ಕೆಬಿಎಲ್ ಬ್ಯುಸಿನೆಸ್ ಕ್ವಿಕ್ ಸಾಲ ಸೌಲಭ್ಯ

ವ್ಯವಹಾರದಲ್ಲಿ ಏಳಿಗೆಯನ್ನು ಸಾಧಿಸಲು ಸೂಕ್ತ ಹಣಕಾಸು ಸಾಲ ಸೌಲಭ್ಯ. ಜಾಹಿರಾತು ನೀಡಿಕೆಯಿರಲಿ, ಕಚೇರಿ ನವೀಕರಣ ಆಗಿರಲಿ, ಅಥವಾ ಉಪಕರಣಗಳ ದುರಸ್ತಿಯಾಗಿರಬಹುದು, ಈ ಸಾಲ ನಿಮ್ಮ ವ್ಯವಹಾರದ ತ್ವರಿತ ಅಭಿವೃದ್ಧಿಗಾಗಿಯೆಂದೇ ರೂಪಿಸಲಾಗಿದೆ. ₹10 ಲಕ್ಷದಿಂದ ₹50 ಲಕ್ಷದವರೆಗೆ ಹಣಕಾಸು ಲಭ್ಯವಿದ್ದು, ಇದು ಸುಧಾರಣಾ ಚಟುವಟಿಕೆಗಳಿಗೆ ಹಣಕಾಸು ಸೌಲಭ್ಯ ಒದಗಿಸುತ್ತದೆ. ಯೋಜನೆಯು ತನ್ನ ಸರಳ Read more

ನಿಮಗೇಕೆ ಈ ಸಾಲ ಸೂಕ್ತ

ನಿಮಗೆ ಅಗತ್ಯವಿರುವುದನ್ನು ನೀಡಲು ವಿನ್ಯಾಸ ಮಾಡಲಾಗಿದೆ

ತಕ್ಷಣದ ಅಗತ್ಯತೆಗಳಿಗಾಗಿ 12 ತಿಂಗಳ ಪಿಎಸ್ ಓವರ್ ಡ್ರಾಫ್ಟ್ ಮತ್ತು ದೀರ್ಘಾವಧಿ ಸಾಲಕ್ಕಾಗಿ 35 ತಿಂಗಳುಗಳವರೆಗಿನ ಪಿಎಸ್ ಡಿಪಿಎನ್

ನಿಮಗೆ ಅಗತ್ಯವಿರುವುದನ್ನು ನೀಡಲು ವಿನ್ಯಾಸ ಮಾಡಲಾಗಿದೆ

MSME ಮಾರ್ಗಸೂಚಿಗಳ ಪ್ರಕಾರ ಎಲ್ಲಾ ಕಾನೂನಾತ್ಮಕ ಘಟಕಗಳಿಗೆ ಮುಕ್ತವಾಗಿದೆ

ಪಿಎಸ್ ಒಡಿ ಗಾಗಿ ಸಾಲದ ಮರುಪಾವತಿ

ಬೇಡಿಕೆಯ ಮೇಲೆ ಪಿಎಸ್ ಒವರ್ ಡ್ರಾಫ್ಟ್ ಅನ್ನು ಮರುಪಾವತಿ ಮಾಡಬೇಕು. ನಗದು ನಿರ್ವಹಣೆ ಮಾಡಲು ಅನುಕೂಲತೆ ಇದರಲ್ಲಿದೆ

ಸಾಲ ಮರುಪಾವತಿ ಪಿಎಸ್ ಡಿ ಪಿ ಎನ್ ಗಾಗಿ

ಪಿಎಸ್ ಡಿ ಪಿ ಎನ್ ಸಾಲಗಳು ಸಮಾನ ಮಾಸಿಕ ಕಂತುಗಳ ಮೂಲಕ ಮರುಪಾವತಿ ಮಾಡುವಂಥದ್ದು. ಇದು 35 ತಿಂಗಳುಗಳವರೆಗಿನ ಮರುಪಾವತಿ ಯೋಜನೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ

ಸಾಲದ ಮೊತ್ತ

₹10 ಲಕ್ಷಗಳಿಂದ ₹50 ಲಕ್ಷಗಳವರೆಗೆ ನಾವು ಹಣಕಾಸಿನ ನೆರವನ್ನು ಒದಗಿಸುತ್ತೇವೆ

ಅನುಕೂಲಕರ ಬಳಕೆ

ನಾವು ವ್ಯವಹಾರದ ಸುಧಾರಣೆ ಹಣಕಾಸನ್ನು ಒದಗಿಸುತ್ತೇವೆ. ಇದರಲ್ಲಿ ಜಾಹಿರಾತುಗಳು, ಕಚೇರಿ ನವೀಕರಣ, ಉಪಕರಣಗಳ ರಿಪೇರಿ, ಮತ್ತು ಸ್ಥಿರ ಸ್ವತ್ತುಗಳ ನವೀಕರಣ ಒಳಗೊಂಡಿದೆ. 

