ಮಾದರಿ ಉಡುಗೊರೆ

ಈ ಕಾರ್ಡ್‌ ಯಾವುದೇ ಸಂದರ್ಭಕ್ಕೆ ಒದಗಿಬರುವ ಉಪಯುಕ್ತ ಉಡುಗೊರೆ. ವೈಯಕ್ತಿಕ ಅಥವಾ ಕಾರ್ಪೊರೇಟ್‌ ಉತ್ತೇಜನಗೂ ಆಗಿರಬಹುದು. ಇದನ್ನು ಸ್ವೀಕರಿಸುವವರಿಗೆ ತನ್ನ ಆಯ್ಕೆಯ ವಸ್ತುಗಳನ್ನು ಪಡೆಯುವ ಅವಕಾಶವನ್ನು ಕೊಡುತ್ತದೆ.

ವೈಯಕ್ತಿಕ

ಯಾವುದೇ ಸಂದರ್ಭಕ್ಕಾಗಿ ₹500 ರಿಂದ ₹10,000 ವರೆಗಿನ ಮುಖಬೆಲೆಯಿಂದ ಆಯ್ಕೆಮಾಡಿ

ರಾಷ್ಟ್ರಾದ್ಯಂತ ಎಲ್ಲಾ ವೀಸಾ ವ್ಯಾಪಾರಿ ಮಳಿಗೆಗಳಲ್ಲಿ ಈ ಕಾರ್ಡ್‌ ಬಳಸಿ

KYC ಖಚಿತವಾದ ನಂತರ ಒವರ್‌ ದ ಕೌಂಟರ್‌ ಮೂಲಕ ಉತ್ಪನ್ನಗಳನ್ನು ಖರೀದಿಸಿ

ನಿಮಗೆ ಪ್ರತಿಫಲ ನೀಡುವ ಬ್ಯಾಂಕಿಂಗ್ 

ನಿಮಗಾಗಿ ಮಾಡಲಾದ ನಮ್ಮ ವಿಶೇಷ ಮತ್ತು ವಿಶೇಷ ಕೊಡುಗೆಗಳನ್ನು ಅನ್ವೇಷಿಸಿ

ಕೇಸರಿ ಸ್ಟೇಗಳು
ಕೇಸರಿ ಸ್ಟೇಗಳು

SaffronStays ನಲ್ಲಿ ಕನಿಷ್ಠ 3 ರಾತ್ರಿಗಳನ್ನು ಕಾಯ್ದಿರಿಸಿ ಮತ್ತು ₹15,000*ವರೆಗೆ 15% ರಿಯಾಯಿತಿಯನ್ನು ಪಡೆದುಕೊಳ್ಳಿ

