ನಿಮ್ಮ ಮನೆ, ನಮ್ಮ ಆದ್ಯತೆ
ನೆನಪುಗಳನ್ನು ಸೃಜಿಸುವ ಸ್ಥಳ ಮನೆ. ನಾವು ದಿನವಿಡೀ ವಿಹರಿಸುವ ಆನಂದೋದ್ಯಾನ ನಮ್ಮ ಮನೆ. ಅದಕ್ಕಾಗಿಯೇ ನಿಮ್ಮ ಅನುಕೂಲಕ್ಕೆ ತಕ್ಕಂತಹ ಮನೆಸಾಲ ಸೌಲಭ್ಯವನ್ನು ರೂಪಿಸುವುದು ನಮ್ಮ ಆದ್ಯತೆ. ನಿಮ್ಮ ಮನೆಯನ್ನು ನೀವು ಖರೀದಿಸುತ್ತಿರಲಿ, ಮನೆಯನ್ನು ವಿಸ್ತರಿಸುತ್ತಿರಲಿ ಅಥವಾ ಆಸ್ತಿಯಲ್ಲಿ ಹೂಡಿಕೆ ಮಾಡುತ್ತಿರಲಿ, ನಮ್ಮ ವಿಶಿಷ್ಟ ಸಾಲಗಳು ನಿಮ್ಮ ಅಗತ್ಯಗಳನ್ನು ಪೂರೈಸಲು ಸಹಾಯಕವಾಗಿರುತ್ತವೆ.ನಮ್ಮ ಮೂಲಕ ನಿಮ್ಮ ಕನಸಿನ ಮನೆಯ ಒಡೆತನವನ್ನು ನನಸಾಗಿಸಿ.ಮತ್ತಷ್ಟು ಓದು ಕಡಿಮೆ ಓದಿ
ನಿಮ್ಮ ಹಣ, ನಿಮ್ಮ ಹಾದಿ
ಸ್ಮಾರ್ಟ್ ಖರ್ಚು ಮತ್ತು ಉಳಿತಾಯಕ್ಕಾಗಿ ಸ್ಮಾರ್ಟ್ ಸಾಧನಗಳು
ಹೋಮ್ ಲೋನ್ ಕ್ಯಾಲ್ಕುಲೇಟರ್
ನೀವು ಪಾವತಿಸುವಿರಿ
₹13,800/ತಿಂಗಳುಗಳು
ನಮ್ಮ ಗೃಹಸಾಲ ಸೌಲಭ್ಯಗಳನ್ನೇ ಯಾಕಾಗಿ ಆರಿಸಬೇಕು
ನೀವು ಹೋಗಬೇಕಾದ ಸ್ಥಳಕ್ಕೆ ನಿಮ್ಮನ್ನು ಕರೆದೊಯ್ಯುವುದು
ಕೈಗೆಟುಕುವ ಮತ್ತು ಸ್ಪರ್ಧಾತ್ಮಕ ದರಗಳೊಂದಿಗೆ ನಿಮ್ಮ ಉಳಿತಾಯವನ್ನು ಹೆಚ್ಚಿಸಲು ನಾವು ಪ್ರಯತ್ನಿಸುತ್ತೇವೆ
ಪ್ರತಿಯೊಂದು ರೀತಿಯ ಗ್ರಾಹಕರಿಗೆ ಕಸ್ಟಮೈಸ್ ಮರುಪಾವತಿ ನಿಯಮಗಳು
ಸಾಲ ಅನುಮೋದನೆ ಪ್ರಕ್ರಿಯೆ ತ್ವರಿತ ಮತ್ತು ಸುಲಲಿತ
ಕೆಬಿಎಲ್ ಗೃಹ ಸಾಲಕ್ಕೆ ಯಾರು ಅರ್ಜಿ ಸಲ್ಲಿಸಬಹುದು
- ಭಾರತದ ನಿವಾಸಿಗಳು
- ಭಾರತದ ನಿವಾಸಿಗಳು
- ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ಅನಿವಾಸಿ ಭಾರತೀಯರು
- ಕನಿಷ್ಠ ₹10,000 ವೇತನ ಪಡೆಯುವ ವ್ಯಕ್ತಿಗಳು
- ಉದ್ಯಮಿಗಳು ಮತ್ತು ಸ್ವಯಂ ಉದ್ಯೋಗಿಗಳಿಗೆ ಕನಿಷ್ಠ ₹1,20,000 ಆದಾಯ