ಸ್ವತ್ತುಗಳ ಅಡಮಾನ

ಸಾಲಗಾರರು ಸಾಲದ ಮೌಲ್ಯದ ೧೦೦% ಭದ್ರತೆ ಒದಗಿಸಲು ಆಸ್ತಿ ಅಥವಾ ಸ್ವತ್ತುಗಳನ್ನು ಅಡಮಾನ ಇರಿಸಬೇಕು 

ಇತರ ಮೇಲಾಧಾರ ಆಯ್ಕೆಗಳು

ಬ್ಯಾಂಕ್ ಠೇವಣಿಗಳು, ರಾಷ್ಟೀಯ ಉಳಿತಾಯ ಪ್ರಮಾಣಪತ್ರ((NSC) ಮತ್ತು IRDA ಅಧಿಕೃತ ಸಂಸ್ಥೆಗಳಿಂದ ಸರೆಂಡರ್ ಮೌಲ್ಯದೊಂದಿಗೆ ಜೀವ ವಿಮಾ ಪಾಲಿಸಿಗಳು   

ಲೆಕ್ಕವಾಗುವುದು ಸರಳ ಮತ್ತು ಸುಲಭ

ಸ್ಮಾರ್ಟ್ ಉಳಿತಾಯ ಮತ್ತು ವೆಚ್ಚಗಳಿಗಾಗಿ ಸ್ಮಾರ್ಟ್ ಕ್ಯಾಲ್ಕುಲೇಟರ್

ಇ ಎಮ್ ಐ ಕ್ಯಾಲ್ಕುಲೇಟರ್

ಸಾಲದ ಮೊತ್ತ
25000 1000000
ಬಡ್ಡಿ ದರ
2% 18%
ಸಾಲದ ಅವಧಿ
1 ತಿಂಗಳುಗಳು 60 ತಿಂಗಳುಗಳು

ನೀವು ಪಾವತಿಸುವಿರಿ

₹13,800/ತಿಂಗಳುಗಳು

ನಿಮಗಾಗಿ ಯಾವ ಉತ್ಪನ್ನವು ಖಚಿತವಾಗಿಲ್ಲವೇ?

ಒಟ್ಟಿಗೆ ಅತ್ಯುತ್ತಮ ಫಿಟ್ ಅನ್ನು ಕಂಡುಹಿಡಿಯೋಣ

  • ಯಾವುದೇ ಸ್ಪ್ಯಾಮ್ ಕರೆಗಳಿಲ್ಲ
  • ಮೀಸಲಾದ ಕೆಬಿಎಲ್ ತಜ್ಞರು
  • ನಿಮ್ಮ ಸಮಯಕ್ಕೆ ಕರೆಯನ್ನು ಹೊಂದಿಸಿ

ಅರ್ಹತೆ

ವ್ಯಕ್ತಿಗಳು
  • 70 ವಯಸ್ಸು ಮೀರದ ಭಾರತೀಯ ಪ್ರಜೆಗಳು
  • ಕನಿಷ್ಠ ಕ್ರೆಡಿಟ್ ಸ್ಕೋರ್ 675
  • ಕಳೆದ 2 ವರ್ಷಗಳಲ್ಲಿ ವ್ಯವಹಾರದಲ್ಲಿ ಲಾಭದ ವರದಿ
  • ಕಳೆದ 2 ವರ್ಷಗಳ ಜಿಎಸ್ ಟಿ ಪಾವತಿಗಳು
  • ಅನುತ್ಪಾದಕ ಸಾಲಗಳು ಮತ್ತು ಒಟಿಎಸ್ ನ ಅಡಿಯಲ್ಲಿ ತೀರ್ಮಾನವಾದ ಗ್ರಾಹಕರಿಗೆ ಅವಕಾಶವಿಲ್ಲ
  • ಹಿಂದಿನ ಸಾಲದ ಮೇಲೆ ಡಿಫಾಲ್ಟ್ ಇರಕೂಡದು
  • ಕನಿಷ್ಠ ಕ್ರೆಡಿಟ್ ಸ್ಕೋರ್ 700
  • ಕಳೆದ 2 ವರ್ಷಗಳಿಂದ ಲಾಭದಾಯಕ ವ್ಯವಹಾರ
  • ನಿಯಮಿತವಾಗಿ GST ಪಾವತಿಗಳು
  • ಎನ್ಪಿಎ ಆಗಿರಕೂಡದು

