ಕೆಬಿಎಲ್ ಇನಸ್ಟಂಟ್ ಅಗ್ರಿ ಕ್ರೆಡಿಟ್
ಕೃಷಿ ವಲಯದ ವೈವಿಧ್ಯಮಯ ಅಗತ್ಯತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ತ್ವರಿತ ಸಾಲ ಯೋಜನೆ ಇದಾಗಿದೆ. ನೀವು ಒಬ್ಬ ರೈತನಾಗಿರಬಹುದು ಅಥವಾ ಯಾವುದೇ ಸಹಕಾರಿ ಸಂಘಗಳಲ್ಲಿ ಭಾಗಿಯಾಗಿರಬಹುದು, ಈ ಯೋಜನೆ ನಿಮಗೆ ಸೂಕ್ತವಾಗಿದೆ. ಇದಕ್ಕಾಗಿ 24 ತಿಂಗಳುಗಳವರೆಗಿನ ಗರಿಷ್ಟ ಮರುಪಾವತಿ ಅವಧಿಯನ್ನು ನೀಡಲಾಗುತ್ತದೆ. ನಿಮ್ಮ ಠೇವಣಿ ಮೌಲ್ಯದ ಶೇಕಡಾ 90% ವರೆಗೆ ಸಾಲದ ಮಿತಿಯಿರುತ್ತದೆ. ಇದು ಬೆಳೆ ವ್ಯವಸಾಯದಿಂದ ಹಿಡಿದು ಸಂಬಂಧಿತ ಕೃಷಿ ಚಟುವಟಿಕೆಯ ಅಭಿವೃದ್ಧಿಗಾಗಿ ಮಾಡಿದ ವೆಚ್ಚಗಳಿಗೆ ಹಣಕಾಸು ಒದಗಿಸಲು ಇರುವ ಸುರಕ್ಷಿತ ಮತ್ತು ಪರಿಣಾಮಕಾರಿ ವಿಧಾನವಾಗಿದೆ.ಮತ್ತಷ್ಟು ಓದು ಕಡಿಮೆ ಓದಿ
ನಿಮಗೇಕೆ ಈ ಸಾಲ ಸೂಕ್ತ
ಸರಳ ಪರಿಹಾರಗಳೊಂದಿಗೆ ನಿಮ್ಮ ಕೃಷಿ ಅಗತ್ಯತೆಗಳಿಗೆ ಬೆಂಬಲ
ಓವರ್ ಡ್ರಾಫ್ಟ್ ಅಥವಾ ಸ್ಥಿರ ಸಾಲದೊಂದಿಗೆ ಠೇವಣಿ ಮೌಲ್ಯದ ಶೇಕಡಾ 90% ವರೆಗಿನ ಹಣವನ್ನು ಪಡೆಯಿರಿ
ತಕ್ಷಣದ ಕೃಷಿ ಅಗತ್ಯತೆಗಳಿಗಾಗಿ ತ್ವರಿತ ಮತ್ತು ಅಗತ್ಯ ಸಾಲ
ಕೆಬಿಎಲ್ ನ ವಿಶ್ವಾಸಾರ್ಹ ಸೇವಾ ಪರಂಪರೆ ಮತ್ತು ಸುರಕ್ಷಿತ ಸಾಲ ಸೌಲಭ್ಯದ ಹಿನ್ನೆಲೆಯೊಂದಿಗೆ ಸ್ಥಿರ ಠೇವಣಿ ಅಡಮಾನ
ಅರ್ಹತೆ
- ಖಾಸಗಿ ರೈತರು ಮತ್ತು ಕೃಷಿಕರು
- ಕೃಷಿ ಸಂಘಟನೆಗಳು ಮತ್ತು ದೊಡ್ಡ ಪ್ರಮಾಣದ ಕೃಷಿ ವ್ಯವಹಾರಗಳು
- ಪಾಲುದಾರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷಿ ಉದ್ಯಮಗಳು
- ಕೃಷಿ ಸೊಸೈಟಿಗಳು ಮತ್ತು ಸಂಸ್ಥೆಗಳು
- ಸ್ವ-ಸಹಾಯ ಗುಂಪುಗಳು ಅಥವಾ ಜಂಟಿ ಹೊಣೆಗಾರಿಕೆ ಗುಂಪುಗಳು
ಅಗತ್ಯವಿರುವ ದಾಖಲೆಗಳು
- ಕೆವೈಸಿ ದಾಖಲೆಗಳ ಸ್ಕ್ಯಾನ್ ಅಥವಾ ನಕಲು ಪ್ರತಿ