ಸ್ವಿಗ್ಗಿ
ಸ್ವಿಗ್ಗಿ

ಫ್ಲಾಟ್ 20% ಸೈಟ್ ವೈಡ್ + 5% ಪ್ರಿಪೇಯ್ಡ್ ರಿಯಾಯಿತಿ

ರೆಂಟೊಮೊಜೊ
ರೆಂಟೊಮೊಜೊ

ಸೈಟ್‌ವೈಡ್ 20% ರಿಯಾಯಿತಿ + 5% ಪ್ರಿಪೇಯ್ಡ್ ರಿಯಾಯಿತಿ

24 ಗಂಟೆಗಳ ತುರ್ತು ಸಹಾಯವಾಣಿ

ನಿಮ್ಮ ಕಾರ್ಡ್ ಅನ್ನು ಬ್ಲಾಕ್ ಅಥವಾ ಸಹಾಯವನ್ನು ಪಡೆಯಲು, ಕರೆ ಮಾಡಿ

+91 802 202 1500

ನಿಮ್ಮ ಡೆಬಿಟ್ ಕಾರ್ಡ್ ಅನ್ನು ನಿರ್ಬಂಧಿಸಲು

+ 91 988 065 4321 ಗೆ SMS ಕಳುಹಿಸಿ

ಬ್ಲಾಕ್ XXXX

XXXX ಡೆಬಿಟ್ ಕಾರ್ಡ್ ಸಂಖ್ಯೆಯ ಕೊನೆಯ 4 ಅಂಕೆಗಳನ್ನು ನೀಡಿ

ಪ್ರಶ್ನೆಗಳಿವೆಯೇ? ನಮ್ಮ ಬಳಿ ಉತ್ತರಗಳಿವೆ

ಗಿಫ್ಟ್ ಕಾರ್ಡ್ ಎಷ್ಟು ಕಾಲ ಮಾನ್ಯತೆ ಹೊಂದಿರುತ್ತದೆ?

ನಿಮ್ಮ ಗಿಫ್ಟ್‌ ಕಾರ್ಡ್‌ ನಲ್ಲಿ ಮುದ್ರಿತವಾಗಿರುವ ʼಇಲ್ಲಿಯವರೆಗೆ ಮಾನ್ಯ ʼ ದಿನಾಂಕವನ್ನು ಅದರ ಮುಕ್ತಾಯದ ದಿನಾಂಕವೆಂದು ಪರಿಗಣಿಸಿ. ಈ ದಿನಾಂಕದ ಮೊದಲೇ ಗಿಫ್ಟ್‌ ಕಾರ್ಡ್‌ ನಲ್ಲಿರುವ ಹಣವನ್ನು ಬಳಸಲು ಮರೆಯದಿರಿ.

ನೀವು ಗಿಫ್ಟ್‌ ಕಾರ್ಡ್‌ ನಲ್ಲಿರುವ ಹಣಕ್ಕಿಂತಲೂ ಹೆಚ್ಚಿನ ದರವಿರುವ ಉಡುಗೊರೆಯನ್ನು ಖರೀದಿಸಬೇಕಾದಲ್ಲಿ, ಕಾರ್ಡ್‌ ನಲ್ಲಿರುವ ಹಣವನ್ನು ಕಾರ್ಡ್ ಮೂಲಕ ಪಾವತಿಸಿ ಉಳಿದ ಹಣವನ್ನು ನಗದು, ಚೆಕ್‌ ಅಥವಾ ಇನ್ನೊಂದು ಕಾರ್ಡ್‌ ಹೀಗೆ ಬೇರೆ ಪಾವತಿ ವಿಧಾನದಲ್ಲಿ ಮಾಡಬಹುದು.

ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ನೀವು ಕಳೆದುಕೊಂಡಿದ್ದಲ್ಲಿ ಅಥವಾ ಅದು ಕಳ್ಳತನವಾಗಿದ್ದಲ್ಲಿ, ನಿಮ್ಮ ಖಾತೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ನೀವು ತಕ್ಷಣವೇ ಕರ್ಣಾಟಕ ಬ್ಯಾಂಕ್‌ಗೆ ಘಟನೆಯನ್ನು ವರದಿ ಮಾಡಬೇಕು. ಪರಿಸ್ಥಿತಿಯನ್ನು ವಿವರಿಸಿರುವ ಇಮೇಲ್ ಅನ್ನು ನೀವು info@ktkbank.com ಗೆ ಕಳುಹಿಸಬಹುದು.ಇಲ್ಲದಿದ್ದಲ್ಲಿ, ನೀವು ನಮ್ಮ ಟೋಲ್-ಫ್ರೀ ಗ್ರಾಹಕ ಸಂಖ್ಯೆಗಳಾದ 1800 425 1444 ಅಥವಾ 1800 572 8031 ಗೆ ಕರೆ ಮಾಡಬಹುದು. ಯಾವುದೇ ಅನಧಿಕೃತ ವ್ಯವಹಾರಗಳನ್ನು ತಡೆಯಲು ಹಾಗೂ ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಲು ತಕ್ಷಣವೇ ವರದಿ ಮಾಡುವುದು ಮುಖ್ಯವಾಗಿರುತ್ತದೆ.

