ಅನಿವಾಸಿ (ಸಾಮಾನ್ಯ) ಉಳಿತಾಯ ಖಾತೆ
ಭಾರತದಲ್ಲಿ ತಮ್ಮ ಗಳಿಕೆಯನ್ನು ಸುರಕ್ಷಿತವಾಗಿ ನಿರ್ವಹಿಸಿಕೊಳ್ಳಲು ಬಯಸುವ ಅನಿವಾಸಿ ಭಾರತೀಯರಿಗೆ ನಮ್ಮ ಅನಿವಾಸಿ (ಸಾಮಾನ್ಯ) ಉಳಿತಾಯ ಬ್ಯಾಂಕ್ ಖಾತೆಯು ಸೂಕ್ತವಾಗಿದೆ. ಅದು ಬಾಡಿಗೆ ಆದಾಯವಿರಬಹುದು, ಲಾಭಾಂಶವಾಗಿರಬಹುದು ಅಥವಾ ಪಿಂಚಣಿಯಾಗಿರಬಹುದು, ನಿಮ್ಮ ಭಾರತೀಯ ಆದಾಯವನ್ನು ಸುರಕ್ಷಿತವಾಗಿ ಮತ್ತು ಭದ್ರವಾಗಿ ಇರಿಸುವಂತೆ ಈ ಖಾತೆಯನ್ನು ವಿನ್ಯಾಸಗೊಳಿಸಲಾಗಿದೆ. ಇದು ಕೇವಲ ಉಳಿತಾಯ ಖಾತೆ ಮಾತ್ರವಲ್ಲದೆ ಅದಕ್ಕಿಂತಲೂ ಹೆಚ್ಚಿನದಾಗಿರುತ್ತದೆ. ಭಾರತದಲ್ಲಿ ಸ್ಥಳೀಯ ಪಾವತಿಗಳು ಮತ್ತು ಹೂಡಿಕೆಗಳಿಗಾಗಿ ನಿಮ್ಮ ಹಣವನ್ನು ಸಮರ್ಥವಾಗಿ ಬಳಸಿಕೊಳ್ಳುವ ಒಂದು ಮಾರ್ಗ ಇದಾಗಿದೆ. ನಮ್ಮ NRO ಖಾತೆಯು ಪ್ರಸ್ತುತ ಆದಾಯವನ್ನು ಸ್ವದೇಶಕ್ಕೆ ಹಿಂದಿರುಗಿಸಲು ಅನುಕೂಲಕರವಾಗಿದೆ. ಇದು ಅಗತ್ಯಪಟ್ಟ ಪ್ರಮಾಣೀಕರಣಗಳಿಗೆ ಒಳಪಟ್ಟಿರುತ್ತಾ ವಿದೇಶದಲ್ಲಿ ವಾಸಿಸುವವರಿಗೆ ಒಂದು ಸೂಕ್ತವಾಗಿದೆ. Read more
ಈ ಖಾತೆಯು ನಿಮಗಾಗಿ ಏಕೆ
ನಮ್ಮ ಉಳಿತಾಯ ಖಾತೆಗಳೊಂದಿಗೆ ನಿಮ್ಮ ಭವಿಷ್ಯವನ್ನು ನಿರ್ಮಿಸಿಕೊಳ್ಳಿ
ವಿದೇಶದಲ್ಲಿ ವಾಸಿಸುತ್ತಿರುವಾಗ ಭಾರತೀಯ ಆದಾಯವನ್ನು ಸಮರ್ಥವಾಗಿ ನಿರ್ವಹಿಸಿಕೊಳ್ಳಿ
ಬಾಡಿಗೆ ಅಥವಾ ಡಿವಿಡೆಂಡ್ಗಳಂತಹ ಆದಾಯವನ್ನು ಸ್ವದೇಶಕ್ಕೆ ಹಿಂತಿರುಗಿಸಿಕೊಳ್ಳಿ, ನಿಮ್ಮ ಹಣಕಾಸು ಯಾವಾಗಲೂ ಕೈಗೆಟುಕುವಂತೆ ನೋಡಿಕೊಳ್ಳಿ
ಭಾರತದ ನಿವಾಸಿಯವರೊಂದಿಗೆ ಜಂಟಿ ಖಾತೆಯನ್ನು ತೆರೆಯುವ ಮೂಲಕ ಭಾರತದಲ್ಲಿನ ಕುಟುಂಬದೊಂದಿಗೆ ಹಣಕಾಸಿನ ಜವಾಬ್ದಾರಿಗಳನ್ನು ಹಂಚಿಕೊಳ್ಳಿ
ಅರ್ಹತೆ
- ಭಾರತದ ಹೊರಗೆ ಉದ್ಯೋಗಗಳು ಅಥವಾ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವವರು ಅಥವಾ ವಿದೇಶದಲ್ಲಿ ವ್ಯಾಪಾರವನ್ನು ನಡೆಸುತ್ತಿರುವವರು
- ಅನಿರ್ದಿಷ್ಟಾವಧಿಯವರೆಗೆ ಭಾರತದ ಹೊರಗೆ ವಾಸಿಸಿರುವವರು ಅಥವಾ ರಾಜತಾಂತ್ರಿಕ ಕಾರ್ಯಾಚರಣೆಗಳು ಅಥವಾ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಸರ್ಕಾರದೊಂದಿಗೆ ಕೆಲಸ ಮಾಡುತ್ತಿರುವವರು
- ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ಭಾರತೀಯ ವಿದ್ಯಾರ್ಥಿಗಳು
- ವಿದೇಶಿ ಪಾಸ್ಪೋರ್ಟ್ ಹೊಂದಿರುವ ವ್ಯಕ್ತಿಗಳು (ಬಾಂಗ್ಲಾದೇಶ ಅಥವಾ ಪಾಕಿಸ್ತಾನವನ್ನು ಹೊರತುಪಡಿಸಿ), ಭಾರತೀಯ ಮೂಲಗಳು
- ವಿದೇಶಿ ಪ್ರಜೆಗಳು ಭಾರತೀಯ ಪ್ರಜೆಯನ್ನು ಮದುವೆಯಾಗಿದ್ದಾರೆ
- ಭಾರತದ ಸಂವಿಧಾನ ಅಥವಾ 1955 ರ ಪೌರತ್ವ ಕಾಯ್ದೆಯ ಪ್ರಕಾರ ಭಾರತದ ನಾಗರಿಕ
- ಭಾರತೀಯ ಪ್ರಜೆಗಳಾಗಿದ್ದ ಪೋಷಕರು ಅಥವಾ ಅಜ್ಜಿಯರನ್ನು ಹೊಂದಿರುವುದು
ಅಗತ್ಯವಿರುವ ದಾಖಲೆಗಳು
- ಮಾನ್ಯತೆ ಹೊಂದಿದ ಭಾರತೀಯ ಪಾಸ್ಪೋರ್ಟ್ ಹೊಂದಿರುವವರು
- ಉದ್ಯೋಗ ಕೆಲಸದ ವೀಸಾ, ವಿದ್ಯಾರ್ಥಿ ವೀಸಾ ಅಥವಾ ಸಂಬಂಧಿತ ವೀಸಾ
- ಸಾಗರೋತ್ತರ ವಸತಿ ಪುರಾವೆ
- ಪ್ಯಾನ್ ಕಾರ್ಡ್ ಅಥವಾ ನಮೂನೆ 60
- ಆಫ್-ಸೈಟ್ ಪರಿಶೀಲನೆಯ ಸಂದರ್ಭದಲ್ಲಿ ನೋಟರಿಗಳು, ಮ್ಯಾಜಿಸ್ಟ್ರೇಟ್ಗಳು ಅಥವಾ ಭಾರತೀಯ ರಾಯಭಾರ ಕಚೇರಿಗಳು/ದೂತಾವಾಸಗಳ ಅಧಿಕಾರಿಗಳಿಂದ ದೃಢೀಕರಿಸಲ್ಪಟ್ಟ ದಾಖಲೆ ನಕಲು ಪ್ರತಿಗಳು
- ಮಾನ್ಯತೆ ಹೊಂದಿದ ವಿದೇಶಿ ಪಾಸ್ಪೋರ್ಟ್ ಹೊಂದಿರುವವರು
- ಸಾಗರೋತ್ತರ ದೇಶದ ಸಂಬಂಧಿತ ವೀಸಾ ಹೊಂದಿರುವವರು
- ಸಾಗರೋತ್ತರ ವಸತಿ ಪುರಾವೆ ಅಥವಾ ನಿವಾಸಿ ಕಾರ್ಡ್ ಹೊಂದಿರುವವರು
- ಪ್ಯಾನ್ ಕಾರ್ಡ್ ಅಥವಾ ನಮೂನೆ 60
- ನೋಟರಿಗಳು, ಮ್ಯಾಜಿಸ್ಟ್ರೇಟ್ಗಳು ಅಥವಾ ಭಾರತೀಯ ರಾಯಭಾರ ಕಚೇರಿಗಳು/ದೂತಾವಾಸಗಳು ದೃಢೀಕರಿಸಿದ ದಾಖಲೆಯ ನಕಲು ಪ್ರತಿಗಳು
1,2,೩ ಹಂತಗಳು, ಅಷ್ಟು ಸುಲಭ...
3 ಸರಳ ಹಂತಗಳಲ್ಲಿ ಉಳಿತಾಯ ಖಾತೆಗೆ ಅರ್ಜಿಯನ್ನು ಸಲ್ಲಿಸಿ
ಹಂತ 1
ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ
ನಿಮ್ಮ ಹತ್ತಿರದ ಕರ್ನಾಟಕ ಬ್ಯಾಂಕ್ ಶಾಖೆಗೆ ಹೋಗಿ
ಹಂತ 2
ನಿಮ್ಮ ಮೂಲ ವಿವರಗಳೊಂದಿಗೆ ಪ್ರಾರಂಭಿಸಿ
ನಿಮ್ಮ ವಿವರಗಳನ್ನು ಒದಗಿಸಿ ಮತ್ತು ನಿಮ್ಮ ದಾಖಲೆಗಳನ್ನು ಜತೆಯಲ್ಲಿರಿಸಿ
ಹಂತ 3
ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ
ನಿಮ್ಮ ಖಾತೆಯನ್ನು ತೆರೆದಾಗ ನಮ್ಮ ಶಾಖೆಯ ಅಧಿಕಾರಿಗಳು ನಿಮಗೆ ತಿಳಿಸುತ್ತಾರೆ
ನಿಮಗಾಗಿ ಲಭ್ಯವಿರುವ ಇತರ ಆಯ್ಕೆಗಳನ್ನು ವೀಕ್ಷಿಸಿ
ಸಾವಿರಾರು ಜನರು ನಂಬುವ ಹಾಗೂ ಆರ್ಥಿಕ ಉತ್ಕೃಷ್ಟತೆಗಾಗಿ ಆಯ್ಕೆಯಾಗಿರುವುದು
ಸುಲಭವಾಗಿ ಓದುವುದರೊಂದಿಗೆ ಬ್ಯಾಂಕಿಂಗ್ ಅನ್ನು ಸರಳಗೊಳಿಸಿಕೊಳ್ಳಿ
ನಿಮಗೆ ಮಾಹಿತಿ ನೀಡುವ ಬೈಟ್-ಗಾತ್ರದ ಸಂಪನ್ಮೂಲಗಳು
ಪ್ರಶ್ನೆಗಳಿವೆಯೇ? ನಮ್ಮಲ್ಲಿ ಉತ್ತರಗಳಿವೆ
NRI ಗಳಿಗೆ ಭಾರತದಲ್ಲಿ ತಮ್ಮ ಗಳಿಕೆಯನ್ನು ನಿರ್ವಹಿಸಲು ಸಾದ್ಯವಾಗುವಂತೆ NRO ಉಳಿತಾಯ ಖಾತೆಯನ್ನು ವಿನ್ಯಾಸಗೊಳಿಸಲಾಗಿದೆ. ಉದಾಹರಣೆಗೆ ಬಾಡಿಗೆ ಅಥವಾ ಪಿಂಚಣಿ ಆದಾಯ. ಈ ಖಾತೆಯ ಮೂಲಕ ಆದಾಯಗಳನ್ನು ಭಾರತಕ್ಕೆ ಮರುಕಳುಹಿಸಲು ಅನುಕೂಲಕರವಾಗಿದೆ. ಹಾಗೂ ಸ್ಥಳೀಯ ಹೂಡಿಕೆಗಳಿಗೆ ಭಾರತೀಯ ಹಣಕಾಸು ನಿರ್ವಹಣೆಗೆ ಸಹಕಾರಿಯಾಗಿದೆ.
ಹೌದು, ಬಾಡಿಗೆ, ಡಿವಿಡೆಂಡ್ ಅಥವಾ ಪಿಂಚಣಿಯಂತಹ ಪ್ರಸ್ತುತ ಆದಾಯವನ್ನು ಹಿಂತಿರುಗಿಸಬಹುದು. ಚಾರ್ಟರ್ಡ್ ಅಕೌಂಟೆಂಟ್ರವರಿಂದ ವಾಪಸಾತಿ ಮತ್ತು ತೆರಿಗೆ ಅನುಸರಣೆ ಅರ್ಹತೆಯನ್ನು ದೃಢೀಕರಿಸುವ ಪ್ರಮಾಣೀಕರಣದ ಅಗತ್ಯವಿದೆ.
ಹೌದು, NRO ಖಾತೆಯಲ್ಲಿ ಗಳಿಸಿದ ಬಡ್ಡಿಯು ಭಾರತೀಯ ತೆರಿಗೆ ಕಾನೂನುಗಳಿಗೆ ಒಳಪಟ್ಟಿರುತ್ತದೆ. ಈ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದಕ್ಕೆ ಅನುಗುಣವಾಗಿ ಯೋಜನೆ ಮಾಡುವುದು ಮುಖ್ಯವಾಗುತ್ತದೆ.
ನಿಸ್ಸಂಶಯವಾಗಿ, ನೀವು ನಿವಾಸಿ ಭಾರತೀಯ ಸಂಬಂಧಿಯೊಂದಿಗೆ ಜಂಟಿ NRO ಖಾತೆಯನ್ನು ತೆರೆಯಬಹುದು, ಇದರಿಂದಾಗಿ ಹಂಚಿಕೆಯ ಹಣಕಾಸಿನ ಜವಾಬ್ದಾರಿಗಳ ಸುಲಭ ನಿರ್ವಹಣೆಗೆ ಅನುಕೂಲವಾಗುತ್ತದೆ.
ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ನೀವು ಕಳೆದುಕೊಂಡಿದ್ದರೆ ಅಥವಾ ಅದು ಕಳ್ಳತನವಾಗಿದ್ದಲ್ಲಿ, ನಿಮ್ಮ ಖಾತೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನೀವು ತಕ್ಷಣವೇ ಕರ್ಣಾಟಕ ಬ್ಯಾಂಕ್ಗೆ ಘಟನೆಯನ್ನು ವರದಿ ಮಾಡಬೇಕು. ನೀವು ಪರಿಸ್ಥಿತಿಯನ್ನು ವಿವರಿಸುವ ಇಮೇಲ್ ಅನ್ನು info@ktkbank.com ಗೆ ಕಳುಹಿಸಬಹುದು. ಪರ್ಯಾಯವಾಗಿ, ನೀವು ನಮ್ಮ ಟೋಲ್-ಫ್ರೀ ಗ್ರಾಹಕ ಸಂಖ್ಯೆಗಳಿಗೆ 1800 425 1444 ಅಥವಾ 1800 572 8031 ಗೆ ಕರೆ ಮಾಡಬಹುದು. ಯಾವುದೇ ಅನಧಿಕೃತ ವ್ಯವಹಾರಗಳನ್ನು ತಡೆಯಲು ಮತ್ತು ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಲು ತಕ್ಷಣವೇ ವರದಿ ಮಾಡುವುದು ಮುಖ್ಯವಾಗಿರುತ್ತದೆ.
ನಾಮನಿರ್ದೇಶನ ಸೌಲಭ್ಯವು ನಿಮ್ಮ ಖಾತೆಗೆ ಫಲಾನುಭವಿಯನ್ನು ನಾಮನಿರ್ದೇಶನ ಮಾಡಲು ಅನುಮತಿಸುತ್ತದೆ, ನಿಮ್ಮ ಅನುಪಸ್ಥಿತಿಯಲ್ಲಿ ನಿಮ್ಮ ಹಣವನ್ನು ನಿಮ್ಮ ಪ್ರೀತಿಪಾತ್ರರಿಗೆ ಸುರಕ್ಷಿತವಾಗಿ ವರ್ಗಾಯಿಸಲಾಗುತ್ತದೆ ಎನ್ನುವುದನ್ನು ಖಚಿತಪಡಿಸುತ್ತದೆ.
ಆರ್ಥಿಕ ಸ್ಥಿರತೆ ಮತ್ತು ಅವರ ಭಾರತೀಯ ಆದಾಯವನ್ನು ನಿರ್ವಹಿಸುವ ಸಲುವಾಗಿ ಸುರಕ್ಷಿತ ಮಾರ್ಗವನ್ನು ಬಯಸುವ NRI ಗಳಿಗೆ, NRO ಉಳಿತಾಯ ಖಾತೆಯು ಅಮೂಲ್ಯವಾದ ಪರಿಹಾರವನ್ನು ನೀಡುತ್ತದೆ. NRO ಖಾತೆ ಎಂದು ಕರೆಯಲ್ಪಡುವ ಈ ವಿಶೇಷ ಬ್ಯಾಂಕಿಂಗ್ ಉತ್ಪನ್ನವು ಭಾರತದೊಳಗೆ ತಮ್ಮ ಗಳಿಕೆಯನ್ನು ಸಮರ್ಥವಾಗಿ ನಿಭಾಯಿಸಲು ಬಯಸುವ ಅನಿವಾಸಿ ಭಾರತೀಯರಿಗೆ ಹೇಳಿ ಮಾಡಿಸಿದಂತಿದೆ. ಸ್ಪರ್ಧಾತ್ಮಕ NRO ಉಳಿತಾಯ ಖಾತೆಯ ಬಡ್ಡಿದರಗಳು ಇದರ ವೈಶಿಷ್ಟ್ಯವಾಗಿದೆ. ಇದು ನಿಮ್ಮ ಹಣಕಾಸಿಗೆ ಸುಲಭ ಪ್ರವೇಶವನ್ನು ಕೊಡುವುದಲ್ಲದೆ, ಅದನ್ನು ನೀವು ನಿರ್ವಹಿಸುವಾಗ ನಿಮ್ಮ ಭಾರತೀಯ ಆದಾಯದ ಮೇಲೆ ಆದಾಯವನ್ನು ಗಳಿಸಲು ನಿಮಗೆ ಅನುವು ಮಾಡಿಕೊಡುತ್ತದೆ. NRO ಉಳಿತಾಯ ಖಾತೆಯನ್ನು ನಿಮ್ಮ ಸಂಪತ್ತನ್ನು ಉಳಿಸಿಕೊಳ್ಳಲು ಮತ್ತು ಬೆಳೆಸಿಕೊಳ್ಳಲು ಸಹಾಯ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ತಡೆರಹಿತ ವಾಪಸಾತಿ ಸೌಲಭ್ಯಗಳು ಮತ್ತು ತೆರಿಗೆ-ಸ್ನೇಹೀ ಹಣ ನಿರ್ವಹಣೆ ಸೇರಿದಂತೆ NRO ಖಾತೆಯ ಬಹುಪ್ರಯೋಜನಗಳನ್ನು ಹೊಂದಿವೆ. ಈ ಖಾತೆಯು ಭಾರತದಲ್ಲಿ ತಮ್ಮ ಹಣಕಾಸಿನ ಮೂಲಗಳೊಂದಿಗೆ ಸಂಪರ್ಕದಲ್ಲಿರಲು ಬಯಸುವ NRI ಗಳಿಗೆ ಒಂದು ಉತ್ತಮ ಆಯ್ಕೆಯಾಗಿದೆ.
NRO ಉಳಿತಾಯ ಖಾತೆಯು ಬಹು ಪ್ರಯೋಜನಗಳೊಂದಿಗೆ ತುಂಬಿದ್ದು ಅದು ವಿಶ್ವಾದ್ಯಂತ NRI ಗಳಿಗೆ ಆದ್ಯತೆಯ ಆಯ್ಕೆಯಾಗಿದೆ. ನಿಮ್ಮ ಭಾರತೀಯ ಆದಾಯವನ್ನು ಸಮರ್ಥವಾಗಿ ನಿರ್ವಹಿಸಲು ಮತ್ತು ಸ್ವದೇಶಕ್ಕೆ ಹಿಂದಿರುಗಿಸಲು ಇದು ನಿಮಗೆ ಅನುಮತಿಯನ್ನು ನೀಡುತ್ತದೆ. ಭಾರತದೊಂದಿಗೆ ಆರ್ಥಿಕ ಸಂಬಂಧಗಳು ದೃಢವಾಗಿ ಉಳಿಯುತ್ತವೆ. ನಿಮ್ಮ ಆದಾಯವನ್ನು ಅತ್ಯುತ್ತಮವಾಗಿಸಲು ತೆರಿಗೆ-ಸ್ನೇಹಿಯಾಗಿ ರೂಪಿತವಾಗಿದೆ. ಸ್ಪರ್ಧಾತ್ಮಕ NRO ಉಳಿತಾಯ ಖಾತೆ ಬಡ್ಡಿ ದರಗಳೊಂದಿಗೆ, ನಿಮ್ಮ ನಿಧಿಗಳು ಸ್ಥಿರವಾಗಿ ಬೆಳೆಯುವಂತೆ ನೋಡಿಕೊಳ್ಳುತ್ತದೆ. ಇದಲ್ಲದೆ, ನಿಮ್ಮ NRO ಬ್ಯಾಂಕ್ ಖಾತೆಯನ್ನು ದೂರದಿಂದಲೇ ಮತ್ತು ಆನ್ಲೈನ್ ಚಾನೆಲ್ಗಳ ಮೂಲಕ ನಿರ್ವಹಿಸುವ ಅನುಕೂಲವು ಅದರ ಆಕರ್ಷಣೆಯನ್ನು ಹೆಚ್ಚಿಸುತ್ತದೆ, ಇದು ಜಾಗತಿಕ ಬದ್ಧತೆಗಳೊಂದಿಗೆ NRI ಗಳಿಗೆ ಒಂದು ಕಾರ್ಯಗತಗೊಳಿಸಬಲ್ಲ ಆಯ್ಕೆಯಾಗಿದೆ. ನಿಮ್ಮ ಸಂಪತ್ತನ್ನು ರಕ್ಷಿಸಲು, ಭವಿಷ್ಯಕ್ಕಾಗಿ ಯೋಜಿಸಲು ಅಥವಾ ನಿಮ್ಮ ಭಾರತೀಯ ಆದಾಯವನ್ನು ಸಮರ್ಥವಾಗಿ ನಿರ್ವಹಿಸಲು ನೀವು ಬಯಸುತ್ತಿರಲಿ, NRO ಖಾತೆಯು ನಿಮ್ಮ ಹಣಕಾಸಿನ ಗುರಿಗಳೊಂದಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಸಮಗ್ರ ಪ್ಯಾಕೇಜ್ ಅನ್ನು ನೀಡುತ್ತದೆ.