- ಆರ್ ಟಿ ಸಿ ಅಥವಾ ಕೃಷಿ ಭೂಮಿಯ ಯಾವುದೇ ಪುರಾವೆ
- ಠೇವಣಿ ರಶೀತಿ
1,2,3...ರೀತಿಯಾಗಿ ಸರಳ
3 ಸರಳ ಹಂತಗಳಲ್ಲಿ ಕೆಬಿಎಲ್ ಅಗ್ರಿ ಇನಸ್ಟಂಟ್ ಕ್ರೆಡಿಟ್ ಸಾಲಕ್ಕಾಗಿ ಅರ್ಜಿ ಸಲ್ಲಿಸಿ
ಹಂತ 1
ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ
ನಿಮ್ಮ ಹತ್ತಿರದ ಕರ್ನಾಟಕ ಬ್ಯಾಂಕ್ ಶಾಖೆಗೆ ಹೋಗಿ
ಹಂತ 2
ನಿಮ್ಮ ಮೂಲ ವಿವರಗಳೊಂದಿಗೆ ಪ್ರಾರಂಭಿಸಿ
Pನಿಮ್ಮ ಮೂಲ ವಿವರಗಳನ್ನು ಒದಗಿಸಿ ಮತ್ತು ನಿಮ್ಮ ದಾಖಲೆಗಳನ್ನು ಕೈಯಲ್ಲಿಡಿ
ಹಂತ 3
ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ
ನಿಮ್ಮ ಖಾತೆಯನ್ನು ತೆರೆದಾಗ ನಮ್ಮ ಶಾಖೆಯ ಅಧಿಕಾರಿಗಳು ನಿಮಗೆ ತಿಳಿಸುತ್ತಾರೆ
ನಿಮಗಾಗಿರುವ ಇತರ ಆಯ್ಕೆಗಳನ್ನು ನೋಡಿ
ಹಣಕಾಸಿನ ಶ್ರೇಷ್ಠತೆಗಾಗಿ ಆರಿಸಲಾಗಿರುವ ಸಾವಿರಾರು ಜನರ ಭರವಸೆ
ಸರಳ ಮಾಹಿತಿಯೊಂದಿಗೆ ಅಗ್ರಿ ಬ್ಯಾಂಕಿಂಗ್ ಸರಳಗೊಳಿಸಿ
ಪ್ರತಿ ಕ್ಷಣವೂ ನಿಮಗೆ ಮಾಹಿತಿ ಒದಗಿಸುವ ನಮ್ಮ ಸಂಪನ್ಮೂಲಗಳು
ಪ್ರಶ್ನೆಗಳಿವೆಯೇ? ನಾವು ಅದಕ್ಕೆ ಉತ್ತರಿಸುತ್ತೇವೆ.
ಅಗತ್ಯ ಕೃಷಿ ದಾಖಲೆಗಳು ಮತ್ತು ಮಾನ್ಯ ಗುರುತಿನ ಚೀಟಿಯನ್ನು ಹೊಂದಿರುವ ರೈತರು ಅಥವಾ ಜಂಟಿ ರೈತರು, ಬಾಡಿಗೆ ಬೆಳೆಗಾರರು ಮತ್ತು ಕೃಷಿ ಗುಂಪುಗಳು ಈ ಸಾಲಕ್ಕಾಗಿ ಅರ್ಹರು.
ನಿಮ್ಮ ಕೃಷಿ ದಾಖಲೆಗಳೊಂದಿಗೆ ನಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ. ಸ್ಪಷ್ಟತೆ ಮತ್ತು ಪರಿಣಾಮಕಾರಿ ಕೆಲಸಗಳನ್ನು ಖಚಿತಪಡಿಸಿಕೊಳ್ಳುತ್ತಾ ಅರ್ಜಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ನಮ್ಮ ತಂಡ ಸಿದ್ಧವಿರುತ್ತದೆ. ತ್ವರಿತ ಸಾಲ ಪ್ರಕ್ರಿಯೆಗಾಗಿ ನಮ್ಮ ವೆಬ್ಸೈಟ್ ಮೂಲಕವೂ ಸಹ ನೀವು ಆನ್ಲೈನ್ ಅರ್ಜಿ ಸಲ್ಲಿಸಬಹುದು.
