ಸುರಕ್ಷಿತ ಡೆಪಾಸಿಟ್ ಲಾಕರ್ ಗಳು
ಇಂದಿನ ಜಗತ್ತಿನಲ್ಲಿ, ಆಭರಣಗಳಿಂದ ಹಿಡಿದು ಪ್ರಮುಖ ದಾಖಲೆಗಳವರೆಗೆ ನಿಮ್ಮ ಬೆಲೆಬಾಳುವ ವಸ್ತುಗಳ ಸುರಕ್ಷತೆ ಬಹಳ ಮುಖ್ಯವಾಗಿದೆ. ನಿಮ್ಮ ಅತ್ಯಮೂಲ್ಯ ವಸ್ತುಗಳಿಗಾಗಿ ನಮ್ಮ ಸದೃಢ ಲಾಕರ್ ಸೌಲಭ್ಯವು ಒಂದು ಸುಭದ್ರ ಸ್ಥಳವಾಗಿದೆ. ಸ್ಥಳ ಮತ್ತು ಲಾಕರ್ ಗಾತ್ರವನ್ನು ಆಧರಿಸಿ ಸ್ಪರ್ಧಾತ್ಮಕ ಬಾಡಿಗೆ ಬೆಲೆಗಳು ಮತ್ತು ನಿಮ್ಮ ಬ್ಯಾಂಕ್ ಖಾತೆಯಿಂದ ನೇರವಾಗಿ ಅನುಕೂಲಕರ ಪಾವತಿಯ ಆಯ್ಕೆಗಳೊಂದಿಗೆ, ನಿಮ್ಮ ಬೆಲೆಬಾಳುವ ವಸ್ತುಗಳನ್ನು ರಕ್ಷಿಸುವುದು ಎಂದಿಗೂ ಸುಲಭದ ಮಾತಲ್ಲ. ಅದು ನಿಮ್ಮ ಕುಟುಂಬದ ಚರಾಸ್ತಿಯಾಗಿರಲಿ, ನಿರ್ಣಾಯಕ ದಾಖಲೆಗಳಾಗಿರಲಿ ಅಥವಾ ಇತರ ವೈಯಕ್ತಿಕ ಸಂಪತ್ತುಗಳಾಗಿರಲಿ, ನಮ್ಮ ಲಾಕರ್ ಸೌಲಭ್ಯವು ನಿಮಗೆ ಅಗತ್ಯವಿರುವ ಸುರಕ್ಷತೆ ಮತ್ತು ಮನಸ್ಸಿನ ಶಾಂತಿಯನ್ನು ಒದಗಿಸುತ್ತದೆ. ಮತ್ತಷ್ಟು ಓದು
ಮತ್ತಷ್ಟು ಓದು
ನಿಮಗೆ ವಿಶೇಷವಾಗಿರುವುದನ್ನು ರಕ್ಷಿಸುವುದು
ಮುಂಗಡವಾಗಿ ಪಾವತಿಸಬಲ್ಲ ನೇರ ವಾರ್ಷಿಕ ಶುಲ್ಕಗಳು
ಡಿಜಿಟಲ್-ಮೊದಲ ಅಪ್ಲಿಕೇಶನ್ ಮತ್ತು KYC ಪ್ರಕ್ರಿಯೆಯನ್ನು ಆನಂದಿಸಿ
ನಿಮ್ಮ ಬೆಲೆಬಾಳುವ ವಸ್ತುಗಳಿಗೆ ಅತ್ಯಾಧುನಿಕ ಭದ್ರತೆಯನ್ನು ಒದಗಿಸುವುದು
ಯಾವುದೇ ಗುಪ್ತ ಶುಲ್ಕಗಳಿಲ್ಲ
ನಾವು ಸ್ವಚ್ಛ ಮತ್ತು ಪ್ರಾಮಾಣಿಕ ಬ್ಯಾಂಕಿಂಗ್‌ಗೆ ಆದ್ಯತೆ ನೀಡುತ್ತೇವೆ. ನೀವು ನೋಡುವುದನ್ನು ನೀವು ಪಡೆಯುತ್ತೀರಿ.
