ದೃಢವಾದ ಗಳಿಕೆಗಳು, ಯಾವುದೇ ಸಮಯದಲ್ಲಿ
ನಮ್ಮ ಸ್ಥಿರ ಠೇವಣಿ ಖಾತೆಗಳು NRI ಗಳಿಗೆ ಸ್ಥಿರ ಹೂಡಿಕೆಯ ಅವಕಾಶವನ್ನು ನೀಡುತ್ತಿರುವವುದರ ಜತೆಗೆಯೇ ವಿದೇಶದಲ್ಲಿ ತಮ್ಮ ಗಳಿಕೆಗೆ ಲಾಭವನ್ನೂ ತರುತ್ತದೆ. ಅದಕ್ಕಿಂತ ಹೆಚ್ಚಾಗಿ, ನೀವು ಗಳಿಸುವ ಬಡ್ಡಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ. ನಿಮ್ಮ ಖಾತೆಯಲ್ಲಿನ ಬ್ಯಾಲೆನ್ಸ್ ಅನ್ನು ಸ್ವದೇಶಕ್ಕೆ ಹಿಂದಿರುಗಿಸುವ ಸ್ವಾತಂತ್ರ್ಯವು ನಿಮಗೆ ಕೊಡುತ್ತದೆ. ಇತರ NRIಗಳು ಅಥವಾ ನಿವಾಸಿ ನಿಕಟ ಸಂಬಂಧಿಗಳೊಂದಿಗೆ ಜಂಟಿ ಖಾತೆಯನ್ನು ತೆರೆಯುವ ಆಯ್ಕೆಯು ನಿಮ್ಮ ಹೂಡಿಕೆಗೆ ಕೌಟುಂಬಿಕ ಆಯಾಮವನ್ನು ನೀಡುತ್ತದೆ. ನೀವು ವಿದೇಶದಲ್ಲಿ ಕೆಲಸ ಮಾಡುತ್ತಿದ್ದು, ವ್ಯಾಪಾರ ಅಥವಾ ಶಿಕ್ಷಣದಲ್ಲಿ ತೊಡಗಿಸಿಕೊಂಡಿದ್ದಲ್ಲಿ ಅಥವಾ ನೀವು ಸಮುದ್ರಯಾನ ಸಂಬಂಧಿತ ಉದ್ಯೋಗಿಯಾಗಿದ್ದರೂ ಸಹ, NRI ಗಳಿಗೆ ಈ ಹೂಡಿಕೆಯು ವೈವಿಧ್ಯಮಯ ಆಯ್ಕೆಗಳನ್ನು ನೀಡುತ್ತದೆ. ಇದು ಕೇವಲ ಠೇವಣಿ ಅಲ್ಲ; ಇದು ನಿಮ್ಮ ಭವಿಷ್ಯದ ಅಗತ್ಯತೆಗಳನ್ನು ಭದ್ರಪಡಿಸಿಕೊಳ್ಳುವತ್ತ ನೀವು ಹಾಕುವ ಒಂದು ಸ್ಮಾರ್ಟ್ ಆರ್ಥಿಕ ಹೆಜ್ಜೆಯಾಗಿದೆ. Read more
ವಿಷಯಗಳನ್ನು ಸರಳ ಮತ್ತು ನೇರಗೊಳಿಸಿ
ನಮ್ಮ ಸ್ಮಾರ್ಟ್ ಕ್ಯಾಲ್ಕುಲೇಟರ್ ಮೂಲಕ ಅದನ್ನು ನಿಮಗೆ ಬೇಕಾದ ರೀತಿಯಲ್ಲಿ ಯೋಜಿಸಿಕೊಳ್ಳಿ
ಅವಧಿ ಠೇವಣಿ ಕ್ಯಾಲ್ಕುಲೇಟರ್
ಮೆಚುರಿಟಿ ಮೊತ್ತ
₹13,800/ತಿಂಗಳುಗಳು
ನಮ್ಮ ಸ್ಥಿರ ಠೇವಣಿಗಳನ್ನು ಏತಕ್ಕಾಗಿ ಆರಿಸಬೇಕು
