ರೆಸಿಡೆಂಟ್ ವಿದೇಶಿ ಕರೆನ್ಸಿ (RFC) ಉಳಿತಾಯ ಖಾತೆ

ಭಾರತದಲ್ಲಿ ಶಾಶ್ವತವಾಗಿ ನೆಲೆಸಲು ವಿದೇಶದಿಂದ ಹಿಂದಿರುಗಿದ NRI ಗಳಿಗೆ ನೀಡುವು ವಿಶೇಷ ಸೇವಾ ಸೌಲಭ್ಯವೇ ಕರ್ಣಾಟಕ ಬ್ಯಾಂಕ್‌ನ ನಿವಾಸಿ ವಿದೇಶಿ ಕರೆನ್ಸಿ (RFC) ಉಳಿತಾಯ ಬ್ಯಾಂಕ್ ಖಾತೆ.ಒಮ್ಮೆ ನೀವು ಭಾರತವನ್ನು ನಿಮ್ಮ ಮನೆಯನ್ನಾಗಿ ಮಾಡಿಕೊಂಡ ನಂತರ ನಿಮ್ಮ ವಿದೇಶಿ ಗಳಿಕೆ ಮತ್ತು ಸ್ವತ್ತುಗಳನ್ನು ನಿರ್ವಹಿಸಲು ಈ ಖಾತೆಯು ಸಹಕಾರಿಯಾಗುತ್ತದೆ. ಅದು ಪಿಂಚಣಿ, ಬಾಡಿಗೆ ಆದಾಯ ಅಥವಾ ವಿದೇಶದಲ್ಲಿರುವ ಆಸ್ತಿಗಳಿಂದ ಬಂದ ಆದಾಯವಾಗಿರಲಿ, RFC ಖಾತೆಯು ಈ ಗಳಿಕೆಗಳನ್ನು ಸರಾಗವಾಗಿ ಕ್ರೆಡಿಟ್ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ವಿದೇಶಿ ಕರೆನ್ಸಿ ಬಾಕಿಗಳ ಬಳಕೆಯಲ್ಲಿ ನಿರ್ಬಂಧಗಳಿಲ್ಲದಿರುವುದು ಈ ಖಾತೆಯ ವೈಶಿಷ್ಟ್ಯವಾಗಿದೆ. ಇದರರ್ಥ ನೀವು ನಿಮ್ಮ ಹಣವನ್ನು ಗಡಿಗಳ ಹಂಗಿಲ್ಲದೆ ಹಣವನ್ನು ಹೂಡಿಕೆ ಮಾಡಬಹುದು, ವಿದೇಶದಲ್ಲಿ ಗಮನಾರ್ಹ ಸಮಯವನ್ನು ಕಳೆದವರಿಗೆ ಇದು ಒಂದು ಮುಖ್ಯ ಅಂಶವಾಗಿದೆ. ಮತ್ತಷ್ಟು ಓದು ಕಡಿಮೆ ಓದಿ

ಈ ಖಾತೆಯು ನಿಮಗಾಗಿ ಏಕೆ

ನಮ್ಮ ಉಳಿತಾಯ ಖಾತೆಗಳೊಂದಿಗೆ ನಿಮ್ಮ ಭವಿಷ್ಯವನ್ನು ನಿರ್ಮಿಸಿಕೊಳ್ಳಿ

ಭಾರತಕ್ಕೆ ನಿಮ್ಮ ಜಾಗತಿಕ ಗಳಿಕೆಗಳನ್ನು ವರ್ಗಾಯಿಸಿಕೊಳ್ಳಿ ಹಾಗೂ ನಿರ್ವಹಿಸಿಕೊಳ್ಳಿ, ನಿಮ್ಮ ಅಂತಾರಾಷ್ಟ್ರೀಯ ಸ್ವತ್ತುಗಳನ್ನು ಸ್ಥಳೀಯ ಅಗತ್ಯತೆಗಳೊಂದಿಗೆ ಜೋಡಿಸಿಕೊಳ್ಳಿ

