ಸೌಲಭ್ಯ ಠೇವಣಿ

ಸೌಲಭ್ಯ ಠೇವಣಿ ಯೋಜನೆಯ ಪ್ರಯೋಜನಗಳು: ಒಪ್ಪಂದದ ಪ್ರಕಾರ ಬಡ್ಡಿಗಳಿಸುತ್ತಾ ಅಗತ್ಯವಾದಲ್ಲಿ ಸುಲಭವಾಗಿ ಹೂಡಿಕೆಯನ್ನು ಹಿಂಪಡೆಯಬಹುದು. ಪ್ರತಿ 30 ರಿಂದ 46 ದಿನಗಳಿಗೊಮ್ಮೆ ಬಡ್ಡಿಗಳಿಸುವ ಅಲ್ಪಾವಧಿ ನವೀಕರಣದ ಯೋಜನೆ ಅಥವಾ ತ್ರೈಮಾಸಿಕ ಚಕ್ರ ಬಡ್ಡಿಯೊಂದಿಗೆ ದೀರ್ಘಾವಧಿಗೆ ಗಳಿಸುವ ಯೋಜನೆಯನ್ನು ಆಯ್ಕೆಮಾಡಿ. ಸೌಲಭ್ಯ ಫ್ಲೆಕ್ಸಿ ಠೇವಣಿ ಯೋಜನೆ ನಿಮ್ಮ ನಂಬಿಕೆಯ ಸಾಥಿ. ನಿಮ್ಮ ಹಣವನ್ನು ಸುರಕ್ಷಿತವಾಗಿರಿಸ್ ವೃದ್ಧಿಸುತ್ತಾ ಹೋಗುತ್ತದೆ.ಮತ್ತಷ್ಟು ಓದು ಕಡಿಮೆ ಓದಿ

ನಿಮಗಾಗಿ ಈ ಠೇವಣಿ ಯಾಕೆ

ನಮ್ಮ ವಿವಿಧ ಠೇವಣಿಗಳಿಂದ : ನಿಮ್ಮ ಹಣದ ವೃದ್ಧಿ ಮತ್ತು ಬದುಕಿಗೆ ಭದ್ರತೆ

ರೂಪಾಯಿ ಒಂದು ಸಾವಿರದ ಯುನಿಟ್ ಗಳಲ್ಲಿ ಹಣವನ್ನು ಹಿಂಪಡೆಯಿರಿ; ಸುಲಭವಾಗಿ

ಅಲ್ಪಾವಧಿಯ ನವೀಕರಣದಿಂದ ತ್ವರಿತ ಲಾಭ; ದೀರ್ಘಾವಧಿಯ ಠೇವಣಿಗಳಿಂದ ಅಧಿಕ ಲಾಭ

ಠೇವಣಿ ಅಥವಾ ನವೀಕರಣದ ಸಮಯದಲ್ಲಿ ಊಹಿಸಬಹುದಾದ ಆದಾಯದೊಂದಿಗೆ ಬಡ್ಡಿದರಗಳು ಅನ್ವಯಿಸುತ್ತವೆ ಠೇವಣಿಯ ಮೇಲೆ ಹೂಡಿಕೆ ಮತ್ತು ನವೀಕರಣದ ಸಂದರ್ಭ ಭವಿಷ್ಯದಲ್ಲಿ ಇದು ಕೊಡುವ ಆದಾಯವನ್ನು ಊಹಿಸಬಹುದು.

ಶತಮಾನದ ನಂಬಿಕೆ ನಿಮ್ಮ ಬೆರಳತುದಿಯಲ್ಲಿ

ಪ್ರಯಾಣ, ಶಾಪಿಂಗ್ ಅಥವಾ ಬಿಲ್- ಎಲ್ಲವೂ ಒಂದೇ ಆಪ್ನಲ್ಲಿ ಪಾವತಿಸಿ. ಇಂದೇ ಕೆಬಿಎಲ್ ಮೊಬಾಯ್ಲ್ ಪ್ಲಸ್ ಉಪಯೋಗಿಸಿ

ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ ನಲ್ಲಿ ಲಭ್ಯ

sb
ನಿಮಗಾಗಿ ಯಾವ ಉತ್ಪನ್ನ ಸೂಕ್ತವೆಂದು ಖಚಿತವಾಗಿಲ್ಲವೇ?