ಪ್ರಪಂಚದಲ್ಲಿ ಎಲ್ಲಿಂದಲಾದರೂ ನಿಮ್ಮ ಹಣವನ್ನು ಭವಿಷ್ಯಕ್ಕಾಗಿ ಕೂಡಿಟ್ಟುಕೊಳ್ಳಿ
ಭಾರತದಲ್ಲಿ ನಿಮ್ಮ ಉಳಿತಾಯದ ಮೇಲೆ ಸುರಕ್ಷಿತ ಹೂಡಿಕೆಗಳು ಮತ್ತು ತೆರಿಗೆ-ಮುಕ್ತ ಆದಾಯಗಳ ಎರಡು ಲಾಭವನ್ನು ಆನಂದಿಸಿ
ಭಾರತಕ್ಕೆ ಮತ್ತು ಭಾರತದಿಂದ ಹಣವನ್ನು ಉಚಿತವಾಗಿ ವರ್ಗಾಯಿಸಿ, ನಿಮ್ಮ ಜಾಗತಿಕ ಹಣಕಾಸು ನಿರ್ವಹಣೆಯಲ್ಲಿ ನಿಮಗೆ ಹೆಚ್ಚಿನ ಅನುಕೂಲವನ್ನು ನೀಡುತ್ತದೆ
ಜಂಟಿ ಖಾತೆಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಿಮ್ಮ ಕುಟುಂಬದೊಂದಿಗೆ ಪ್ರಯೋಜನಗಳನ್ನು ಹಂಚಿಕೊಳ್ಳಿ, ಮನೆಯಲ್ಲಿರುವ ನಿಮ್ಮ ಪ್ರೀತಿಪಾತ್ರರಿಗೆ ನಿಮ್ಮನ್ನು ಹತ್ತಿರಗೊಳಿಸಿಕೊಳ್ಳಿ.
NRI ಸ್ಥಿರ ಠೇವಣಿಗಳಿಗೆ ಯಾರು ಅರ್ಜಿಯನ್ನು ಸಲ್ಲಿಸಬಹುದು
- ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ಅನಿವಾಸಿ ಭಾರತೀಯರು (ಭಾರತದ ಅನಿವಾಸಿ).
- ಉನ್ನತ ಶಿಕ್ಷಣ ಪಡೆಯುತ್ತಿರುವ ಭಾರತೀಯ ವಿದ್ಯಾರ್ಥಿಗಳು
- ಭಾರತೀಯ ಮೂಲದವರಾದ ನಾವಿಕರು ಮತ್ತು ತತ್ಸಂಬಂಧಿ ವೃತ್ತಿಪರರು
- 26 ಜನವರಿ 1950 ರಂದು ಭಾರತದ ನಾಗರಿಕರಾಗಿದ್ದ ಭಾರತೀಯ ಮೂಲದ ವ್ಯಕ್ತಿಗಳು (PIOs)
- ಭಾರತದ ಸಾಗರೋತ್ತರ ನಾಗರಿಕರು (OCI ಗಳು)
ನಿಮ್ಮೊಡನೆ ಬ್ಯಾಂಕಿಂಗ್
ಸದಾಕಾಲ ನಿಮ್ಮೊಂದಿಗೆ
ಸಮರ್ಪಿತ KBL ತಜ್ಞರಿಂದ 24x7 ವೈಯಕ್ತಿಕ ನೆರವು
ನಂಬಿಕೆ, ಪರಿಣತಿ ಮತ್ತು ಕಾಳಜಿಯೊಂದಿಗೆ ಬ್ಯಾಂಕಿಂಗ್
KBL ಕುಟುಂಬವನ್ನು ಪ್ರತಿದಿನ ವಿಸ್ತರಿಸಲಾಗುತ್ತಿದೆ
ಪ್ರಶ್ನೆಗಳಿವೆಯೇ? ನಮ್ಮಲ್ಲಿ ಉತ್ತರಗಳಿವೆ.
