ಕೃಷಿಕ್ ಪುಷ್ಪಾಂಕುರ ಲೋನ್

ಈ ಸಾಲವು ಹೂಗಾರಿಕೆ, ನರ್ಸರಿಗಳು ಮತ್ತು ಟಿಶ್ಯೂ ಕಲ್ಚರ್ ಬಗ್ಗೆ ಆಸಕ್ತಿ ಹೊಂದಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ವಿನ್ಯಾಸಗೊಳಿಸಲಾಗಿದೆ. ಈ ಸಾಲ ಸೌಲಭ್ಯವು ನಿಮ್ಮ ಯಶಸ್ಸಿನ ರೂವಾರಿಯಾಗಿದೆ. ನೀವು ನಿಮ್ಮ ತೋಟಗಾರಿಕೆಯನ್ನು  ಹೊಸದಾಗಿ ಪ್ರಾರಂಭಿಸುತ್ತಿರಲಿ ಅಥವಾ ವಿಸ್ತರಿಸುತ್ತಿರಲಿ, ಕೃಷಿಕ್ ಪುಷ್ಪಾಂಕುರ ಸಾಲವು ನಿಮಗೆ ಅನುಕೂಲಕರ ಮರುಪಾವತಿ ಆಯ್ಕೆಗಳನ್ನು ನೀಡುತ್ತದೆ. ಮಾತ್ರವಲ್ಲ,  ನಿಮ್ಮ  ಕೃಷಿ-ವ್ಯಾಪಾರ ಅಗತ್ಯಗಳಿಗೆ ಸುರಕ್ಷಿತ ಚೌಕಟ್ಟನ್ನು ಒದಗಿಸುತ್ತದೆ. ನಿಮ್ಮ ಕೃಷಿ ಸಂಬಂಧಿತ ಆಕಾಂಕ್ಷೆಗಳನ್ನು ನನಸಾಗಿಸುವ ಈ ಅವಕಾಶವನ್ನು ಉಪಯೋಗಿಸಿಕೊಳ್ಳಿ. ಇದು ನಿಮ್ಮ ಬೆಳವಣಿಗೆಯನ್ನು ಪೋಷಕವಾಗಿದೆ.ಮತ್ತಷ್ಟು ಓದು ಕಡಿಮೆ ಓದಿ

ನಿಮಗೇಕೆ ಈ ಸಾಲ ಸೂಕ್ತ

ಸರಳ ಸಾಲ ಸೌಲಭ್ಯಗಳೊಂದಿಗೆ ನಿಮ್ಮ ಕೃಷಿ ಅಗತ್ಯತೆಗಳಿಗೆ ಬೆಂಬಲ

ಹೂಗಾರಿಕೆ, ನರ್ಸರಿಗಳು ಮತ್ತು ಟಿಶ್ಯೂ ಕಲ್ಚರ್ ರೀತಿಯ ನಿಮ್ಮ ವಿಶಿಷ್ಟ ಉದ್ಯಮದ ಅಗತ್ಯತೆಗಳಿಗನುಗುಣವಾಗಿ ರೂಪಿಸಲಾಗಿದೆ.

ಸಮಗ್ರ ಕವರೇಜ್ ಗಾಗಿ ₹2 ಕೋಟಿಗಳವರೆಗೆ ಸಾಲ ಸೌಲಭ್ಯ ಪಡೆಯಿರಿ

ನಿಮ್ಮ ವ್ಯಾಪಾರಕ್ಕೆ ಅನುಕೂಲವಾಗುವಂತಹ ಅನೇಕ ಮರುಪಾವತಿ ಆಯ್ಕೆಗಳು

ಸಾಲದ ಮೊತ್ತ

ನಿಮ್ಮ ಯೋಜನೆಯ ಗಾತ್ರ ಮತ್ತು ಕಾರ್ಯಸಾಧ್ಯತೆಗೆ ಸೂಕ್ತವಾಗಿ ಹೊಂದಲು ಸಾಲದ ಮೊತ್ತದ ಶೇಕಡಾ 85%ವರೆಗೆ ನಾವು ಹಣಕಾಸು ಸಾಲ ಸೌಲಭ್ಯವನ್ನು ಒದಗಿಸುತ್ತೇವೆ. ನೀವು ಇದರ ಮರುಪಾವತಿಯ ಅವಧಿಯನ್ನು  ಗರಿಷ್ಟಮಿತಿ  9 ವರ್ಷಗಳವರೆಗೂ ವಿಸ್ತರಿಸಬಹುದು.. 

