ವ್ಯವಸ್ಥಿತವಾಗಿ ಮಾಡಬಹುದಾದ ಠೇವಣಿ ಹಾಗೂ ಸುಲಭ ಬ್ಯಾಂಕಿಂಗ್
ಕೆಬಿಎಲ್ ಡೆಪಾಸಿಟ್ ಓನ್ಲಿ ಕಾರ್ಡ್ ತಮ್ಮ ದೈನಂದಿನ ಬ್ಯಾಂಕಿಂಗ್ ವ್ಯವಹಾರದಲ್ಲಿ ದಕ್ಷತೆಯನ್ನು ಬಯಸುವ ಗ್ರಾಹಕರಿಗೆ ಅನುಕೂಲಕರವಾಗಿದ್ದು, ಇದನ್ನು ಮೂರು ಖಾತೆಗಳವರೆಗೆ ಲಿಂಕ್ ಮಾಡಲು ಸಾಧ್ಯವಿರುತ್ತದೆ. ನಿಮ್ಮ ಖಾತೆಯ ವಿವರಗಳನ್ನು ಒಟ್ಟಿಗೇ ನೋಡಲು ಮತ್ತು ನಿರ್ವಹಿಸಲು ಇಲ್ಲಿ ಅನುಕೂಲವಿದೆ. ಇ-ಲಾಬಿಯನ್ನು ಬಳಸಿಕೊಂಡು ಯಾವುದೇ ಸಮಯದಲ್ಲಿ ಹಣವನ್ನು ಠೇವಣಿಮಾಡಬಹುದು.
ಪ್ರಮುಖ ಲಕ್ಷಣಗಳು
₹30 ಲಕ್ಷದವರೆಗೆ ಇರುವ ಠೇವಣಿಯನ್ನು ಮಾಡುವ ಹೆಚ್ಚಿನ ಮಿತಿಗಳನ್ನು ಪಡೆಯಿರಿ
ಒಂದೇ ಕಾರ್ಡ್‌ಗೆ ಮೂರು ಖಾತೆಗಳನ್ನು ಲಿಂಕ್ ಮಾಡುವ ಮೂಲಕ ಠೇವಣಿಗಳನ್ನು ಮಾಡುವುದನ್ನು ಸರಳಗೊಳಿಸಿಕೊಳ್ಳಿ
ನಮ್ಮ ಇ-ಲಾಬಿ ಸೇವೆಗಳನ್ನು ಬಳಸಿಕೊಂಡು ಯಾವುದೇ ಸಮಯದಲ್ಲಿ ಹಣವನ್ನು ಠೇವಣಿ ಮಾಡಿರಿ
24 ಗಂಟೆಗಳ ತುರ್ತು ಸಹಾಯವಾಣಿ
ನಿಮ್ಮ ಕಾರ್ಡ್ ಅನ್ನು ಬ್ಲಾಕ್ ಮಾಡಲು ಅಥವಾ ಸಹಾಯವನ್ನು ಪಡೆಯಲು, ಕರೆ ಮಾಡಿ
+91 802 202 1500
ನಿಮ್ಮ ಡೆಬಿಟ್ ಕಾರ್ಡ್ ಅನ್ನು ನಿರ್ಬಂಧಿಸಲು
+ 91 988 065 4321 ಗೆ SMS ಕಳುಹಿಸಿ
ಬ್ಲಾಕ್ XXXX
XXXX ಡೆಬಿಟ್ ಕಾರ್ಡ್ ಸಂಖ್ಯೆಯ ಕೊನೆಯ 4 ಅಂಕೆಗಳನ್ನು ನೀಡಿ
ಪ್ರಶ್ನೆಗಳಿವೆಯೇ? ನಮ್ಮ ಬಳಿ ಉತ್ತರಗಳಿವೆ
ಡೆಬಿಟ್ ಕಾರ್ಡ್‌ದಾರರೂ ಸೇರಿದಂತೆ ಪಾನ್ ನೋಂದಣಿಯಾಗಿರುವ ಎಲ್ಲಾ ಉಳಿತಾಯ ಖಾತೆ, ಚಾಲ್ತಿ ಖಾತೆದಾರರು ಅರ್ಹರಾಗಿರುತ್ತಾರೆ.