NRE ಸ್ಥಿರ ಠೇವಣಿ ಖಾತೆಯು NRI ಗಳಿಗೆ ವಿದೇಶಿ ಗಳಿಕೆಯನ್ನು ಠೇವಣಿ ಮಾಡಲು ಪೂರಕವಾಗಿದೆ. ತೆರಿಗೆ-ಮುಕ್ತ ಬಡ್ಡಿ ಮತ್ತು ವಾಪಸಾತಿ ಇಲ್ಲಿ ಸಾಧ್ಯವಾಗುತ್ತದೆ. ಸಾಮಾನ್ಯ ಉಳಿತಾಯ ಖಾತೆಗಳಿಗಿಂತ ಭಿನ್ನವಾಗಿ, ಸಾಮಾನ್ಯವಾಗಿ ವೇರಿಯಬಲ್ ಬಡ್ಡಿದರಗಳು ಮತ್ತು ಲಿಕ್ವಿಡಿಟಿ, ಹೆಚ್ಚಿನ, ಸ್ಥಿರವಾದ ಆದಾಯವನ್ನು ಒದಗಿಸುತ್ತದೆ. ಇದು ದೀರ್ಘಾವಧಿಯ ಉಳಿತಾಯಕ್ಕೆ ಸೂಕ್ತವಾಗಿದೆ.
ಕೆಬಿಎಲ್ ಮೊಬೈಲ್ ಪ್ಲಸ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಲು, ನಿಮ್ಮ ಮೊಬೈಲ್ ಸಾಧನದಲ್ಲಿ Google Play Store ಅಥವಾ Apple App Store ಗೆ ಭೇಟಿ ನೀಡಿ. ಅದರಲ್ಲಿ 'KBL Plus' ಅನ್ನು ಹುಡುಕಿ, ಕರ್ನಾಟಕ ಬ್ಯಾಂಕ್ ಪ್ರಕಟಿಸಿದ ಆ್ಯಪ್ ಅನ್ನು ಆಯ್ಕೆ ಮಾಡಿ ಮತ್ತು ಅದನ್ನು ನಿಮ್ಮ ಸಾಧನಕ್ಕೆ ಡೌನ್‌ಲೋಡ್ ಮಾಡಲು 'ಸ್ಥಾಪಿಸು' ಕ್ಲಿಕ್ ಮಾಡಿ.
ಹೌದು, ಖಾತೆಯನ್ನು ಭಾರತೀಯ ನಿವಾಸಿಗಳೊಂದಿಗೆ ಜಂಟಿಯಾಗಿ ಮಾಡಿಕೊಳ್ಳಬಹುದು. ಈ ವೈಶಿಷ್ಟ್ಯವು NRIಗಳಿಗೆ ಭಾರತದಲ್ಲಿ ನೆಲೆಸಿರುವ ಕುಟುಂಬದ ಸದಸ್ಯರೊಂದಿಗೆ ತಮ್ಮ ಹಣಕಾಸು ನಿರ್ವಹಣೆಯನ್ನು ಮಾಡಲು ಅನುಕೂಲಕರವಾಗಿಸುತ್ತದೆ.