100%
ಪಾರದರ್ಶಕ
& ಮುಂಗಡ
ಅಗತ್ಯವಿರುವ ದಾಖಲೆಗಳು
- ಪ್ಯಾನ್ ಕಾರ್ಡ್/ ಆಧಾರ್ ಕಾರ್ಡ್ ಅಥವಾ ಚಾಲಕರ ಪರವಾನಗಿ
- ವಿಳಾಸದ ಪುರಾವೆ
- ಕೆವೈಸಿ ದಾಖಲೆಗಳ ಸ್ಕ್ಯಾನ್ ಅಥವಾ ಅಸಲಿ ಪ್ರತಿ
- Form 15G/H if applicable
- ಪ್ಯಾನ್ ಕಾರ್ಡ್/ಆಧಾರ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್
- ವಿಳಾಸ ಪುರಾವೆ
- KYC ಡಾಕ್ಯುಮೆಂಟ್‌ಗಳ ಸ್ಕ್ಯಾನ್ ಅಥವಾ ಸಾಫ್ಟ್ ಕಾಪಿ
- ಅನ್ವಯವಾಗುತ್ತಿದ್ದಲ್ಲಿ 15G/H ಅರ್ಜಿ
1,2,3 ಅಷ್ಟು ಸುಲಭ...
3 ಸರಳ ಹಂತಗಳಲ್ಲಿ ಸೇಫ್ ಡೆಪಾಸಿಟ್ ಲಾಕರ್ ಗಾಗಿ ಅರ್ಜಿ ಸಲ್ಲಿಸಿ
ಹಂತ 1
ನಿಮ್ಮ ಶಾಖೆ ಅಥವಾ ಆನ್ಲೈನ್ ಭೇಟಿ ನೀಡಿ
ನಿಮ್ಮ ಹತ್ತಿರದ ಕರ್ಣಾಟಕ ಬ್ಯಾಂಕ್ ಶಾಖೆಗೆ ಹೋಗಿ ಅಥವಾ ಆನ್ಲೈನ್ ಅರ್ಜಿ ಕಳುಹಿಸಿ
ಹಂತ 2
ನಿಮ್ಮ ಅರ್ಜಿಯನ್ನು ಭರ್ತಿ ಮಾಡಿ
ಲಾಕರ್ ಅರ್ಜಿಯನ್ನು ಭರ್ತಿ ಮಾಡಿ ಮತ್ತು ಸಲ್ಲಿಸಿ
ಹಂತ 3
ನಿಮ್ಮ ವಿವರಗಳನ್ನು ಪರಿಶೀಲಿಸಿ
ಹಂಚಿಕೆಗಾಗಿ ಶಾಖೆಯಲ್ಲಿ ಬುಕಿಂಗ್ ಉಲ್ಲೇಖ ಸಂಖ್ಯೆಯನ್ನು ತೋರಿಸಿ
ನಿಮಗಾಗಿರುವ ಇತರ ಆಯ್ಕೆಗಳನ್ನು ನೋಡಿ
ಸಾವಿರಾರು ಜನರ ಮನಸ್ಸು ಗೆದ್ದಿದೆ ಮತ್ತು ಹಣಕಾಸಿನ ಶ್ರೇಷ್ಠತೆಗಾಗಿ ಆರಿಸಲಾಗಿದೆ
ಸುಲಭ ಓದುವಿಕೆಯೊಂದಿಗೆ ಬ್ಯಾಂಕಿಂಗ್ ಅನ್ನು ಸರಳಗೊಳಿಸಿ
ನಿಮಗೆ ಮಾಹಿತಿ ನೀಡುವ ಬೈಟ್-ಗಾತ್ರದ ಸಂಪನ್ಮೂಲಗಳು
ಪ್ರಶ್ನೆಗಳಿವೆಯೇ? ನಾವು ಅದಕ್ಕೆ ಉತ್ತರಿಸುತ್ತೇವೆ.
ಸರಿಯಾದ ಲಾಕರ್ ಗಾತ್ರವನ್ನು ಆಯ್ಕೆ ಮಾಡಲು, ನೀವು ಸಂಗ್ರಹಿಸಿಡಲು ಬಯಸುವ ವಸ್ತುಗಳ ಪರಿಮಾಣವನ್ನು ಪರಿಶೀಲಿಸಿ. ಕರ್ಣಾಟಕ ಬ್ಯಾಂಕಿನಲ್ಲಿರುವ ನಮ್ಮ ಸಿಬ್ಬಂದಿಯು ನಿಮ್ಮ ಸಂಗ್ರಹಣೆ ಅಗತ್ಯತೆಗಳನ್ನು ಆಧರಿಸಿ ಸೂಕ್ತ ಗಾತ್ರವನ್ನು ಆಯ್ಕೆ ಮಾಡಲು ನಿಮಗೆ ಸಹಾಯ ಮಾಡುತ್ತಾರೆ.
ಕರ್ಣಾಟಕ ಬ್ಯಾಂಕಿನಲ್ಲಿ ಲಾಕರ್ ಬಾಡಿಗೆಯನ್ನು ಪಡೆಯುವ ದರಗಳು ಲಾಕರ್ ಗಾತ್ರ ಮತ್ತು ಶಾಖೆಯ ಸ್ಥಳದ ಮೇಲೆ ಆಧರಿಸಿರುತ್ತದೆ. ನಮ್ಮ ಲಾಕರ್ ಬಾಡಿಗೆ ದರಗಳು ಬಹಳ ಕಡಿಮೆ ಮತ್ತು ಸ್ಪರ್ಧಾತ್ಮಕವಾಗಿದ್ದು ನಿಮ್ಮ ಆಯ್ಕೆಗೆ ಒಂದು ಮೌಲ್ಯವನ್ನು ನೀಡುತ್ತದೆ.
ಕರ್ಣಾಟಕ ಬ್ಯಾಂಕಿನಲ್ಲಿ, ನಿಮ್ಮ ಗೈರುಹಾಜರಿಯಲ್ಲಿ ಅಥವಾ ನೀವು ಲಾಕರ್ ಬಳಸಲು ಸಾಧ್ಯವಾಗದೇ ಇದ್ದ ಸಮಯದಲ್ಲಿ ನಾವು ಒಬ್ಬ ವ್ಯಕ್ತಿಯನ್ನು ನಾಮಿನಿ ಯನ್ನಾಗಿ ಮಾಡುವ ಆಯ್ಕೆಯನ್ನು ಹೊಂದಿದ್ದೇವೆ. ಇದು ಯಾವುದೇ ಅಹಿತಕರ ಘಟನೆಯಾದ ಸಂದರ್ಭದಲ್ಲಿ, ನಿಮ್ಮ ಬೆಲೆಬಾಳುವ ವಸ್ತುಗಳು ಸರಿಯಾದ ವಾರೀಸುದಾರರಿಗೆ ಲಭ್ಯವಗುವ ಅವಕಾಶವನ್ನು ಕೊಡುತ್ತದೆ.
ನಿಮ್ಮ ಲಾಕರ್ ಬಾಡಿಗೆಯನ್ನು ಪಾವತಿಸುವುದು ಬಹಳ ಅನುಕೂಲಕರ ಮತ್ತು ನೇರವಾಗಿದೆ. ನಿಮ್ಮ ಕರ್ಣಾಟಕ ಬ್ಯಾಂಕ್ ಖಾತೆಯಿಂದ ಸ್ಟ್ಯಾಂಡಿಂಗ್ ಸೂಚನೆಗಳನ್ನು ನೀಡಿದಾಗ, ಯಾವುದೇ ಸಮಸ್ಯೆಯಿಲ್ಲದೆ ವಾರ್ಷಿಕವಾಗಿ ಬಾಡಿಗೆಯು ಸ್ವಯಂಚಾಲಿತವಾಗಿ ಕಡಿತಗೊಳ್ಳುತತದೆ.
ಕರ್ಣಾಟಕ ಬ್ಯಾಂಕಿನಲ್ಲಿರುವ ಲಾಕರ್ ನಲ್ಲಿರುವ ನಿಮ್ಮ ವಸ್ತುಗಳು ಬಹಳ ಸುಭದ್ರವಾಗಿ ಸಂಗ್ರಹಣೆಯಾಗಿದ್ದಾಗ, ಬ್ಯಾಂಕ್ ಮೂಲಕ ಅದರ ಮೇಲೆ ಯಾವುದೇ ರೀತಿಯ ವಿಮೆ ಇರುವುದಿಲ್ಲ. ಯಾವುದೇ ಅನಿರೀಕ್ಷಿತ ಘಟನೆಗಳ ವಿರುದ್ಧ ಹೆಚ್ಚುವರಿ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಅಮೂಲ್ಯ ವಸ್ತುಗಳಿಗೆ ಪ್ರತ್ಯೇಕ ವಿಮೆಯನ್ನು ತೆಗೆದುಕೊಳ್ಳುವಂತೆ ನಾವು ಶಿಫಾರಸು ಮಾಡುತ್ತೇವೆ.
ಕರ್ಣಾಟಕ ಬ್ಯಾಂಕಿನಲ್ಲಿರುವ ಸೇಫ್ ಡೆಪಾಸಿಟ್ ಲಾಕರ್ ಗಳು ನಿಮ್ಮ ಮೌಲ್ಯಯುತ ವಸ್ತುಗಳು ಮತ್ತು ಪ್ರಮುಖ ದಾಖಲೆಗಳನ್ನು ರಕ್ಷಿಸುವಂಥ ಸುಭದ್ರ ಸೇವೆಯನ್ನು ನೀಡುತ್ತದೆ. ಈ ಲಾಕರ್ ಗಳು ಅನೇಕ ಅಳತೆಗಳಲ್ಲಿ ಲಭ್ಯವಿದ್ದು, ವಿಭಿನ್ನ ಸಂಗ್ರಹಣೆಯ ಅಗತ್ಯತೆಗಳನ್ನು ಪೂರೈಸುವುದಲ್ಲದೆ, ಇದನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದೆ. ಆದ್ದರಿಂದ ನೀವು ನಿಮ್ಮ ವಸ್ತುಗಳ ಕುರಿತಾಗಿ ನೆಮ್ಮದಿಯಾಗಿರಬಹುದು. ನಮ್ಮ ಸೇಫ್ ಡೆಪಾಸಿಟ್ ಲಾಕರ್ ಸೌಲಭ್ಯದೊಂದಿಗೆ ನಿಮ್ಮ ಮೌಲ್ಯಯುತ ವಸ್ತುಗಳನ್ನು ರಕ್ಷಿಸಿರಿ. ನಿಮ್ಮ ಅಗತ್ಯಗಳಿಗೆ ಹೊಂದಿಕೊಳ್ಳುವಂತೆ ನಾವು ಅನೇಕ ಬಗೆಗಳ ಬ್ಯಾಂಕ್ ಲಾಕರ್ ನೀಡುತ್ತೇವೆ, ಪ್ರತಿಯೊಂದೂ ಅಧಿಕ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳುವ ನಮ್ಮ ಬ್ಯಾಂಕ್ ಲಾಕರ್ ಸೌಲಭ್ಯದೊಂದಿಗೆ ಬೆಂಬಲಿತವಾಗಿದೆ. ನಮ್ಮ ಪಾರದರ್ಶಕ ಬ್ಯಾಂಕ್ ಲಾಕರ್ ಶುಲ್ಕಗಳು ನಿಮಗೆ ಯಾವುದೇ ದುಬಾರಿ ಹಣ ವ್ಯರ್ಥಮಾಡದೆ ನಿಮಗೆ ಸರಿಯಿರುವ ಲಾಕರ್ ಸೌಲಭ್ಯವನ್ನು ಒದಗಿಸುತ್ತದೆ.
ಅನುಕೂಲಕರ ಕಾರ್ಯಾಚರಣೆ ಗಂಟೆಗಳು ಮತ್ತು ಗೌಪ್ಯ ಖಾತರಿಯೊಂದಿಗೆ ಈ ಲಾಕರ್ ಗಳನ್ನು ಬಳಸುವುದು ಮತ್ತು ಪ್ರವೇಶಿಸುವುದು ಒಂದು ನೇರ ಪ್ರಕ್ರಿಯೆಯಾಗಿದೆ. ಬ್ಯಾಂಕಿನ ಸುಗಮಗೊಳಿಸಿದ ಕಾರ್ಯವಿಧಾನಗಳು ನಿಮ್ಮ ಲಾಕರ್ ಬಾಡಿಗೆ ಪಡೆಯುವುದು ಮತ್ತು ಕಾರ್ಯನಿರ್ವಹಣೆಯನ್ನು ಸಮಸ್ಯೆಯಿಲ್ಲದಂತೆ ಮಾಡುವುದನ್ನು ಖಾತ್ರಿಪಡಿಸುತ್ತದೆ.
ನಿಮ್ಮ ಲಾಕರ್ ನಲ್ಲಿರುವ ವಸ್ತುಗಳನ್ನು ನಿಯಮಿತವಾಗಿ ಪರಿಶೀಲಿಸುತ್ತಿರಿ ಮತ್ತು ನವೀಕರಿಸುತ್ತೀರಿ. ನಿಮ್ಮ ದಾಖಲೆಗಾಗಿ ಸಂಗ್ರಹಿಸಿದ ವಸ್ತುಗಳ ಗೌಪ್ಯ ಪಟ್ಟಿಯನ್ನು ಮಾಡಿ. ಲಾಕರ್ ನಲ್ಲಿ ಹಾಳಾಗುವಂತಹ ಅಥವಾ ಕಾನೂನುಬಾಹಿರ ವಸ್ತುಗಳನ್ನು ಇಡಬೇಡಿ. ಯಾವುದೇ ಸಮಸ್ಯೆಯನ್ನು ತಪ್ಪಿಸಲು ನಿಗದಿತ ಸಮಯದೊಳಗೆ ಲಾಕರ್ ಬಾಡಿಗೆಯನ್ನು ಪಾವತಿಸಿ