ನಿಮ್ಮ ಕೃಷಿ ಕಾರ್ಯಚರಣೆಗಳಿಗೆ ಸೂಕ್ತವಾಗುವಂತೆ ದೊಡ್ಡ, ದೀರ್ಘಾವಧಿ ಕೃಷಿ ಹೂಡಿಕೆಗಳಿಗಾಗಿ ಅವಧಿ ಸಾಲ ಅಥವಾ ತಕ್ಷಣದ ಅಗತ್ಯತೆಗಳಿಗಾಗಿ ಓವರ್ ಡ್ರಾಫ್ಟ್ ಸೌಲಭ್ಯಗಳನ್ನು ಆರಿಸಿ
ಭದ್ರತೆಗಾಗಿ ಬೆಳೆಗಳ ಹೈಪೋಥಿಕೇಷನ್ ಅಗತ್ಯವಿರುತ್ತದೆ ಅಂದರೆ ₹1.6 ಲಕ್ಷವರೆಗಿನ ಸಾಲಗಳಿಗಾಗಿ ಬೆಳೆಗಳನ್ನು ಅಡವಿರಿಸಲಾಗುತ್ತದೆ. ಬೆಳೆಗಳ ಹೈಪೋಥಿಕೇಷನ್ ಜೊತೆಗೆ, ಬ್ಯಾಂಕ್ ಭದ್ರತೆಯಾಗಿ ಸ್ವೀಕರಿಸಲು ಯೋಗ್ಯವಾದ ಕೃಷಿ ಭೂಮಿ ಅಥವಾ ಇತರ ಭದ್ರತೆಗಳನ್ನು ಮೇಲಾಧಾರವಾಗಿ ತೆಗೆದುಕೊಳ್ಳಲಾಗುತ್ತದೆ.
ಯೋಜನೆಯಲ್ಲಿ, ಐದು ವರ್ಷಗಳವರೆಗೆ ಅನುಕೂಲಕರ ಪಾವತಿ ಅವಧಿಯನ್ನು ನೀಡಲಾಗಿದ್ದು, ಇದರಲ್ಲಿ ನಿಮ್ಮ ಕೊಯ್ಲು ಮತ್ತು ಆದಾಯ ಚಕ್ರಗಳಿಗೆ ತಕ್ಕಂತೆ ಸಮಯವನ್ನು ನಿಗದಿಪಡಿಸಲಾಗಿದೆ.
ಓವರ್ ಡ್ರಾಫ್ಟ್ ಸಾಲ ಸೌಲಭ್ಯಕ್ಕಾಗಿ ಯಾವುದೇ ಡೌನ್ ಪೇಮೆಂಟ್ನ ಅಗತ್ಯವಿರುವುದಿಲ್ಲ. ಸಾಲದ ಅವಧಿಗಳಿಗಾಗಿ, ನಿಮ್ಮ ಹೂಡಿಕೆಯ ವಿಧವನ್ನು ಆಧರಿಸಿ ಶೇಕಡಾ 10% ರಿಂದ 25% ವರೆಗಿನ ಡೌನ್ ಪೇಮೆಂಟ್ ಅಗತ್ಯವಿರುತ್ತದೆ
ಮರುಪಾವತಿಯಲ್ಲಿ ಸಮಸ್ಯೆ ಎದುರಾದರೆ, ನಮ್ಮನ್ನು ತಕ್ಷಣ ಭೇಟಿ ಮಾಡಿ ಮತ್ತು ಹಣಕಾಸಿನ ಸಮಗ್ರತೆ ಹಾಗೂ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಿ.
ನಾವು ನಿಮ್ಮ ವ್ಯವಹಾರದ ಉದ್ದೇಶಗಳಿಗಾಗಿ ಸಕಾಲಿಕ ಹಣಕಾಸು ಬೆಂಬಲವನ್ನು ಒದಗಿಸುವಲ್ಲಿನ ಪ್ರಾಮುಖ್ಯತೆವನ್ನು ಅರ್ಥಮಾಡಿಕೊಂಡಿದ್ದೇವೆ. ಆದ್ದರಿಂದ ಸಾಲದ ಪ್ರಕ್ರಿಯೆಯು ನಮ್ಮ ಮೊದಲ ಆದ್ಯತೆಯಾಗಿರುತ್ತದೆ.
