SB ಜನರಲ್ ಉಳಿತಾಯ ಖಾತೆ
SB ಜನರಲ್ ಸೇವಿಂಗ್ಸ್ ಖಾತೆ ನಿಮ್ಮ ದೈನಂದಿನ ಬ್ಯಾಂಕಿಂಗ್ ಈಗ ಸರಳ ಮತ್ತು ಸುಲಭ.ನಿಮ್ಮ ದೈನಂದಿನ ವೆಚ್ಚಗಳನ್ನು ನಿಭಾಯಿಸಲು ಹಾಗೂ ಎಲ್ಲಾ ಡಿಜಿಟಲ್ ಬ್ಯಾಂಕಿಂಗ್ ಅನುಕೂಲತೆಗಳಿಗಾಗಿ ಇರುವ ಉಳಿತಾಯ ಖಾತೆ. ವಾರ್ಷಿಕವಾಗಿ 4.5%*ವರೆಗೆ ಬಡ್ಡಿ ಹಾಗೂ ಚೆಕ್ ಬುಕ್ ಸೌಲಭ್ಯ ಪಡೆಯಿರಿ.ಈ ಸೌಲಭ್ಯವು ದೇಶಾದ್ಯಾಂತ ಇರುವ ನಮ್ಮ ಎಲ್ಲಾ ಶಾಖೆಗಳಲ್ಲಿಯೂ ಲಭ್ಯವಿರುತ್ತದೆ ಹಾಗು ಆನ್ಲೈನ್ ಮೂಲಕ ಖಾತೆ ತೆರೆಯುವ ಅವಕಾಶಗಳನ್ನು ಸಹ ಒಳಗೊಂಡಿರುತ್ತದೆ. ನಿಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸಲು ಈ ಖಾತೆಯನ್ನು ವಿನ್ಯಾಸಗೊಳಿಸಲಾಗಿದೆ. ಮತ್ತಷ್ಟು ಓದು ಕಡಿಮೆ ಓದಿ
ನಿಮಗಾಗಿ ಈ ಖಾತೆ ಯಾಕೆ
ನಮ್ಮ ಉಳಿತಾಯ ಖಾತೆಗಳೊಂದಿಗೆ ನಿಮ್ಮ ಭವಿಷ್ಯವನ್ನು ನಿರ್ಮಿಸಿ
UPI ಬಳಸಿ ಹಣ ಕಳುಹಿಸಿ, ಬಿಲ್ ಪಾವತಿ ಮಾಡಿ ಮತ್ತು 24x7 ರೀಚಾರ್ಜ್ ಮಾಡಿ
ಯಾವುದೇ ಶಾಖೆ- ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಸರಳ ಬ್ಯಾಂಕಿಂಗ್
ಕೇವಲ ₹200* ಮಾಸಿಕ ಸರಾಸರಿ ಬ್ಯಾಲೆನ್ಸ್
ಯಾವುದೇ ಗುಪ್ತ ಶುಲ್ಕಗಳಿಲ್ಲ
ನಾವು ಸ್ವಚ್ಛ ಮತ್ತು ಪ್ರಾಮಾಣಿಕ ಬ್ಯಾಂಕಿಂಗ್‌ಗೆ ಆದ್ಯತೆ ನೀಡುತ್ತೇವೆ.