ನಿಮಗಾಗಿ ಯಾವ ಉತ್ಪನ್ನ ಸೂಕ್ತವೆಂದು ಖಚಿತವಾಗಿಲ್ಲವೇ

  • ಯಾವುದೇ ಸ್ಪ್ಯಾಮ್ ಕರೆಗಳಿಲ್ಲ
  • ಸಮರ್ಪಿತ KBL ತಜ್ಞರು
  • ನಿಮ್ಮ ಸಮಯಕ್ಕೆ ಕರೆಯನ್ನು ಹೊಂದಿಸಿ

1,2,3 ರಂತೆ ಸುಲಭ...

3 ಸರಳ ಹಂತಗಳಲ್ಲಿ ಸೌಲಭ್ಯ ಫ್ಲೆಕ್ಸಿಗೆ ಅರ್ಜಿ ಸಲ್ಲಿಸಿ

ಹಂತ 1

ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ

ನಿಮ್ಮ ಹತ್ತಿರದ ಕರ್ನಾಟಕ ಬ್ಯಾಂಕ್ ಶಾಖೆಗೆ ಹೋಗಿ

ಹಂತ 2

ನಿಮ್ಮ ಮೂಲ ವಿವರಗಳೊಂದಿಗೆ ಪ್ರಾರಂಭಿಸಿ

ನಿಮ್ಮ ಮೂಲ ವಿವರಗಳನ್ನು ಒದಗಿಸಿ ಮತ್ತು ನಿಮ್ಮ ದಾಖಲೆಗಳನ್ನು ಕೈಯಲ್ಲಿಡಿ

ಹಂತ 3

ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ

ನಿಮ್ಮ ಖಾತೆಯನ್ನು ತೆರೆದಾಗ ನಮ್ಮ ಶಾಖೆಯ ಅಧಿಕಾರಿಗಳು ನಿಮಗೆ ತಿಳಿಸುತ್ತಾರೆ

sb

ಇತರೆ ಆಯ್ಕೆಗಳನ್ನು ನೋಡಿ

ಆರ್ಥಿಕೋನ್ನತಿಗೆ ಅಸಂಖ್ಯ ಜನರು ನಂಬಿ ಆಯ್ಕೆಮಾಡಿದ್ದಾರೆ

ನಿಶ್ಚಿತ ಠೇವಣಿ

  • ₹100 ರಿಂದ ಪ್ರಾರಂಭಿಸಿ
  • 7 ದಿನಗಳಿಂದ 120 ತಿಂಗಳ ಠೇವಣಿ ಅವಧಿ
  • 7.5% * ಬಡ್ಡಿಯನ್ನು ಗಳಿಸಿ

ಅಭ್ಯುದಯ ನಗದು ಪ್ರಮಾಣಪತ್ರ

  • ₹100 ರಿಂದ ಪ್ರಾರಂಭಿಸಿ
  • 6 ತಿಂಗಳಿಂದ 120 ತಿಂಗಳ ಠೇವಣಿ ಅವಧಿ
  • 7.5% * ಬಡ್ಡಿಯನ್ನು ಗಳಿಸಿ

ಬ್ಯಾಂಕಿಂಗ್ ಬಗ್ಗೆ ಓದಿ

ನಿಮಗೆ ಮಾಹಿತಿ ನೀಡುವ ಸಂಪನ್ಮೂಲಗಳು

match-made
ಬ್ಯಾಂಕಿಂಗ್ ಸ್ವರ್ಗದಲ್ಲಿ ಮಾಡಿದ ಹೊಂದಾಣಿಕೆ: ಉಳಿತಾಯ ಖಾತೆ ಆವೃತ್ತಿ

navigating-pers
ನಿಮ್ಮ ಆರಂಭಿಕ 20 ರ ದಶಕದಲ್ಲಿ ವೈಯಕ್ತಿಕ ಸಾಲಗಳನ್ನು ನ್ಯಾವಿಗೇಟ್ ಮಾಡುವುದು- ಇದು ಒಳ್ಳೆಯ ಐಡಿಯಾವೇ?