ಹೌದು, ಸಾಲದ ಅವಧಿಗಿಂತ ಮೊದಲೇ ನೀವು ಸಾಲದ ಪೂರ್ಣ ಮರುಪಾವತಿ ಮಾಡಬಹುದು. ಇದರಿಂದ ನಿಮ್ಮ ಬಡ್ಡಿದರಗಳು ಸಹ ಕಡಿಮೆಯಾಗುತ್ತದೆ. ಸಾಲದ ನಿಯಮಗಳು ಮತ್ತು ಷರತ್ತುಗಳನ್ನು ತಿಳಿದುಕೊಳ್ಳಲು ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
ಕೆಬಿಎಲ್ ಇನಸ್ಟಂಟ್ ಅಗ್ರಿ ಸಾಲದೊಂದಿಗೆ ನಿಮ್ಮ ಜಮೀನಿನ ಉತ್ಪಾದಕತ್ವವನ್ನು ಹೆಚ್ಚಿಸಿ. ಕೃಷಿ ವಲಯಕ್ಕೆ ಉತ್ತೇಜನ ನೀಡುವ ಸಲುವಾಗಿ ರೂಪಿಸಿದ ಈ ಸಾಲ ಯೋಜನೆಯಿಂದ ತಕ್ಷಣದ ಹಣಕಾಸು ಸಾಲ ಸೌಲಭ್ಯ ಸಾಧ್ಯವಾಗುತ್ತದೆ. ಕೃಷಿ ಅಗತ್ಯಗಳು, ಕೃಷಿ ವ್ಯವಹಾರ ಸಾಲದ ಅಗತ್ಯವಿರಬಹುದು ನಿಮಗೆ ತಡವಿಲ್ಲದೆಯೇ ಅರ್ಜಿ ಪ್ರಕ್ರಿಯೆಗಳನ್ನು ನಾವು ಸುಗಮಗೊಳಿಸುತ್ತೇವೆ.
ಕೃಷಿ -ವ್ಯವಹಾರ ಸಾಲಗಳ ಮೇಲೆ ಬಡ್ಡಿ ದರಗಳು ಸಾಮಾನ್ಯವಾಗಿ ಕೃಷಿ ಸಮುದಾಯಕ್ಕೆ ಪೂರಕವಾಗಿ ಮತ್ತು ಪೋಷಕವಾಗಿ ರೂಪಿಸಲಾಗಿದೆ. ಇತರೇ ಸಅಮಾನ್ಯ ವಾಣಿಜ್ಯ ಸಾಲಗಳಿಗೆ ಹೋಲಿಸಿದರೆ ಕೃಷಿ ಕಾರ್ಯಗಳಿಗೆ ಹೆಚ್ಚು ಅನುಕೂಲಕರವಾಗಿ ನಮ್ಮ ಸಾಲ ಸೌಲಭ್ಯಗಳು ರೂಪಿತವಾಗಿವೆ. ನೀವು ನಿಮ್ಮ ಅರ್ಜಿ ಪ್ರಕ್ರಿಯೆಯನ್ನು ಆರಂಭಿಸುವಾಗ ಈ ದರಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ ಏಕೆಂದರೆ ಇದು ನೇರವಾಗಿ ನಿಮ್ಮ ಮರುಪಾವತಿ ನಿಯಮಗಳು ಮತ್ತು ಸಾಲದ ಒಟ್ಟಾರೆ ವೆಚ್ಚಗಳ ಮೇಲೆ ಪರಿಣಾಮ ಬೀರುತ್ತದೆ.
ಸಾಲದ ಬಳಕೆ ಮತ್ತು ಮರುಪಾವತಿಯ ಕುರಿತು ನೀವು ಸ್ಪಷ್ಟ ಯೋಜನೆಯನ್ನು ಹೊಂದಿರುವಿರಿ ಎಂದು ಖಚಿತಪಡಿಸಿಕೊಳ್ಳಿ. ಆನ್ಲೈನ್ ಅರ್ಜಿ ಪ್ರಕ್ರಿಯೆಯನ್ನು ಸಲ್ಲಿಸಲು ಎಲ್ಲಾ ಅಗತ್ಯ ದಾಖಲೆಗಳನ್ನು ತಯಾರಿಟ್ಟುಕೊಳ್ಳಿ. ಕೃಷಿ-ವ್ಯವಹಾರ ಸಾಲಗಳಿಗಾಗಿ ಲಭ್ಯವಿರುವ ಸರ್ಕಾರೀ ಸಬ್ಸಿಡಿಗಳು ಅಥವಾ ವಿಶೇಷ ಕಾರ್ಯಕ್ರಮಗಳನ್ನು ನಿರ್ಲಕ್ಷಿಸದಿರಿ. ನಿಮ್ಮ ಆರ್ಥಿಕ ಸ್ಥಿತಿಯನ್ನು ನಿರ್ವಹಿಸಲು ನಿಮ್ಮ ಸಾಲವನ್ನು ನಿಯಮಿತವಾಗಿ ನಿಗಾವಣೆ ಮತ್ತು ನಿರ್ವಹಣೆ ಮಾಡಿ.