ಕಾರ್ಡ್ ಐದು ವರುಷಗಳವರೆಗೆ ಮಾನ್ಯವಾಗಿದ್ದು, ನಿಮ್ಮ ಠೇವಣಿಯ ಅಗತ್ಯತೆಗಳಿಗೆ ದೀರ್ಘಕಾಲೀನ ವಿಶ್ವಾಸಾರ್ಹತೆಯನ್ನು ಹೊಂದಿದೆ.
ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ನೀವು ಕಳೆದುಕೊಂಡಿದ್ದಲ್ಲಿ ಅಥವಾ ಅದು ಕಳ್ಳತನವಾಗಿದ್ದಲ್ಲಿ, ನಿಮ್ಮ ಖಾತೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ನೀವು ತಕ್ಷಣವೇ ಕರ್ಣಾಟಕ ಬ್ಯಾಂಕ್‌ಗೆ ಘಟನೆಯನ್ನು ವರದಿ ಮಾಡಬೇಕು. ಪರಿಸ್ಥಿತಿಯನ್ನು ವಿವರಿಸಿರುವ ಇಮೇಲ್ ಅನ್ನು ನೀವು info@ktkbank.com ಗೆ ಕಳುಹಿಸಬಹುದು.ಇಲ್ಲದಿದ್ದಲ್ಲಿ, ನೀವು ನಮ್ಮ ಟೋಲ್-ಫ್ರೀ ಗ್ರಾಹಕ ಸಂಖ್ಯೆಗಳಾದ 1800 425 1444 ಅಥವಾ 1800 572 8031 ಗೆ ಕರೆ ಮಾಡಬಹುದು. ಯಾವುದೇ ಅನಧಿಕೃತ ವ್ಯವಹಾರಗಳನ್ನು ತಡೆಯಲು ಹಾಗೂ ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಲು ತಕ್ಷಣವೇ ವರದಿ ಮಾಡುವುದು ಮುಖ್ಯವಾಗಿರುತ್ತದೆ.
ಇಲ್ಲ, ಕಾರ್ಡ್ ಅನ್ನು ಖಾತೆದಾರರಿಗೆ ಮಾತ್ರವೇ ನೀಡಲಾಗುತ್ತದೆ ಹಾಗೂ ಅವರ ಏಜೆಂಟ್ ಅಥವಾ ಅವರ ಉದ್ಯೋಗಿಗಳಿಗೆ ಅಲ್ಲ
ಕೆಬಿಎಲ್ ಡೆಪಾಸಿಟ್ ಓನ್ಲಿ ಕಾರ್ಡ್ ತಮ್ಮ ದೈನಂದಿನ ಬ್ಯಾಂಕಿಂಗ್ ವ್ಯವಹಾರದಲ್ಲಿ ದಕ್ಷತೆಯನ್ನು ಬಯಸುವ ಗ್ರಾಹಕರಿಗೆ ಅನುಕೂಲಕರವಾಗಿದ್ದು, ₹30 lakh ವರೆಗೆ ಠೇವಣಿ ಮಾಡುವ ಹೆಚ್ಚಿನ ಮಿತಿಯನ್ನು ಒದಗಿಸುತ್ತದೆ. ಈ ಕಾರ್ಡ್ ನಿಮ್ಮ ಬ್ಯಾಂಕಿಂಗ್ ಅನ್ನು ಸರಳಗೊಳಿಸುವುದರೊಂದಿಗೆ ಮೂರು ಖಾತೆಗಳಿಗೆ ಕಾರ್ಡ್ ಲಿಂಕ್ ಮಾಡಲು ನಿಮಗೆ ಅವಕಾಶ ನೀಡುತ್ತದೆ. ನಿಮ್ಮ ಖಾತೆಯ ವಿವರಗಳನ್ನು ಒಟ್ಟಿಗೇ ನೋಡಲು ಮತ್ತು ನಿರ್ವಹಿಸಲು ಇಲ್ಲಿ ಅನುಕೂಲವಿದೆ. ಇ-ಲಾಬಿಯನ್ನು ಬಳಸಿಕೊಂಡು ಯಾವುದೇ ಸಮಯದಲ್ಲಿ ಹಣವನ್ನು ಠೇವಣಿಮಾಡಬಹುದು. ದೊಡ್ಡ ವ್ಯಾಪಾರಗಳನ್ನು ನಿರ್ವಹಿಸುವ ವ್ಯವಹಾರಗಳು ಹಾಗೂ ವ್ಯಕ್ತಿಗಳಿಗೆ ಸೂಕ್ತವಾಗಿದೆ. ಈ ಕಾರ್ಡ್, ಹಣವನ್ನು ಠೇವಣಿ ಮಾಡುವುದನ್ನು ಸಾಧ್ಯವಾದಷ್ಟು ಸರಳ ಮತ್ತು ಸ್ವಯಂಚಾಲಿತವಾಗಿರುವಂತೆ ಮಾಡುತ್ತದೆ.
ಕ್ರೆಡಿಟ್ ಕಾರ್ಡ್ ಹೆಚ್ಚು ಬಡ್ಡಿದರವನ್ನು ಹೊಂದಿರುತ್ತದೆ. ಇದಕ್ಕೆ ಕಾರಣ ಕ್ರೆಡಿಟ್ ಕಾರ್ಡ್ ವ್ಯವಹಾರದಲ್ಲಿರುವ ರಿಸ್ಕ್. ಬಡ್ಡಿದರವು ಪಾವತಿಯ ದಿನಾಂಕ ಮೀರಿದ ಬಾಕಿಗಳಿಗೆ ಅನ್ವಯಿಸಲಾಗುತ್ತದೆ. ಎಪಿಆರ್ (ವಾರ್ಷಿಕ ಶೇಕಡಾವಾರು ದರ) ಮತ್ತು ಬಡ್ಡಿ-ಮುಕ್ತ ಅವಧಿಯನ್ನು ಅರ್ಥಮಾಡಿಕೊಳ್ಳಬೇಕಾದುದು ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಅತ್ಯವಶ್ಯಕವಾಗಿರುತ್ತದೆ. ಆದರೆ ಡೆಬಿಟ್ ಕಾರ್ಡ್‌ಗಳನ್ನು ಪರಿಗಣಿಸಿದಲ್ಲಿ ನಿಮ್ಮ ಖಾತೆಯಲ್ಲಿ ಈಗಾಗಲೇ ಹಣವು ಇದ್ದು ಅದನ್ನು ಬಳಸುವುದರಿಂದ ಅವು ಬಡ್ಡಿದರಗಳನ್ನು ಹೊಂದಿರುವುದಿಲ್ಲ. ಕೆಲವು ಬ್ಯಾಂಕ್‌ಗಳು ಡೆಬಿಟ್ ಕಾರ್ಡ್ ವ್ಯವಹಾರಗಳ ಮೇಲೆ ಪ್ರೋತ್ಸಾಹ ಅಥವಾ ಕ್ಯಾಶ್‌ಬ್ಯಾಕ್ ನೀಡುತ್ತವೆ ಹಾಗೂ ನೀವು ಮಾಡುವ ಖರ್ಚಿಗೆ ಉಳಿತಾಯದ ಅಂಶವನ್ನು ಸೇರಿಸುತ್ತದೆ