ಬಾಡಿಗೆ ಅಥವಾ ಡಿವಿಡೆಂಡ್‌ಗಳಂತಹ ಆದಾಯವನ್ನು ಪುನಃ ಹಿಂತಿರುಗಿಸಿಕೊಳ್ಳಿ, ನಿಮ್ಮ ಹಣಕಾಸುಗಳು ಯಾವಾಗಲೂ ಕೈಗೆಟುಕುವಂತೆ ನೋಡಿಕೊಳ್ಳಿ

ನಿವಾಸಿ ಭಾರತೀಯರೊಂದಿಗೆ ಜಂಟಿ ಖಾತೆಯನ್ನು ತೆರೆಯುವ ಮೂಲಕ ಭಾರತದಲ್ಲಿನ ಕುಟುಂಬದೊಂದಿಗೆ ಹಣಕಾಸಿನ ಜವಾಬ್ದಾರಿಗಳನ್ನು ಹಂಚಿಕೊಳ್ಳಿ

ನಿಮಗೆ ಪ್ರತಿಫಲ ನೀಡುವ ಬ್ಯಾಂಕಿಂಗ್ 

ನಿಮಗಾಗಿ ಮಾಡಲಾದ ನಮ್ಮ ವಿಶೇಷ ಮತ್ತು ವಿಶೇಷ ಕೊಡುಗೆಗಳನ್ನು ಅನ್ವೇಷಿಸಿ

ಸ್ವಿಗ್ಗಿ
ಸ್ವಿಗ್ಗಿ

ಫ್ಲಾಟ್ 20% ಸೈಟ್ ವೈಡ್ + 5% ಪ್ರಿಪೇಯ್ಡ್ ರಿಯಾಯಿತಿ

ಸ್ವಿಗ್ಗಿ
ಸ್ವಿಗ್ಗಿ

ಸೈಟ್‌ವೈಡ್ 20% ರಿಯಾಯಿತಿ + 5% ಪ್ರಿಪೇಯ್ಡ್ ರಿಯಾಯಿತಿ

ಸ್ವಿಗ್ಗಿ
ಸ್ವಿಗ್ಗಿ

ಕನಿಷ್ಠ ಬಿಲ್ ಮೌಲ್ಯದ ₹2,999 ಗೃಹೋಪಕರಣಗಳ ಖರೀದಿಗೆ ₹400 ರಿಯಾಯಿತಿ

ಒಂದು ಶತಮಾನದ ನಂಬಿಕೆ, ಈಗ ನಿಮ್ಮ ಬೆರಳ ತುದಿಯಲ್ಲಿ

ಪ್ರಯಾಣ, ಶಾಪಿಂಗ್ ಅಥವಾ ಬಿಲ್‌ಗಳನ್ನು ಪಾವತಿಸಿ-ಎಲ್ಲವೂ ಒಂದೇ ಆ್ಯಪ್ನಲ್ಲಿ. ಇಂದು ಕೆ‌ಬಿ‌ಎಲ್ ಮೊಬೈಲ್ ಪ್ಲಸ್ ಅನ್ನು ಬಳಸಿಕೊಳ್ಳಿ

two phones

ಅರ್ಹತೆ

  • ಶಾಶ್ವತವಾಗಿ ಭಾರತಕ್ಕೆ ಹಿಂದಿರುಗುತ್ತಿರುವ ಅನಿವಾಸಿ ಭಾರತೀಯರು
  • 1 ವರ್ಷಕ್ಕಿಂತ ಕಡಿಮೆಯಿಲ್ಲದ ನಿರಂತರ ಅವಧಿಯವರೆಗೆ ಭಾರತದ ಹೊರಗೆ ವಾಸಿಸುತ್ತಿದ್ದವರು

ಅಗತ್ಯವಿರುವ ದಾಖಲೆಗಳು

  • ವೈಯಕ್ತಿಕ ವಿವರಗಳೊಂದಿಗೆ ಪಾಸ್ಪೋರ್ಟ್ ಪುಟಗಳ ಫೋಟೋಕಾಪಿ
  • ಪ್ಯಾನ್ ಕಾರ್ಡ್ ಅಥವಾ ನಮೂನೆ 60
  • ಮಾನ್ಯವಾದ ವೀಸಾ ಮತ್ತು ವಲಸೆ ಅಂಚೆಚೀಟಿಗಳು ಕನಿಷ್ಠ 1 ವರ್ಷದ ವಿದೇಶಿ ವಾಸ್ತವ್ಯವನ್ನು ತೋರಿಸಬೇಕು

