ಕೆಬಿಎಲ್ ಅಗ್ರಿ ಗೋಲ್ಡ್ ಸಾಲ

ನಿಮ್ಮ ಅಲ್ಪಾವಧಿ ಕೃಷಿ ಅಗತ್ಯಗಳಿಗೆ ಸರಳ, ಸುರಕ್ಷಿತ ಸಾಲಸೌಲಭ್ಯಗಳನ್ನು ಒದಗಿಸುತ್ತೇವೆ. ನಿಮ್ಮ ಚಿನ್ನಾಭರಣಗಳು ಅಥವಾ ವಿಶೇಷವಾಗಿ ಮುದ್ರಿಸಲಾದ ನಾಣ್ಯಗಳನ್ನು ಮೇಲಾಧಾರವಾಗಿ ಬಳಸಿಕೊಳ್ಳುತ್ತಾ ನಿಮಗೆ ₹50ಲಕ್ಷಗಳವರೆಗೆ ಸಾಲವನ್ನು ನೀಡುತ್ತೇವೆ. ಆದ್ದರಿಂದ ಇದು ಭದ್ರತೆ ಮತ್ತು ಅನುಕೂಲತೆಯ ದೃಷ್ಟಿಯಿಂದ ಉತ್ತಮವಾಗಿದೆ. ಕೃಷಿ ಚಟುವಟಿಕೆಗಳಿಗಾಗಿ ತಕ್ಷಣದ ಹಣದ ಅಗತ್ಯವಿರುವವರಿಗೆ ತಮ್ಮ ಚಿನ್ನಾಭರಣದ ಮೌಲ್ಯದ ಮೇಲೆ ಸಾಲವನ್ನು ನೀಡಲಾಗುತ್ತದೆ. ಕಡಿಮೆ ಓದಿ ಮತ್ತಷ್ಟು ಓದು ಕಡಿಮೆ ಓದಿ

ನಿಮಗೇಕೆ ಈ ಸಾಲ ಸೂಕ್ತ

ನಿಮ್ಮ ಕೃಷಿ ಅಗತ್ಯಗಳಿಗೆ ಸರಳ ಸಾಲ ಸೌಲಭ್ಯಗಳ ಬೆಂಬಲ

ಕೃಷಿ ಕಾರ್ಯಗಳೊಂದಿಗೆ ಅನುವಾಗುವ ವಾರ್ಷಿಕ ಸರಳ ಬಡ್ಡಿ ಪಾವತಿಗಳು s

ಕೃಷಿ ಅಗತ್ಯಗಳಿಗೆ ತಕ್ಷಣ ಮತ್ತು ಸಮರ್ಥ ಸಾಲ ಪ್ರಕ್ರಿಯೆ

ಅವಧಿ ಠೇವಣಿಯ ಅಡಮಾನ ಭದ್ರತೆಯ ಮೇಲೆ ಸಾಲ ಸೌಲಭ್ಯ: ಕೆಬಿಎಲ್ನ ಭವ್ಯ ಪರಂಪರೆಯ ಬೆಂಬಲದೊಂದಿಗೆ.

ಡೌನ್ ಪೇಮೆಂಟ್ ಇಲ್ಲ

ಯಾವುದೇ ಡೌನ್ ಪೇಮೆಂಟ್ ಅಗತ್ಯವಿಲ್ಲ 

ಸಾಲ ಮರುಪಾವತಿ

ನಾವು ಪ್ರತಿಯೊಂದು ಗ್ರಾಹಕನ ಅಗತ್ಯವನ್ನು ಆಧರಿಸಿ ನಿಮ್ಮ ಹಣಕಾಸು ಸ್ಥಿತಿಯನ್ನು ಆಧರಿಸಿ ಅನುಕೂಲಕರ ಮರುಪಾವತಿ ನಿಯಮಗಳನ್ನು ಹೊಂದಿದ್ದೇವೆ

ಬಡ್ಡಿದರಗಳು

ಸಾಲದ ಬಡ್ಡಿಯನ್ನು ವಾರ್ಷಿಕವಾಗಿ ಕಟ್ಟಬಹುದಾಗಿರುವ ಕಾರಣ ನಿಮ್ಮ ಹಣಕಾಸಿನ ಒತ್ತಡವನ್ನು ವರ್ಷವಿಡೀ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಸಹಾಯ ಮಾಡುತ್ತದೆ

