ಟ್ಯಾಕ್ಸ್ ಪ್ಲಾನರ್ ಠೇವಣಿ
ಇನ್ಕಮ್ ಟ್ಯಾಕ್ಸ್ ಆಕ್ಟ್ 1961 ರ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಮತ್ತ ಹೆಚ್ಚಿನ ಆದಾಯವನ್ನು ಇದು ತರುತ್ತದೆ. ವಾರ್ಷಿಕ ರೂ.100 ರಿಂದ ರೂ. 1.5 ಲಕ್ಷದವರೆಗೆ ಹೂಡಿಕೆಯ ಈ ಯೋಜನೆಯಲ್ಲಿ ಕಡಿಮೆ ತೆರಿಗೆ ಪಾವತಿಯೊಡನೆ ಹೆಚ್ಚಿನ ಆದಾಯಕ್ಕೆ ಅವಕಾಶವಿದೆ. ತ್ವರಿತವಾಗಿ ಠೇವಣಿ ರಸೀದಿ ನಿಮಗೆ ದೊರಕುತ್ತದೆ. ಈ ಠೇವಣಿ ಯೋಜನೆ ಐದು ವರುಷಗಳ ಅವಧಿಯದ್ದಾಗಿದೆ. ನಿಮ್ಮ ಹಣ ನಮ್ಮಲ್ಲಿ ಭದ್ರಾಗಿರುತ್ತದೆ ಮತ್ತಷ್ಟು ಓದು ಕಡಿಮೆ ಓದಿ
ನಿಮಗಾಗಿ ಈ ಠೇವಣಿ ಏಕೆ
ನಮ್ಮ ವಿವಿಧ ಠೇವಣಿಗಳಿಂದ : ನಿಮ್ಮ ಹಣದ ವೃದ್ಧಿ ಮತ್ತು ಬದುಕಿಗೆ ಭದ್ರತೆ
ಹೆಚ್ಚಿನ ಆದಾಯ ಮತ್ತು ತೆರಿಗೆ ವಿನಾಯಿತಿ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಯ ಅಡಿಯಲ್ಲಿ.
100 ರ ಗುಣಕಗಳಲ್ಲಿ ವರ್ಷಕ್ಕೆ ₹100 ಅಥವಾ ₹1.5 ಲಕ್ಷದವರೆಗೆ ಹೂಡಿಕೆ ಮಾಡಿ
ಬಡ್ಡಿ ಪಾವತಿ ತ್ರೈಮಾಸಿವಾಗಿಯೋ ಅಥವಾ ಮಾಸಿಕವೋ ಎಂಬುದನ್ನು ಆಯ್ಕೆ ಮಾಡಿ. ಫಲಾನುಭವಿಯ ನಾಮನಿರ್ದೇಶನವನ್ನೂ ಮಾಡಿ.
ವೈಶಿಷ್ಟ್ಯಗಳು
1,2,3 ರಂತೆ ಸುಲಭ...
ಮೂರು ಸರಳ ಹಂತಗಳಲ್ಲಿ ಟ್ಯಾಕ್ಸ್ ಪ್ಲಾನರ್ ಠೇಔಣಿ ಯೋಜನೆಗೆ ಅರ್ಜಿ ಸಲ್ಲಿಸಿ
ಹಂತ 1
ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ
ನಿಮ್ಮ ಹತ್ತಿರದ ಕರ್ನಾಟಕ ಬ್ಯಾಂಕ್ ಶಾಖೆಗೆ ಹೋಗಿ
ಹಂತ 2
ನಿಮ್ಮ ಮೂಲ ವಿವರಗಳೊಂದಿಗೆ ಪ್ರಾರಂಭಿಸಿ
ನಿಮ್ಮ ಮೂಲ ವಿವರಗಳನ್ನು ಒದಗಿಸಿ ಮತ್ತು ನಿಮ್ಮ ದಾಖಲೆಗಳನ್ನು ಕೈಯಲ್ಲಿಡಿ
ಹಂತ 3
ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ
ನಿಮ್ಮ ಖಾತೆಯನ್ನು ತೆರೆದಾಗ ನಮ್ಮ ಶಾಖೆಯ ಅಧಿಕಾರಿಗಳು ನಿಮಗೆ ತಿಳಿಸುತ್ತಾರೆ
ಇತರ ಆಯ್ಕೆಗಳನ್ನು ಅನ್ವೇಷಿಸಿ
ಆರ್ಥಿಕೋನ್ನತಿಗೆ ಅಸಂಖ್ಯ ಜನರು ನಂಬಿ ಆಯ್ಕೆಮಾಡಿದ್ದಾರೆ
ಬ್ಯಾಂಕಿಂಗ್ ಬಗ್ಗೆ ಓದಿ
ನಿಮಗೆ ಮಾಹಿತಿ ನೀಡುವ ಸಂಪನ್ಮೂಲಗಳು
ನಿಮ್ಮ ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರಗಳಿವೆ
ಠೇವಣಿಯ ಅವಧಿಯ ಮೊದಲೇ ಠೇವಣಿಮೊತ್ತವನ್ನು ಹಿಂಪಡೆಯಲು ಸಾಧ್ಯವಿಲ್ಲ. ನಿಮ್ಮ ಹಣ ಐದು ವರುಷಗಳ ಅವಧಿಗೆ ಸುರಕ್ಷಿತವಾಗಿ ಇಡಲ್ಪಟ್ಟಿದೆ.
ನಿಮ್ಮ ಠೇವಣಿಗೆ ನೀವು ಯಾರನ್ನಾದರೂ ನಾಮನಿರ್ದೇಶನ ಮಾಡಬಹುದು. ಆದರೆ, ಈ ಸೌಲಭ್ಯ ರಕ್ಷಕರ ಮೂಲಕ ಪ್ರತಿನಿಧಿಸಲ್ಪಡುವ ಅಪ್ರಾಪ್ತ ವಯಸ್ಕ ಠೇವಣಿದಾರರಿಗೆ ಈ ಸೌಲಭ್ಯ ಲಭ್ಯವಿಲ್ಲ.
ಠೇವಣಿದಾರನು ಮರಣಹೊಂದಿದ ಸಂದರ್ಭ ನಾಮನಿರ್ದೇಶನ ಹೊಂದಿದವರು (ನಾಮಿನೀ) ಠೇವಣಿದಾರನ ಮರಣ ಪ್ರಮಾಣ ಪತ್ರವನ್ನು ತೋರಿಸಿ ಠೇವಣಿ ಹಣವನ್ನು ಪಡೆದುಕೊಳ್ಳಬಹುದು.
ಕೆಬಿಎಲ್ ಮೊಬೈಲ್ ಪ್ಲಸ್ ಡೌನ್‌ಲೋಡ್ ಮಾಡಲು ಹೀಗೆ ಮಾಡಿ:
ಮೊಬೈಲ್ ಫೋನ್ ನಲ್ಲಿ ಗೂಗಲ್ ಪ್ಲೇಸ್ಟೋರ್ ಅಥವಾ ಆಪ್ ಸ್ಟೋರ್ ನಲ್ಲಿ ಕರ್ಣಾಟಕ ಬ್ಯಾಂಕಿನ ʼಕೆಬಿಎಲ್ ಮೊಬೈಲ್ ಪ್ಲಸ್ʼ ಹುಡುಕಿ ಅನಂತರ ಅದನ್ನು ಆಯ್ದು ನಿಮ್ಮ ಮೊಬೈಲ್ ಫೋನ್‌ಗೆ ಇನ್‌ಸ್ಟಾಲ್ ಮಾಡಿ/ಅಳವಡಿಸಿಕೊಳ್ಳಿ
ಬ್ಯಾಂಕ್ನಲ್ಲಿ ಖಾತೆ ಹೊಂದಿರುವ ವ್ಯಕ್ತಿಗಳು, ಸಂಸ್ಥೆಗಳು ಅಥವಾ ಕಾರ್ಪೊರೇಟ್ ಸಂಸ್ಥೆಗಳಿಗೆ ಎನ್ಇಎಫ್ಟಿ (ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್ಗಳ ವರ್ಗಾವಣೆ) ಲಭ್ಯವಿದೆ. ಇದು ದೇಶದ ಯಾವುದೇ ಇತರ ಎನ್ಇಎಫ್ಟಿ -ಸಕ್ರಿಯಗೊಳಿಸಿದ ಬ್ಯಾಂಕ್ ಶಾಖೆಗೆ ಹಣವನ್ನು ವರ್ಗಾಯಿಸಲು ಅನುಕೂಲವಾಗುತ್ತದೆ.
ಹೌದು, ನಮ್ಮ ಬ್ಯಾಂಕಿನ ಠೇವಣಿಗಳು ಸುರಕ್ಷಿತವೆಂದು ಪರಿಗಣಿಸಲ್ಪಟ್ಟಿವೆ. ಸರಕಾರಿ ಸಂಸ್ಥೆಗಳು ಒದಗಿಸುವ ವಿಮಾಯೋಜನೆಗಳಿಂದಾಗಿ ನಮ್ಮ ಠೇವಣಿಗಳು ಸುರಕ್ಷಿತವಾಗಿವೆ. ಈ ವಿಮಾ ಯೋಜನೆಯಡಿಲ್ಲಿ ಪ್ರತಿ ಠೇವಣಿದಾರರಿಗೆ ನಿರ್ದಿಷ್ಟ ಮೊತ್ತದ ವಿಮಾ ರಕ್ಷೆಯನ್ನು ನೀಡುತ್ತದೆ. ಜತೆಗೆ ನಮ್ಮ ಠೇವಣಿಗಳು ಕಠಿಣ ಆರ್ಥಿಕ ನಿಯಂತ್ರಣಗಳಿಗೆ ಮತ್ತು ಮೇಲ್ವಿಚಾರಣೆಗೆ ಒಳಪಟ್ಟಿವೆ.
ಠೇವಣಿಗಳ ಮೇಲಿನ ಆದಾಯಗಳು ನಿರ್ದಿಷ್ಟವಾಗಿ ಉಳಿತಾಯ ಖಾತೆಗಳು, ಷೇರುಗಳು ಅಥವಾ ಮ್ಯೂಚುಯಲ್ ಫಂಡ್‌ಗಳಂತಹ ಹೂಡಿಕೆಗಳಿಗೆ ಹೋಲಿಸಿದರೆ ಸಾಮಾನ್ಯವಾಗಿ ಕಡಿಮೆ.
ಮ್ಯೂಚುಯಲ್ ಫಂಡ್‌ಗಿಂತ ಠೇವಣಿ ಉತ್ತಮವಾಗಿದೆಯೇ ಎಂಬುದು ನಿಮ್ಮ ಹಣಕಾಸಿನ ಆದ್ಯತೆಗಳು, ಹೂಡಿಕೆಯ ಸಾಧ್ಯಾಸಾಧ್ಯತೆಗಳನ್ನು ಅವಲಂಬಿಸಿಕೊಂಡಿವೆ. ಠೇವಣಿಗಳ ಬಡ್ಡಿದರವು ಕಡಮೆಯಿದ್ದರೂ ಅವು ಸುರಕ್ಷಿತ ಮತ್ತು ಖಚಿತ ಪ್ರತಿಫಲವನ್ನು ಕೊಡುವಂಥದ್ದಾಗಿದೆ. ಮ್ಯೂಚುವಲ್ ಫಂಡ್ ಅಧಿಕ ಆದಾಯ ಸಾಮರ್ಥ್ಯವನ್ನು ಹೊಂದಿದ್ದರೂ ಇವು ಮಾರುಕಟ್ಟೆಯ ಅನಿರ್ಧಿಷ್ಟತೆ ಮತ್ತು ಚಂಚಲತೆಗಳಿಗೆ ಹೊಂದಿಕೊಂಡು ಅವುಗಳ ಲಾಭಾಲಾಭವಿರುತ್ತದೆ. ಅಲ್ಪಾವಧಿಯ ಗುರಿಗಳೊಂದಿಗೆ ಬಂಡವಾಳದ ಸುರಕ್ಷತೆ ನಿಮ್ಮ ಉದ್ದೇಶವಾಗಿದ್ದರೆ ಬ್ಯಾಂಕ್ ಠೇವಣಿಯೇ ಉತ್ತಮ. ದೀರ್ಘಾವಧಿಯ ಗುರಿಯೊಂದಿಗೆ ನೀವು ಮಾರುಕಟ್ಟೆಯ ರಿಸ್ಕ್ ಎದುರಿಸುವ ಸಾಮರ್ಥ್ಯ ಹೊಂದಿದ್ದರೆ ಮ್ಯೂಚುವಲ್ ಫಂಡ್ ನಿಮಗೆ ಸೂಕ್ತ.
ಹೌದು, ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟು ಒಂದು ಅಥವಾ ಹೆಚ್ಚಿನ ವ್ಯಕ್ತಿಗಳೊಂದಿಗೆ ಜಂಟಿ ಠೇವಣಿ ಖಾತೆಯನ್ನು ತೆರೆಯಬಹುದು. ನೀವು ಮತ್ತು ಇತರ ವ್ಯಕ್ತಿ (ಕುಟುಂಬದ ಸದಸ್ಯರು, ಸಂಗಾತಿ ಅಥವಾ ವ್ಯಾಪಾರ ಪಾಲುದಾರರು) ಖಾತೆಯಲ್ಲಿನ ಹಣವನ್ನು ನಿರ್ವಹಿಸಬಹುದು. ನೀವಿಬ್ಬರೂ ಹಣವನ್ನು ಠೇವಣಿ ಇಡಬಹುದು ಅಥವಾ ಹಿಂಪಡೆಯಬಹುದು. ಖಾತೆಯ ನಿಯಮಗಳು ಸಾಮಾನ್ಯವಾಗಿ ಇಬ್ಬರಿಗೂ ಸಮಾನವಾಗಿ ಅನ್ವಯಿಸುತ್ತವೆ. ದಂಪತಿಗಳು ಅಥವ ವ್ಯಾಪಾರ ಪಾಲುದಾರರು ತಮ್ಮ ಹಣಕಾಸನ್ನು ಒಟ್ಟಾಗಿ ನಿರ್ವಹಿಸಲು ಇದು ಪೂರಕವಾಗಿದೆ.