1,2,3… ರಷ್ಟು ಸುಲಭ

3 ಸರಳ ಹಂತಗಳಲ್ಲಿ ಉಳಿತಾಯ ಖಾತೆಗೆ ಅರ್ಜಿಯನ್ನು ಸಲ್ಲಿಸಿ

ಹಂತ 1
ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ
ನಿಮ್ಮ ಹತ್ತಿರದ ಕರ್ನಾಟಕ ಬ್ಯಾಂಕ್ ಶಾಖೆಗೆ ಹೋಗಿ

ಹಂತ 2
ನಿಮ್ಮ ಮೂಲ ವಿವರಗಳೊಂದಿಗೆ ಪ್ರಾರಂಭಿಸಿ
ನಿಮ್ಮ ಮೂಲ ವಿವರಗಳನ್ನು ಒದಗಿಸಿ ಮತ್ತು ನಿಮ್ಮ ದಾಖಲೆಗಳನ್ನು ಕೈಯಲ್ಲಿಡಿ

ಹಂತ 3
ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ
ನಿಮ್ಮ ಖಾತೆಯನ್ನು ತೆರೆದಾಗ ನಮ್ಮ ಶಾಖೆಯ ಅಧಿಕಾರಿಗಳು ನಿಮಗೆ ತಿಳಿಸುತ್ತಾರೆ
 

ರಷ್ಟು ಸುಲಭ

ನಿಮಗಾಗಿ ಲಭ್ಯವಿರುವ ಇತರ ಆಯ್ಕೆಗಳನ್ನು ವೀಕ್ಷಿಸಿ

ಸಾವಿರಾರು ಜನರು ನಂಬುವ ಹಾಗೂ ಆರ್ಥಿಕ ಉತ್ಕೃಷ್ಟತೆಗಾಗಿ ಆಯ್ಕೆಯಾಗಿರುವುದು

ಅನಿವಾಸಿ (ಸಾಮಾನ್ಯ) ಉಳಿತಾಯ ಖಾತೆ

  • ಶೂನ್ಯ ಕನಿಷ್ಠ ಬ್ಯಾಲೆನ್ಸ್
  • ವರ್ಷಕ್ಕೆ 4.5%  ವರೆಗೆ ಗಳಿಸಿ. ಬಡ್ಡಿ
  • ಅತ್ಯಾಕರ್ಷಕ ಕೊಡುಗೆಗಳು ಮತ್ತು ಪ್ರಯೋಜನಗಳೊಂದಿಗೆ ಉಚಿತ ಡೆಬಿಟ್ ಕಾರ್ಡ್

ಅನಿವಾಸಿ (ಬಾಹ್ಯ) ಉಳಿತಾಯ ಖಾತೆ

  • ಗಡಿಯಾಚೆಗೂ ಹಣವನ್ನು ಅಡೆತಡೆಯಿಲ್ಲದೆ ಕಳುಹಿಸಬಹುದು
  • ನಿಮ್ಮ ಉಳಿತಾಯದ ಮೇಲಿನ ತೆರಿಗೆ-ವಿನಾಯಿತಿ ಪಡೆದ ಬಡ್ಡಿ  ನಿಮಗೆ ದೊರಕುತ್ತದೆ.
  • NRI ಗಳು ಮತ್ತು OCI ಗಳಿಗಾಗಿಯೇ ವಿನ್ಯಾಸಗೊಳಿಸಲಾಗಿದೆ

ಸುಲಭವಾಗಿ ಓದುವುದರ ಮೂಲಕ ಬ್ಯಾಂಕಿಂಗ್ ಅನ್ನು ಸರಳಗೊಳಿಸಿಕೊಳ್ಳಿ

ನಿಮಗೆ ಮಾಹಿತಿ ನೀಡುವ ಬೈಟ್-ಗಾತ್ರದ ಸಂಪನ್ಮೂಲಗಳು

match-made
ಬ್ಯಾಂಕಿಂಗ್ ಸ್ವರ್ಗದಲ್ಲಿ ಮಾಡಿದ ಹೊಂದಾಣಿಕೆ: ಉಳಿತಾಯ ಖಾತೆ ಆವೃತ್ತಿ

navigating-pers
ನಿಮ್ಮ ಆರಂಭಿಕ 20 ರ ದಶಕದಲ್ಲಿ ವೈಯಕ್ತಿಕ ಸಾಲಗಳನ್ನು ನ್ಯಾವಿಗೇಟ್ ಮಾಡುವುದು- ಇದು ಒಳ್ಳೆಯ ಐಡಿಯಾವೇ?

