ಕೆಬಿಎಲ್ ಇನ್ಸ್ಟಾ ನಗದು ಸಾಲ
ಇಂದಿನ ವೇಗದ ಜಗತ್ತಿನಲ್ಲಿ, ಹಣಕಾಸಿನ ಅಗತ್ಯತೆಗಳು ಅನಿರೀಕ್ಷಿತವಾಗಿ ಉದ್ಭವಿಸಬಹುದು. ಈ ಡಿಜಿಟಲ್-ಫಸ್ಟ್ ಸಾಲವು ವೈಯಕ್ತಿಕ ತುರ್ತುಸ್ಥಿತಿ, ಕುಟುಂಬದ ಯಾವುದೇ ಸಂದರ್ಭ ಅಥವಾ ಯಾವುದೇ ಅನಿರೀಕ್ಷಿತ ವೆಚ್ಚಕ್ಕಾಗಿ ಸ್ವಲ್ಪ ಹಣವನ್ನು ಪಡೆಯಲು ತ್ವರಿತ ಮತ್ತು ವಿಶ್ವಾಸಾರ್ಹ ಮಾರ್ಗವಾಗಿದೆ. ಇದು ವ್ಯಕ್ತಿಗಳು, HUF ವ್ಯವಹಾರಗಳು, ಜಂಟಿ ಸಾಲಗಾರರು ಹಾಗೂ ಪಾಲುದಾರಿಕೆ ಸಂಸ್ಥೆಗಳಿಗೆ ಅವಕಾಶ ಕಲ್ಪಿಸುವ ಅರ್ಹತಾ ಮಾನದಂಡಗಳೊಂದಿಗೆ ಸರಳವಾದ, ನೇರವಾದ ಪ್ರಕ್ರಿಯೆಯಾಗಿದೆ. ಮನಸ್ಸಿನ ಶಾಂತಿ ಮತ್ತು ತಕ್ಷಣದ ಹಣಕಾಸಿನ ಜವಾಬ್ದಾರಿಗಳನ್ನು ತೊಂದರೆಯಿಲ್ಲದೆ ಪರಿಹರಿಸುವ ಸ್ವಾತಂತ್ರ್ಯ ನೀಡುವುದನ್ನು ನಾವು ನಂಬುತ್ತೇವೆ. ಕಡಿಮೆ ಓದಿ. Read more
ಈ ಸಾಲ ನಿಮಗಾಗಿ ಏಕೆ
ನಿಮಗೆ ಬೇಕಾದುದನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ
ವ್ಯಕ್ತಿಗಳು, HUF ಗಳು, ಜಂಟಿ ಸಾಲಗಾರರು ಮತ್ತು ಸಂಸ್ಥೆಗಳಿಗೆ ಸುಲಭ ಪ್ರವೇಶ
ಮಾಸಿಕ ಬಡ್ಡಿ ಸೇವೆಯೊಂದಿಗೆ ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ, ವಾರ್ಷಿಕ ಅಥವಾ ಒಟ್ಟು ಮೊತ್ತದಲ್ಲಿ ಪಾವತಿಯನ್ನು ಮಾಡಬಹುದು
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳನ್ನು (NSC), ಕಿಸಾನ್ ವಿಕಾಸ್ ಪತ್ರಗಳನ್ನು (KVP) ಅಥವಾ ಅಂಚೆ ಕಛೇರಿ ಅವಧಿ ಠೇವಣಿಗಳನ್ನು ವಿಶ್ವಾಸಾರ್ಹ ಮೇಲಾಧಾರವಾಗಿ ಬಳಸಿಕೊಳ್ಳಿ
ಅರ್ಹತೆ
- 18 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು
- ಹಿಂದೂ ಅವಿಭಾಜ್ಯ ಕುಟುಂಬದ ವ್ಯಾಪಾರ, ಜಂಟಿ ಸಾಲಗಾರರು ಅಥವಾ ಪಾಲುದಾರಿಕೆ ಸಂಸ್ಥೆಗಳಿಂದ ಅರ್ಜಿಯನ್ನು ಸ್ವೀಕರಿಸಲಾಗುತ್ತದೆ
ಅಗತ್ಯವಿರುವ ದಾಖಲೆಗಳು
- ಆಧಾರ್ ಕಾರ್ಡ್
- PAN ಕಾರ್ಡ್
- KYC ಡಾಕ್ಯುಮೆಂಟ್‌ಗಳ ಸ್ಕ್ಯಾನ್ ಅಥವಾ ಸಾಫ್ಟ್ ಕಾಪಿ
- ಕಳೆದ 7 ತಿಂಗಳ ಬ್ಯಾಂಕ್ ಸ್ಟೇಟ್ ಮೆಂಟ್.