ಓವರ್ ಡ್ರಾಫ್ಟ್ ಸೌಲಭ್ಯ

ಒಂದು ವರ್ಷದವರೆಗೆ ಪುನರಾವರ್ತಿತ ವೆಚ್ಚಗಳ ಶೇಕಡಾ 75% ವರೆಗೆ ಓವರ್ ಡ್ರಾಫ್ಟ್ ಸೌಲಭ್ಯವನ್ನು ಒದಗಿಸುತ್ತೇವೆ 

ಸ್ವತ್ತುಗಳ ಹೈಪೋಥಿಕೇಷನ್

ಸಾಲ ಒದಗಿಸಿದ ಬೆಳೆಗಳು -  ಹೂವುಗಳು, ಸಸಿಗಳು, ಸಸ್ಯ ಸಾಮಗ್ರಿಗಳು ಅಥವಾ ಯಂತ್ರೋಪಕರಣಗಳು -  ಹೈಪೋಥಿಕೇಷನ್ ಕಡ್ಡಾಯ 

ಸ್ವತ್ತುಗಳ ಮೇಲಾಧಾರ

ಸಾಲ ಮೊತ್ತದ ಶೇಕಡಾ 100%ಗೆ ಸಮನಾಗಿರುವ ಸ್ವತ್ತು ನಮಗೆ ಭದ್ರೆತಯಾಗಿ ಬೇಕು. 

ನಿಮಗಾಗಿ ಯಾವ ಉತ್ಪನ್ನ ಸೂಕ್ತವೆಂದು ಖಚಿತವಾಗಿಲ್ಲವೇ?

ನಿಮಗಾಗಿ ಯಾವ ಉತ್ಪನ್ನ ಸೂಕ್ತವೆಂದು ಖಚಿತವಾಗಿಲ್ಲವೇ

  • ಯಾವುದೇ ಸ್ಪ್ಯಾಮ್ ಕರೆಗಳಿಲ್ಲ
  • ಸಮರ್ಪಿತ KBL ತಜ್ಞರು
  • ನಿಮ್ಮ ಸಮಯಕ್ಕೆ ಕರೆಯನ್ನು ಹೊಂದಿಸಿ

ಅರ್ಹತೆ

  • ಕೃಷಿ ಭೂಮಿ ಮಾಲೀಕತ್ವ ಅಥವಾ ಬಳಕೆಯ ಪುರಾವೆಯೊಂದಿಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳು, ಘಟಕಗಳು, ಸಂಸ್ಥೆಗಳು, ಕಂಪನಿಗಳು, HUFಗಳು ಮತ್ತು SHGಗಳು

ಅಗತ್ಯವಿರುವ ದಾಖಲೆಗಳು

  • CIBIL/CRIF  ಮತ್ತು ಕೆವೈಸಿ ದಾಖಲೆಗಳು  
  • ಯೋಜನೆ ಮತ್ತು ಅಂದಾಜು
  • RTCS
  • ERSAI ( ಅನ್ವಯವಾಗುತ್ತಿದ್ದಲ್ಲಿ)
  • EC  ಮತ್ತು RTC
  • ಆದಾಯ ತೆರಿಗೆ ಪಾವತಿಗಳು, ಆದಾಯ ಪುರಾವೆ
  • ಆಸ್ತಿಗಾಗಿ ಕಾನೂನು ದಾಖಲೆಗಳು
  • ಯೋಜನೆ ವರದಿ
  • ವಾರ್ಷಿಕ ಆದಾಯ ವರದಿ(ಅನ್ವಯವಾಗುತ್ತಿದ್ದಲ್ಲಿ)
  • ಉದ್ಯಮ್ registration certificate
  • ವಿಮೆ ನಕಲು ಪ್ರತಿ ಮತ್ತು ಸ್ಟಾಕ್ ಪ್ರತಿ (ಅನ್ವಯವಾಗುತ್ತಿದ್ದಲ್ಲಿ)