ನಿಮ್ಮ ವ್ಯವಹಾರಗಳು ಹೇಗೆ ಸಾಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಲು ಹಾಗೂ ಯಾವುದೇ ಅನಧಿಕೃತ ಚಟುವಟಿಕೆಯು ನಡೆದಲ್ಲಿ ಅದನ್ನು ತ್ವರಿತವಾಗಿ ಗುರುತಿಸಲು ನಿಮ್ಮ ಖಾತೆಯ ಮೇಲೆ ನಿಗಾ ಇಡಿ. ಆನ್‌ಲೈನ್ ವ್ಯವಹಾರಗಳಿಗಾಗಿ ಸುರಕ್ಷಿತ ನೆಟ್‌ವರ್ಕ್‌ಗಳನ್ನು ಬಳಸಿ. ನಿಮ್ಮ ಕಾರ್ಡ್ ವಿವರಗಳು ಅಥವಾ ಪಿನ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ATM ಅಥವಾ POS ಟರ್ಮಿನಲ್‌ಗಳಲ್ಲಿ ನಿಮ್ಮ ಕಾರ್ಡ್ ಅನ್ನು ಬಳಸುವಾಗ ಅತಿ ಜಾಗರೂಕರಾಗಿರಿ
ಬ್ಯಾಂಕ್ ಕಾರ್ಡ್ ಗಳು ನಿಮ್ಮ ಹಣಕಾಸು ಚಟುವಟಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಇವು ಅನೇಕ ಪ್ರಯೋಜನಗಳನ್ನೂ ಕೊಡುತ್ತಿವೆ. ಡೆಬಿಟ್ ಕಾರ್ಡ್ ಗಳು ನಿಮ್ಮ ಖಾತೆಗೆ ನೇರ ಸಂಪರ್ಕಸಾಧನವಾಗಿದೆ. ಇದರಿಂದ ದಿನಂಪ್ರತಿ ಖರೀದಿ ಮತ್ತು ಎಟಿಎಂ ಮೂಲಕ ಹಣವನ್ನು ಹಿಂಪಡೆಯಬಹುದಾಗಿದೆ. ಕ್ರೆಡಿಟ್ ಕಾರ್ಡ್ ಗಳು ನೀವು ಮುಂದೆ ಮಾಡಬಹುದಾದ ಪಾವತಿಗಳಿಗೆ ಅವಕಾಶ ನೀಡುತ್ತದೆ ಮತ್ತು ಕ್ಯಾಶ್ ಬ್ಯಾಕ್ ಗಳು ರಿವಾರ್ಡ್ಸ್ ಗಳನ್ನೂ ನೀಡುತ್ತದೆ. ನಿಮ್ಮ ಕ್ರೆಡಿಟ್ ಇತಿಹಾಸವನ್ನು ನಿರ್ಮಿಸುವ ಅವಕಾಶವನ್ನೂ ನೀಡುತ್ತದೆ. ನಿಯಂತ್ರಿತ ಖರ್ಚುಗಳಿಗಾಗಿ, ಪ್ರಿಪೇಯ್ಡ್ ಕಾರ್ಡ್‌ಗಳು ಸೂಕ್ತವಾಗಿವೆ ಏಕೆಂದರೆ ಅವುಗಳು ಕಾರ್ಡ್‌ನಲ್ಲಿ ಇರಬಹುದಾದ ಗರಿಷ್ಠ ಮೊತ್ತಕ್ಕೆ ವೆಚ್ಚವನ್ನು ಮಿತಿಗೊಳಿಸುತ್ತವೆ. ವ್ಯಾಪಾರ ಕಾರ್ಡ್‌ಗಳು, ನಿರ್ದಿಷ್ಟವಾಗಿ ಕಂಪನಿಗಳು ಹಾಗೂ ಉದ್ಯಮಿಗಳ ಅಗತ್ಯತೆಗಳನ್ನು ಪೂರೈಸುತ್ತವೆ. ವೆಚ್ಚ ನಿರ್ವಹಣೆಯನ್ನು ಸುಗಮಗೊಳಿಸುತ್ತವೆ ಹಾಗೂ ಹೆಚ್ಚಿನ ಕ್ರೆಡಿಟ್ ಮಿತಿಗಳು ಮತ್ತು ವಿವರವಾದ ಖರ್ಚು ವರದಿಗಳನ್ನು ನೀಡುತ್ತವೆ.