ಕೃಷಿಕ್ ಗೋದಾಮ್ ಲೋನ್

ಕೃಷಿ ಕಾರ್ಯದಲ್ಲಿರುವ  ಸಂಗ್ರಹಣಾ ಸಾಮರ್ಥ್ಯದ ಅಗತ್ಯತೆಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಆದ್ದರಿಂದ ನಿಮ್ಮ ಯೋಜನೆಗಳಿಗೆ ಬೆಂಬಲ ಒದಗಿಸಲು ನಾವು ಕೃಷಿಕ್ ಗೋದಾಮ್ ಸಾಲವನ್ನು ತಂದಿದ್ದೇವೆ. ಹೊಸ ಗೋದಾಮುಗಳ ನಿರ್ಮಾಣ, ಹಳೆಯ ಗೋದಾಮುಗಳ ನವೀಕರಣಗಳನ್ನು ಬಹಳ ಸುಲಭವಾಗಿ ಮಾಡಿ. ನಾವು ದೊಡ್ಡ ಮಟ್ಟದ ಕಾರ್ಪೊರೇಟ್ ರೈತರು ಮತ್ತು ಮಾರ್ಕೆಟಿಂಗ್ ಮಂಡಳಿಗಳಿಂದ ಹಿಡಿದು ಸಣ್ಣ ರೈತರವರೆಗೆ ವಿವಿಧ ಗ್ರಾಹಕರಿಗೆ ಸಹಾಯ ಮಾಡಲು ಬದ್ಧರಿದ್ದೇವೆ. ನಮ್ಮ ಉತ್ತಮ ಪ್ರಕ್ರಿಯೆ ಮತ್ತು ತ್ವರಿತ ಮಂಜೂರಾತಿಯೊಂದಿಗೆ, ನೀವು ಯಾವುದೇ ತಡವಿಲ್ಲದೆ ನಿಮ್ಮ ಸಂಗ್ರಹಣೆಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು. ಗುಣಮಟ್ಟದಲ್ಲಿ ಉತ್ತಮ ಮಾನದಂಡಗಳೊಂದಿಗೆ ನಿಮ್ಮ ಕೃಷಿ ಉತ್ಪಾದನೆಯನ್ನು ಸುರಕ್ಷಿತಗೊಳಿಸಲು ಮತ್ತು ನಿರ್ವಹಣೆ ಮಾಡಲು ನಾವು ನಿಮಗೆ ಹಣಕಾಸಿನ ನೆರವನ್ನು ನೀಡುತ್ತೇವೆ.Read more

ನಿಮಗೇಕೆ ಈ ಸಾಲ ಸೂಕ್ತ

ಸರಳ ಸೌಲಭ್ಯದೊಂದಿಗೆ ನಿಮ್ಮ ಕೃಷಿ ಅಗತ್ಯತೆಗಳಿಗೆ ಬೆಂಬಲ

ವ್ಯಕ್ತಿಗಳು, ರೈತರು, ಸಹಕಾರಿ ಸಂಘಗಳು, NGOs ಗಳು ಮತ್ತು ಅನೇಕರಿಗೆ ಸೂಕ್ತವಾಗಿದೆ

ತ್ವರಿತ ಆರ್ಥಿಕ ಸಹಾಯಕ್ಕಾಗಿ ಸುವ್ಯವಸ್ಥಿತ ಅಪ್ಲಿಕೇಶನ್ ಪ್ರಕ್ರಿಯೆ

ಅರ್ಧ-ವಾರ್ಷಿಕ ಅಥವಾ ವಾರ್ಷಿಕವಾಗಿ ಹೊಂದಿಕೊಳ್ಳುವ ಅವಧಿಯೊಂದಿಗೆ ನಿಮ್ಮ ಲೋನನ್ನು ಸುಲಭವಾಗಿ ಪಾವತಿಸಿ

ಡೌನ್ ಪಾವತಿ ಮೊತ್ತ

ಯೋಜನೆಯ ವೆಚ್ಚದ 25% ಅವಧಿಯ ಸಾಲಕ್ಕಾಗಿ. ಕೆಲಸದ ಬಂಡವಾಳ ಸಾಲಕ್ಕಾಗಿ ಒಂದು ಚಕ್ರದ ಮರುಕಳಿಸುವ ವೆಚ್ಚಗಳ 25%