- ವಿಳಾಸ ಪುರಾವೆಯ ಪ್ರತಿ
- ಸಂಬಳ ಖಾತೆಯ ಇಂಟರ್ನೆಟ್ ಬ್ಯಾಂಕಿಂಗ್ ಲಾಗಿನ್ ಕ್ರೆಡೆನ್ಶಿಯಲ್‌ಗಳು
1,2,3 ಹಂತಗಳು ಅಷ್ಟು ಸುಲಭ...
3 ಸರಳ ಹಂತಗಳಲ್ಲಿ ಕೆಬಿಎಲ್ ಇನ್ಸ್ಟಾ ನಗದು ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಿ
ಹಂತ 1
ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ
ನಿಮ್ಮ ಹತ್ತಿರದ ಕರ್ನಾಟಕ ಬ್ಯಾಂಕ್ ಶಾಖೆಗೆ ಹೋಗಿ
ಹಂತ 2
ನಿಮ್ಮ ಮೂಲ ವಿವರಗಳೊಂದಿಗೆ ಪ್ರಾರಂಭಿಸಿ
ನಿಮ್ಮ ಮೂಲ ವಿವರಗಳನ್ನು ಒದಗಿಸಿ ಮತ್ತು ನಿಮ್ಮ ದಾಖಲೆಗಳನ್ನು ಕೈಯಲ್ಲಿಡಿ
ಹಂತ 3
ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ
ನಿಮ್ಮ ಸಾಲವನ್ನು ಮಂಜೂರು ಮಾಡಿದಾಗ ನಮ್ಮ ಶಾಖೆಯ ಅಧಿಕಾರಿಗಳು ನಿಮಗೆ ತಿಳಿಸುತ್ತಾರೆ
ನಿಮ್ಮ ಇತರ ಆಯ್ಕೆಗಳನ್ನು ನೋಡಿ
ಸಾವಿರಾರು ಜನರ ನಂಬಿಕೆಯ ಉತ್ಕೃಷ್ಟ ಆರ್ಥಿಕ ಆಯ್ಕೆ
ಸುಲಭವಾಗಿ ತಿಳಿದುಕೊಳ್ಳುವುದರ ಮೂಲಕ ಸಾಲಗಳನ್ನು ಸರಳಗೊಳಿಸಿಕೊಳ್ಳಿ
ನಿಮಗೆ ಮಾಹಿತಿ ನೀಡುವ ಚುಟುಕಾದ ಸಂಪನ್ಮೂಲಗಳು
ಪ್ರಶ್ನೆಗಳಿವೆಯೇ? ನಮ್ಮ ಬಳಿ ಉತ್ತರಗಳಿವೆ
ನೀವು ಈ ಉಪಕರಣಗಳನ್ನು ಮೇಲಾಧಾರವಾಗಿ ಅಡಮಾನ ಇಟ್ಟಾಗ, ಮರುಪಾವತಿ ಮಾಡದಿದ್ದಲ್ಲಿ ಸಾಲದ ಮೊತ್ತವನ್ನು ಮರಳಿ ಪಡೆಯಲು ಈ ಉಳಿತಾಯ ಪ್ರಮಾಣಪತ್ರಗಳು ಅಥವಾ ಠೇವಣಿಗಳನ್ನು ಬಳಸುವ ಹಕ್ಕನ್ನು ನೀವು ಮೂಲಭೂತವಾಗಿ ಬ್ಯಾಂಕ್‌ಗೆ ನೀಡಿರುತ್ತೀರಿ. ಇವುಗಳು ಸರ್ಕಾರಿ ಬೆಂಬಲಿತ ಭದ್ರತೆಗಳು, ಸಾಲ ಪ್ರಕ್ರಿಯೆಯಲ್ಲಿ ವಿಶ್ವಾಸಾರ್ಹತೆ ಮತ್ತು ನಂಬಿಕೆಯನ್ನು ಖಾತ್ರಿಪಡಿಸುತ್ತದೆ.