ಅಗತ್ಯವಿರುವ ದಾಖಲೆಗಳು

  • ಉದ್ಯಮ್ ನೋಂದಣಿ ಪ್ರಮಾಣಪತ್ರ
  • ಫರ್ಮ್ ಗಳಿಗೆ ಗುರುತಿನ ಪುರಾವೆ (ಆಧಾರ್ ಕಾರ್ಡ್ , ಪಾನ್,   ನೋಂದಣಿ ಮಾಡಿದ ಒಪ್ಪಂದ ಪತ್ರ, MOA & AOA, ನೋಂದಣಿ ಹೊಂದಿದ ಟ್ರಸ್ಟ್ ಒಪ್ಪಂದ, LLP ಒಪ್ಪಂದ)
  • ವಿಳಾಸದ ಪುರಾವೆ (ಅಂಗಡಿ/ಸಂಸ್ಥೆ ಪರವಾನಗಿ, GST ನೋಂದಣಿ, ಬಾಡಿಗೆ/ಭೋಗ್ಯದ ಒಪ್ಪಂದ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಪರವಾನಗಿ  
  • ಕಳೆದ 2 ಹಣಕಾಸಿನ ವರ್ಷಗಳ ಜಿಎಸ್ಟಿ ಪಾವತಿ 

1,2,3...ರೀತಿಯಾಗಿ ಸರಳ

ಸರಳ ಹಂತಗಳಲ್ಲಿ ಕೆಬಿಎಲ್ ಎಕ್ಸ್ಪ್ರೆಸ್ ಬ್ಯುಸಿನೆಸ್ ಕ್ವಿಕ್ ಸಾಲಕ್ಕಾಗಿ ಅರ್ಜಿ ಸಲ್ಲಿಸಿ

ಹಂತ 1

ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ

ನಿಮ್ಮ ಹತ್ತಿರದ ಕರ್ನಾಟಕ ಬ್ಯಾಂಕ್ ಶಾಖೆಗೆ ಹೋಗಿ

ಹಂತ 2

ನಿಮ್ಮ ಮೂಲ ವಿವರಗಳನ್ನು ನಮೂದಿಸಿ

ನಿಮ್ಮ ಮೂಲ ವಿವರಗಳನ್ನು ನೀಡಿ ಮತ್ತು ದಾಖಲೆಗಳನ್ನು ತಯಾರಿಟ್ಟುಕೊಳ್ಳಿ

ಹಂತ 3

ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ

ನಿಮ್ಮ ಖಾತೆಯನ್ನು ತೆರೆದಾಗ ನಮ್ಮ ಶಾಖೆಯ ಅಧಿಕಾರಿಗಳು ನಿಮಗೆ ತಿಳಿಸುತ್ತಾರೆ

1,2,3...ರೀತಿಯಾಗಿ ಸರಳ

ನಿಮಗಾಗಿರುವ ಇತರ ಆಯ್ಕೆಗಳನ್ನು ನೋಡಿ

ಹಣಕಾಸಿನ ಶ್ರೇಷ್ಠತೆಗಾಗಿ ಆರಿಸಲಾಗಿರುವ ಸಾವಿರಾರು ಜನರ ಭರವಸೆ

ಕೆಬಿಎಲ್ MSME ಲೋನ್

  • ₹30 ಕೋಟಿವರೆಗೆ ಗರಿಷ್ಟ ಸಾಲದ ಮೊತ್ತ
  • ಬಡ್ಡಿ ದರಗಳು, ವಾರ್ಷಿಕ 9.48% ರಿಂದ ಆರಂಭ
  • 120 ತಿಂಗಳುಗಳವರೆಗೆ ಸಾಲದ ಅವಧಿ

ಕೆಬಿಎಲ್ ಮೈಕ್ರೋ ಮಿತ್ರಾ ಲೋನ್

  • ₹10 ಲಕ್ಷಗಳವರೆಗೆ ಗರಿಷ್ಟ ಸಾಲದ ಮೊತ್ತ
  • EBLR ಮಾರ್ಗಸೂಚಿಗಳ ಪ್ರಕಾರ ಬಡ್ಡಿ ದರಗಳು
  • 35-84 ತಿಂಗಳುಗಳ ಸಾಲದ ಅವಧಿ

ಸರಳ ಮಾಹಿತಿಯೊಂದಿಗೆ ಸರಳ ಸಾಲಗಳು

ಪ್ರತಿ ಕ್ಷಣವೂ ನಿಮಗೆ ಮಾಹಿತಿ ಒದಗಿಸುವ ನಮ್ಮ ಸಂಪನ್ಮೂಲಗಳು

match-made
ಬ್ಯಾಂಕಿಂಗ್ ಸ್ವರ್ಗದಲ್ಲಿ ಮಾಡಿದ ಹೊಂದಾಣಿಕೆ: ಉಳಿತಾಯ ಖಾತೆ ಆವೃತ್ತಿ

navigating-pers
ನಿಮ್ಮ ಆರಂಭಿಕ 20 ರ ದಶಕದಲ್ಲಿ ವೈಯಕ್ತಿಕ ಸಾಲಗಳನ್ನು ನ್ಯಾವಿಗೇಟ್ ಮಾಡುವುದು- ಇದು ಒಳ್ಳೆಯ ಐಡಿಯಾವೇ?

savings-accoun
ಉಳಿತಾಯ ಖಾತೆ: ರೂಢಿಗಳನ್ನು ಮುರಿಯುವುದು ಮತ್ತು ಸಂಪತ್ತನ್ನು ನಿರ್ಮಿಸುವುದು

vehicle-loans
ಮಹತ್ವಾಕಾಂಕ್ಷೆಯ ಡೆಲಿವರಿ ಪಾಲುದಾರರು ಮತ್ತು ಕ್ಯಾಬ್ ಚಾಲಕರಿಗೆ ವಾಹನ ಸಾಲಗಳು

why-should
ನೀವು ಅರೆ ಸುಸಜ್ಜಿತ ಅಪಾರ್ಟ್ಮೆಂಟ್ಗೆ ಏಕೆ ಹೋಗಬೇಕು?

ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ
ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ

ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ
ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ

the-wisdom
ನಿವೃತ್ತ ಜನರಿಗೆ ತ್ವರಿತ ಚಿನ್ನದ ಸಾಲಗಳ ಬುದ್ಧಿವಂತಿಕೆ - ಆರ್ಥಿಕ ಭದ್ರತೆಯನ್ನು ಅನ್ಲಾಕ್ ಮಾಡಿ

ಪ್ರಶ್ನೆಗಳಿವೆಯೇ? ನಾವು ಉತ್ತರಿಸುತ್ತೇವೆ

ನಮ್ಮ ಕೆಬಿಎಲ್ ಎಕ್ಸ್ಪ್ರೆಸ್ ಬ್ಯುಸಿನೆಸ್ ಕ್ವಿಕ್ ಲೋನ್ ಜಾಹಿರಾತು, ಕಚೇರಿ ನವೀಕರಣಗಳು ,ಅತ್ತು ಉಪಕರಣಗಳ ನವೀಕರಣ ಒಳಗೊಂಡಂತೆ ನಿಮ್ಮ ವ್ಯವಹಾರ ಬೆಳವಣಿಗೆಯನ್ನು ಸುಗಮಗೊಳಿಸಲು ಅನೇಕ ವ್ಯವಹಾರದ ಕಾರ್ಯಗಳಿಗೆ ಹಣಕಾಸನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.