savings-accoun
ಉಳಿತಾಯ ಖಾತೆ: ರೂಢಿಗಳನ್ನು ಮುರಿಯುವುದು ಮತ್ತು ಸಂಪತ್ತನ್ನು ನಿರ್ಮಿಸುವುದು

vehicle-loans
ಮಹತ್ವಾಕಾಂಕ್ಷೆಯ ಡೆಲಿವರಿ ಪಾಲುದಾರರು ಮತ್ತು ಕ್ಯಾಬ್ ಚಾಲಕರಿಗೆ ವಾಹನ ಸಾಲಗಳು

why-should
ನೀವು ಅರೆ ಸುಸಜ್ಜಿತ ಅಪಾರ್ಟ್ಮೆಂಟ್ಗೆ ಏಕೆ ಹೋಗಬೇಕು?

ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ
ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ

ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ
ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ

the-wisdom
ನಿವೃತ್ತ ಜನರಿಗೆ ತ್ವರಿತ ಚಿನ್ನದ ಸಾಲಗಳ ಬುದ್ಧಿವಂತಿಕೆ - ಆರ್ಥಿಕ ಭದ್ರತೆಯನ್ನು ಅನ್ಲಾಕ್ ಮಾಡಿ

ಪ್ರಶ್ನೆಗಳಿವೆಯೇ? ನಮ್ಮಲ್ಲಿ ಉತ್ತರಗಳಿವೆ

RFC ಖಾತೆ ಎಂದರೇನು ಮತ್ತು ಅದನ್ನು ಯಾರು ತೆರೆಯಬಹುದು?

RFC (ನಿವಾಸಿ ವಿದೇಶಿ ಕರೆನ್ಸಿ) ಖಾತೆಯು ಶಾಶ್ವತವಾಗಿ ಭಾರತಕ್ಕೆ ಮರಳಿದ NRI ಗಳಿಗೆ ಇರುವುದಾಗಿದೆ. ಭಾರತದಲ್ಲಿ ನಿಮ್ಮ ವಿದೇಶಿ ಗಳಿಕೆ ಮತ್ತು ಸ್ವತ್ತುಗಳನ್ನು ನಿರ್ವಹಿಸಲು ಇದು ಸಹಕಾರಿಯಾಗಿದೆ. ನೀವು ವಿದೇಶದಿಂದ ಹಿಂತಿರುಗುವ ಮೊದಲು ಕನಿಷ್ಠ 1 ವರ್ಷ ವಿದೇಶದಲ್ಲಿ ವಾಸಿಸುತ್ತಿದ್ದರೆ ನೀವು ಈ ಖಾತೆದಾರರಾಗಲು ಅರ್ಹರಾಗುತ್ತೀರಿ.

ನಿಮ್ಮ ಅಸ್ತಿತ್ವದಲ್ಲಿರುವ NRE/FCNR ಖಾತೆಗಳಿಂದ ವರ್ಗಾವಣೆ ಮಾಡುವ ಮೂಲಕ ಅಥವಾ ವಿದೇಶಿ ಕರೆನ್ಸಿ ನೋಟುಗಳು ಅಥವಾ ಟ್ರಾವೆಲ್ಲರ್ಸ್‌ ಚೆಕ್‌ ಕಳುಹಿಸುವ ಮೂಲಕ ನಿಮ್ಮ RFC ಖಾತೆಗೆ ನೀವು ಹಣವನ್ನು ನೀಡಬಹುದು.

ಹೌದು, ವಿದೇಶದಿಂದ ಪಡೆದ ಪಿಂಚಣಿಗಳು, ಬಾಡಿಗೆಗಳು ಮತ್ತು ಇತರ ಹಣಕಾಸಿನ ಪ್ರಯೋಜನಗಳನ್ನು ನೇರವಾಗಿ ನಿಮ್ಮ RFC ಖಾತೆಗೆ ಜಮಾ ಮಾಡಬಹುದು.