ನಿಮ್ಮೊಡನೆ ಬ್ಯಾಂಕಿಂಗ್
ಸದಾಕಾಲ ನಿಮ್ಮೊಂದಿಗೆ
ಸಮರ್ಪಿತ KBL ತಜ್ಞರಿಂದ 24x7 ವೈಯಕ್ತಿಕ ನೆರವು
ನಂಬಿಕೆ, ಪರಿಣತಿ ಮತ್ತು ಕಾಳಜಿಪೂರಿತ ಬ್ಯಾಂಕಿಂಗ್
ಕೆಬಿಎಲ್ ಕುಟುಂಬವು ಪ್ರತಿದಿನ ವಿಸ್ತಾರಗೊಳ್ಳುತ್ತಿದೆ
ಪ್ರಶ್ನೆಗಳಿವೆಯೇ? ನಮ್ಮ ಬಳಿ ಉತ್ತರಗಳಿವೆ
ಹೌದು, ನಿಮ್ಮ ಸಾಲವನ್ನು ನೀವು ಅವಧಿಪೂರ್ವವಾಗಿ ತೀರಿಸಬಹುದು. ಅನ್ವಯಿಸುವ ಶುಲ್ಕಗಳು ಮತ್ತು ಷರತ್ತುಗಳಿಗಾಗಿ, ಅರ್ಜಿ ಸಲ್ಲಿಸುವಾಗ ನಿರ್ದಿಷ್ಟ ಸಾಲದ ನಿಖರವಾದ ನಿಯಮಗಳು ಹಾಗೂ ಷರತ್ತುಗಳಿಗಾಗಿ ದಯವಿಟ್ಟು ನಿಮ್ಮ ಸಾಲ ಒಪ್ಪಂದವನ್ನು ವೀಕ್ಷಿಸಿ.
ಅನೇಕ ಅರ್ಹತಾ ಮಾನದಂಡಗಳ ಆಧಾರದ ಮೇಲೆ ಕರ್ಣಾಟಕ ಬ್ಯಾಂಕ್ ಸಾಲ ನೀಡುತ್ತದೆ. ಅವು ವಯಸ್ಸು, ಆದಾಯ ಸ್ಥಿರತೆ, ಕ್ರೆಡಿಟ್ ಸ್ಕೋರ್ ಮತ್ತು ಆಸ್ತಿ ಮೌಲ್ಯವನ್ನು ಒಳಗೊಂಡಿವೆ. ಇದಲ್ಲದೆ, ಭಾರತೀಯ ನಿವಾಸಿಗಳು, NRIಗಳು ಮತ್ತು OCI ಗಳು ಸೂಕ್ತವಾದ ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಹಾಗೂ ಗ್ರಾಹಕರ ಅಗತ್ಯತೆಗಳಿಗೆ ಅಣುಗುಣವಾಗುವಂತೆ ಪ್ರತಿ ಯೋಜನೆಯ ಮೌಲ್ಯಮಾಪನ ಮಾನದಂಡಗಳು ಸೂಕ್ತವಾಗಿವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನಾವು ಪ್ರಯತ್ನಿಸುತ್ತೇವೆ. ವಿವರಕ್ಕೆ ನಮ್ಮನ್ನು ಸಂಪರ್ಕಿಸಿ
ನಿಮ್ಮ ಮೊದಲ ಮನೆ ನಿಮಗೆ ಗೌರವದ ಸಂಕೇತ. ಸಾಲ ಪ್ರಕ್ರಿಯಯ ಕುರಿತು ತಿಳಿದುಕೊಳ್ಳುವುದು ಮುಖ್ಯ. ಕರ್ಣಾಟಕ ಬ್ಯಾಂಕ್, ಸುಲಭವಾದ ಮನೆ ಖರೀದಿ ಮಾರ್ಗದರ್ಶಿಗಳು, ಸಾಲದ ಕ್ಯಾಲ್ಕುಲೇಟರ್‌ಗಳು ಮತ್ತು ಮಾಹಿತಿಗಳನ್ನು ಒದಗಿಸುತ್ತದೆ.