ಸಾಲದ ಮೊತ್ತ

ಕೃಷಿ  ಕೆಲಸಗಳು ಮತ್ತು ಸಂಬಂಧಿತ ಖರ್ಚುವೆಚ್ಚಗಳಿಗೆ  ನಾವು ₹50 ಲಕ್ಷದವರೆಗೆ ಹಣಕಾಸು ಸಾಲ  ಸೌಲಭ್ಯ ಒದಗಿಸುತ್ತೇವೆ

ಪ್ರಾಥಮಿಕ ಭದ್ರತೆ

ಈ ಸಾಲಕ್ಕಾಗಿ ಬೆಳೆಗಳು ಅಥವಾ ಸ್ವತ್ತುಗಳನ್ನು ಪ್ರಾಥಮಿಕ ಭದ್ರತೆಯಾಗಿ ಹೈಪೋಥಿಕೇಟ್ಮಾ ಡಲಾಗಿದೆ

ಚಿನ್ನಾಭರಣದ ಮೇಲಾಧಾರ

ನಾವು ಸಾಲದ ಭದ್ರತೆಯಾಗಿ ಚಿನ್ನದ ಆಭರಣಗಳನ್ನು ಅಥವಾ ಬ್ಯಾಂಕಿನಿಂದ ವಿಶೇಷವಾಗಿ ಮುದ್ರಣಗೊಂಡ ಚಿನ್ನದ ನಾಣ್ಯಗಳನ್ನು(ಪ್ರತಿ ಸಾಲಗಾರನಿಗೆ 50 ಗ್ರಾಂ ವರೆಗೆ) ಮೇಲಾಧಾರವಾಗಿ ಸ್ವೀಕರಿಸುತ್ತೇವೆ

ನಿಮಗಾಗಿ ಯಾವ ಉತ್ಪನ್ನ ಸೂಕ್ತವೆಂದು ಖಚಿತವಾಗಿಲ್ಲವೇ?

ನಿಮಗಾಗಿ ಯಾವ ಉತ್ಪನ್ನ ಸೂಕ್ತವೆಂದು ಖಚಿತವಾಗಿಲ್ಲವೇ

  • ಯಾವುದೇ ಸ್ಪ್ಯಾಮ್ ಕರೆಗಳಿಲ್ಲ
  • ಸಮರ್ಪಿತ KBL ತಜ್ಞರು
  • ನಿಮ್ಮ ಸಮಯಕ್ಕೆ ಕರೆಯನ್ನು ಹೊಂದಿಸಿ

ಅರ್ಹತೆ

ವ್ಯಕ್ತಿಗಳು
  • ಕೃಷಿ ಅಥವಾ ಸಂಬಂಧಿತ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿರುವವರು ಅಥವಾ ಜಂಟಿ ಸಾಲಗಾರರು 
  • 50 ಗ್ರಾಂವರೆಗಿನ ಬ್ಯಾಂಕಿನಿಂದ ಮಾರಾಟವಾಗುವ ಚಿನ್ನದ ನಾಣ್ಯಗಳ ಅಥವಾ ಚಿನ್ನಾಭರಣಗಳ ಮಾಲಿಕರಾಗಿರಬೇಕು
  • ಮಾನ್ಯತೆಪಡೆದ  ಗುರುತು ಮತ್ತು ವಿಳಾಸದ ದಾಖಲೆಗಳು
  • ಯಾವುದೇ ಹಣಕಾಸು ಪಾವತಿ ಸಂಬಂಧಿತ ಬಾಕಿಗಳಿಲ್ಲದೆ  ಉತ್ತಮ ಹಣಕಾಸಿನ ಸ್ಥಿತಿಯಲ್ಲಿರಬೇಕು. 
  • ಕೃಷಿಯಲ್ಲಿ ತೊಡಗಿಕೊಂಡಿರುವ ಹಿಂದೂ ಅವಿಭಕ್ತ ಕುಟುಂಬ ಅಥವಾ ಸಂಸ್ಥೆಗಳು
  • ಭದ್ರತೆಯಾಗಿ ಇರಿಸಿದ ಚಿನ್ನಾಭರಣಗಳ ಒಡೆಯರಾಗಿರಬೇಕು
  • ಹಣಕಾಸಿನ ಸ್ಥಿತಿ ಉತ್ತಮವಾಗಿರಬೇಕು
  • ಕಾನೂನಾತ್ಮಕ ಕೃಷಿ ಚಟುವಟಿಕೆಗಳಿಗೆ ಪುರಾವೆ ಮತ್ತು ದಾಖಲೆಗಳು