ಇಲ್ಲ, ಭಾರತದ ಒಳಗೆ ಅಥವಾ ಹೊರಗೆ ಮಾಡಿರುವ ಹೂಡಿಕೆ ಸೇರಿದಂತೆ ನಿಮ್ಮ RFC ಖಾತೆಯಲ್ಲಿ ವಿದೇಶಿ ಕರೆನ್ಸಿ ಬ್ಯಾಲೆನ್ಸ್‌ಗಳ ಬಳಕೆಗೆ ಯಾವುದೇ ನಿರ್ಬಂಧಗಳಿಲ್ಲ.

ಹೌದು, RFC ಖಾತೆಯನ್ನು ಇಂಟರ್ನೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್ ಮೂಲಕ ವ್ಯವಹರಿಸಬಹುದು, ಇದು ನಿಮ್ಮ ಹಣವನ್ನು ಆನ್‌ಲೈನ್‌ನಲ್ಲಿ ನಿರ್ವಹಿಸುವುದನ್ನು ಸುಲಭಗೊಳಿಸುತ್ತದೆ.

ವೈಯಕ್ತಿಕ ಸಂದರ್ಭಗಳು ಮತ್ತು ನಿಬಂಧನೆಗಳ ಆಧಾರದ ಮೇಲೆ RFC ಖಾತೆಗಳಿಗೆ ತಗಲುವ ತೆರಿಗೆ ಪರಿಣಾಮಗಳು ಬದಲಾಗಬಹುದು. ನಿರ್ದಿಷ್ಟ ಮಾರ್ಗದರ್ಶನಕ್ಕಾಗಿ ತೆರಿಗೆ ಸಲಹೆಗಾರರೊಂದಿಗೆ ಸಮಾಲೋಚಿಸಲು ನಾವು ಶಿಫಾರಸು ಮಾಡುತ್ತೇವೆ.

RFC ಉಳಿತಾಯ ಖಾತೆಯೊಂದಿಗೆ ವಿದೇಶಿ ಗಳಿಕೆಯನ್ನು ನಿರ್ವಹಿಸುವುದು

ವಿದೇಶದಲ್ಲಿ ಬಹಳ ದಿನಗಳು ಇದ್ದ ನಂತರ ಇತ್ತೀಚೆಗೆ ಭಾರತಕ್ಕೆ ಹಿಂದಿರುಗಿದ ವ್ಯಕ್ತಿಗಳಿಗೆ ಅಥವಾ ವಿದೇಶಿ ಆದಾಯದ ಮೂಲಗಳನ್ನು ಹೊಂದಿರುವವರಿಗೆ, RFC ಖಾತೆ (ನಿವಾಸಿ ವಿದೇಶಿ ಕರೆನ್ಸಿ ಖಾತೆ) ವಿಶೇಷವಾಗಿ ಉಪಯುಕ್ತವಾಗಿದೆ. ಈ ವಿಶೇಷ ಖಾತೆಯು ಭಾರತದಲ್ಲಿ ನೆಲೆಸಿರುವಾಗ ವಿದೇಶಿ ಗಳಿಕೆ ಮತ್ತು ಸ್ವತ್ತುಗಳನ್ನು ನಿಮಗೆ ಬೇಕಾದ ರೀತಿಯಲ್ಲಿ ನಿರ್ವಹಿಸಲು ಸಹಕಾರಿಯಾಗಿದೆ. RFC ಉಳಿತಾಯ ಖಾತೆಯೊಂದಿಗೆ, ನಿಮ್ಮ ವಿದೇಶಿ ಕರೆನ್ಸಿ ಹಿಡುವಳಿಗಳನ್ನು ಸ್ಥಿರವಾಗಿ ಬೆಳೆಸಿಕೊಳ್ಳಲು ನೀವು ಸ್ಪರ್ಧಾತ್ಮಕ ಬಡ್ಡಿದರಗಳ ಲಾಭವನ್ನು ಪಡೆಯಬಹುದು. ನಿಮ್ಮ ವಿದೇಶಿ ಗಳಿಕೆಗಳನ್ನು ರಕ್ಷಿಸಲು, ನಿಮ್ಮ ಹೂಡಿಕೆಗಳನ್ನು ವೈವಿಧ್ಯಗೊಳಿಸಲು ಅಥವಾ ಭಾರತದಲ್ಲಿ ನಿಮ್ಮ ಹಣಕಾಸಿನ ಭವಿಷ್ಯಕ್ಕಾಗಿ ಸರಳವಾಗಿ ಯೋಜಿಸಲು ನೀವು ಬಯಸುತ್ತಿದ್ದಲ್ಲಿ, RFC ಖಾತೆಯು ಅದಕ್ಕೆ ಹೊಂದಿಕೊಳ್ಳುವ ಮತ್ತು ಪ್ರಾಯೋಗಿಕವಾದ ಪರಿಹಾರವನ್ನು ಒದಗಿಸುತ್ತದೆ.