savings-accoun
ಉಳಿತಾಯ ಖಾತೆ: ರೂಢಿಗಳನ್ನು ಮುರಿಯುವುದು ಮತ್ತು ಸಂಪತ್ತನ್ನು ನಿರ್ಮಿಸುವುದು

vehicle-loans
ಮಹತ್ವಾಕಾಂಕ್ಷೆಯ ಡೆಲಿವರಿ ಪಾಲುದಾರರು ಮತ್ತು ಕ್ಯಾಬ್ ಚಾಲಕರಿಗೆ ವಾಹನ ಸಾಲಗಳು

why-should
ನೀವು ಅರೆ ಸುಸಜ್ಜಿತ ಅಪಾರ್ಟ್ಮೆಂಟ್ಗೆ ಏಕೆ ಹೋಗಬೇಕು?

ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ
ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ

ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ
ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ

the-wisdom
ನಿವೃತ್ತ ಜನರಿಗೆ ತ್ವರಿತ ಚಿನ್ನದ ಸಾಲಗಳ ಬುದ್ಧಿವಂತಿಕೆ - ಆರ್ಥಿಕ ಭದ್ರತೆಯನ್ನು ಅನ್ಲಾಕ್ ಮಾಡಿ

ನಿಮ್ಮ ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರಗಳಿವೆ

ಈ ಠೇವಣಿಯೊಂದಿಗೆ ಲಭ್ಯವಿರುವ ಎರಡು ಆಯ್ಕೆಗಳು ಯಾವುವು?

ಅಲ್ಪಾವಧಿಯ ಲಾಭಗಳು: ನಿಮ್ಮ ಠೇವಣಿಯು ಆರಂಭದಲ್ಲಿ 46/30 ದಿನಗಳವರೆಗಿನದಾಗಿರುತ್ತದೆ. ನಂತರ ನೀವು ಸೂಚಿಸುವವರೆಗೆ 46/30 ದಿನಗಳ ನಂತರದ ಬ್ಲಾಕ್ಗಳಲ್ಲಿ ಸ್ವಯಂಚಾಲಿತವಾಗಿ ನವೀಕರಿಸಲಾಗುತ್ತದೆ.

ದೀರ್ಘಾವಧಿಯ ಲಾಭಗಳು: 3 ತಿಂಗಳ ಮತ್ತು 60 ತಿಂಗಳ ನಡುವಿನ ಠೇವಣಿ ಅವಧಿಯನ್ನು ಆಯ್ಕೆಮಾಡಿ, ಬಡ್ಡಿಯನ್ನು ತ್ರೈಮಾಸಿಕವಾಗಿ ಸಂಯೋಜಿಸಲಾಗಿದೆ.

ಪ್ರತಿ 46/30 ದಿನದ ಬ್ಲಾಕ್ನ ಕೊನೆಯಲ್ಲಿ ಬಡ್ಡಿಯನ್ನು ಲೆಕ್ಕಹಾಕಲಾಗುತ್ತದೆ. ಅನ್ವಯವಾಗುವ ಬಡ್ಡಿ ದರ ನವೀಕರಣ ದಿನಾಂಕದಂದು ಚಾಲ್ತಿಯಲ್ಲಿರುವದಾಗಿರುತ್ತದೆ, ನಿಮ್ಮ ಗಳಿಕೆಗಳು ಪ್ರಸ್ತುತ ಮಾರುಕಟ್ಟೆ ದರಗಳಿಗೆ ಅನುಸಾರಿಯಾಗಿರುವಂತೆ ನೋಡಿಕೊಳ್ಳಲಾಗುತ್ತದೆ.

ಹೌದು, ನೀವು ಯಾವಾಗ ಬೇಕಾದರೂ 1,000 ಯುನಿಟ್ಗಳಲ್ಲಿ ಹಿಂಪಡೆಯಬಹುದು. ಆದರೆ ಅಲ್ಪಾವಧಿ ಯೋಜನೆಯಲ್ಲಿ 30-ದಿನಗಳ ಬ್ಲಾಕ್ಗಳಿಗಿಂತಲೂ ಮೊದಲು ಹಿಂಪಡೆಯುವ ಠೇವಣಿಗಳಿಗೆ ಬಡ್ಡಿಯನ್ನು ಪಾವತಿಸಲಾಗುವುದಿಲ್ಲ.
ನಿಯಮಗಳನ್ನು ಮತ್ತು ಷರತ್ತುಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಠೇವಣಿ ಮಾಡುವ ಸಮಯದಲ್ಲಿ ಒಪ್ಪಿಕೊಂಡಿರುವ ಬಡ್ಡಿದರವೇ ʼಒಪ್ಪಂದ ಮಾಡಿಕೊಂಡ ರೀತಿಯ ಬಡ್ಡಿದರʼ.