ಹೌದು, ಮೊದಲ ಬಾರಿಗೆ ಮನೆ ಖರೀದಿ ಮಾಡುವವರು ಆದಾಯ ತೆರಿಗೆ ಕಾಯಿದೆಯ ಅಡಿಯಲ್ಲಿ ಗೃಹ ಸಾಲದ ಅಸಲು ಮತ್ತು ಬಡ್ಡಿ ಅಂಶಗಳ ಮೇಲೆ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು.
ಹೌದು. NRI ಗ್ರಾಹಕರಿಗೆಂದೇ ವಿಶೇಷವಾಗಿ ರೂಪಿಸಿದ ಸಾಲಗಳಿಗಾಗಿ ಅರ್ಜಿಯನ್ನು ಸಲ್ಲಿಸಬಹುದು. ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ನಮ್ಮ ಗೃಹ ಸಾಲಗಳು ಮನೆ ಖರೀದಿ, ನಿರ್ಮಾಣ ಅಥವಾ ನವೀಕರಣ ಉದ್ದೇಶಗಳಿಗಾಗಿ ರೂಪಿತವಾಗಿದೆ. ಈ ಸಾಲಸೌಲಭ್ಯಗಳು ದಿರ್ಘಾವಧಿಯವಾಗಿದ್ದು ಮೂವತ್ತು ವರುಷಗಳವರೆಗೂ ಮರುಪಾವತಿ ಅವಧಿಯನ್ನು ಹೊಂದಿರುವಂಥದ್ದಾಗಿದೆ. ಸಾಲದ ಮೊತ್ತವು ಸಾಮಾನ್ಯವಾಗಿ ಆಸ್ತಿಯ ಮೌಲ್ಯದ ಗಮನಾರ್ಹ ಭಾಗವನ್ನು ಒಳಗೊಳ್ಳುತ್ತದೆ, ಅದು ಸಾಮಾನ್ಯವಾಗಿ 80-90% ವರೆಗೆ ಇರುತ್ತದೆ. ಗೃಹಸಾಲ ಸೌಲಭ್ಯದ ಪ್ರಯೋಜನವೇನೆಂದರೆ ಪೂರ್ಣ ಪಾವತಿ ಮಾಡದೆಯೇ ಮನೆಯ ಮಾಲಿಕತ್ವವನ್ನು ತಮ್ಮದಾಗಿಸಿಕೊಳ್ಳಬಹುದು. ಸ್ಪರ್ಧಾತ್ಮಕ ಬಡ್ಡಿದರ, ತೆರಿಗೆ ವಿನಾಯಿತಿ ಗೃಹಸಾಲ ಸೌಲಭ್ಯದ ಪ್ರಯೋಜನವಾಗಿದೆ. ಭಾರತದಲ್ಲಿ ಆದಾಯ ತೆರಿಗೆ ಕಾಯಿದೆಯ ಅಡಿಯಲ್ಲಿ ಆ ರೀತಿಯ ಸಾಲದ ಅಸಲು ಮತ್ತು ಬಡ್ಡಿ ಪಾವತಿಗಳ ಮೇಲೆ ಕಡಿತಗಳನ್ನು ಅನುಮತಿಸಲಾಗುತ್ತದೆ.
ಅನ್ವಯವಾಗುವ ಬಡ್ಡಿ ದರವು ಸ್ಥಿರವಾಗಿರಬಹುದು ಅಥವಾ ಫ್ಲೋಟಿಂಗ್ (ಬದಲಾಗುವಂಥದ್ದು) ಆಗಿರಬಹುದು. ಸ್ಥಿರ ಬಡ್ಡಿದರಗಳು ಅವಧಿಯುದ್ದಕ್ಕೂ ಸ್ಥಿರವಾಗಿರುತ್ತವೆ. ಬಜೆಟ್ ಯೋಜನೆಯಲ್ಲಿ ನಿಶ್ಚಿತತೆಯನ್ನು ಒದಗಿಸುತ್ತದೆ. ಕಡಿಮೆಗೊಳಿಸುವ ಬಾಕಿ ಆಧಾರದ ಮೇಲೆ ಬಡ್ಡಿ ಲೆಕ್ಕಾಚಾರ ಎಂದರೆ ನೀವು ಕ್ರಮೇಣ ಅಸಲು ಮರುಪಾವತಿ ಮಾಡುವುದರಿಂದ, ನಿಮ್ಮ EMI ಗಳ ಮೇಲಿನ ಬಡ್ಡಿ ಅಂಶವು ಕಡಿಮೆಯಾಗುತ್ತದೆ. ಗೃಹ ಸಾಲವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ನಿರ್ಣಯಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. Down payment, EMI ಕೈಗೆಟುಕುವಿಕೆ, ಸಾಲದ ಅವಧಿ ಹಾಗೂ ಸಂಸ್ಕರಣಾ ಶುಲ್ಕಗಳು, ಕಾನೂನು ಶುಲ್ಕಗಳು ಮತ್ತು ಸ್ಟ್ಯಾಂಪ್ ಡ್ಯೂಟಿಯಂತಹ ಹೆಚ್ಚುವರಿ ವೆಚ್ಚಗಳ ಅಂಶಗಳನ್ನು ಸಂಪೂರ್ಣವಾಗಿ ಪರಿಗಣಿಸಬೇಕಾಗುತ್ತದೆ. ಇದಲ್ಲದೆ, ಮಾರುಕಟ್ಟೆಯ ಪ್ರವೃತ್ತಿಗಳ ಮೇಲೆ ಕೂಡ ನಿಗಾ ಇರಿಸಬೇಕಾಗುತ್ತದೆ, ಏಕೆಂದರೆ ಅವುಗಳು ಫ್ಲೋಟಿಂಗ್ ಬಡ್ಡಿದರಗಳ ಮೇಲೆ ಪರಿಣಾಮವನ್ನು ಬೀರಬಹುದು. ನಿಮ್ಮ ಕನಸಿನ ಮನೆಯನ್ನು ನನಸಾಗಿಸಲು ನಿಮಗೆ ಅಗತ್ಯವಿರುವ ಹಣಕಾಸಿನ ಬೆಂಬಲವನ್ನು ಒದಗಿಸುವ ಸಲುವಾಗಿಯೇ ನಮ್ಮ ವೇಗದ ಗೃಹ ಸಾಲ ಸೌಲಭ್ಯಗಳನ್ನು ಸಂರಚಿಸಲಾಗಿದೆ.
ಅರ್ಜಿ ಸಲ್ಲಿಸುವ ಮೊದಲು ಸ್ಥಿರ ಆದಾಯದ ಮೂಲ ಹಾಗೂ ಉತ್ತಮ ಕ್ರೆಡಿಟ್ ಸ್ಕೋರ್ ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಉತ್ತಮ ಬಡ್ಡಿ ದರಗಳು ಮತ್ತು ನಿಯಮ ಗಳಿಗಾಗಿ ವಿವಿಧ ಸಾಲ ನೀಡುವವರನ್ನು ಹೋಲಿಕೆ ಮಾಡಿ. ಮುಂದೆ ತಗುಲಬಹುದಾದ ಹೆಚ್ಚುವರಿ ವೆಚ್ಚಗಳ ಪರಿಣಾಮವನ್ನು ಕೀಳಂದಾಜು ಮಾಡಬೇಡಿ.
ಹಣಕಾಸು ಯೋಜನೆ ಮಾಡುವುದು ಜವಾಬ್ದಾರಿಯುತ ಸಾಲ ಪಡೆಯುವಿಕೆಯ ಮುಖ್ಯ ಅಂಶ. EMI ಕ್ಯಾಲ್ಕುಲೇಟರ್ ವಿವಿಧ ರೂಪದ ಸಾಲದ ಬಡ್ಡಿದರಗಳು ಹಾಗೂ ಅವಧಿಗಳ ಆಧಾರದ ಮೇಲೆ ಮಾಸಿಕ ಕಂತುಗಳ ವಿವರಗಳನ್ನು ಒದಗಿಸುತ್ತದೆ. ಇದು ಉತ್ತಮ ಹಣಕಾಸು ಯೋಜನೆಗೆ ನಿಮ್ಮನ್ನು ಸಿದ್ದಗೊಳಿಸಿ ಮುಂದಿನ ಬದ್ದತೆಗೆ ಅಣಿಯಾಗಿಸುತ್ತದೆ. ಗೃಹಸಾಲದ ಬಡ್ಡಿ ದರವನ್ನು ಅರ್ಥೈಸುವುದರಿಂದ ನಿಮ್ಮ ದೀರ್ಘಾವಧಿಯ ಹಣಕಾಸಿನ ಉದ್ದೇಶಗಳೊಂದಿಗೆ ಹೊಂದಾಣಿಕೆ ಆಗುವ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.