100%
ಪಾರದರ್ಶಕ
ಮತ್ತು ಮುಂಚೂಣಿಯಲ್ಲಿ
ಅಗತ್ಯವಿರುವ ದಾಖಲೆಗಳು
- ಗ್ರಾಹಕ ID (CIF ID)
- ವಿಳಾಸದ ಪುರಾವೆ ಮತ್ತು ಗುರುತಿನ ಪುರಾವೆಯಾಗಿ ಅಧಿಕೃತವಾಗಿ ಮಾನ್ಯವಾದ ID ಡಾಕ್ಯುಮೆಂಟ್ (ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮಾನ್ಯ ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ, ಎನ್‌ಆರ್‌ಇಜಿಎ ಜಾಬ್ ಕಾರ್ಡ್, ರಾಜ್ಯ ಸರ್ಕಾರಿ ಅಧಿಕಾರಿಯಿಂದ ಸರಿಯಾಗಿ ಸಹಿ ಮಾಡಲ್ಪಟ್ಟಿದೆ, ಹೆಸರು ಮತ್ತು ವಿಳಾಸವನ್ನು ನಮೂದಿಸುವ ಎನ್‌ಪಿಆರ್ ಅಥವಾ ಯುಐಡಿಎಐ ಪತ್ರ)
- ವಿಳಾಸದ ಪುರಾವೆ ಮತ್ತು ಗುರುತಿನ ಪುರಾವೆಯಾಗಿ ಅಧಿಕೃತವಾಗಿ ಮಾನ್ಯವಾದ ID ಡಾಕ್ಯುಮೆಂಟ್ (ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮಾನ್ಯ ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ, ಎನ್‌ಆರ್‌ಇಜಿಎ ಜಾಬ್ ಕಾರ್ಡ್, ರಾಜ್ಯ ಸರ್ಕಾರಿ ಅಧಿಕಾರಿಯಿಂದ ಸರಿಯಾಗಿ ಸಹಿ ಮಾಡಲ್ಪಟ್ಟಿದೆ, ಹೆಸರು ಮತ್ತು ವಿಳಾಸವನ್ನು ನಮೂದಿಸುವ ಎನ್‌ಪಿಆರ್ ಅಥವಾ ಯುಐಡಿಎಐ ಪತ್ರ)
1,2,3 ರಂತೆ ಸುಲಭವಾಗಿದೆ...
3 ಸರಳ ಹಂತಗಳಲ್ಲಿ SB ಜನರಲ್ ಉಳಿತಾಯ ಖಾತೆಗೆ ಅರ್ಜಿ ಸಲ್ಲಿಸಿ
ಹಂತ 1
ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ
ನಿಮ್ಮ ಹತ್ತಿರದ ಕರ್ನಾಟಕ ಬ್ಯಾಂಕ್ ಶಾಖೆಗೆ ಹೋಗಿ
ಹಂತ 2
ನಿಮ್ಮ ಮೂಲಭೂತ ಮಾಹಿತಿ ನೀಡಿ
ನಿಮ್ಮ ಮೂಲಭೂತ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ನಿಮ್ಮ ದಸ್ತಾವೇಜುಗಳನ್ನು ತಯಾರಿಸಿ
ಹಂತ 3
ಉಳಿದ ಹಂತಗಳನ್ನು ನಾವು ನೋಡಿಕೊಳ್ಳುತ್ತೇವೆ
ನಿಮ್ಮ ಖಾತೆಯನ್ನುತೆರೆಯಲ್ಪಟ್ಟ ಬಳಿಕ ನಮ್ಮ ಶಾಖಾ ಅಧಿಕಾರಿಗಳು ನಿಮಗೆ ತಿಳಿಸುತ್ತಾರೆ
ನಿಮಗಾಗಿ ಇತರ ಆಯ್ಕೆಗಳನ್ನು ಹುಡುಕಿ
ಸಾವಿರಾರು ಜನರ ನಂಬುಗೆಯ ಮತ್ತು ಆರ್ಥಿಕ ಬೆಳವಣಿಗೆಗಾಗಿ ಆಯ್ದುಕೊಂಡ ಬ್ಯಾಂಕ್
ಸುಲಭವಾಗಿ ಬ್ಯಾಂಕಿಂಗ್ ಬಗ್ಗೆ ತಿಳಿದುಕೊಳ್ಳಿ
ನಿಮಗೆ ಮಾಹಿತಿ ನೀಡುವ ಸಂಪನ್ಮೂಲಗಳು
ಪ್ರಶ್ನೆಗಳಿವೆಯೇ? ನಾವು ಉತ್ತರಗಳನ್ನು ಪಡೆದುಕೊಂಡಿದ್ದೇವೆ.
SB ಜನರಲ್ ಉಳಿತಾಯ ಖಾತೆಯಲ್ಲಿ ವಾರ್ಷಿಕ 4.5% ಬಡ್ಡಿದರದ ಆದಾಯವನ್ನು ಆನಂದಿಸಿ.
ಈ ಖಾತೆಯನ್ನು ತೆರೆಯಲು ನಿಮಗೆ ಗುರುತಿನ ಪುರಾವೆ (ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಚಾಲಕರ ಪರವಾನಗಿ) ಮತ್ತು ಸಂಬಂಧಿತ KYC ದಾಖಲೆಗಳ ಅಗತ್ಯವಿದೆ.