ಸಾಲ ಮರುಪಾವತಿ

ನಿಮ್ಮ ಸಾಲದ ಪಾವತಿಗಳನ್ನು ಅರ್ಧ ವಾರ್ಷಿಕ ಅಥವಾ ವಾರ್ಷಿಕ ಕಂತುಗಳಲ್ಲಿ ಮಾಡಿ, ಇದು ನಿಮ್ಮ ಅಗತ್ಯಗಳಿಗೆ ಹೊಂದಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಬಡ್ಡಿ ದರಗಳು

ಬಡ್ಡಿದರಗಳು ಬಾಹ್ಯ ಬೆಂಚ್ಮಾರ್ಕ್ ಸಾಲ ದರ (ಇಬಿಎಲ್ಆರ್) ಮಾರ್ಗಸೂಚಿಗಳೊಂದಿಗೆ ಹೊಂದಿಕೊಳ್ಳುತ್ತವೆ, ನಿಮ್ಮ ಪಾವತಿಗಳು ಕೈಗೆಟುಕುವಂತಿವೆ ಮತ್ತು ಪ್ರಸ್ತುತ ಮಾರುಕಟ್ಟೆ ಪರಿಸ್ಥಿತಿಗಳನ್ನು ಪ್ರತಿಬಿಂಬಿಸುತ್ತವೆ ಎಂದು ಖಚಿತಪಡಿಸುತ್ತದೆ.

ಸಾಲದ ಮೊತ್ತ

ನಾವು ಕೃಷಿ ಸಂಗ್ರಹಣೆ ಕೇಂದ್ರಗಳ ನಿರ್ಮಾಣ ಅಥವಾ ಅಭಿವೃದ್ಧಿಗಾಗಿ ನಾವು ₹5 ಕೋಟಿವರೆಗೆ ಹಣಕಾಸು ಸಹಾಯ ನೀಡುತ್ತೇವೆ. ನಾವು ವಿಭಿನ್ನ ಯೋಜನೆಗಳಿಗೆ ಸೂಕ್ತವಾಗುವಂತೆ DPN ಸಾಲಗಳಿಗಾಗಿ 34 ತಿಂಗಳುಗಳ ಸಮಯ ಮತ್ತು ಅವಧಿ ಸಾಲಗಳಿಗಾಗಿ 120 ತಿಂಗಳುಗಳ ಸಮಯವನ್ನು ನೀಡುತ್ತೇವೆ.

ಬಂಡವಾಳ ಸಹಾಯ

ಬಂಡವಾಳ ಸಾಲವು (working capital) ೧೮ ತಿಂಗಳುಗಳವರೆಗೆ ಲಭ್ಯವಿರುತ್ತದೆ, ಇದು ದಿನನಿತ್ಯದ ಹಣಕಾಸು ಅಗತ್ಯಗಳಿಗೆ ಸಹಾಯವಾಗುತ್ತದೆ

ಸ್ವತ್ತುಗಳ ಹೈಪೋಥಿಕೇಷನ್

ಯಂತ್ರೋಪಕರಣಗಳು ಮತ್ತು ಸ್ವಾಧೀನಪಡಿಸಿಕೊಂಡ ಸ್ವತ್ತುಗಳು ಸಾಲಕ್ಕೆ ಪ್ರಾಥಮಿಕ ಭದ್ರತೆಯಾಗಿ ಇರುತ್ತದೆ

ಹೆಚ್ಚುವರಿ ಮೇಲಾಧಾರ

ನಮಗೆ ಸಾಲದ ಮೊತ್ತದ 100%ಗೆ ಸರಿ ಸಮವಾಗಿರುವ(ನಿರ್ಮಾಣದ ಪ್ರಸ್ತಾಪಿಸಿದ ಮೊತ್ತವನ್ನೂ ಒಳಗೊಂಡಂತೆ) ಸ್ಥಿರಾಸ್ತಿಯ ಮೇಲಾಧಾರದ ಅಗತ್ಯವಿದೆ. ನಮಗೆ ಸಾಲದ ಮೊತ್ತದ 100%ಗೆ ಸರಿ ಸಮವಾಗಿರುವ(ನಿರ್ಮಾಣದ ಪ್ರಸ್ತಾಪಿಸಿದ ಮೊತ್ತವನ್ನೂ ಒಳಗೊಂಡಂತೆ) ಸ್ಥಿರಾಸ್ತಿಯ ಮೇಲಾಧಾರದ ಅಗತ್ಯವಿದೆ.