ಕೆಬಿಎಲ್ ಮೊಬೈಲ್ ಪ್ಲಸ್ ಡೌನ್ಲೋಡ್ ಮಾಡಲು ಹೀಗೆ ಮಾಡಿ:
ಮೊಬೈಲ್ ಫೋನ್ ನಲ್ಲಿ ಗೂಗಲ್ ಪ್ಲೇಸ್ಟೋರ್ ಅಥವಾ ಆಪ್ ಲ್ ಆಪ್ ಸ್ಟೋರ್ ನಲ್ಲಿ ಕರ್ಣಾಟಕ ಬ್ಯಾಂಕಿನ ʼಕೆಬಿಎಲ್ ಮೊಬೈಲ್ ಪ್ಲಸ್ʼ ಹುಡುಕಿ ಅನಂತರ ಅದನ್ನು ಆಯ್ದು ನಿಮ್ಮ ಮೊಬೈಲ್ ಫೋನ್ಗೆ ಇನ್ಸ್ಟಾಲ್ ಮಾಡಿ/ಅಳವಡಿಸಿಕೊಳ್ಳಿ

ಬ್ಯಾಂಕ್ನಲ್ಲಿ ಖಾತೆ ಹೊಂದಿರುವ ವ್ಯಕ್ತಿಗಳು, ಸಂಸ್ಥೆಗಳು ಅಥವಾ ಕಾರ್ಪೊರೇಟ್ ಸಂಸ್ಥೆಗಳಿಗೆ ಎನ್ಇಎಫ್ಟಿ (ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್ಗಳ ವರ್ಗಾವಣೆ) ಲಭ್ಯವಿದೆ. ಇದು ದೇಶದ ಯಾವುದೇ ಇತರ ಎನ್ಇಎಫ್ಟಿ -ಸಕ್ರಿಯಗೊಳಿಸಿದ ಬ್ಯಾಂಕ್ ಶಾಖೆಗೆ ಹಣವನ್ನು ವರ್ಗಾಯಿಸಲು ಅನುಕೂಲವಾಗುತ್ತದೆ.

ಹೌದು, ನಮ್ಮ ಬ್ಯಾಂಕಿನ ಠೇವಣಿಗಳು ಸುರಕ್ಷಿತವೆಂದು ಪರಿಗಣಿಸಲ್ಪಟ್ಟಿವೆ. ಸರಕಾರಿ ಸಂಸ್ಥೆಗಳು ಒದಗಿಸುವ ವಿಮಾಯೋಜನೆಗಳಿಂದಾಗಿ ನಮ್ಮ ಠೇವಣಿಗಳು ಸುರಕ್ಷಿತವಾಗಿವೆ. ಈ ವಿಮಾ ಯೋಜನೆಯಡಿಲ್ಲಿ ಪ್ರತಿ ಠೇವಣಿದಾರರಿಗೆ ನಿರ್ದಿಷ್ಟ ಮೊತ್ತದ ವಿಮಾ ರಕ್ಷೆಯನ್ನು ನೀಡುತ್ತದೆ. ಜತೆಗೆ ನಮ್ಮ ಠೇವಣಿಗಳು ಕಠಿಣ ಆರ್ಥಿಕ ನಿಯಂತ್ರಣಗಳಿಗೆ ಮತ್ತು ಮೇಲ್ವಿಚಾರಣೆಗೆ ಒಳಪಟ್ಟಿವೆ.

ಠೇವಣಿಗಳ ಮೇಲಿನ ಆದಾಯಗಳು ನಿರ್ದಿಷ್ಟವಾಗಿ ಉಳಿತಾಯ ಖಾತೆಗಳು, ಷೇರುಗಳು ಅಥವಾ ಮ್ಯೂಚುಯಲ್ ಫಂಡ್ಗಳಂತಹ ಹೂಡಿಕೆಗಳಿಗೆ ಹೋಲಿಸಿದರೆ ಸಾಮಾನ್ಯವಾಗಿ ಕಡಿಮೆ.