ಚೆಕ್ ಬುಕ್ ರಹಿತ ಖಾತೆಗಳಿಗೆ ಕನಿಷ್ಠ ಬ್ಯಾಲೆನ್ಸ್: ನಗರ ಮತ್ತು ಅರೆ-ನಗರ ಪ್ರದೇಶಗಳಲ್ಲಿ ₹500; ಮತ್ತು ಗ್ರಾಮೀಣ ಪ್ರದೇಶಗಳಲಿ
ಕನಿಷ್ಠ ಬ್ಯಾಲೆನ್ಸ್: ₹200. ಚೆಕ್ ಬುಕ್ ಸಹಿತ ಖಾತೆಗಳಿಗೆ ಕನಿಷ್ಠ ಬ್ಯಾಲೆನ್ಸ್ (ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿ) ₹2000; ಮತ್ತು ಅರೆ-ನಗರ, ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ವಿತ್ತೀಯ ಸೇರ್ಪಡೆ ಪ್ರದೇಶಗಳಲ್ಲಿ ₹1000 ನಿರ್ವಹಿಸಬೇಕಾಗುತ್ತದೆ.
ಹೌದು, ನಿಮ್ಮ ಉಳಿತಾಯ ಖಾತೆ ಪ್ರಕಾರವನ್ನು ನೀವು ಬದಲಾಯಿಸಬಹುದು. ನಿಮ್ಮ ಉಳಿತಾಯ ಖಾತೆಯ ಸ್ವರೂಪವನ್ನು ಬದಲಾಯಿಸಲು ದಯವಿಟ್ಟು ಶಾಖೆಗೆ ಭೇಟಿ ನೀಡಿ.
ಒಂದು ವೇಳೆ ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ನೀವು ಕಳೆದುಕೊಂಡಿದ್ದರೆ ಅಥವಾ ಕಳುವಾಗಿದ್ದರೆ, ನಿಮ್ಮ ಖಾತೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನೀವು ತಕ್ಷಣ ಘಟನೆಯನ್ನು ಕರ್ಣಾಟಕ ಬ್ಯಾಂಕ್‌ಗೆ ವರದಿ ಮಾಡಬೇಕು. ನೀವು info@ktkbank.comಗೆ ಇಮೇಲ್ ಅನ್ನು ಕಳುಹಿಸಬಹುದು. ಅದರೊಂದಿಗೆ, ನಮ್ಮ ಟೋಲ್-ಫ್ರೀ ಗ್ರಾಹಕ ಸಂಖ್ಯೆ 1800 425 1444 ಅಥವಾ 1800 572 8031 ಗೆ ಕರೆ ಮಾಡಬಹುದು. ಯಾವುದೇ ಅನಧಿಕೃತ ವಹಿವಾಟುಗಳನ್ನು ತಡೆಗಟ್ಟಲು ಹಾಗೂ ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಲು ವರದಿ ಮಾಡುವುದು ಮುಖ್ಯವಾಗಿದೆ.
ಹೌದು, SB ಜನರಲ್ ಉಳಿತಾಯ ಖಾತೆಯು KBL ಸುರಕ್ಷಾ ಎಂಬ ಒಂದು ಅನನ್ಯ ವೈಯಕ್ತಿಕ ಅಪಘಾತ ವಿಮಾ ಯೋಜನೆಯನ್ನು ಮತ್ತು ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ (PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ (PMSBY)ಯಂತಹ ಹಲವಾರು ಮೌಲ್ಯಯುತ ಸಾಮಾಜಿಕ ಭದ್ರತಾ ಯೋಜನೆಗಳನ್ನು ನೀಡುತ್ತದೆ. ಅದರೊಂದಿಗೆ KBL ಡಿಮ್ಯಾಟ್ ಖಾತೆ, ಗಿಫ್ಟ್ ಕಾರ್ಡ್‌ಗಳು, ಪ್ರಯಾಣ, ಇ-ತೆರಿಗೆ ಪಾವತಿ ಸೇವೆಗಳು, ಕೋ-ಬ್ರಾಂಡೆಡ್ ಕ್ರೆಡಿಟ್ ಸೌಲಭ್ಯಗಳು ಮತ್ತು ಐಚ್ಛಿಕ ಸುರಕ್ಷಿತ ಠೇವಣಿ ಲಾಕರ್‌ಗಳಂತಹ ಬ್ಯಾಂಕಿಂಗ್ ಸೇವಾ ಸೌಲಭ್ಯಗಳನ್ನು ನೀಡುತ್ತವೆ, ವಿವಿಧ ಅಗತ್ಯಗಳನ್ನು ಪೂರೈಸಲು ನಮ್ಮ ಸೇವಾ ಸೌಲಭ್ಯಗಳು. ಹೆಚ್ಚಿನ ವಿವರಗಳಿಗಾಗಿ ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ.