ನಾವು ಜೀರೋ ಡಿಫೆಕ್ಟ್ ಜೀರೋ ಎಫೆಕ್ಟ್(ZED) ಪ್ರಮಾಣಪತ್ರದೊಂದಿಗೆ ಮಹಿಳಾ ಉದ್ಯಮಿಗಳಿಗಾಗಿ ಮತ್ತು MSME ಗಳಿಗಾಗಿ ವಿಶೇಷ ಬಡ್ಡಿ ರಿಯಾಯಿತಿಗಳನ್ನು ಒದಗಿಸುತ್ತೇವೆ. ಜೊತೆಗೆ, ಒಂದುವೇಳೆ ನಿಮ್ಮ ಭದ್ರತೆಯು 125% ಕ್ಕಿಂತ ಹೆಚ್ಚಾದಲ್ಲಿ, ನೀವು ಹೆಚ್ಚುವರಿ ಪ್ರಯೋಜನಗಳಿಗೆ ಅರ್ಹರಾಗುತ್ತೀರಿ.

ನಾವು ಸಾಮಾನ್ಯವಾಗಿ ಎರಡು ಮರುಪಾವತಿ ವಿಧಾನಗಳನ್ನು ಒದಗಿಸುತ್ತೇವೆ: PS ಓವರ್ ಡ್ರಾಫ್ಟ್- ಅನುಕೂಲತೆಗಾಗಿ ಬೇಡಿಕೆಯ ಮೇಲೆ ಮರುಪಾವತಿ ಮತ್ತು PSDPN - ವ್ಯವಸ್ಥಿತ ಹಣಕಾಸಿನ ಯೋಜನೆಗಾಗಿ ಸಮಾನ ಮಾಸಿಕ ಕಂತುಗಳು. PSDPN ಎಂದರೆ “ಪ್ಯಾಕಿಂಗ್ ಕ್ರೆಡಿಟ್ ಡಿಮ್ಯಾಂಡ್ ಪ್ರಾಮಿಸರಿ ನೋಟ್’. ಬ್ಯಾಂಕಿಂಗ್ ಮತ್ತು ಹಣಕಾಸಿನ ವಲಯದಲ್ಲಿ ಬಳಸಲಾಗುವ ಹಣಕಾಸಿನ ಸಾಧನ ಇದಾಗಿದ್ದು, ಇದು ಸಾಮಾನ್ಯವಾಗಿ ಕಚ್ಚಾ ವಸ್ತುಗಳ ಸಂಗ್ರಹಣೆ, ತಯಾರಿಕಾ ಅಥವಾ ರಫ್ತುಗಾಗಿ ಸರಕುಗಳ ಪ್ಯಾಕೇಜಿಂಗ್ ರೀತಿಯ ವ್ಯವಹಾರ ಉದ್ದೇಶಗಳಿಗೆ ಸಾಲ ಅಥವಾ ಕ್ರೆಡಿಟ್ ಸೌಲಭ್ಯವನ್ನು ಒದಗಿಸುತ್ತದೆ. “ಡಿಮ್ಯಾಂಡ್ ಪ್ರಾಮಿಸರಿ ನೋಟ್” ಎಂದರೆ ಸಾಲಗಾರನು ಸಾಲದ ಹಣವನ್ನು ಬೇಡಿಕೆಯ ಮೇರೆಗೆ ಅಥವಾ ನಿಗದಿತ ಅಥವಾ ನಿರ್ಧರಿತ ಭವಿಷ್ಯದ ಸಮಯದಲ್ಲಿ ಮರುಪಾವತಿಸುವ ಭರವಸೆ ನೀಡಿರುತ್ತಾನೆ.”

ಆಸ್ತಿ ಅಥವಾ ಭದ್ರತೆಗಳ ಅಡಮಾನ ಅಂದರೆ ಬ್ಯಾಂಕ್ ಠೇವಣಿಗಳು ಮತ್ತು ಕೆಲವು ವಿಮೆ ಪಾಲಿಸಿಗಳು ಮೇಲಾಧಾರವಾಗಿರುತ್ತವೆ. ಇವು ಸಾಲದ ಭದ್ರತೆ ಮತ್ತು ಸಾಲಗಾರನ ಬದ್ಧತೆಯನ್ನು ಖಾತ್ರಿಪಡಿಸುತ್ತದೆ.

ವ್ಯವಹಾರದ ಅಭಿವೃದ್ಧಿ ಯೋಜನೆಗಳ ವಿಸ್ತಾರವಾದ ಶ್ರೇಣಿಯೊಂದಿಗೆ ಸರಿಹೊಂದಿಸಲು ₹10 ಲಕ್ಷದಿಂದ ಹಿಡಿದು ₹50 ಲಕ್ಷಗಳವರೆಗೆ ಸಾಲ ಸಹಾಯವನ್ನು ಈ ಯೋಜನೆ ಒದಗಿಸುತ್ತದೆ.

