ ಮೊತ್ತದಲ್ಲಿ ಮರುಪಾವತಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಇದು ಬಡ್ಡಿ ಮತ್ತು ಅಸಲು ಎರಡನ್ನೂ ಒಳಗೊಂಡಿರುತ್ತದೆ. ನಿಮ್ಮ ಮಾಸಿಕ ಬಜೆಟ್‌ಗೆ ಸರಳವಾಗಿ ಹೊಂದಿಕೊಂಡು ನಿಮ್ಮ ಸಾಲದ ಮೊತ್ತವನ್ನು ಕಡಿಮೆ ಮಾಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ
ಹೌದು, ಮೊದಲ ಬಾರಿಗೆ ಮನೆ ಖರೀದಿ ಮಾಡುವವರು ಆದಾಯ ತೆರಿಗೆ ಕಾಯಿದೆಯ ಅಡಿಯಲ್ಲಿ ಗೃಹ ಸಾಲದ ಅಸಲು ಮತ್ತು ಬಡ್ಡಿ ಅಂಶಗಳ ಮೇಲೆ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು.
ಹೌದು, ನಿಮ್ಮ ಸಾಲವನ್ನು ನೀವು ಪೂರ್ವಪಾವತಿ ಮಾಡಬಹುದು. ಅನ್ವಯಿಸುವ ಶುಲ್ಕಗಳು ಮತ್ತು ಷರತ್ತುಗಳಿಗಾಗಿ, ಅರ್ಜಿ ಸಲ್ಲಿಸುವಾಗ ನಿರ್ದಿಷ್ಟ ಸಾಲದ ನಿಖರವಾದ ನಿಯಮಗಳು ಹಾಗೂ ಷರತ್ತುಗಳಿಗಾಗಿ ದಯವಿಟ್ಟು ನಿಮ್ಮ ಸಾಲ ಒಪ್ಪಂದವನ್ನು ವೀಕ್ಷಿಸಿ.
ನಿಮ್ಮ ಜೀವನಶೈಲಿಯನ್ನು ಬಿಂಬಿಸುವ ಮನೆಯನ್ನು ರೂಪಿಸಿಕೊಳ್ಳಿ. ನಿಮ್ಮ ಮನೆ ಪೀಠೋಪಕರಣಗಳಿಗೆ ಮತ್ತು ಮನೆಯ ಒಳಾಂಗಣ ನಿರ್ಮಾಣಕ್ಕೆ ನಿಮ್ಮ ಅಗತ್ಯಕ್ಕೆ ಹೊಂದುವ ಸಾಲಸೌಲಭ್ಯವನ್ನು ಪಡೆಯಿರಿ.
ಒಳಗಾಗಬಹುದು. ಕಡಿಮೆಗೊಳಿಸಿದ ಬಾಕಿ ಆಧಾರದ ಮೇಲೆ ಬಡ್ಡಿ ಲೆಕ್ಕಾಚಾರ ಎಂದರೆ ನೀವು ಕ್ರಮೇಣ ಅಸಲು ಮರುಪಾವತಿ ಮಾಡುವುದರಿಂದ, ನಿಮ್ಮ EMI ಗಳ ಮೇಲಿನ ಬಡ್ಡಿ ಅಂಶವು ಕಡಿಮೆಯಾಗುತ್ತದೆ. ಗೃಹ ಸಾಲವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ನಿರ್ಣಯಿಸಿಕೊಳ್ಳುವುದು ಬಹುಮುಖ್ಯವಾಗಿರುತ್ತದೆ. ಡೌನ್ ಪೇಮೆಂಟ್, EMI ಕೈಗೆಟುಕುವಿಕೆ, ಸಾಲದ ಅವಧಿ ಮತ್ತು ಸಂಸ್ಕರಣಾ ಶುಲ್ಕಗಳು, ಕಾನೂನು ಶುಲ್ಕಗಳು ಮತ್ತು ಸ್ಟ್ಯಾಂಪ್ ಡ್ಯೂಟಿಯಂತಹ ಹೆಚ್ಚುವರಿ ವೆಚ್ಚಗಳ ಅಂಶಗಳನ್ನು ಸಂಪೂರ್ಣವಾಗಿ ಪರಿಗಣಿಸಬೇಕಾಗುತ್ತದೆ. ಇದಲ್ಲದೆ, ಮಾರುಕಟ್ಟೆಯ ಪ್ರವೃತ್ತಿಗಳ ಮೇಲೆ ಕೂಡ ನಿಗಾ ಇರಿಸಬೇಕಾಗುತ್ತದೆ, ಏಕೆಂದರೆ ಅವುಗಳು ಫ್ಲೋಟಿಂಗ್ ಬಡ್ಡಿದರಗಳ ಮೇಲೆ ಪರಿಣಾಮವನ್ನು ಬೀರಬಹುದು. ನಿಮ್ಮ ಕನಸು ತಲುಪಲು ಅಗತ್ಯವಿರುವ ಹಣಕಾಸಿನ ಬೆಂಬಲವನ್ನು ಒದಗಿಸಲು ನಾವು ವೇಗದ ಗೃಹ ಸಾಲ ಸೇವೆಗಳನ್ನು ರಚಿಸಿದ್ದೇವೆ
ಅರ್ಜಿ ಸಲ್ಲಿಸುವ ಮೊದಲು ಸ್ಥಿರ ಆದಾಯದ ಮೂಲ ಮತ್ತು ಉತ್ತಮ ಕ್ರೆಡಿಟ್ ಸ್ಕೋರ್ ಇದೆಯೆಂದು ಖಚಿತಪಡಿಸಿಕೊಳ್ಳಿ. ಉತ್ತಮ ಬಡ್ಡಿ ದರಗಳು ಮತ್ತು ನಿಯಮಗಳಿಗಾಗಿ ವಿವಿಧ ಸಾಲ ನೀಡುವವರನ್ನು ಹೋಲಿಕೆ ಮಾಡಿ. ಮುಂದೋ ತಗುಲಬಹುದಾದ ಹೆಚ್ಚುವರಿ ವೆಚ್ಚಗಳ ಪರಿಣಾಮವನ್ನು ಕಡಿಮೆ ಅಂದಾಜು ಮಾಡಬೇಡಿ. ಅನಿರೀಕ್ಷಿತ ವೆಚ್ಚಗಳಿಗಾಗಿ ಆಕಸ್ಮಿಕ ನಿಧಿಯನ್ನು ಇಟ್ಟುಕೊಳ್ಳಿ. ಸಕಾಲಿಕ ಮರುಪಾವತಿ ನಿರ್ಣಾಯಕವಾಗಿರುತ್ತದೆ, ಏಕೆಂದರೆ ಗೃಹ ಸಾಲದಲ್ಲಿ ಡೀಫಾಲ್ಟ್ ಮಾಡುವುದು ನಿಮ್ಮ ಮನೆಯನ್ನು ಕಳೆದುಕೊಳ್ಳುವುದೂ ಒಳಗೊಂಡಂತೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು.