ನಮ್ಮ ಖಾತೆಗಳನ್ನು ಏಕೆ ಆರಿಸಬೇಕು
ಬ್ಯಾಂಕಿಂಗ್ಗೂ ಮೀರಿದ ಪ್ರಯೋಜನಗಳನ್ನು ಅನ್ವೇಷಿಸಿ.
ನಿಮ್ಮ ಪ್ರತಿಯೊಂದು ಅಗತ್ಯಕ್ಕೆ ನಮ್ಮ ವ್ಯಾಪಕ ಶ್ರೇಣಿಯ ಬ್ಯಾಂಕ್ ಖಾತೆಗಳು
ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ತ್ವರಿತ ಮತ್ತು ಸುಗಮ ವಹಿವಾಟುಗಳನ್ನು ಆನಂದಿಸಿ
ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಸಾಮಾಜಿಕ ಭದ್ರತೆ ಮತ್ತು ವಿಮಾ ಯೋಜನೆಗಳಂತಹ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಿರಿ
ಸದಾಕಾಲ ನಿಮ್ಮೊಂದಿಗೆ
ಸಮರ್ಪಿತ KBL ತಜ್ಞರಿಂದ 24x7 ವೈಯಕ್ತಿಕ ನೆರವು
ಪ್ರಶ್ನೆಗಳಿವೆ? ನಮ್ಮಲ್ಲಿ ಉತ್ತರಗಳಿವೆ
FAQ ಗಳುಕರ್ಣಾಟಕ ಬ್ಯಾಂಕ್ ನಮ್ಮ ಗ್ರಾಹಕರ ಜೀವನದ ವೈವಿಧ್ಯಮಯ ಆರ್ಥಿಕ ಸ್ಥಿತಿಗತಿಗಳನ್ನು ಗುರುತಿಸುತ್ತದೆ. ಈ ತಿಳಿವಳಿಕೆಯು ನಮ್ಮ ಖಾತೆಯ ಕೊಡುಗೆಗಳನ್ನು ರೂಪಿಸಿದೆ, ನೀವು ಭವಿಷ್ಯಕ್ಕಾಗಿ ಉಳಿಸಲು, ದೈನಂದಿನ ವೆಚ್ಚಗಳನ್ನು ನಿರ್ವಹಿಸಲು ಅಥವಾ ವ್ಯಾಪಾರದ ಹಣಕಾಸುಗಳನ್ನು ನಿರ್ವಹಿಸಲು ಅನುವಾಗುವಂತೆ ನಿಮಗಾಗಿಯೇ ಒಂದು ಖಾತೆಯನ್ನು ವಿನ್ಯಾಸಗೊಳಿಸಲಾಗಿದೆ. ಬಡ್ಡಿ-ಗಳಿಸುವುದಕ್ಕೆ, ಸುರಕ್ಷತೆಗಾಗಿ ಶ್ರೇಷ್ಠ ಉಳಿತಾಯ ಖಾತೆಯನ್ನು ಆಯ್ಕೆ ಮಾಡಿ. ವಿದ್ಯಾರ್ಥಿಗಳು ಅಥವಾ ವ್ಯವಹಾರಗಳಂತಹ ನಿರ್ದಿಷ್ಟ ಗುಂಪುಗಳನ್ನು ಪೂರೈಸುವ ವಿಶೇಷ ಖಾತೆಗಳನ್ನು ನೋಡಿ. ನಮ್ಮೊಂದಿಗೆ ತಮ್ಮ ಹಣಕಾಸಿನ ಪ್ರಯಾಣವನ್ನು ಪ್ರಾರಂಭಿಸಲು ಸಿದ್ಧರಾಗಿರುವವರಿಗೆ, ಆನ್ಲೈನ್ನಲ್ಲಿ ಖಾತೆಯನ್ನು ತೆರೆಯುವ ತ್ವರಿತ ಪ್ರಕ್ರಿಯೆಯು ಕರ್ನಾಟಕ ಬ್ಯಾಂಕ್ ಕುಟುಂಬವನ್ನು ಸೇರಲು ನೇರವಾದ ಮಾರ್ಗವನ್ನು ಒದಗಿಸುತ್ತದೆ. ಇಲ್ಲಿ, ಪ್ರತಿಯೊಂದು ಖಾತೆಯು ಸುಲಭವಾದ ಬ್ಯಾಂಕ್ ಖಾತೆಯಾಗಿದ್ದು, ಗ್ರಾಹಕರ ಅನುಕೂಲಕ್ಕಾಗಿ ವಿನ್ಯಾಸಗೊಳಿಸಲಾಗಿದೆ.
ಕರ್ನಾಟಕ ಬ್ಯಾಂಕ್ನಲ್ಲಿನ ಉಳಿತಾಯ ಖಾತೆಗಳು ಬಡ್ಡಿ- ಸಂಬಂಧ ಮತ್ತು ತಮ್ಮ ಹಣದ ಬಗ್ಗೆ ನಿಯಮಿತವಾಗಿ ತಿಳಿಯುವ ಅವಕಾಶವನ್ನು ಹೊಂದಿದ್ದು ತಮ್ಮ ಉಳಿತಾಯವನ್ನು ಹೆಚ್ಚಿಸಲು ಬಯಸುವ ವ್ಯಕ್ತಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಮತ್ತೊಂದೆಡೆ, ಕರೆಂಟ್ ಅಕೌಂಟ್ಸ್ ವ್ಯಾಪಾರ ಮಾಲೀಕರು ಮತ್ತು ಹೆಚ್ಚಿನ ಪ್ರಮಾಣದ ವಹಿವಾಟುಗಳನ್ನು ಆಗಾಗ್ಗೆ ನಿರ್ವಹಿಸುವ ವ್ಯಕ್ತಿಗಳಿಗೆ ಅನುಗುಣವಾಗಿರುತ್ತವೆ. ಅವು ಯಾವುದೇ ಬಡ್ಡಿಯನ್ನು ನೀಡುವುದಿಲ್ಲ ಆದರೆ ಅನಿಯಮಿತ ವಹಿವಾಟುಗಳನ್ನು ನಡೆಸಲು ಪೂರವಾಗಿದೆ. ಎರಡೂ ರೀತಿಯ ಖಾತೆಗಳು ಕರ್ಣಾಟಕ ಬ್ಯಾಂಕಿನ ವಿಶ್ವಾಸಾರ್ಹ ಸೇವೆಯ ಭರವಸೆಯೊಂದಿಗೆ ಬರುತ್ತವೆ. ತಮ್ಮ ಹಣಕಾಸಿನ ನಿರ್ವಹಣೆಯನ್ನು ಸುವ್ಯವಸ್ಥಿತಗೊಳಿಸಲು ಬಯಸುವವರು ತಮ್ಮ ಆರ್ಥಿಕ ಅಗತ್ಯಗಳಿಗಾಗಿ ಸರಿಯಾದ ಸಾಧನವನ್ನು ಹೊಂದಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಆನ್ಲೈನ್ನಲ್ಲಿ ಖಾತೆಯನ್ನು ತೆರೆಯುವ ಸುಲಭೋಪಾಯ ಇದಾಗಿದೆ. ಇದು ಉಳಿತಾಯ ಅಥವಾ ದೈನಂದಿನ ವ್ಯವಹಾರ ಗಳಿಗಿರಲಿ, ಕರ್ನಾಟಕ ಬ್ಯಾಂಕ್ನ ಖಾತೆಗಳು ಭದ್ರತೆ ಮತ್ತು ದಕ್ಷತೆಯನ್ನು ನೀಡುತ್ತವೆ.