ಅಗತ್ಯವಿರುವ ದಾಖಲೆಗಳು

  • ಕೆವೈಸಿ ದಾಖಲೆಗಳ ಸ್ಕ್ಯಾನ್ ಅಥವಾ ನಕಲು ಪ್ರತಿ
  • ಪಹಣಿ, ಪಟ್ಟಾ ಪುಸ್ತಕ, ಕೃಷಿ ಜಮೀನು ಬಗೆಗೆ ಪುರಾವೆ ಪತ್ರ

1, 2, 3 …. ರೀತಿಯಾಗಿ ಸರಳ

3 ಸರಳ ಹಂತಗಳಲ್ಲಿ ಕೆಬಿಎಲ್ ಅಗ್ರಿ ಗೋಲ್ಡ್ ಸಾಲಕ್ಕಾಗಿ ಅರ್ಜಿ ಸಲ್ಲಿಸಿ

ಹಂತ 1

ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ

ನಿಮ್ಮ ಹತ್ತಿರದ ಕರ್ನಾಟಕ ಬ್ಯಾಂಕ್ ಶಾಖೆಗೆ ಹೋಗಿ

ಹಂತ 2

ನಿಮ್ಮ ಮೂಲ ವಿವರಗಳೊಂದಿಗೆ ಪ್ರಾರಂಭಿಸಿ

ನಿಮ್ಮ ಮೂಲ ವಿವರಗಳನ್ನು ಒದಗಿಸಿ ಮತ್ತು ನಿಮ್ಮ ದಾಖಲೆಗಳನ್ನು ಕೈಯಲ್ಲಿಡಿ

ಹಂತ 3

ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ

ನಿಮ್ಮ ಖಾತೆಯನ್ನು ತೆರೆದಾಗ ನಮ್ಮ ಶಾಖೆಯ ಅಧಿಕಾರಿಗಳು ನಿಮಗೆ ತಿಳಿಸುತ್ತಾರೆ

image of smiling girl

ನಿಮಗಾಗಿರುವ ಇತರ ಆಯ್ಕೆಗಳನ್ನು ನೋಡಿ 

ಶ್ರೇಷ್ಠ ಹಣಕಾಸು ಸೌಲಭ್ಯಕ್ಕಾಗಿ  ಸಾವಿರಾರು ಜನರು ಇರಿಸಿದ ಭರವಸೆ 

ಕೆಬಿಎಲ್ ಆಗ್ರೋ ಸಂಸ್ಕರಣಾ ಸಾಲ

  • ₹15 ಕೋಟಿವರೆಗೆ ಗರಿಷ್ಟ ಸಾಲದ ಮೊತ್ತ
  • ವಾರ್ಷಿಕ 11.3% ಬಡ್ಡಿದರಗಳಿಂದ ಆರಂಭ
  • 120 ತಿಂಗಳುಗಳವರೆಗೆ ಸಾಲದ ಅವಧಿ

ಕೆಬಿಎಲ್ ಅಗ್ರಿ ಗೋಲ್ಡ್ ಸಾಲ

  • ₹50 ಲಕ್ಷ ಗರಿಷ್ಟ ಸಾಲದ ಮೊತ್ತ
  • EBLR ದರಗಳ ಪ್ರಕಾರದ ಬಡ್ಡಿ ದರಗಳು  
  • 24 ತಿಂಗಳುಗಳವರೆಗೆ ಸಾಲದ ಅವಧಿ

ಸರಳ ಮಾಹಿತಿಯೊಂದಿಗೆ ಅಗ್ರಿಬ್ಯಾಂಕಿಂಗ್ ಸರಳಗೊಳಿಸಿ

ಪ್ರತಿ ಕ್ಷಣವೂ ನಿಮಗೆ ಮಾಹಿತಿ ಒದಗಿಸುವ ನಮ್ಮ ಸಂಪನ್ಮೂಲಗಳು

match-made
ಬ್ಯಾಂಕಿಂಗ್ ಸ್ವರ್ಗದಲ್ಲಿ ಮಾಡಿದ ಹೊಂದಾಣಿಕೆ: ಉಳಿತಾಯ ಖಾತೆ ಆವೃತ್ತಿ

navigating-pers
ನಿಮ್ಮ ಆರಂಭಿಕ 20 ರ ದಶಕದಲ್ಲಿ ವೈಯಕ್ತಿಕ ಸಾಲಗಳನ್ನು ನ್ಯಾವಿಗೇಟ್ ಮಾಡುವುದು- ಇದು ಒಳ್ಳೆಯ ಐಡಿಯಾವೇ?