ಪಡೆದ ಸಾಲದ ಮರುಪಾವತಿಯ ವಿಧಾನ ನಿಮಗೆ ಯಾವುದು ಪೂರಕವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದರ ಮೇಲೆ ನಿಂತಿದೆ. ನೀವು ಪ್ರತಿ ತಿಂಗಳು ಅಥವಾ ಪ್ರತಿ 3, 6 ಅಥವಾ 12 ತಿಂಗಳಿಗೊಮ್ಮೆ ಸಣ್ಣ ಕಂತುಗಳಂತೆ ಮರುಪಾವತಿ ಮಾಡಬಹುದು. ಅದೇ ರೀತಿಯಾಗಿ ನಿಮಗೆ ಸುಲಭವೆನಿಸಿದಲ್ಲಿ, ಸಾಲದ ಅವಧಿಯು ಕೊನೆಗೊಂಡಾಗ ನೀವು ಸಂಪೂರ್ಣ ಮೊತ್ತವನ್ನು ಒಂದೇ ಬಾರಿಗೆ ಪಾವತಿಸಬಹುದು. ಪ್ರತಿ ತಿಂಗಳು, ನಿಮ್ಮ ಸಾಲದ ಮೇಲೆ ಸೇರಿಸುವ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.ಈ ರೀತಿಯಾಗಿ, ನೀವು ಸಾಮಾನ್ಯ ಸಣ್ಣ ಮರುಪಾವತಿಗಳನ್ನು ಬಯಸುತ್ತೀರಾ ಅಥವಾ ಒಂದೇ ಬಾರಿಗೆ ಪಾವತಿಸುವಿರೋ ಅದು ನಿಮ್ಮ ಆಯ್ಕೆ. ನಿಮ್ಮ ಸಾಲದ ಪಾವತಿಗಳನ್ನು ನೀವು ಉತ್ತಮವಾಗಿ ನಿರ್ವಹಣೆ ಮಾಡಿಕೊಳ್ಳಬಹುದು.
ಮೊದಲನೆಯದಾಗಿ, ಸಾಲಕ್ಕೆ ಅರ್ಜಿ ಸಲ್ಲಿಸುವ ವ್ಯಕ್ತಿಗಳು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು. ಸಾಲವು ವೈಯಕ್ತಿಕ ಸಾಲಗಾರರಿಗೆ ಸೀಮಿತವಾಗಿಲ್ಲ; ಹಿಂದೂ ಅವಿಭಾಜ್ಯ ಕುಟುಂಬ (HUF) ವ್ಯವಹಾರಗಳು, ಜಂಟಿ ಸಾಲಗಾರರು ಮತ್ತು ಪಾಲುದಾರಿಕೆ ಸಂಸ್ಥೆಗಳು ಸಹ ಅರ್ಹವಾಗಿವೆ. ಇದು ಸಂಬಳ ಪಡೆಯುವ ವೃತ್ತಿಪರರಿಂದ ಹಿಡಿದು ಕುಟುಂಬದ ವ್ಯವಹಾರಗಳು ಅಥವಾ ಪಾಲುದಾರಿಕೆಗಳನ್ನು ನಿರ್ವಹಿಸುವವರವರೆಗೆ ವ್ಯಾಪಕ ಶ್ರೇಣಿಯ ಅರ್ಜಿದಾರರಿಗೆ ಸಾಲವನ್ನು ಪಡೆಯಲು ಆರ್ಹರಾಗುವಂತೆ ಮಾಡುತ್ತದೆ.
ನಾವು ಸ್ಥಿರ ಸಾಲಗಳಿಗೆ 60 ತಿಂಗಳ ಗರಿಷ್ಠ ಅವಧಿಯನ್ನು ಮತ್ತು OD (ಓವರ್‌ಡ್ರಾಫ್ಟ್) ಸೌಲಭ್ಯಕ್ಕಾಗಿ 24 ತಿಂಗಳ ಅವಧಿಯನ್ನು ನೀಡುತ್ತೇವೆ. ಸಾಲ ಮರುಪಾವತಿಯಲ್ಲಿ ಹೊಂದಾಣಿಕೆಯನ್ನು ಒದಗಿಸುತ್ತೇವೆ. ಸಾಲದ ನಿಯಮಗಳ ಪ್ರಕಾರ ಮಾಸಿಕ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.
ಅರ್ಹತೆಯು ನಿಮ್ಮ ಆದಾಯ, ಉದ್ಯೋಗ ಸ್ಥಿತಿ, ಕ್ರೆಡಿಟ್ ಸ್ಕೋರ್ ಮತ್ತು ವಯಸ್ಸಿನಂತಹ ಅಂಶಗಳನ್ನು ಅವಲಂಬಿಸಿರುತ್ತದೆ. ಸಾಲವನ್ನು ಮರುಪಾವತಿ ಮಾಡುವ ನಿಮ್ಮ ಸಾಮರ್ಥ್ಯವನ್ನು ನಿರ್ಣಯಿಸಲು ಈ ಅಂಶಗಳು ನಮಗೆ ಸಹಾಯ ಮಾಡುತ್ತವೆ.