RFC ಎಂದರೆ ರೆಸಿಡೆಂಟ್ ಫಾರಿನ್ ಕರೆನ್ಸಿ ಅಕೌಂಟ್, ಇದು ವಿದೇಶಿ ಆದಾಯದ ಮೂಲಗಳೊಂದಿಗೆ ಹಿಂದಿರುಗಿದ ನಿವಾಸಿಗಳು ಅಥವಾ ವ್ಯಕ್ತಿಗಳಿಗೆ ಹಣಕಾಸಿನ ವ್ಯವಹಾರಗಳು ಮತ್ತು ಹೂಡಿಕೆಗಳನ್ನು ಸುಗಮಗೊಳಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಈ ವಿಶಿಷ್ಟ ಬ್ಯಾಂಕಿಂಗ್ ಕೊಡುಗೆಯು ನಿರ್ದಿಷ್ಟವಾಗಿ ವಿದೇಶದಲ್ಲಿ ನೆಲೆಸಿದ ನಂತರ ಭಾರತಕ್ಕೆ ಹಿಂದಿರುಗಿದ ಅಥವಾ ವಿದೇಶಿ ಆದಾಯದ ಮೂಲಗಳನ್ನು ಹೊಂದಿರುವವರ ಹಣಕಾಸಿನ ಅಗತ್ಯತೆಗಳನ್ನು ಪೂರೈಸುವಂತೆ ರೂಪಿಸಲಾಗಿದೆ. RFC ಖಾತೆಯು ದೇಶೀಯ ಬ್ಯಾಂಕ್ ಖಾತೆಯ ಅನುಕೂಲತೆಯನ್ನು ಪಡೆಯುತ್ತಿರುವಾಗ ವಿದೇಶಿ ಕರೆನ್ಸಿಗಳಲ್ಲಿ ಹಣವನ್ನು ಇಟ್ಟುಕೊಳ್ಳಲು, ನಿರ್ವಹಿಸಲು ಮತ್ತು ವ್ಯವಹಾರ ನಡೆಸಲು ನಿಮಗೆ ಅಧಿಕಾರವನ್ನು ನೀಡುತ್ತದೆ. ನೀವು ವಿದೇಶದಿಂದ ಹಿಂದಿರುಗುತ್ತಿರುವ ಭಾರತೀಯರಾಗಿರಲಿ ಅಥವಾ ವಿಶ್ವ-ಹಣಕಾಸು ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಹೊಂದಿರುವವರಾಗಿರಲಿ,, ಭಾರತದಲ್ಲಿ ವಾಸಿಸುತ್ತಿರುವಾಗ ನಿಮ್ಮ ವಿದೇಶಿ ಕರೆನ್ಸಿ ಆಸ್ತಿಗಳನ್ನು ನಿಮ್ಮ ಉಪಯೋಗಕ್ಕೆ ಬರುವಂತೆ ಬಳಸಿಕೊಳ್ಳಲು RFC ಖಾತೆಯು ಅನುಕೂಲ ಮಾಡಿ ಕೊಡುತ್ತದೆ. ನಿಮ್ಮ ನಿರ್ದಿಷ್ಟ ಅವಶ್ಯಕತೆಗಳಿಗೆ ಅನುಗುಣವಾಗಿ ಆರ್ಥಿಕ ಸ್ಥಿರತೆ ಮತ್ತು ಬೆಳವಣಿಗೆಯ ಅವಕಾಶಗಳನ್ನು ನೀಡುತ್ತದೆ.