1,2,3...ರೀತಿಯಾಗಿ ಸರಳ

3 ಸರಳ ಹಂತಗಳಲ್ಲಿ ಕೆಬಿಎಲ್ ಕೃಷಿ ಸಮುದಾಯ ಲೋನ್ ಗಾಗಿ ಅರ್ಜಿ ಸಲ್ಲಿಸಿ

ಹಂತ 1

ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ

ನಿಮ್ಮ ಹತ್ತಿರದ ಕರ್ನಾಟಕ ಬ್ಯಾಂಕ್ ಶಾಖೆಗೆ ಹೋಗಿ

ಹಂತ 2

ನಿಮ್ಮ ಮೂಲ ವಿವರಗಳೊಂದಿಗೆ ಪ್ರಾರಂಭಿಸಿ

ನಿಮ್ಮ ಮೂಲ ವಿವರಗಳನ್ನು ಒದಗಿಸಿ ಮತ್ತು ನಿಮ್ಮ ದಾಖಲೆಗಳನ್ನು ಕೈಯಲ್ಲಿಡಿ

ಹಂತ 3

ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ

ನಿಮ್ಮ ಖಾತೆಯನ್ನು ತೆರೆದಾಗ ನಮ್ಮ ಶಾಖೆಯ ಅಧಿಕಾರಿಗಳು ನಿಮಗೆ ತಿಳಿಸುತ್ತಾರೆ

1,2,3...ರೀತಿಯಾಗಿ ಸರಳ

ನಿಮಗಾಗಿರುವ ಇತರ ಆಯ್ಕೆಗಳನ್ನು ನೋಡಿ

ಹಣಕಾಸಿನ ಶ್ರೇಷ್ಠತೆಗಾಗಿ ಆರಿಸಲಾಗಿರುವ ಸಾವಿರಾರು ಜನರ ಭರವಸೆ

ಸರಳ ಮಾಹಿತಿಯೊಂದಿಗೆ ಅಗ್ರಿಬ್ಯಾಂಕಿಂಗ್ ಸರಳಗೊಳಿಸಿ

ಪ್ರತಿ ಕ್ಷಣವೂ ನಿಮಗೆ ಮಾಹಿತಿ ಒದಗಿಸುವ ನಮ್ಮ ಸಂಪನ್ಮೂಲಗಳು

match-made
ಬ್ಯಾಂಕಿಂಗ್ ಸ್ವರ್ಗದಲ್ಲಿ ಮಾಡಿದ ಹೊಂದಾಣಿಕೆ: ಉಳಿತಾಯ ಖಾತೆ ಆವೃತ್ತಿ

navigating-pers
ನಿಮ್ಮ ಆರಂಭಿಕ 20 ರ ದಶಕದಲ್ಲಿ ವೈಯಕ್ತಿಕ ಸಾಲಗಳನ್ನು ನ್ಯಾವಿಗೇಟ್ ಮಾಡುವುದು- ಇದು ಒಳ್ಳೆಯ ಐಡಿಯಾವೇ?

savings-accoun
ಉಳಿತಾಯ ಖಾತೆ: ರೂಢಿಗಳನ್ನು ಮುರಿಯುವುದು ಮತ್ತು ಸಂಪತ್ತನ್ನು ನಿರ್ಮಿಸುವುದು

vehicle-loans
ಮಹತ್ವಾಕಾಂಕ್ಷೆಯ ಡೆಲಿವರಿ ಪಾಲುದಾರರು ಮತ್ತು ಕ್ಯಾಬ್ ಚಾಲಕರಿಗೆ ವಾಹನ ಸಾಲಗಳು

why-should
ನೀವು ಅರೆ ಸುಸಜ್ಜಿತ ಅಪಾರ್ಟ್ಮೆಂಟ್ಗೆ ಏಕೆ ಹೋಗಬೇಕು?

ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ
ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ

ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ
ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ

the-wisdom
ನಿವೃತ್ತ ಜನರಿಗೆ ತ್ವರಿತ ಚಿನ್ನದ ಸಾಲಗಳ ಬುದ್ಧಿವಂತಿಕೆ - ಆರ್ಥಿಕ ಭದ್ರತೆಯನ್ನು ಅನ್ಲಾಕ್ ಮಾಡಿ