ನಿಮ್ಮ ಹಣಕಾಸಿನ ಸ್ಥಿರತೆ ಮತ್ತು ವಿಶ್ವಾಸಾರ್ಹತೆಯನ್ನು ಖಾತ್ರಿಪಡಿಸಲು ನಿಮ್ಮ ವ್ಯವಹಾರ ಕಳೆದ ಎರಡು ವರ್ಷಗಳಿಂದ ಲಾಭ ಗಳಿಸುತ್ತಿದ್ದರೆ ಮತ್ತು ನೀವು ನಿರಂತರವಾಗಿ GST ಪಾವತಿಸುತ್ತಿದ್ದರೆ ನಿಮ್ಮ ವ್ಯವಹಾರ ಸಾಲ ಪಡೆಯಲು ಅರ್ಹ.

ಒಂದುವೇಳೆ ಮರುಪಾವತಿಯಲ್ಲಿ ಯಾವುದೇ ಸಮಸ್ಯೆ ಉಂಟಾದಲ್ಲಿ, ನೀವು ನಮ್ಮನ್ನು ಸಂಪರ್ಕಿಸಿ. ನಾವು ಸೂಕ್ತ ಪರಿಹಾರಗಳನ್ನು ಮತ್ತು ಹಣಕಾಸಿನ ಸಮಗ್ರತೆಯನ್ನು ಕಾಯ್ದುಕೊಳ್ಳಲು ಸಹಾಯಮಾಡುತ್ತೇವೆ.

ನಾವು ವ್ಯವಹಾರದಲ್ಲಿ ನಾವೀನ್ಯತೆಯನ್ನು ಪ್ರೋತ್ಸಾಹಿಸುವುದರಿಂದ ನಿಮ್ಮ ಸ್ಟಾರ್ಟ್ ಅಪ್ ನಮ್ಮ MSME ಮಾನದಂಡ ಪೂರೈಸುತ್ತಿದ್ದಲ್ಲಿ ಮತ್ತು ಉತ್ತಮ ಸಾಲದ ಮರುಪಾವತಿ ಹಿನ್ನಲೆ ಹೊಂದಿದ್ದರೆ ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.

ನಾವು ನಿಮ್ಮ ವ್ಯವಹಾರ ಆಕಾಂಕ್ಷೆಗಳಿಗಾಗಿ ಸಕಾಲಿಕ ಹಣಕಾಸು ಬೆಂಬಲವನ್ನು ಒದಗಿಸುವ ಪ್ರಾಮುಖ್ಯತೆವನ್ನು ಅರ್ಥಮಾಡಿಕೊಳ್ಳುತ್ತೇವೆ ಆದ್ದರಿಂದ ಸಾಲದ ಪ್ರಕ್ರಿಯೆಯು ನಮ್ಮ ಮೊದಲ ಆದ್ಯತೆಯಾಗಿರುತ್ತದೆ.

ಹೌದು, ಸಾಲದ ಅವಧಿಗಿಂತ ಮೊದಲೇ ನೀವು ಸಾಲದ ಪೂರ್ಣ ಮರುಪಾವತಿ ಮಾಡಬಹುದು. ಇದರಿಂದ ನಿಮ್ಮ ಬಡ್ಡಿದರಗಳು ಸಹ ಕಡಿಮೆಯಾಗುತ್ತದೆ. ಸಾಲದ ನಿಯಮಗಳು ಮತ್ತು ಷರತ್ತುಗಳನ್ನು ತಿಳಿದುಕೊಳ್ಳಲು ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

