ನಿಮ್ಮ ವಾಹನ ನಮ್ಮ ಆದ್ಯತೆ
ನೀವು ಹೊಸ ಬ್ರಾಂಡ್‌ನ ಕಾರು ಅಥವಾ ದ್ವಿಚಕ್ರ ಮೋಟಾರ್ ವಾಹನ ಖರೀದಿಸಲು ಇಚ್ಛಿಸಿದರೆ, ನಮ್ಮ ಸಾಲ ಸೌಲಭ್ಯ ನಿಮ್ಮ ಆಕಾಂಕ್ಷೆಯನ್ನು ಈಡೇರಿಸುತ್ತದೆ. ನೀವು ವಾಹನದ ಮಾಲಿಕತ್ವವನ್ನು ಹೊಂದುವುದರಲ್ಲಿನ ಸಂತೋಷ ಮತ್ತು ಪ್ರಯಾಣದ ಸ್ವಾತಂತ್ರ್ಯದ ಸುಖ ನಮಗೆ ಅರ್ಥವಾಗುತ್ತದೆ. ಆಕರ್ಷಕ ನಿಯಮಗಳು, ಕನಿಷ್ಠ ದಾಖಲೆಗಳು, ತ್ವರಿತ ಪ್ರಕ್ರಿಯೆ ಹಾಗೂ ಡಿಜಿಟಲ್-ಫಸ್ಟ್ ವಿಧಾನದಲ್ಲಿ ಉತ್ತಮ ಸಾಲ ಸೌಲಭ್ಯವನ್ನು ನೀಡಲು ನಾವು ಬದ್ಧರಾಗಿದ್ದೇವೆ ಮತ್ತಷ್ಟು ಓದು ಕಡಿಮೆ ಓದಿ
ವಿಷಯಗಳನ್ನು ಸರಳ ಮತ್ತು ನೇರಗೊಳಿಸಿ
ಜಾಣತನದ ಖರ್ಚು ಮತ್ತು ಉಳಿತಾಯಕ್ಕಾಗಿ ಸ್ಮಾರ್ಟ್ ಕ್ಯಾಲ್ಕುಲೇಟರ್
ಕಾರ್ ಲೋನ್ ಕ್ಯಾಲ್ಕುಲೇಟರ್
ನೀವು ಪಾವತಿಸುವಿರಿ
₹13,800/ತಿಂಗಳುಗಳು
ನಮ್ಮ ವಾಹನ ಸಾಲಗಳನ್ನು ಏಕೆ ಆಯ್ಕೆಮಾಡಬೇಕು
ನೀವು ಹೋಗಬೇಕಾದ ಸ್ಥಳಕ್ಕೆ ನಿಮ್ಮನ್ನು ಕರೆದೊಯ್ಯುವುದು
ಆನ್-ರೋಡ್ ಬೆಲೆಯ ಮೇಲೆ ಶೇಕಡಾ 90% ಹಣಕಾಸು ಸಹಾಯ ಪಡೆಯಿರಿ
ತ್ವರಿತ ಮತ್ತು ಪರಿಣಾಮಕಾರಿ ಸಾಲ ಅನುಮೋದನೆ ಪ್ರಕ್ರಿಯೆಯನ್ನು ಪಡೆದುಕೊಳ್ಳಿ
ನಿಮಗೆ ಸೂಕ್ತವಾದ ವಾಹನವನ್ನು ಆಯ್ಕೆಮಾಡಿ
ನಮ್ಮ ವಾಹನ ಸಾಲಗಳಿಗೆ ಯಾರು ಅರ್ಜಿಯನ್ನು ಸಲ್ಲಿಸಬಹುದು
- ಭಾರತದ ನಿವಾಸಿಯಾಗಿರುವ ವ್ಯಕ್ತಿಗಳು
- ಕನಿಷ್ಠ 18 ವರ್ಷ ವಯಸ್ಸಿನ ವ್ಯಕ್ತಿಗಳು
- ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ಅನಿವಾಸಿ ಭಾರತೀಯರು
- ವೇತನಭೋಗಿ ವ್ಯಕ್ತಿ: ಮಾಸಿಕ ವೇತನ ₹ 10,000
- ಉದ್ಯಮಿಗಳು ಮತ್ತುಸ್ವಯಂ ಉದ್ಯೋ ಗಿ: ವಾರ್ಷಿಕ ಆದಾಯ ₹120,000 ಆದಾಯ
ನಿಮ್ಮೊಡನೆ ಬ್ಯಾಂಕಿಂಗ್
ಸದಾಕಾಲ ನಿಮ್ಮೊಂದಿಗೆ