ಅರ್ಹತೆ

ವ್ಯಕ್ತಿಗಳು
  • ಕೃಷಿ  ಮತ್ತು ಕೃಷಿ ಉತ್ಪನ್ನ ಸಂಬಂಧೀ ಚಟುವಟಿಕೆಗಳಲ್ಲಿ  ತೊಡಗಿರುವ  ವ್ಯಕ್ತಿಗಳು
  • ಸಂಗ್ರಹಣಾಲಯಗಳ
  • ಗುರುತಿನ ಮತ್ತು ವಿಳಾಸದ ಮಾನ್ಯತೆ ಪಡೆದ ದಾಖಲೆಗಳು 
  • ಕೃಷಿ ಕಾನೂನಾತ್ಮಕವಾಗಿ ಗುರುತಿಸಲಾದ ಸಂಸ್ಥೆಗಳು, ಟ್ರಸ್ಟ್ ಗಳು ಮತ್ತು ಸ್ವ-ಸಹಾಯ ಗುಂಪುಗಳು ಸೇರಿವೆ.
  • ಉತ್ತಮ ಹಣಕಾಸು ಸ್ಥಿತಿ
  • ವ್ಯವಸಾಯದ ಘಟಕದ ಮಾನ್ಯ ಗುರುತು ಮತ್ತು ಪುರಾವೆ
  • ನಗರ ಪಾಲಿಕೆ ಹೊರತುಪಡಿಸಿ ಸ್ಥಳೀಯ ಸಂಸ್ಥೆಗಳು

ಅಗತ್ಯವಿರುವ ದಾಖಲೆಗಳು

  • CIBIL/CRIF  ಮತ್ತು ಕೆವೈಸಿ ದಾಖಲೆಗಳು
  • ಯೋಜನೆ ಮತ್ತು ಅಂದಾಜು
  • RTCS
  • CERSAI
  • EC ಮತ್ತು RTC 
  • ಆದಾಯ ತೆರಿಗೆ ಪಾವತಿಗಳು, ಆದಾಯ ಪುರಾವೆ
  • ಆಸ್ತಿಗಾಗಿ ಕಾನೂನು ದಾಖಲೆಗಳು
  • ಯೋಜನೆ ವರದಿ
  • ವಾರ್ಷಿಕ ಆದಾಯ ವರದಿ
  • ಉದ್ಯಮ್ registration certificate
  • ವಿಮೆ ನಕಲು ಪ್ರತಿ ಮತ್ತು ಸ್ಟಾಕ್ ಪ್ರತಿ (ಅನ್ವಯವಾಗುತ್ತಿದ್ದಲ್ಲಿ)

1,2,3...ರೀತಿಯಾಗಿ ಸರಳ

3 ವಿಮೆ ನಕಲು ಪ್ರತಿ ಮತ್ತು ಸ್ಟಾಕ್ ಪ್ರತಿ (ಅನ್ವಯವಾಗುತ್ತಿದ್ದಲ್ಲಿ)

ಹಂತ 1

ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ

ನಿಮ್ಮ ಹತ್ತಿರದ ಕರ್ನಾಟಕ ಬ್ಯಾಂಕ್ ಶಾಖೆಗೆ ಹೋಗಿ

ಹಂತ 2

ನಿಮ್ಮ ಮೂಲ ವಿವರಗಳೊಂದಿಗೆ ಪ್ರಾರಂಭಿಸಿ

ನಿಮ್ಮ ಮೂಲ ವಿವರಗಳನ್ನು ಒದಗಿಸಿ ಮತ್ತು ನಿಮ್ಮ ದಾಖಲೆಗಳನ್ನು ಕೈಯಲ್ಲಿಡಿ

ಹಂತ 3

ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ

ನಿಮ್ಮ ಖಾತೆಯನ್ನು ತೆರೆದಾಗ ನಮ್ಮ ಶಾಖೆಯ ಅಧಿಕಾರಿಗಳು ನಿಮಗೆ ತಿಳಿಸುತ್ತಾರೆ

sb

ನಿಮಗಾಗಿರುವ ಇತರ ಆಯ್ಕೆಗಳನ್ನು ನೋಡಿ

ಹಣಕಾಸಿನ ಶ್ರೇಷ್ಠತೆಗಾಗಿ ಆರಿಸಲಾಗಿರುವ ಸಾವಿರಾರು ಜನರ ಭರವಸೆ

ಕೆಬಿಎಲ್ ಅಗ್ರಿ ಗೋಲ್ಡ್ ಸಾಲ

  • ಗರಿಷ್ಠ ₹2.5 ಕೋಟಿವರೆಗಿನ ಸಾಲದ ಮೊತ್ತ
  • ವಾರ್ಷಿಕ 9.04% ಬಡ್ಡಿದರಗಳಿಂದ ಆರಂಭ
  • 12 ತಿಂಗಳುಗಳವರೆಗೆ ಸಾಲದ ಅವಧಿ