ವ್ಯವಹಾರ ಸಾಲದ ಪ್ರಯೋಜನಗಳು

ವ್ಯವಹಾರಗಳನ್ನು ವಿಸ್ತರಿಸಲು ಬಯಸುತ್ತಿರುವ, ಹೊಸ ಉಪಕರಣಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಿರುವ ಅಥವಾ ಕೆಲಸದ ಬಂಡವಾಳವನ್ನು ನಿರ್ವಹಣೆ ಮಾಡಲು ಬಯಸುತ್ತಿರುವ ವ್ಯವಹಾರಗಳಿಗಾಗಿ ಹಣಕಾಸಿನ ಸಹಾಯವನ್ನು ವ್ಯವಹಾರ ಸಾಲಗಳು ಒದಗಿಸುತ್ತವೆ. ಈ ಸಾಲಗಳು ವ್ಯವಹಾರದ ಕನಸುಗಳನ್ನು ನನಸಾಗಿಸಲು ಅಗತ್ಯವಿರುವ ಹಣವನ್ನು ಒದಗಿಸುವ ಮೂಲಕ ಬೆಳವಣಿಗೆ ಮತ್ತು ನಾವಿನ್ಯತೆಗಾಗಿ ಈ ಸಾಲಗಳು ವೇಗವರ್ಧಕವಾಗಬಹುದು. ವ್ಯವಹಾರ ಸಾಲಕ್ಕಾಗಿ ಆನ್ ಲೈನ್ ಅರ್ಜಿಯನ್ನೂ ಸಲ್ಲಿಸಬಹುದು. ಇದರಿಂದ ತ್ವರಿತವಾಗಿ ಮತ್ತು ಸಮರ್ಥವಾಗಿ ಹಣಕಾಸನ್ನು ಪಡೆಯಬಹುದಾಗಿದೆ.

ವ್ಯವಹಾರ ಸಾಲದ ಬಡ್ಡಿ ದರಗಳು ಸಾಲ ಮೊತ್ತ, ಅವಧಿ ಮತ್ತು ವ್ಯವಹಾರದ ಹಣಕಾಸಿನ ಸ್ಥಿತಿ ರೀತಿಯ ಅನೇಕ ಅಂಶಗಳನ್ನು ಆಧರಿಸಿರುತ್ತದೆ. ಈ ಸಾಲಗಳು ಸ್ಪರ್ಧಾತ್ಮಕ ಬಡ್ಡಿ ದರಗಳನ್ನು ಹೊಂದಿದ್ದು, ವ್ಯವಹಾರದ ಹಣಕಾಸುಗಳಿಗಾಗಿ ಸೂಕ್ತವಾಗಿದೆ. ಸಾಲಗಾರರು ತಮ್ಮ ಹಣಕಾಸನ್ನು ಪರಿಣಾಮಕಾರಿಯಾಗಿ ಯೋಜಿಸಲು ಬಡ್ಡಿ ಲೆಕ್ಕದ ವಿಧಾನವನ್ನೂ ಒಳಗೊಂಡಂತೆ ಸಾಲದ ಷರತ್ತುಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ತ್ವರಿತ ಹಣಕಾಸಿನ ಸಹಾಯಕ್ಕಾಗಿ, ಕೆಬಿಎಲ್ ಎಕ್ಸ್ಪ್ರೆಸ್ ಬ್ಯುಸಿನೆಸ್ ಕ್ವಿಕ್ ಸಾಲ ಒಂದು ಅತ್ಯುತ್ತಮ ಆಯ್ಕೆಯಾಗಿದ್ದು, ಇದು ಅಗತ್ಯ ಸಮಯದಲ್ಲಿ ತ್ವರಿತ ವ್ಯವಹಾರ ಸಾಲವನ್ನು ಒದಗಿಸುತ್ತದೆ.

ನಿಮ್ಮ ಸಾಲದ ಅರ್ಜಿಯನ್ನು ಅಂಗೀಕೃತವಾಗಲು ಒಂದು ಅತ್ಯುತ್ತಮ ವ್ಯವಹಾರ ಯೋಜನೆಯನ್ನು ಸಿದ್ಧಪಡಿಸಿಕೊಳ್ಳಿ. ಅರ್ಜಿ ಪ್ರಕ್ರಿಯೆಗಾಗಿ ನಿಮ್ಮ ಹಣಕಾಸಿನ ದಾಖಲೆಗಳನ್ನು ಕ್ರಮವಾಗಿ ಜೋಡಿಸಿಕೊಳ್ಳಿ ಮತ್ತು ನವೀಕರಿಸಿಕೊಳ್ಳಿ. ಸಾಲದ ಒಪ್ಪಂದ, ಅದರಲ್ಲೂ ನಿರ್ದಿಷ್ಟವಾಗಿ ಮರುಪಾವತಿ ಷರತ್ತುಗಳು ಮತ್ತು ಯಾವುದೇ ಸಂಬಂಧಿತ ಶುಲ್ಕಗಳನ್ನು ಸರಿಯಾಗಿ ಓದಿ ಅರ್ಥಮಾಡಿಕೊಳ್ಳಿ.