ಕರ್ಣಾಟಕ ಬ್ಯಾಂಕ್‌ನ ಕೆಬಿಎಲ್ ಇನ್ಸ್ಟಾ ನಗದು ಸಾಲವು ಜೀವನದಲ್ಲಿ ಎದುರಿಸಬಹುದಾದ ಆನಿರೀಕ್ಷಿತ ಕ್ಷಣಗಳಿಗಾಗಿ ರಚಿಸಲಾದ ಡಿಜಿಟಲ್-ಫಸ್ಟ್ ಹಣಕಾಸು ಪರಿಹಾರವಾಗಿದೆ. ಇದು ವೈಯಕ್ತಿಕ ತುರ್ತುಸ್ಥಿತಿ, ಕುಟುಂಬದ ಯಾವುದೇ ಸಂದರ್ಭ ಅಥವಾ ಯಾವುದೇ ಅನಿರೀಕ್ಷಿತ ವೆಚ್ಚಕ್ಕಾಗಿ, ಈ ಸಾಲವು ನಿಮಗೆ ಅಗತ್ಯವಿರುವ ಹಣವನ್ನು ಪಡೆಯಲು ತ್ವರಿತ ಮತ್ತು ವಿಶ್ವಾಸಾರ್ಹ ಮಾರ್ಗವನ್ನು ನೀಡುತ್ತದೆ. ₹50 ಲಕ್ಷದವರೆಗಿನ ಸಾಲದ ಮೊತ್ತಗಳು ಸ್ಪರ್ಧಾತ್ಮಕ ಬಡ್ಡಿದರವಾದ ವರ್ಷಕ್ಕೆ 13% ದಿಂದ ಪ್ರಾರಂಭವಾಗುವುದಿದ್ದು, ನಿಮಗೆ ಅಗತ್ಯವಿರುವಾಗ ನಿಮಗೆ ಹಣಕಾಸಿನ ಬೆಂಬಲವನ್ನು ಪಡೆಯುತ್ತೀರಿ ಎನ್ನುವುದನ್ನು ನಾವು ಖಚಿತಪಡಿಸುತ್ತೇವೆ.ನಮ್ಮ ಸಾಲವನ್ನು ನಿಮಗೆ ಹೊಂದುವಂತೆವಿನ್ಯಾಸಗೊಳಿಸಲಾಗಿದೆ. 24 ರಿಂದ 60 ತಿಂಗಳವರೆಗೆ ಮರುಪಾವತಿ ಅವಧಿಯನ್ನು ನೀಡುತ್ತದೆ ಹಾಗೂ ವ್ಯಕ್ತಿಗಳು, HUF ಗಳು, ಜಂಟಿ ಸಾಲಗಾರರು ಮತ್ತು ಸಂಸ್ಥೆಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಸಾಲಗಾರರ ಆವಶ್ಯಕತೆಗಳನ್ನು ಪೂರೈಸುತ್ತದೆ.
ಬಿಎಲ್ ಎಕ್ಸ್ಪ್ರೆಸ್ ನಗದು ಸಾಲವು ಆನ್‌ಲೈನ್‌ನಲ್ಲಿ ತ್ವರಿತ ವೈಯಕ್ತಿಕ ಸಾಲವನ್ನು ಬಯಸುವ ಸಂಬಳ ಪಡೆಯುವ ವೃತ್ತಿಪರರಿಗೆ ಸಾಲವನ್ನು ಒದಗಿಸುತ್ತದೆ. ಈ ಸೌಲಭ್ಯದ ಅರ್ಜಿಯೊಂದಿಗೆ ಬೇಕಾದಾಗ ಅರ್ಜಿಯನ್ನು ಸಲ್ಲಿಸಿ ಮತ್ತು ಹಣವನ್ನು ತ್ವರಿತವಾಗಿ ಸ್ವೀಕರಿಸಿ. ಸಂಬಳ ಪಡೆಯುವ ಗ್ರಾಹಕರಿಗಾಗಿ ನಮ್ಮ ವೈಯಕ್ತಿಕ ಸಾಲವು ತಕ್ಷಣದ ಹಣಕಾಸಿನ ಅಗತ್ಯತೆಗಳನ್ನು ಪೂರೈಸುತ್ತದೆ. ನಿಮಗೆ ಆನ್‌ಲೈನ್‌ನಲ್ಲಿ ಸುಲಭವಾಗಿ ಸಂಬಳ ಸಾಲಕ್ಕೆ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುತ್ತದೆ. ತಕ್ಷಣವೇ ತ್ವರಿತ ನಗದು ಸಾಲಗಳಿಗೆ ಪ್ರವೇಶವನ್ನು ಪಡೆಯಿರಿ. ನಮ್ಮ ಸುವ್ಯವಸ್ಥಿತ ಪ್ರಕ್ರಿಯೆಯು ನಿಮಗೆ ಅಗತ್ಯವಿರುವಾಗ ಇನ್‌ಸ್ಟಾ ನಗದು ಹಣ ಪಡೆಯುವುದನ್ನು ಖಚಿತಪಡಿಸುತ್ತದೆ. ಇದು ದೀರ್ಘಾವಧಿಯ ಕಾಯುವಿಕೆಗಳಿಲ್ಲದ ನಿಮ್ಮ ತಕ್ಷಣದ ಆರ್ಥಿಕ ಅವಶ್ಯಕತೆಗಳಿಗಾಗಿ ರೂಪಿಸಿದ ನಗದು ಸಾಲಗಳು..