ಕೆಬಿಎಲ್ ಆಗ್ರೋ ಸಂಸ್ಕರಣಾ ಸಾಲ

  • ₹15 ಕೋಟಿವರೆಗೆ ಗರಿಷ್ಟ ಸಾಲದ ಮೊತ್ತ
  • ಬಡ್ಡಿ ದರಗಳು 11.3% ರಿಂದ ಆರಂಭ 
  • 120 ತಿಂಗಳುಗಳವರೆಗೆ ಸಾಲದ ಅವಧಿ

ಸರಳ ಮಾಹಿತಿಯೊಂದಿಗೆ ಅಗ್ರಿಬ್ಯಾಂಕಿಂಗ್ ಸರಳಗೊಳಿಸಿ

ಪ್ರತಿ ಕ್ಷಣವೂ ನಿಮಗೆ ಮಾಹಿತಿ ಒದಗಿಸುವ ನಮ್ಮ ಸಂಪನ್ಮೂಲಗಳು

match-made
ಬ್ಯಾಂಕಿಂಗ್ ಸ್ವರ್ಗದಲ್ಲಿ ಮಾಡಿದ ಹೊಂದಾಣಿಕೆ: ಉಳಿತಾಯ ಖಾತೆ ಆವೃತ್ತಿ

navigating-pers
ನಿಮ್ಮ ಆರಂಭಿಕ 20 ರ ದಶಕದಲ್ಲಿ ವೈಯಕ್ತಿಕ ಸಾಲಗಳನ್ನು ನ್ಯಾವಿಗೇಟ್ ಮಾಡುವುದು- ಇದು ಒಳ್ಳೆಯ ಐಡಿಯಾವೇ?

savings-accoun
ಉಳಿತಾಯ ಖಾತೆ: ರೂಢಿಗಳನ್ನು ಮುರಿಯುವುದು ಮತ್ತು ಸಂಪತ್ತನ್ನು ನಿರ್ಮಿಸುವುದು

vehicle-loans
ಮಹತ್ವಾಕಾಂಕ್ಷೆಯ ಡೆಲಿವರಿ ಪಾಲುದಾರರು ಮತ್ತು ಕ್ಯಾಬ್ ಚಾಲಕರಿಗೆ ವಾಹನ ಸಾಲಗಳು

why-should
ನೀವು ಅರೆ ಸುಸಜ್ಜಿತ ಅಪಾರ್ಟ್ಮೆಂಟ್ಗೆ ಏಕೆ ಹೋಗಬೇಕು?

ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ
ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ

ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ
ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ

the-wisdom
ನಿವೃತ್ತ ಜನರಿಗೆ ತ್ವರಿತ ಚಿನ್ನದ ಸಾಲಗಳ ಬುದ್ಧಿವಂತಿಕೆ - ಆರ್ಥಿಕ ಭದ್ರತೆಯನ್ನು ಅನ್ಲಾಕ್ ಮಾಡಿ

ಪ್ರಶ್ನೆಗಳಿವೆಯೇ? ನಾವು ಉತ್ತರಗಳನ್ನು ಪಡೆದುಕೊಂಡಿದ್ದೇವೆ.

ಕೃಷಿಕ್ ಗೋಧಮ್ ಸಾಲಕ್ಕೆ ಯಾರು ಅರ್ಹರು?

ಕೃಷಿಕ್ ಗೋಧಮ್ ಸಾಲವು ಕೃಷಿಯಲ್ಲಿ ತೊಡಗಿರುವ ಅರ್ಜಿದಾರರ ವಿಶಾಲ ವ್ಯಾಪ್ತಿಯನ್ನು ಸ್ವಾಗತಿಸುತ್ತದೆ. ನೀವು ವೈಯಕ್ತಿಕ ರೈತರಾಗಿರಲಿ, ಸಹಕಾರಿ, NGO ಅಥವಾ ಕಂಪನಿಯ ಭಾಗವಾಗಿರಲಿ, ನಿಮ್ಮ ಶೇಖರಣಾ ಮೂಲಸೌಕರ್ಯ ಅಭಿವೃದ್ಧಿಯನ್ನು ಸುಲಭಗೊಳಿಸಲು ನಾವು ಇಲ್ಲಿದ್ದೇವೆ.

ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನಾವು ಹೊಂದಿಕೊಳ್ಳುವ ಮರುಪಾವತಿ ಆಯ್ಕೆಗಳನ್ನು ನೀಡುತ್ತೇವೆ. ಈ ಯೋಜನೆಯ ಅಡಿಯಲ್ಲಿರುವ ಅವಧಿಯ ಸಾಲಗಳನ್ನು 120 ತಿಂಗಳವರೆಗೆ ಮರುಪಾವತಿ ಮಾಡಬಹುದು, ಇದು ನಿಮ್ಮ ಯೋಜನೆಯ ಫಲಪ್ರದತೆ ಮತ್ತು ಆರ್ಥಿಕ ಸ್ಥಿರತೆಗೆ ಸಾಕಷ್ಟು ಸಮಯವನ್ನು ಒದಗಿಸುತ್ತದೆ. ಓವರ್‌ಡ್ರಾಫ್ಟ್ ಸೌಲಭ್ಯವು ಬೇಡಿಕೆಯ ಮೇರೆಗೆ ಲಭ್ಯವಿದ್ದು, ಹೆಚ್ಚುವರಿ ನಮ್ಯತೆಯನ್ನು ನೀಡುತ್ತದೆ.

ಈ ಯೋಜನೆಯಡಿಯಲ್ಲಿ ನಿಮ್ಮ ಕೃಷಿ ಸಂಸ್ಕರಣಾ ಕಾರ್ಯಗಳಿಗೆ ಸುಸ್ಥಿರ ಬೆಂಬಲವನ್ನು ಒದಗಿಸಲು ನೀಡಲಾಗುವ ಗರಿಷ್ಟ ಸಾಲದ ಮೊತ್ತ ₹15 ಕೋಟಿಗಳು.

ಸಾಲದಿಂದ ಪಡೆದ ಯಂತ್ರೋಪಕರಣಗಳು ಅಥವಾ ಸ್ವತ್ತುಗಳ ಹೈಪೋಥಿಕೇಷನ್ ಜೊತೆಗೆ ಕೃಷಿಯೇತರ ಸ್ವತ್ತುಗಳ ಭದ್ರತೆ ಸಹ ಬೇಕು.

ಬಡ್ಡಿ ದರಗಳನ್ನು EBLR ಮಾರ್ಗಸೂಚಿಗಳ ಪ್ರಕಾರ ವಿಧಿಸಲಾಗುತ್ತದೆ ಮತ್ತು ಇದನ್ನು ಸಾಮಾನ್ಯವಾಗಿ ವಾರ್ಷಿಕವಾಗಿ ಅಥವಾ ಕೊನೆಯ ದಿನಾಂಕದಂದು ಪಾವತಿಸಬೇಕು.

ಹೌದು, ಸಾಲವನ್ನು ಕೆಲವು ಹೊಸ ನಿರ್ಮಾಣ ಕಾಮಗಾರಿಗಳಿಗೆ ಮಾತ್ರ ಬಳಸದೆ ಅದನ್ನು ಈಗಿರುವ ಸಂಗ್ರಹಣಾ ಕೇಂದ್ರಗಳ ರಿಪೇರಿ ಮತ್ತು ನವೀಕರಣಕ್ಕಾಗಿಯೂ ಸಹ ಬಳಸಬಹುದು.

ಕೃಷಿಯಲ್ಲಿರುವ ಅನಿರೀಕ್ಷಿತ ಸಂದರ್ಭಗಳನ್ನು ನಾವು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೇವೆ. ಒಂದುವೇಳೆ ಮರುಪಾವತಿಯಲ್ಲಿ ಯಾವುದೇ ಸಮಸ್ಯೆ ಎದುರಾದರೆ, ನಮ್ಮನ್ನು ತಕ್ಷಣ ಭೇಟಿ ಮಾಡಿ ಮತ್ತು ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಿ. ನಾವು ವ್ಯವಹಾರದ ವಿಧಾನ ಮತ್ತು ಹಣಕಾಸಿನ ಸಾಮರ್ಥ್ಯಕ್ಕೆ ತಕ್ಕಂತೆ ಅನುಕೂಲಕರ ಮರುಪಾವತಿ ಆಯ್ಕೆಗಳನ್ನು ಕೊಡುತ್ತೇವೆ.