ಈ ಠೇವಣಿ ತೆರೆಯಲು, NRIಗಳು ತಮ್ಮ ಮಾನ್ಯತೆ ಹೊಂದಿದ ಭಾರತೀಯ ಪಾಸ್‌ಪೋರ್ಟ್ ಅಥವಾ ಸಾಗರೋತ್ತರ ನಿವಾಸಿ ಕಾರ್ಡ್, ಮಾನ್ಯತೆ ಹೊಂದಿದ ಉದ್ಯೋಗ ವೀಸಾ/ವರ್ಕ್ ಪರ್ಮಿಟ್/ವಿದ್ಯಾರ್ಥಿ ವೀಸಾ/ಓವರ್ಸೀಸ್ ರೆಸಿಡೆಂಟ್ ಕಾರ್ಡ್, ತಮ್ಮನ್ನು ತಲುಪಬಹುದಾದ ವಿಳಾಸದ ಪುರಾವೆ ಮತ್ತು ಪ್ಯಾನ್ ಕಾರ್ಡ್ ಅಥವಾ ನಮೂನೆ 60 ಅನ್ನು ಒದಗಿಸಬೇಕಾಗುತ್ತದೆ. ಭಾರತದಲ್ಲಿನ ಶಾಖೆಗೆ ಭೇಟಿ ನೀಡಿ, ಈ ದಾಖಲೆಗಳ ದೃಢೀಕರಿಸಿದ ಫೋಟೊಕಾಪಿಗಳೊಂದಿಗೆ ಆಫ್-ಸೈಟ್ ಪರಿಶೀಲನೆಯನ್ನು ಪೂರ್ಣಗೊಳಿಸಬಹುದು. ಭಾರತದಲ್ಲಿ ನೋಂದಾಯಿಸಲಾದ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್‌ಗಳ ಸಾಗರೋತ್ತರ ಶಾಖೆಗಳ ಅಧಿಕೃತ ಅಧಿಕಾರಿಗಳು, ಭಾರತೀಯ ಬ್ಯಾಂಕ್ಗಳ ಸಂಬಂಧಗಳನ್ನು ಹೊಂದಿರುವ ಸಾಗರೋತ್ತರ ಬ್ಯಾಂಕ್‌ಗಳ ಶಾಖೆಗಳು, ನೋಟರಿ ಪಬ್ಲಿಕ್‌ಗಳು,
ಕೋರ್ಟ್ ಮ್ಯಾಜಿಸ್ಟ್ರೇಟ್‌ಗಳು, ನ್ಯಾಯಾಧೀಶರು ಅಥವಾ ಭಾರತೀಯ ರಾಯಭಾರಿ/ದೂತಾವಾಸ ಅಧಿಕಾರಿಗಳಿಂದ ದೃಢೀಕರಣವನ್ನು ಪಡೆಯಬೇಕಾಗುತ್ತದೆ.
ಈ ಖಾತೆಯನ್ನು ವಿದೇಶದಲ್ಲಿ ಕೆಲಸ ಮಾಡುವ ವೃತ್ತಿಪರರು, ವಿದೇಶಿ ನಿಯೋಜನೆಯಲ್ಲಿರುವ ಸರ್ಕಾರಿ ನೌಕರರು, ವಿದೇಶದಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ಭಾರತೀಯ ಮೂಲದ ನಾವಿಕರು ಸೇರಿದಂತೆ ಅನಿವಾಸಿ ಭಾರತೀಯರಿಗಾಗಿ (NRI ಗಳಿಗೆ) ವಿನ್ಯಾಸಗೊಳಿಸಲಾಗಿದೆ. ಭಾರತೀಯ ಮೂಲದ ವ್ಯಕ್ತಿಗಳು (PIO ಗಳು) ಮತ್ತು ಭಾರತದ ಸಾಗರೋತ್ತರ ನಾಗರಿಕರೂ (OCI ಗಳು) ಕೂಡ ಅರ್ಹರಾಗಿರುತ್ತಾರೆ, ಇದು ಜಾಗತಿಕವಾಗಿ ನೆಲೆಸಿರುವ ಭಾರತೀಯರನ್ನು ಒಳಗೊಂಡಿರುತ್ತದೆ.
ಹೌದು, ನಿಮ್ಮ ಖಾತೆಗೆ ಯಾರನ್ನಾದರೂ ನಾಮನಿರ್ದೇಶನ ಮಾಡುವುದು ಅನಿರೀಕ್ಷಿತ ಸಂದರ್ಭಗಳಲ್ಲಿ, ನಿಮ್ಮ ಠೇವಣಿಯ ನಿರ್ವಹಣೆ ಮತ್ತು ವಿಲೇವಾರಿ ಸುಗಮವಾಗಿ ನಿರ್ವಹಿಸಲ್ಪಡುತ್ತದೆ ಎನ್ನುವುದನ್ನು ಖಚಿತಪಡಿಸುತ್ತದೆ. ಇದು ನಿಮ್ಮ ಕುಟುಂಬಕ್ಕೆ ಭದ್ರತೆ ಮತ್ತು ಸುಲಭತೆಯ ಹೆಚ್ಚುವರಿ ಪದರವನ್ನು ಒದಗಿಸುತ್ತದೆ.