ಕೆಬಿಎಲ್ ಇನ್ಸ್ಟಾ ನಗದು ಸಾಲವು ವರ್ಷಕ್ಕೆ 13% . ರಿಂದ ಪ್ರಾರಂಭವಾಗುವ ಬಡ್ಡಿದರದೊಂದಿಗೆ ಇದೆ. ಇದು ನಿಮ್ಮ ತಕ್ಷಣದ ಹಣಕಾಸಿನ ಅಗತ್ಯತೆಗಳಿಗೆ ಕೈಗೆಟುಕುವ ಪರಿಹಾರವನ್ನು ನೀಡುತ್ತದೆ. ಇಲ್ಲಿ ಪಾವತಿಸಿದಂತೆ ಇಳಿಮುಖವಾಗುತ್ತಿರುವ ಬಾಕಿಯ ಮೇಲೆ ಬಡ್ಡಿಯನ್ನು ಲೆಕ್ಕಹಾಕಲಾಗುತ್ತದೆ. ಈ ವಿಧಾನವು ನಿಮ್ಮ ಸಾಲವನ್ನು ಕೈಗೆಟುಕುವಂತೆ ಮಾಡುತ್ತದೆ ಆದರೆ ನಿಮ್ಮ ಹಣಕಾಸಿನ ನೆಮ್ಮದಿಯೊಂದಿಗೆ ಯಾವುದೇ ಗುಪ್ತ ವೆಚ್ಚಗಳಿಲ್ಲದೆ ನಿಮ್ಮ ಹಣಕಾಸನ್ನು ಪರಿಣಾಮಕಾರಿಯಾಗಿ ಯೋಜಿಸಲು ಮತ್ತು ನಿರ್ವಹಿಸಲು ನಿಮಗೆ ಅನುವು ಮಾಡಿಕೊಡುತ್ತದೆ.
ಉತ್ತಮ ಸಾಲದ ನಿಯಮಗಳಿಗೆ ಅರ್ಹತೆ ಪಡೆಯುವ ಸಲುವಾಗಿ ಆರೋಗ್ಯಕರ ಕ್ರೆಡಿಟ್ ಸ್ಕೋರ್ ಅನ್ನು ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ. ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಿಕೊಲ್ಲಿ ಹಾಗೂ ನೀವು ಮರುಪಾವತಿಸಲು ಸಾಧ್ಯವಾಗುವಷ್ಟನ್ನು ಮಾತ್ರವೇ ಸಾಲವಾಗಿ ಪಡೆಯಿರಿ. ನಿಮ್ಮ ಮರುಪಾವತಿ ಸಾಮರ್ಥ್ಯದ ಆಧಾರದ ಮೇಲೆ ನಿಮ್ಮ ಸಾಲದ ಅವಧಿ ಮತ್ತು EMI ಗಳನ್ನು ಯೋಜಿಸಿಕೊಳ್ಳಿ. ವಿಶೇಷವಾಗಿ ಶುಲ್ಕಗಳು ಮತ್ತು ಪೆನಾಲ್ಟಿಗಳಿಗೆ ಸಂಬಂಧಿಸಿದಂತೆ ಸಾಲದ ಒಪ್ಪಂದದಲ್ಲಿ ನೀಡಿರುವ ಮುದ್ರಣವನ್ನು ನಿರ್ಲಕ್ಷಿಸಬೇಡಿ. ಹಠಾತ್ ಖರೀದಿಗಳು ಅಥವಾ ಹೆಚ್ಚಿನ ಅಪಾಯದ ಹೂಡಿಕೆಗಳಿಗಾಗಿ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿಕೊಳ್ಳಿ.