ಹೌದು, ಇದನ್ನು ಶೀತ ಶೇಖರಣಾ ಘಟಕಗಳ ನಿರ್ಮಾಣ, ನವೀಕರಣದ ಜೊತೆಯಲ್ಲಿ ಇತರ ಕೃಷಿ ಸಂಗ್ರಹಣಾ ಕೇಂದ್ರಗಳನ್ನು ನಿರ್ಮಿಸಲು ಸಹ ಬಳಸಬಹುದಾಗಿದೆ.

ಕರ್ನಾಟಕ ಬ್ಯಾಂಕಿನ ಸಾಲಗಳ ವಿಷಯದಲ್ಲಿ EBLR ಅಥವಾ ಬಾಹ್ಯ ಮಾನದಂಡ ಸಾಲ ದರಗಳು ಒಂದು ನಿರ್ಣಾಯಕ ಉಲ್ಲೇಖ ದರವಾಗಿದೆ. ಈ ಮಾನದಂಡಕ್ಕೆ ಅನುಗುಣವಾಗಿ ಸಾಲಗಳ ಬಡ್ಡಿ ದರಗಳನ್ನು ಅಳೆಯಲಾಗುತ್ತದೆ ಮತ್ತು ಹೊಂದಿಸಲಾಗುತ್ತದೆ. ಈ ದರವನ್ನು ಬಾಹ್ಯ ಮಾರುಕಟ್ಟೆ ಅಂಶಗಳಿಂದ ನಿರ್ಧರಿಸಲಾಗುತ್ತದೆ ನಿರ್ಧರಿಸಲಾಗುತ್ತದೆ ಮತ್ತು ಇದು ಪಾರದರ್ಶಕ ಹಾಗೂ ಡೈನಾಮಿಕ್ ಮಾನದಂಡವಾಗಿ ಕಾರ್ಯನಿರ್ವಹಿಸುತ್ತದೆ. EBLR ನೊಂದಿಗೆ ಸಾಲದ ಬಡ್ಡಿ ದರಗಳನ್ನು ಸೇರಿಸುವುದರಿಂದ, ನಾವು ಸಾಲದ ದರಗಳನ್ನು ನ್ಯಾಯೋಚಿತ, ಮಾರುಕಟ್ಟೆ ಸ್ಥಿತಿಗಳಿಗೆ ಪ್ರತಿಕ್ರಿಯಿಸುತ್ತದೆ ಮತ್ತು ನಿಯಂತ್ರಕ ಮಾರ್ಗಸೂಚಿಗಳ ಪ್ರಕಾರವಾಗಿದೆ ಎಂದು ಖಾತ್ರಿಪಡಿಸಿಕೊಳ್ಳುವ ಮೂಲಕ ನಾವು ಸಾಲಗಾರರಿಗೆ ತಮ್ಮ ಸಾಲದ ಬಡ್ಡಿದರಗಳನ್ನು ಹೇಗೆ ಹೊಂದಿಸಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸ್ಪಷ್ಟ ಮತ್ತು ಸ್ಥಿರವಾದ ಆಧಾರವನ್ನು ಒದಗಿಸುತ್ತೇವೆ.

ನಾವು ನಿಮ್ಮ ವ್ಯವಹಾರ ಆಕಾಂಕ್ಷೆಗಳಿಗಾಗಿ ಸಕಾಲಿಕ ಹಣಕಾಸು ಬೆಂಬಲವನ್ನು ಒದಗಿಸುವ ಪ್ರಾಮುಖ್ಯತೆವನ್ನು ಅರ್ಥಮಾಡಿಕೊಳ್ಳುತ್ತೇವೆ ಆದ್ದರಿಂದ ಸಾಲದ ಪ್ರಕ್ರಿಯೆಯು ನಮ್ಮ ಮೊದಲ ಆದ್ಯತೆಯಾಗಿರುತ್ತದೆ.