ತೆರಿಗೆ ಕಟ್ಟಬೇಕಾದ ಆದಾಯವನ್ನು ಕಡಿಮೆಗೊಳಿಸಲು ಈ ಯೋಜನೆಯ ಸಹಕಾರಿ. ಅವು ತೆರಿಗೆ ಉಳಿಸುವ ಮತ್ತು ನಿಮ್ಮ ಠೇವಣಿಗಳ ಮೇಲೆ ಬಡ್ಡಿಯನ್ನು ಗಳಿಸುವ ಎರಡು ಪ್ರಯೋಜನಗಳನ್ನು ನೀಡುತ್ತವೆ. ಠೇವಣಿಯ ಲಾಕ್-ಇನ್ ಅವಧಿಯು ಸಾಮಾನ್ಯವಾಗಿ 5 ರಿಂದ 10 ವರ್ಷಗಳವರೆಗೆ ಇರುತ್ತದೆ. ದೀರ್ಘಾವಧಿಯ ಉಳಿತಾಯವನ್ನೂ ಇದು ಪ್ರೋತ್ಸಾಹಿಸುತ್ತದೆ. ಬಡ್ಡಿಯನ್ನು ಗಳಿಸುವುದರ ಜತೆಗೆ ತೆರಿಗೆಯನ್ನೂ ಉಳಿಸಲು ಸಹಾಯ ಮಾಡುತ್ತದೆ. ಬಡ್ಡಿಯ ಮೇಲೆ ತೆರಿಗೆಯ ಪ್ರಭಾವವನ್ನು ಗಮನದಲ್ಲಿರಿಸಿ ತೆರಿಗೆಯ ಉಳಿತಾಯವನ್ನು ಮಾಡುವ ಠೇವಣಿ ಯೋಜನೆಯನ್ನು ಆಯ್ಕೆ ಮಾಡಿ.
ಟ್ಯಾಕ್ಸ್ ಪ್ಲಾನರ್ ಡೆಪೋಸಿಟ್‌ಗಳಿಗೆ ಬಡ್ಡಿದರವು ಸ್ಪರ್ಧಾತ್ಮಕವೂ ಆಕರ್ಷಕವೂ ಆಗಿದೆ. ಬಡ್ಡಿ ಲೆಕ್ಕಾಚಾರ ತ್ರೈಮಾಸಿಕವಾಗಿ ಚಕ್ರಬಡ್ಡಿ ಲೆಕ್ಕದಲ್ಲಿ ಆಗುತ್ತದೆ. ಠೇವಣಿಯ ಅವಧಿಯ ಆಧಾರದಲ್ಲಿ ಬಡ್ಡಿದರದ ನಿರ್ಧಾರವಾಗುತ್ತದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶ: ಮೂಲಠೇವಣಿ( ಪ್ರಿನ್ಸಿಪಾಲ್ ಹಣ)ಗೆ ಟ್ಯಾಕ್ಸ್ ಡಿಡಕ್ಷನ್‌ನ ಅನುಕೂಲ ಇದೆ ಆದರೆ ಗಳಿಸಿದ ಬಡ್ಡಿಗೆ ತೆರಿಗೆ ವಿಧಿಸಲ್ಪಡುತ್ತದೆ.
ಹಣಕಾಸಿನ ಗುರಿಗಳು ಮತ್ತು ತೆರಿಗೆ ಯೋಜನೆ ಅಗತ್ಯಗಳನ್ನು ಪರಿಗಣಿಸಿ. ಲಾಕ್-ಇನ್ ಅವಧಿಯನ್ನು ಅರ್ಥಮಾಡಿಕೊಳ್ಳಿ ಮತ್ತು ಅದು ನಿಮ್ಮ ಹಣಕಾಸಿನ ಯೋಜನೆಗೆ ಹೊಂದಿಕೆಯಾಗುತ್ತದೆ ಎಂದು ಖಚಿತಪಡಿಸಿಕೊಳ್ಳಿ. ಗಳಿಸಿದ ಬಡ್ಡಿಯ ತೆರಿಗೆ ಪರಿಣಾಮಗಳನ್ನು ಕಡೆಗಣಿಸಬೇಡಿ. ನಿಮ್ಮ ಠೇವಣಿಯ ಮೇಲೆ ಪರಿಣಾಮ ಬೀರಬಹುದಾದ ತೆರಿಗೆ ಕಾನೂನುಗಳಲ್ಲಿನ ಬದಲಾವಣೆಗಳನ್ನು ಗಮನದಲ್ಲಿರಿಸಿಕೊಳ್ಳಿ.