ಈ ಠೇವಣಿಗಳ ಮೇಲೆ ಗಳಿಸಿದ ಬಡ್ಡಿಯು ಭಾರತೀಯ ತೆರಿಗೆಯ ಕಾನೂನುಗಳಿಗೆ ಒಳಪಟ್ಟಿರುತ್ತದೆ. ಹಣಕಾಸಿನ ನಿಯಮಗಳು ಮತ್ತು ಅನುಪಾಲನೆಗೆ ಅನುಗುಣವಾಗಿರುತ್ತದೆ.
ಸ್ಥಿರ ಠೇವಣಿ (FD) ಒಂದು-ಬಾರಿಯ ಹೂಡಿಕೆಯಾಗಿದ್ದು, ನಿರ್ದಿಷ್ಟ ಅವಧಿಗೆ ನೀವು ಒಟ್ಟು ಮೊತ್ತವನ್ನು ಠೇವಣಿ ಮಾಡುತ್ತೀರಿ, ಸ್ಥಿರ ಬಡ್ಡಿದರವನ್ನು ಗಳಿಸುತ್ತೀರಿ. ಇದಕ್ಕೆ ವ್ಯತಿರಿಕ್ತವಾಗಿ, ಮರುಕಳಿಸುವ ಠೇವಣಿ (RD) ಪ್ರತಿ ತಿಂಗಳು ನಿಗದಿತ ಅವಧಿಯಲ್ಲಿ ನಿಗದಿತ ಮೊತ್ತವನ್ನು ಠೇವಣಿ ಮಾಡುವುದನ್ನು ಒಳಗೊಂಡಿರುತ್ತದೆ ಮತ್ತು ಆದಕ್ಕೆ ತಕ್ಕಂತೆ ಬಡ್ಡಿಯನ್ನು ಗಳಿಸುತ್ತದೆ. ಒಂದು ದೊಡ್ಡ ಮೊತ್ತವನ್ನು ಹೊಂದಿರುವವರಿಗೆ ಹೂಡಿಕೆ ಮಾಡಲು FDಗಳು ಸೂಕ್ತವಾಗಿದ್ದರೂ ಸಹಾ, ನಿಯಮಿತ, ಶಿಸ್ತುಬದ್ಧ ಉಳಿತಾಯಕ್ಕೆ RDಗಳು ಸೂಕ್ತವಾಗಿವೆ.
NRE ಸ್ಥಿರ ಠೇವಣಿಗಳ ಮೇಲೆ ಗಳಿಸಿದ ಬಡ್ಡಿಗೆ ಭಾರತದಲ್ಲಿ ತೆರಿಗೆಯಿಂದ ವಿನಾಯಿತಿಯನ್ನು ನೀಡಲಾಗಿದೆ. ಇದು NRI ಗಳಿಗೆ ಗಮನಾರ್ಹ ಪ್ರಯೋಜನವನ್ನು ನೀಡುತ್ತದೆ. ಅನೇಕ ವಿದೇಶಗಳಲ್ಲಿನ ತೆರಿಗೆಯ ಆದಾಯಕ್ಕೆ ಹೋಲಿಸಿದರೆ ಈ ತೆರಿಗೆ ವಿನಾಯಿತಿಯು ಭಾರತದಲ್ಲಿ ವಿದೇಶಿ ಗಳಿಕೆಗಳನ್ನು ಉಳಿಸಿಕೊಳ್ಳಲು ಇರುವ ಒಂದು ಆಕರ್ಷಕ ಆಯ್ಕೆಯಾಗಿದೆ.
ಹೌದು, ನಮ್ಮ ಡಿಜಿಟಲ್ ಬ್ಯಾಂಕಿಂಗ್ ವೇದಿಕೆಯು ಪ್ರಪಂಚದಲ್ಲಿ ಎಲ್ಲಿಂದಲಾದರೂ ಅನುಕೂಲಕರ ಆನ್‌ಲೈನ್ ನಿರ್ವಹಣೆಯನ್ನು ಮಾಡಲು ಅನುಕೂಲಿಸುತ್ತದೆ.