ಕೃಷಿಗಾಗಿ ಶೇಖರಣಾ ಸೌಲಭ್ಯಗಳನ್ನು ನಿರ್ಮಿಸುವುದು

ಕೃಷಿಕ್ ಗೋಧಮ್ ರೈತರಿಗೆ ಮತ್ತು ಕೃಷಿ-ವ್ಯಾಪಾರಗಳಿಗೆ ಗೋದಾಮಿನ ನಿರ್ಮಾಣ ಸಾಲ ಸೇವೆಗಳನ್ನು ನೀಡುತ್ತದೆ, ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ. ಸರಬರಾಜು ಸರಪಳಿಯನ್ನು ನಿರ್ವಹಿಸುವಲ್ಲಿ ಮತ್ತು ಕೊಯ್ಲಿನ ನಂತರದ ನಷ್ಟವನ್ನು ತಡೆಗಟ್ಟುವಲ್ಲಿ ಇದು ಒಂದು ಪ್ರಮುಖ ಹಂತವಾಗಿದೆ, ಗೋದಾಮಿನ ನಿರ್ಮಾಣಕ್ಕಾಗಿ ಸಾಲಕ್ಕಾಗಿ ಮತ್ತು ಕೋಲ್ಡ್ ಸ್ಟೋರೇಜ್ ಸೌಲಭ್ಯಗಳಿಗೆ ಸಾಲಕ್ಕಾಗಿ ಭದ್ರ ಬುನಾದಿಯನ್ನು ಒದಗಿಸುತ್ತದೆ

ಕೃಷಿ -ವ್ಯವಹಾರ ಸಾಲಗಳ ಮೇಲೆ ಬಡ್ಡಿ ದರಗಳನ್ನು ಸಾಮಾನ್ಯವಾಗಿ ಕೃಷಿ ಸಮುದಾಯವನ್ನು ಬೆಂಬಲಿಸಲು ವಿಶಿಷ್ಟವಾಗಿ ರೂಪಿಸಲಾಗಿದೆ. ಇದರಿಂದ ಇದು ಇತರೆ ಸಾಮಾನ್ಯ ವಾಣಿಜ್ಯ ಸಾಲಗಳಿಗೆ ಹೋಲಿಸಿದರೆ ಬಹಳ ಅನುಕೂಲಕರವಾಗಿರುತ್ತದೆ. ನೀವು ನಿಮ್ಮ ಅರ್ಜಿ ಪ್ರಕ್ರಿಯೆಯನ್ನು ಆರಂಭಿಸುವಾಗ ಈ ದರಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ ಏಕೆಂದರೆ ಇದು ನೇರವಾಗಿ ನಿಮ್ಮ ಮರುಪಾವತಿ ನಿಯಮಗಳು ಮತ್ತು ಸಾಲದ ಒಟ್ಟಾರೆ ವೆಚ್ಚಗಳ ಮೇಲೆ ಪರಿಣಾಮ ಬೀರುತ್ತದೆ.

ಸಾಲದ ಬಳಕೆ ಮತ್ತು ಮರುಪಾವತಿಯ ಕುರಿತು ನೀವು ಸ್ಪಷ್ಟ ಯೋಜನೆಯನ್ನು ಹೊಂದಿರುವಿರಿ ಎಂದು ಖಚಿತಪಡಿಸಿಕೊಳ್ಳಿ. ಆನ್ಲೈನ್ ಅರ್ಜಿ ಪ್ರಕ್ರಿಯೆಯನ್ನು ಸಲ್ಲಿಸಲು ಎಲ್ಲಾ ಅಗತ್ಯ ದಾಖಲೆಗಳನ್ನು ತಯಾರಿಟ್ಟುಕೊಳ್ಳಿ. ಕೃಷಿ-ವ್ಯವಹಾರ ಸಾಲಗಳಿಗಾಗಿ ಲಭ್ಯವಿರುವ ಸರ್ಕಾರೀ ಸಬ್ಸಿಡಿಗಳು ಅಥವಾ ವಿಶೇಷ ಕಾರ್ಯಕ್ರಮಗಳನ್ನು ನಿರ್ಲಕ್ಷಿಸದಿರಿ. ನಿಮ್ಮ ಆರ್ಥಿಕ ಸ್ಥಿತಿಯನ್ನು ನಿರ್ವಹಿಸಲು ನಿಮ್ಮ ಸಾಲವನ್ನು ನಿಯಮಿತವಾಗಿ ನಿಗಾವಣೆ ಮತ್ತು ನಿರ್ವಹಣೆ ಮಾಡಿ.