ನಮ್ಮ ಸಾಲಗಳು ಯಾಕಾಗಿ ವಿಶಿಷ್ಟವಾಗಿ ತೋರುತ್ತವೆ.
ಹೆಮ್ಮೆಯ ಜೀವನವನ್ನು ಸಾಗಿಸಲು ನೆರವಾಗುತ್ತದೆ
ನಿಮ್ಮ ಅಗತ್ಯತೆಗಳಿಗೆ ವಿನ್ಯಾಸಗೊಳಿಸಿದ ಸಾಲ ಸೌಲಭ್ಯಗಳು
ನಿಮಗಾಗಿ 100 ವರ್ಷಗಳ ಸ್ವಚ್ಛ ಮತ್ತು ವಿಶ್ವಾಸಾರ್ಹ ಬ್ಯಾಂಕಿಂಗ್
ನಿಮ್ಮ ಪ್ರತಿ ಹೆಜ್ಜೆಯ ಜತೆಗೆ ನಮ್ಮ ಅತ್ಯುತ್ತಮ ತಂಡ
ಸದಾಕಾಲ ನಿಮ್ಮೊಂದಿಗೆ
ಸಮರ್ಪಿತ KBL ತಜ್ಞರಿಂದ 24x7 ವೈಯಕ್ತಿಕ ನೆರವು
ಪ್ರಶ್ನೆಗಳಿವೆ? ನಮ್ಮಲ್ಲಿ ಉತ್ತರಗಳಿವೆ
FAQ ಗಳುನಮ್ಮ ಸಾಲ ಸೌಲಭ್ಯಗಳು ವೈಯಕ್ತಿಕ ಮತ್ತು ವೃತ್ತಿಪರ ಗುರಿಗಳಿಗೆ ಅನುಕೂಲವನ್ನು ಒದಗಿಸುತ್ತವೆ, ಉದಾಹರಣೆಗೆ ಮನೆ ಸಾಲ, ಶೈಕ್ಷಣಿಕ ಸಾಲ, ಉದ್ಯಮ ಸಾಲ ಮತ್ತು ಇತರೆ. ಇವು ಈಗ ಗಮನಾರ್ಹ ಖರೀದಿಗಳು ಅಥವಾ ಹೂಡಿಕೆಗಳನ್ನು ಮಾಡಲು ನಮಗೆ ವಿವಿಧ ಅವಕಾಶಗಳನ್ನು ನೀಡುತ್ತವೆ ಮತ್ತು ಅವುಗಳನ್ನು ಕಾಲಾನಂತರದಲ್ಲಿ ಪಾವತಿಸುವ ಸ್ವಾತಂತ್ರ್ಯವನ್ನು ಒದಗಿಸುತ್ತವೆ. ವೈಯಕ್ತಿಕ, ಶೈಕ್ಷಣಿಕ, ಗೃಹ ಹಾಗೂ ವಾಹನ ಸಾಲಗಳನ್ನು ಒಳಗೊಂಡಂತೆ ಲಭ್ಯವಿರುವ ಸಾಲದ ಉತ್ಪನ್ನಗಳ ವೈವಿಧ್ಯಮಯ ಶ್ರೇಣಿಯೊಂದಿಗೆ, ಪ್ರತಿಯೊಂದು ಹಣಕಾಸಿನ ಅಗತ್ಯಕ್ಕೂ ನಮ್ಮಲ್ಲಿ ಪರಿಹಾರವಿದೆ. ಸಾಲಗಳು ಕ್ರೆಡಿಟ್ ಇತಿಹಾಸವನ್ನು ನಿರ್ಮಿಸಲು ಸಹಾಯ ಮಾಡುತ್ತವೆ, ಇದು ಭವಿಷ್ಯದಲ್ಲಿ ಹಣಕಾಸಿನ ವ್ಯವಹಾರಗಳಿಗೆ ನಿರ್ಣಾಯಕವಾಗುತ್ತದೆ.