ಮ್ಯೂಚುಯಲ್ ಫಂಡ್ಗಿಂತ ಠೇವಣಿ ಉತ್ತಮವಾಗಿದೆಯೇ ಎಂಬುದು ನಿಮ್ಮ ಹಣಕಾಸಿನ ಆದ್ಯತೆಗಳು, ಹೂಡಿಕೆಯ ಸಾಧ್ಯಾಸಾಧ್ಯತೆಗಳನ್ನು ಅವಲಂಬಿಸಿಕೊಂಡಿವೆ. ಠೇವಣಿಗಳ ಬಡ್ಡಿದರವು ಕಡಮೆಯಿದ್ದರೂ ಅವು ಸುರಕ್ಷಿತ ಮತ್ತು ಖಚಿತ ಪ್ರತಿಫಲವನ್ನು ಕೊಡುವಂಥದ್ದಾಗಿದೆ. ಮ್ಯೂಚುವಲ್ ಫಂಡ್ ಅಧಿಕ ಆದಾಯ ಸಾಮರ್ಥ್ಯವನ್ನು ಹೊಂದಿದ್ದರೂ ಇವು ಮಾರುಕಟ್ಟೆಯ ಅನಿರ್ಧಿಷ್ಟತೆ ಮತ್ತು ಚಂಚಲತೆಗಳಿಗೆ ಹೊಂದಿಕೊಂಡು ಅವುಗಳ ಲಾಭಾಲಾಭವಿರುತ್ತದೆ. ಅಲ್ಪಾವಧಿಯ ಗುರಿಗಳೊಂದಿಗೆ ಬಂಡವಾಳದ ಸುರಕ್ಷತೆ ನಿಮ್ಮ ಉದ್ದೇಶವಾಗಿದ್ದರೆ ಬ್ಯಾಂಕ್ ಠೇವಣಿಯೇ ಉತ್ತಮ. ದೀರ್ಘಾವಧಿಯ ಗುರಿಯೊಂದಿಗೆ ನೀವು ಮಾರುಕಟ್ಟೆಯ ರಿಸ್ಕ್ ಎದುರಿಸುವ ಸಾಮರ್ಥ್ಯ ಹೊಂದಿದ್ದರೆ ಮ್ಯೂಚುವಲ್ ಫಂಡ್ ನಿಮಗೆ ಸೂಕ್ತ.

ಹೌದು, ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟು ಒಂದು ಅಥವಾ ಹೆಚ್ಚಿನ ವ್ಯಕ್ತಿಗಳೊಂದಿಗೆ ಜಂಟಿ ಠೇವಣಿ ಖಾತೆಯನ್ನು ತೆರೆಯಬಹುದು. ನೀವು ಮತ್ತು ಇತರ ವ್ಯಕ್ತಿ (ಕುಟುಂಬದ ಸದಸ್ಯರು, ಸಂಗಾತಿ ಅಥವಾ ವ್ಯಾಪಾರ ಪಾಲುದಾರರು) ಖಾತೆಯಲ್ಲಿನ ಹಣವನ್ನು ನಿರ್ವಹಿಸಬಹುದು. ನೀವಿಬ್ಬರೂ ಹಣವನ್ನು ಠೇವಣಿ ಇಡಬಹುದು ಅಥವಾ ಹಿಂಪಡೆಯಬಹುದು. ಖಾತೆಯ ನಿಯಮಗಳು ಸಾಮಾನ್ಯವಾಗಿ ಇಬ್ಬರಿಗೂ ಸಮಾನವಾಗಿ ಅನ್ವಯಿಸುತ್ತವೆ. ದಂಪತಿಗಳು ಅಥವ ವ್ಯಾಪಾರ ಪಾಲುದಾರರು ತಮ್ಮ ಹಣಕಾಸನ್ನು ಒಟ್ಟಾಗಿ ನಿರ್ವಹಿಸಲು ಇದು ಪೂರಕವಾಗಿದೆ.