ಅನಿವಾಸಿ ಭಾರತೀಯರಿಗೆ (NRI ಗಳು) ತಮ್ಮ ತಾಯ್ನಾಡಿನಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ, NRI ಸ್ಥಿರ ಠೇವಣಿಗಳು ಒಂದು ಲಾಭದಾಯಕ ಆಯ್ಕೆಯಾಗಿದೆ. ಈ ಠೇವಣಿ ಯೋಜನೆಗಳು ಸ್ಪರ್ಧಾತ್ಮಕ NRI FD ದರಗಳನ್ನು ನೀಡುತ್ತವೆ, ಸಾಮಾನ್ಯವಾಗಿ ನಿವಾಸಿ ಭಾರತೀಯರಿಗೆ ಲಭ್ಯವಿರುವುದಕ್ಕಿಂತ ಅದು ಹೆಚ್ಚಾಗಿರುತ್ತದೆ. ಅದು ಭಾರತದ ಬೆಳವಣಿಗೆಯ ಜೊತೆಗೆ ಆದಾಯವನ್ನು ಗಳಿಸುವ ಹೆಚ್ಚುವರಿ ಪ್ರಯೋಜನದೊಂದಿಗೆ ಸುರಕ್ಷಿತ ಹೂಡಿಕೆ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ. NRI FD ಬಡ್ಡಿ ದರಗಳು ಠೇವಣಿ ಅವಧಿ ಮತ್ತು ಮೊತ್ತವನ್ನು ಆಧರಿಸಿ ಬದಲಾಗುತ್ತವೆ. ಹೊಂದಾಣಿಕೆಯೊಂದಿಗೆ ಹಾಗೂ ತ್ರೈಮಾಸಿಕ ಅಥವಾ ಮಾಸಿಕ ಬಡ್ಡಿ ಪಾವತಿಗಳು ಅಥವಾ ಮರುಹೂಡಿಕೆ ಆಯ್ಕೆಗಳಂತಹ ಪ್ರಯೋಜನಗಳನ್ನು ಒದಗಿಸುತ್ತದೆ.
NRI ಸೇವೆಗಳು, ಭಾರತದಲ್ಲಿ ಲಭ್ಯವಿರುವ ಅವಕಾಶಗಳೊಂದಿಗೆ ಭಾರತೀಯ ಡಯಾಸ್ಪೊರಾದ ಆರ್ಥಿಕ ಅಗತ್ಯತೆಗಳನ್ನು ಪೂರೈಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಅವು NRIಗಳಿಗೆ ವಿದೇಶದಲ್ಲಿ ನೆಲೆಸಿರುವಾಗಲೂ ತಮ್ಮ ತಾಯ್ನಾಡಿನಲ್ಲಿ ತಮ್ಮ ಗಳಿಕೆಯನ್ನು ಹೂಡಿಕೆ ಮಾಡಲು, ಉಳಿಸಲು ಮತ್ತು ನಿರ್ವಹಿಸಲು ವೇದಿಕೆಯನ್ನು ಒದಗಿಸುತ್ತವೆ. NRI ಖಾತೆಗಳು, ಸಾಲಗಳು ಮತ್ತು ಹೂಡಿಕೆಗಳಂತಹ ಸೇವೆಗಳು, NRIಗಳು ಭಾರತದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುವಂತೆ ಇದೆ. ಈ ಸೇವೆಗಳು ಅವರು ತಮ್ಮ ತಾಯ್ನಾಡಿನೊಂದಿಗೆ ಹಣಕಾಸಿನ ಸಂಪರ್ಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಇದು ಭಾರತಕ್ಕೆ ಮರಳಲು ಅಥವಾ ಕುಟುಂಬ ಮತ್ತು ಹೂಡಿಕೆ ಸಂಬಂಧಗಳನ್ನು ಹೊಂದಲು ಯೋಜಿಸಿರುವವರಿಗೆ ನಿರ್ಣಾಯಕವಾಗಿರುತ್ತದೆ.