ಸಮರ್ಪಿತ KBL ತಜ್ಞರಿಂದ 24x7 ವೈಯಕ್ತಿಕ ನೆರವು
ನಂಬಿಕೆ, ಪರಿಣತಿ ಮತ್ತು ಕಾಳಜಿಯೊಂದಿಗೆ ಬ್ಯಾಂಕಿಂಗ್
ಕೆಬಿಎಲ್ ಕುಟುಂಬವು ಪ್ರತಿದಿನ ವಿಸ್ತಾರಗೊಳ್ಳುತ್ತಿದೆ
ಪ್ರಶ್ನೆಗಳಿವೆಯೇ? ನಮ್ಮ ಬಳಿ ಉತ್ತರಗಳಿವೆ
ನಾವು ಐದು ವರ್ಷಗಳನ್ನು ಮೀರುವ ಸೆಕೆಂಡ್-ಹ್ಯಾಂಡ್ ಕಾರುಗಳಿಗಾಗಿ ಸ್ಮಾರ್ಟ್ ವಾಹನ ಸಾಲವನ್ನು ನೀಡುತ್ತೇವೆ
ಹೊಸ ವಾಹನಗಳಿಗೆ 84 ತಿಂಗಳವರೆಗೆ ಮತ್ತು ಸೆಕೆಂಡ್ ಹ್ಯಾಂಡ್ ವಾಹನಗಳಿಗೆ 34 ತಿಂಗಳವರೆಗೆ ಸಾಲದ ಅವಧಿಯನ್ನು ವಿಸ್ತರಿಸಬಹುದು. ಇನ್ನಷ್ಟು ತಿಳಿದುಕೊಳ್ಳಲು ನಮ್ಮ ಪಟ್ಟಿಮಾಡಿದ ಸಾಲಗಳನ್ನು ಪರಿಶೀಲಿಸಿ.
ಹೌದು, ಎನ್‌ಆರ್‌ಐಗಳು ಕರ್ಣಾಟಕ ಬ್ಯಾಂಕ್‌ನಲ್ಲಿ ವಾಹನ ಸಾಲಕ್ಕೆ ಅರ್ಹರಾಗಿರುತ್ತಾರೆ. NRI ಬ್ಯಾಂಕಿಂಗ್ ಸೇವೆಗಳ ಮೂಲಕ ಕಾರು ಅಥವಾ ಸ್ಕೂಟರ್ ಖರೀದಿಸಲು ಆಸಕ್ತಿ ಹೊಂದಿರುವವರಿಗೆ ನಾವು ಸೂಕ್ತವಾದ ಸಾಲಗಳನ್ನು ನೀಡುತ್ತೇವೆ.
ಕರ್ಣಾಟಕ ಬ್ಯಾಂಕ್ ಮೂಲಕ ಹಣಕಾಸು ಒದಗಿಸುವ ವಾಹನಗಳಿಗೆ ಸಾಮಾನ್ಯವಾಗಿ ಸಮಗ್ರ ವಿಮೆಯು ಕಡ್ಡಾಯವಾಗಿರುತ್ತದೆ.
ಹೌದು, ನಿಮ್ಮ ಸಾಲವನ್ನು ನೀವು ಅವಧಿಪೂರ್ವ ಪಾವತಿ ಮಾಡಬಹುದು. ಅನ್ವಯಿಸುವ ಶುಲ್ಕಗಳು ಮತ್ತು ಷರತ್ತುಗಳಿಗಾಗಿ, ಅರ್ಜಿ ಸಲ್ಲಿಸುವಾಗ ನಿರ್ದಿಷ್ಟ ಸಾಲದ ಬಗ್ಗೆ ನೀಡಿದ ನಿಖರವಾದ ನಿಯಮಗಳು ಮತ್ತು ಷರತ್ತುಗಳಿಗಾಗಿ ದಯವಿಟ್ಟು ನಿಮ್ಮ ಸಾಲದ ಒಪ್ಪಂದವನ್ನು ಅಂಗಿಕರಿಸಿ.
ನಮ್ಮ ವಾಹನಸಾಲ ಸೌಲಭ್ಯದೊಂದಿಗೆ ನಿಮ್ಮ ಕನಸನ್ನು ನನಸಾಗಿಸಿ. ಅದಕ್ಕಾಗಿಯೇ ನಾವು ನಿಮಗೆ ನೀಡುತ್ತೇವೆ ಸ್ಪರ್ಧಾತ್ಮಕ ಬಡ್ಡಿದರ. ಸಾಲ ಪಡೆಯಲು ಬೇಕಾದ ಅರ್ಹತೆಯನ್ನು ನೀವು ಪರಿಶೀಲಿಸಿ ಅನಂತರ ಸಾಲ ಸೌಲಭ್ಯ ಪಡೆಯುವತ್ತ ಹೆಜ್ಜೆಇರಿಸಿ.