ಖಂಡಿತವಾಗಿಯೂ! ನಿಮ್ಮ ಕಾರ್ಡ್‌ನಲ್ಲಿ ಬಾಕಿ ಮೊತ್ತವು ಉಳಿದಿರುವವರೆಗೆ ನೀವು ಅದನ್ನು ಯಾವುದೇ ವೀಸಾ-ಸಕ್ರಿಯಗೊಳಿಸಿದ ವ್ಯಾಪಾರಿಯಲ್ಲಿ ಬಳಸಬಹುದು.

ಕೆಬಿಎಲ್‌ ಗಿಫ್ಟ್‌ ಕಾರ್ಡ್‌ನ ಅನುಕೂಲಗಳು

ಗಿಫ್ಟ್‌ ಕಾರ್ಡ್‌ ಗಳು ವಿವಿಧ ಪ್ರಯೋಜನವನ್ನು ಕೊಡುವಂಥದ್ದಾಗಿದೆ. ಇದರ ಮೂಲಕ ಕಾರ್ಡ್‌ ದಾರರಿಗೆ ತಮ್ಮ ಆಯ್ಕೆಯ ಉಡುಗೊರೆಗಳನ್ನು ಖರೀದಿಸುವ ಸ್ವಾತಂತ್ರ್ಯವನ್ನು ಕೊಡುತ್ತದೆ. ಅದು ವೈಯಕ್ತಿಕ ಆಚರಣೆಗಳು ಅಥವಾ ಕಾರ್ಪೊರೇಟ್‌ ಇನ್ಸೆನ್ಟಿವ್‌ಗಳನ್ನು ಕೊಡುವಲ್ಲಿ ಸಹಕಾರಿಯಾಗಿದೆ.

ಗಿಫ್ಟ್‌ ಕಾರ್ಡ್‌ ಈಗಿನ ದಿನಮಾನಕ್ಕೆ ಅನುಗುಣವಾಗಿ ಮದುವೆ, ಜನ್ಮದಿನ, ಕಾರ್ಪರೇಟ್‌ ಉತ್ತೇಜಕಗಳು ಇತ್ಯಾದಿಗಳಿಗೆ ಅತ್ಯಂತ ಸೂಕ್ತವಾಗಿದೆ. ಕಾರ್ಡ್‌ ಸ್ವೀಕರಿಸುವವರಿಗೆ ತಮ್ಮ ಆಯ್ಕೆಯ ವಸ್ತುಗಳನ್ನು ಪಡೆಯುವ ಸ್ವಾತಂತ್ರ್ಯವನ್ನು ಕೊಡುತ್ತದೆ. ಚಿಲ್ಲರೆ ಅಂಗಡಿಗಳು, ಆನ್‌ ಲೈನ್‌ ಮಾರುಕಟ್ಟೆಗಳು, ರೆಸ್ಟೋರೆಂಟ್‌ ಗಳು ಮತ್ತು ಮನೋರಂಜನಾ ಸ್ಥಳಗಳವರೆಗೆ ಇವುಗಳನ್ನು ಬಳಸಬಹುದು.

ನಿಮ್ಮ ವ್ಯವಹಾರಗಳು ಹೇಗೆ ಸಾಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಲು ಹಾಗೂ ಯಾವುದೇ ಅನಧಿಕೃತ ಚಟುವಟಿಕೆಯು ನಡೆದಲ್ಲಿ ಅದನ್ನು ತ್ವರಿತವಾಗಿ ಗುರುತಿಸಲು ನಿಮ್ಮ ಖಾತೆಯ ಬಗ್ಗೆ ನಿಗಾ ಇರಿಸಿ. ಆನ್‌ಲೈನ್ ವ್ಯವಹಾರಗಳಿಗಾಗಿ ಸುರಕ್ಷಿತ ನೆಟ್‌ವರ್ಕ್‌ಗಳನ್ನು ಬಳಸಿ. ನಿಮ್ಮ ಕಾರ್ಡ್ ವಿವರಗಳು ಅಥವಾ ಪಿನ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಎಟಿಎಮ್‌ ಅಥವಾ ಪಿಒಎಸ್‌ ಟರ್ಮಿನಲ್‌ಗಳಲ್ಲಿ ನಿಮ್ಮ ಕಾರ್ಡ್‌ ಬಳಸುವಾಗ ಅಇ ಜಾಗರೂಕರಾಗಿರಿ.