ಪ್ರಶ್ನೆಗಳಿವೆಯೇ? ನಾವು ಉತ್ತರಿಸುತ್ತೇವೆ

ಕೃಷಿ ವ್ಯವಹಾರ ಸಾಲಗಳ ಪ್ರಯೋಜನಗಳು

ಕೃಷಿ ವ್ಯವಹಾರ ಸಾಲಗಳು ರೈತರು ಮತ್ತು ಕೃಷಿ ವ್ಯವಹಾರಗಳಿಗಾಗಿ ಪ್ರಮುಖ ಹಣಕಾಸಿನ ಬೆಂಬಲವನ್ನು ಒದಗಿಸುತ್ತದೆ. ಇದು ಸಮರ್ಥ ಕೃಷಿ ಕಾರ್ಯಾಚರಣೆಗಳಿಗೆ ಅಗತ್ಯವಿರುವ ಉಪಕರಣಗಳು, ತಂತ್ರಜ್ಞಾನ ಮತ್ತು ಸಂಪನ್ಮೂಲಗಳಲ್ಲಿ ಹೂಡಿಕೆ ಮಾಡಲು ಅನುಕೂಲ ಮಾಡಿಕೊಡುತ್ತದೆ.  ಈ ವಿಶೇಷ ಸಾಲಗಳು ಕೃಷಿ ವಲಯಗಳ ವಿಶಿಷ್ಟ ಅಗತ್ಯತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ನೀವು ಕೃಷಿ ಸಾಲಕ್ಕಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು, ಲಭ್ಯವಿರುವ ಕೆಲವು ಅತ್ಯುತ್ತಮ ಕೃಷಿ-ವ್ಯಾಪಾರ ಸಾಲಗಳಿಗಾಗಿ ಇಲ್ಲಿ ನೋಡಬಹುದು. ಇದು ಉತ್ಪಾದನೆ ಮತ್ತು ಲಾಭದಾಯಕತೆಯನ್ನು ಗಣನೀಯವಾಗಿ ಹೆಚ್ಚಿಸಬಹುದು. 

ಕೃಷಿ -ವ್ಯವಹಾರ ಸಾಲಗಳ ಮೇಲೆ ಬಡ್ಡಿ ದರಗಳನ್ನು ಸಾಮಾನ್ಯವಾಗಿ ಕೃಷಿ ಸಮುದಾಯವನ್ನು ಬೆಂಬಲಿಸಲು ವಿಶಿಷ್ಟವಾಗಿ ರೂಪಿಸಲಾಗಿದೆ. ಇದರಿಂದ ಇದು ಇತರೆ ಸಾಮಾನ್ಯ ವಾಣಿಜ್ಯ ಸಾಲಗಳಿಗೆ ಹೋಲಿಸಿದರೆ ಬಹಳ ಅನುಕೂಲಕರವಾಗಿರುತ್ತದೆ. ನೀವು ನಿಮ್ಮ ಅರ್ಜಿ ಪ್ರಕ್ರಿಯೆಯನ್ನು ಆರಂಭಿಸುವಾಗ ಈ ದರಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ.  ಏಕೆಂದರೆ ಇದು ನೇರವಾಗಿ ನಿಮ್ಮ ಮರುಪಾವತಿ ನಿಯಮಗಳು ಮತ್ತು ಸಾಲದ ಒಟ್ಟಾರೆ ವೆಚ್ಚಗಳ ಮೇಲೆ ಪರಿಣಾಮ ಬೀರುತ್ತದೆ. 

ಸಾಲದ ಬಳಕೆ ಮತ್ತು ಮರುಪಾವತಿಯ ಕುರಿತು ನೀವು ಸ್ಪಷ್ಟ ಯೋಜನೆಯನ್ನು ಹೊಂದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಆನ್ಲೈನ್ ಅರ್ಜಿ ಪ್ರಕ್ರಿಯೆಯನ್ನು ಸಲ್ಲಿಸಲು ಎಲ್ಲಾ ಅಗತ್ಯ ದಾಖಲೆಗಳನ್ನು ತಯಾರಿಟ್ಟುಕೊಳ್ಳಿ. ಕೃಷಿ-ವ್ಯವಹಾರ ಸಾಲಗಳಿಗಾಗಿ ಲಭ್ಯವಿರುವ ಸರ್ಕಾರೀ ಸಬ್ಸಿಡಿಗಳು ಅಥವಾ ವಿಶೇಷ ಕಾರ್ಯಕ್ರಮಗಳನ್ನು ನಿರ್ಲಕ್ಷಿಸದಿರಿ. ನಿಮ್ಮ ಆರ್ಥಿಕ ಸ್ಥಿತಿಯನ್ನು ನಿರ್ವಹಿಸಲು ನಿಮ್ಮ ಸಾಲವನ್ನು ನಿಯಮಿತವಾಗಿ ನಿಗಾವಣೆ ಮತ್ತು ನಿರ್ವಹಣೆ ಮಾಡಿ.