ವಾಹನದ ಸಾಲಗಳ ಮೇಲಿನ ಬಡ್ಡಿ ದರಗಳು ಸ್ಥಿರವಾಗಿರಬಹುದು ಅಥವಾ ಫ್ಲೋಟಿಂಗ್ ಇರಬಹುದು ಮತ್ತು ವಾಹನದ ಮಾದರಿ, ಸಾಲದ ಅವಧಿ ಹಾಗೂ ನಿಮ್ಮ ಕ್ರೆಡಿಟ್ ಇತಿಹಾಸದಂತಹ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಸಾಲಕ್ಕಾಗಿ EMI (ಈಕ್ವೇಟೆಡ್ ಮಂತ್ಲೀ ಇನ್ಸ್ಟಾಲ್ಮೆಂಟ್) ಅಸಲು ಮತ್ತು ಬಡ್ಡಿಯ ಅಂಶಗಳನ್ನು ಒಳಗೊಂಡಿರುತ್ತದೆ ಮತ್ತು ನೀವು ಮರುಪಾವತಿ ಮಾಡುವಾಗ, ಬಡ್ಡಿಯನ್ನು ಕಡಿಮೆಯಾಗುವ ಬಾಕಿಯ ಮೇಲೆ ಲೆಕ್ಕಹಾಕಲಾಗುತ್ತದೆ. ವಾಹನ ಸಾಲವನ್ನು ಪರಿಗಣಿಸುವಾಗ, ಸಾಲದ ಬಡ್ಡಿ, ವಿಮೆ, ನಿರ್ವಹಣೆ ಮತ್ತು ಇಂಧನ ವೆಚ್ಚಗಳು ಸೇರಿದಂತೆ ಮಾಲೀಕತ್ವದ ಒಟ್ಟು ವೆಚ್ಚವನ್ನು ನೋಡುವುದು ಮುಖ್ಯವಾಗುತ್ತದೆ. ಸಾಲದ ಅವಧಿ ಮತ್ತು EMI ನಿಮ್ಮ ಮಾಸಿಕ ಬಜೆಟ್ ಅನ್ನು ಕಡಿಮೆಗೊಳಿಸದೆಯೇ ನಿಮ್ಮ ಹಣಕಾಸಿನ ಸಾಮರ್ಥ್ಯದೊಂದಿಗೆ ಹೊಂದಿಕೆಯಾಗಬೇಕು..
ಉತ್ತಮ ಬಡ್ಡಿ ದರ ಮತ್ತು ನಿಯಮಗಳನ್ನು ಸುರಕ್ಷಿತವಾಗಿರಿಸಿಕೊಳ್ಳಲು ಶಾಪಿಂಗ್ ಮಾಡಿ ಮತ್ತು ಸಾಲ ನೀಡುವವರೊಂದಿಗೆ ಮಾತುಕತೆ ನಡೆಸಿ. ಸಾಲದ ಮೊತ್ತ ಮತ್ತು ಬಡ್ಡಿ ಹೊರೆಯನ್ನು ಕಡಿಮೆ ಮಾದಿಕೊಳ್ಳಲು ತಕ್ಷಣವೇ ನೀಡಬೇಕಾದ ಮೊತ್ತವನ್ನು ಗಣನೀಯ ಪ್ರಮಾಣದಲ್ಲಿ ಮಾಡುವುದನ್ನು ಪರಿಗಣಿಸಿ. ಉತ್ತಮ ಕ್ರೆಡಿಟ್ ಸ್ಕೋರ್‌ನ ಪ್ರಾಮುಖ್ಯತೆಯನ್ನು ನಿರ್ಲಕ್ಷಿಸಬೇಡಿ, ಏಕೆಂದರೆ ಇದು ನಿಮಗೆ ನೀಡುವ ಸಾಲದ ನಿಯಮಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಪೆನಾಲ್ಟಿಗಳನ್ನು ತಪ್ಪಿಸಲು ಮತ್ತು ನಿಮ್ಮ ಕ್ರೆಡಿಟ್ ಸ್ಕೋರಿಂಗ್ ಮೇಲೆ ನಕಾರಾತ್ಮಕ ದಾಖಲೆ ತಪ್ಪಿಸಲು ಸಮಯೋಚಿತ ಮರುಪಾವತಿಗಳನ್ನು ಖಚಿತಪಡಿಸಿಕೊಳ್ಳಿ.