ನಿಮ್ಮ ಹಣಕಾಸು ಯೋಜನೆಯಲ್ಲಿ ಉಳಿತಾಯ ಖಾತೆ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದು ನಿಮ್ಮ ಹಣವನ್ನು ಸಂರಕ್ಷಿಸಲು ಮತ್ತು ನಿಮ್ಮ ಅಭ್ಯುದಯಕ್ಕೆ ಸುರಕ್ಷಿತ ಮಾರ್ಗವನ್ನು ತೋರಿಸುತ್ತದೆ. ಕರ್ಣಾಟಕ ಬ್ಯಾಂಕ್ ಎಲ್ಲಾ ರೀತಿಯ ಗ್ರಾಹಕರಿಗೆ ವಿಶ್ವಾಸಾರ್ಹ ಮತ್ತು ಹೊಂದಿಕೊಳ್ಳುವ ಆಯ್ಕೆಗಳನ್ನು ಒದಗಿಸುತ್ತದೆ. ನಿಯಮಿತ ಉಳಿತಾಯದ ಮೂಲಕ, ನೀವು ಹಣಕಾಸಿನ ಸುರಕ್ಷೆಯನ್ನು ಸ್ಥಾಪಿಸಬಹುದು ಮತ್ತು ನಿಮ್ಮ ದೀರ್ಘಾವಧಿ ಹಣಕಾಸಿನ ಉದ್ದೇಶಗಳಿಗಾಗಿ ಕೆಲಸ ಮಾಡಬಹುದು. ನಮ್ಮ ಜನರಲ್ ಉಳಿತಾಯ ಖಾತೆಯು ವ್ಯಕ್ತಿಗಳ ಹಣಕಾಸು ನಿರ್ವಹಣೆಗೆ ಬಹುಮುಖದ ಪರಿಹಾರವಾಗಿದೆ. SB ಜನರಲ್ ಖಾತೆ ಬ್ಯಾಂಕಿಂಗ್‌ನಲ್ಲಿ ಸರಳತೆ ಮತ್ತು ದಕ್ಷತೆಯನ್ನು ಗೌರವಿಸುವ ಗ್ರಾಹಕರಿಗೆ ತಕ್ಕುದಾಗಿದೆ.
ಠೇವಣಿ ಮಾಡಿದಾಗ ಅಥವಾ ಹೂಡಿಕೆ ಮಾಡಿದಾಗ ನಿಮ್ಮ ಹಣದ ಬೆಳವಣಿಗೆಯ ಶೇಕಡಾವಾರು ಬಡ್ಡಿದರಗಳನ್ನು ಪ್ರತಿನಿಧಿಸುತ್ತದೆ. ಜನರಲ್ ಉಳಿತಾಯ ಖಾತೆಗಳ ಸಂದರ್ಭದಲ್ಲಿ, ಅನುಕೂಲಕರ ಬಡ್ಡಿದರದೊಂದಿಗೆ ಸರಿಯಾದ ಬ್ಯಾಂಕ್ ಅನ್ನು ಆಯ್ಕೆ ಮಾಡುವುದು ಅತ್ಯಗತ್ಯ. ಕರ್ಣಾಟಕ ಬ್ಯಾಂಕ್ SB ಜನರಲ್ ಉಳಿತಾಯ ಅಕೌಂಟ್ನಲ್ಲಿ ವಾರ್ಷಿಕ 4.5% ಬಡ್ಡಿದರವನ್ನು ನೀಡುತ್ತದೆ. ಇದರರ್ಥ ನಿಮ್ಮ ಉಳಿತಾಯವು ವಾರ್ಷಿಕವಾಗಿ 4.5% ರಷ್ಟು ಹೆಚ್ಚಾಗುತ್ತದೆ, ಇದರಿಂದ ನಿಮಗೆ ಆರ್ಥಿಕ