ಬ್ಯಾಂಕ್ ಠೇವಣಿಗಳ ಪ್ರಯೋಜನಗಳು

ಸಾಮಾನ್ಯ ಬ್ಯಾಂಕ್ ಠೇವಣಿಗಳು ನಿಮ್ಮ ಹಣವನ್ನು ಸಂಗ್ರಹಿಸಿ ಸುರಕ್ಷಿತವಾಗಿರಿಸುತ್ತವೆ. ನಿಮ್ಮ ಅನುಕೂಲಕ ಕ್ಕೆ ತಕ್ಕಂತೆ ಹಣವನ್ನು ವರ್ಗಾಯಿಸಲು ಮತ್ತು ಹಿಂಪಡೆಯಲು ಅವಕಾಶವಿದೆ. ಅನೇಕ ಸಾಮಾನ್ಯ ಠೇವಣಿ ಯೋಜನೆಗಳು ವಿಶೇಷ ಯೋಜನೆಗಳಿಗಿಂತ ಕಡಿಮೆ ಬಡ್ಡಿದರದಲ್ಲಿ ಇದ್ದರೂ ಸಹ ಬಡ್ಡಿರೂಪದ ಆದಾಯವನ್ನು ನೀಡುತ್ತವೆ. ನಮ್ಮ ಠೇವಣಿ ಯೋಜನೆಗಳು ನಿಮ್ಮ ಉಳಿತಾಯವನ್ನು ಹೆಚ್ಚಿಸಲು ಅನುಕೂಲವಾಗುತ್ತದೆ. ಖಚಿತ ಲಾಭದಾಯಕತೆಗೆ ನಮ್ಮ ನಿಶ್ಚಿತ ಠೇವಣಿಯೋಜನೆಗಳು ಅತ್ಯಂತ ಅನುಕೂಲಕರವಾಗಿದೆ.

ಸಾಮಾನ್ಯ ಠೇವಣಿ ಖಾತೆಗಳ ಮೇಲಿನ ಬಡ್ಡಿಯನ್ನು ದೈನಂದಿನ ಬ್ಯಾಲೆನ್ಸ್ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ ಮತ್ತು ನಿಯತಕಾಲಿಕವಾಗಿ ಮಾಸಿಕ ಅಥವಾ ತ್ರೈಮಾಸಿಕವಾಗಿ ಪಾವತಿಸಲಾಗುತ್ತದೆ. ಇವುಗಳಲ್ಲಿ ನಿಶ್ಚಿತ ಠೇವಣಿ ಅಥವಾ ಆವರ್ತಕ ಠೇವಣಿಗಳಿಗಿಂತ ಬಡ್ಡಿದರವು ಸಾಮಾನ್ಯವಾಗಿ ಕಡಿಮೆಯಿರುತ್ತದೆ.

ನಿಮ್ಮ ಹಣಕಾಸು ಸ್ಥಿತಿಯನ್ನು ಸರಿಯಾಗಿ ನಿರ್ವಹಿಸಲು ನಿಮ್ಮ ಠೇವಣಿ ಖಾತೆಗಳ ಬಗೆಗೆ ಸದಾ ನಿಗಾವಹಿಸಿ. ನೀವು ಆನ್ ಲೈನ್ ಬ್ಯಾಂಕಿಂಗ್ ಸೇವೆಯನ್ನು ಬಳಸುವುದರ ಮೂಲಕ ಸುಲಭವಾಗಿ ನಿಮ್ಮ ಖಾತೆಗಳನ್ನು ನಿರ್ವಾಹಮಾಡಬಹುದು. ಯಾವುದೇ ನಿರ್ವಹಣಾ ಶುಲ್ಕಗಳನ್ನು ಅಥವಾ ಕನಿಷ್ಠ ಬ್ಯಾಲೆನ್ಸ್ ಅನ್ನು ಇರಿಸದಿರುವ ಕಾರಣದಿಂದ ಭರಿಸಬೇಕಾದ ಶುಲ್ಕಗಳನ್ನು ತಪ್ಪಿಸಲು ನಿಮ್ಮ ಖಾತೆಯ ಮೇಲೆ ನಿರಂತರ ಗಮನವಿರಿಸಲು ಮರೆಯಬೇಡಿ.