ಬ್ಯಾಂಕ್‌ ಕಾರ್ಡ್‌ ಗಳು ನಿಮ್ಮ ಹಣಕಾಸು ಚಟುವಟಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಇವು ಅನೇಕ ಪ್ರಯೋಜನಗಳನ್ನೂ ಕೊಡುತ್ತಿವೆ. ಡೆಬಿಟ್‌ ಕಾರ್ಡ್‌ ಗಳು ನಿಮ್ಮ ಖಾತೆಗೆ ನೇರ ಸಂಪರ್ಕಸಾಧನವಾಗಿದೆ. ಇದರಿಂದ ದಿನಂಪ್ರತಿ ಖರೀದಿ ಮತ್ತು ಎಟಿಎಂ ಮೂಲಕ ಹಣವನ್ನು ಹಿಂಪಡೆಯಬಹುದಾಗಿದೆ. ಕ್ರೆಡಿಟ್‌ ಕಾರ್ಡ್‌ ಗಳು ನೀವು ಮುಂದೆ ಮಾಡಬಹುದಾದ ಪಾವತಿಗಳಿಗೆ ಅವಕಾಶ ನೀಡುತ್ತದೆ ಮತ್ತು ಕ್ಯಾಶ್‌ ಬ್ಯಾಕ್‌ ಗಳು ರಿವಾರ್ಡ್ಸ್‌ ಗಳನ್ನೂ ನೀಡುತ್ತದೆ. ನಿಮ್ಮ ಕ್ರೆಡಿಟ್‌ ಇತಿಹಾಸವನ್ನು ನಿರ್ಮಿಸುವ ಅವಕಾಶವನ್ನೂ ನೀಡುತ್ತದೆ. ನಿಯಂತ್ರಿತ ಖರ್ಚುಗಳಿಗಾಗಿ, ಪ್ರಿಪೇಯ್ಡ್ ಕಾರ್ಡ್‌ಗಳು ಸೂಕ್ತವಾಗಿವೆ ಏಕೆಂದರೆ ಅವುಗಳು ಕಾರ್ಡ್‌ನಲ್ಲಿ ಇರಬಹುದಾದ ಗರಿಷ್ಠ ಮೊತ್ತಕ್ಕೆ ವೆಚ್ಚವನ್ನು ಮಿತಿಗೊಳಿಸುತ್ತವೆ. ವ್ಯಾಪಾರ ಕಾರ್ಡ್‌ಗಳು, ನಿರ್ದಿಷ್ಟವಾಗಿ ಕಂಪನಿಗಳು ಹಾಗೂ  ಉದ್ಯಮಿಗಳ ಅಗತ್ಯತೆಗಳನ್ನು ಪೂರೈಸುತ್ತವೆ. ವೆಚ್ಚ ನಿರ್ವಹಣೆಯನ್ನು ಸುಗಮಗೊಳಿಸುತ್ತವೆ ಹಾಗೂ ಹೆಚ್ಚಿನ ಕ್ರೆಡಿಟ್ ಮಿತಿಗಳು ಮತ್ತು ವಿವರವಾದ ಖರ್ಚು ವರದಿಗಳನ್ನು ನೀಡುತ್ತವೆ. ಪ್ರಮುಖ ವೈಶಿಷ್ಟ್ಯಗಳನ್ನು ಒಳಗೊಂಡಂತಹ ಗಿಫ್ಟ್ ಕಾರ್ಡ್ ಹಾಗೂ ಟ್ರಾನ್ಸಿಟ್ ಕಾರ್ಡುಗಳು ವಿಶೇಷವಾಗಿ ದೊರೆಯುತ್ತವೆ.‌