ಸಾಲದ ವಿಧ, ಮೊತ್ತ, ಅವಧಿಯನ್ನು ಮತ್ತು ಗ್ರಾಹಕರ ಪ್ರೊಫೈಲ್ ಆಧರಿಸಿ ಬಡ್ಡಿದರದ ನಿರ್ಣಯವಾಗುತ್ತದೆ. ಬಡ್ಡಿದರವು ಭವಿಷ್ಯದ ಸ್ಥಿರವಾಗಿರಲೂಬಹುದು, ಮಾರುಕಟ್ಟೆಯ ಏರಿಳಿತಗಳನ್ನು ಹೊಂದಿಕೊಂಡು ಬದಲಾಗುವಂಥದ್ದೂ ಆಗಿರಬಹುದು. ಸಾಮಾನ್ಯವಾಗಿ ಬಡ್ಡಿಯನ್ನು ಕಡಿಮೆ ಆಗುತ್ತಿರುವ ಬಾಕಿ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ, ಅಂದರೆ ಅಸಲು ಮೊತ್ತವು ಕಡಿಮೆಯಾದಂತೆ, ವಿಧಿಸಲಾಗುವ ಬಡ್ಡಿಯೂ ಕೂಡ ಕಡಿಮೆಯಾಗುತ್ತದೆ. APR (ವಾರ್ಷಿಕ ಶೇಕಡಾವಾರು ದರ), ಸಂಸ್ಕರಣಾ ಶುಲ್ಕಗಳು ಮತ್ತು ಯಾವುದೇ ಇತರ ಶುಲ್ಕಗಳು ಸೇರಿದಂತೆ ಸಾಲದ ನಿಯಮಗಳನ್ನು ಅರ್ಥಮಾಡಿಕೊಳ್ಳುವುದು, ಸಾಲದ ವೆಚ್ಚದ ಸ್ಪಷ್ಟ ಚಿತ್ರಣವನ್ನು ತಿಳಿದುಕೊಳ್ಳಲು ನಿರ್ಣಾಯಕವಾಗುತ್ತದೆ.
ನಿಮ್ಮ ಆರ್ಥಿಕ ಅಗತ್ಯಗಳನ್ನು ಆಧರಿಸಿಕೊಂಡು ಸೂಕ್ತ ಸಾಲಸೌಲಭ್ಯದ ಆಯ್ಕೆಗಾಗಿ ಕೂಲಂಕಷವಾಗಿ ವಿವಿಧ ಸಾಲಗಳನ್ನು ಹೋಲಿಕೆ ಮಾಡಿ ಆಯ್ಕೆಮಾಡಿಕೊಳ್ಳಿ . ಸಾಲ ಒಪ್ಪಂದವನ್ನು ಯಾವಾಗಲೂ ಎಚ್ಚರಿಕೆಯಿಂದ ಓದಿ, ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ. ಸಕಾಲಿಕ ಮರುಪಾವತಿ ಆಗುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಹಣಕಾಸಿನ ಯೋಜನೆಯನ್ನು ಸರಿಯಾಗಿ ಮಾಡಿಕೊಳ್ಳಿ. ಏಕೆಂದರೆ ತಡವಾದ ಪಾವತಿಗಳು ಹೆಚ್ಚುವರಿ ಶುಲ್ಕಗಳನ್ನು ಹೇರುವುದಕ್ಕೆ ಕಾರಣವಾಗಬಹುದು ಹಾಗೂ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ವಿರುದ್ಧವಾದ ಪರಿಣಾಮ ಬೀರಬಹುದು. ನಿಮಗೆ ಅಗತ್ಯವಿರುವುದಕ್ಕಿಂತ ಅಥವಾ ಆರಾಮವಾಗಿ ಮರುಪಾವತಿ ಮಾಡಬಹುದಾದಕ್ಕಿಂತ ಹೆಚ್ಚಿನ ಸಾಲವನ್ನು ತೆಗೆದುಕೊಳ್ಳಬೇಡಿ. ಸಾಲದ ಋಣಕ್ಕೆ ಕಾರಣವಾಗುವ ಬಹು ಸಾಲಗಳನ್ನು ತಪ್ಪಿಸಿ. ಸಾಲದ ಅವಧಿಯಲ್ಲಿ ಬಡ್ಡಿ ದರಗಳು ಅಥವಾ ನಿಯಮಗಳಲ್ಲಿನ ಯಾವುದೇ ಬದಲಾವಣೆಗಳ ಕುರಿತು ಮಾಹಿತಿಯನ್ನು ಪಡೆದುಕೊಳ್ಳುತ್ತಿರಿ.