savings-accoun
ಉಳಿತಾಯ ಖಾತೆ: ರೂಢಿಗಳನ್ನು ಮುರಿಯುವುದು ಮತ್ತು ಸಂಪತ್ತನ್ನು ನಿರ್ಮಿಸುವುದು

vehicle-loans
ಮಹತ್ವಾಕಾಂಕ್ಷೆಯ ಡೆಲಿವರಿ ಪಾಲುದಾರರು ಮತ್ತು ಕ್ಯಾಬ್ ಚಾಲಕರಿಗೆ ವಾಹನ ಸಾಲಗಳು

why-should
ನೀವು ಅರೆ ಸುಸಜ್ಜಿತ ಅಪಾರ್ಟ್ಮೆಂಟ್ಗೆ ಏಕೆ ಹೋಗಬೇಕು?

ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ
ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ

ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ
ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ

the-wisdom
ನಿವೃತ್ತ ಜನರಿಗೆ ತ್ವರಿತ ಚಿನ್ನದ ಸಾಲಗಳ ಬುದ್ಧಿವಂತಿಕೆ - ಆರ್ಥಿಕ ಭದ್ರತೆಯನ್ನು ಅನ್ಲಾಕ್ ಮಾಡಿ

ಪ್ರಶ್ನೆಗಳಿವೆಯೇ? ನಾವು ಉತ್ತರಿಸುತ್ತೇವೆ

ಕೆಬಿಎಲ್ ಅಗ್ರಿ ಗೋಲ್ಡ್ ಲೋನ್ ಪಡೆಯಲು ಯಾರು ಅರ್ಹರು?

ಕೃಷಿ ಅಥವಾ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳು, HUFಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳು ಅರ್ಹರಿದ್ದಾರೆ. ಅರ್ಹರಾಗಲು, ನೀವು ಕೃಷಿಯಲ್ಲಿ ಅಥವಾ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗಿಯಾಗಿರಬೇಕು ಮತ್ತು ಚಿನ್ನಾಭರಣಗಳನ್ನು ಮೇಲಾಧಾರವಾಗಿ ಇಡಬೇಕು.

ನಿಮ್ಮ ಕೃಷಿ ದಾಖಲೆಗಳೊಂದಿಗೆ ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ. ಅರ್ಜಿ ಪ್ರಕ್ರಿಯೆಯ ಮೂಲಕ ನಮ್ಮ ತಂಡ ನಿಮಗಾಗಿ ಸಹಾಯ ಮಾಡಲು ತಯಾರಿದ್ದು ಸ್ಪಷ್ಟತೆ ಮತ್ತು ಸಮರ್ಥತೆಯನ್ನು ಖಾತ್ರಿಪಡಿಸಿಕೊಳ್ಳುತ್ತದೆ. ತ್ವರಿತ ಪ್ರಕ್ರಿಯೆಗಾಗಿ ನಮ್ಮ ವೆಬ್ಸೈಟ್ ಮೂಲಕ ಸಹ ನೀವು ಅರ್ಜಿ ಸಲ್ಲಿಸಬಹುದು.

ನೀವು ನಿಮ್ಮ ಕೃಷಿ ಯೋಜನೆಗಳಿಗಾಗಿ ಅಥವಾ ತುರ್ತು ಪರಿಸ್ಥಿತಿಗಳಿಗಾಗಿ ಸೂಕ್ತ ದಾಖಲೆಯನ್ನು ಒದಗಿಸುವ ಮೂಲಕ ₹50ಲಕ್ಷಗಳವರೆಗಿನ ಸಾಲವನ್ನು ಪಡೆಯಬಹುದು.

ನಾವು ಚಿನ್ನಾಭರಣಗಳು ಮತ್ತು ವಿಶೇಷವಾಗಿ ಮುದ್ರಣಗೊಂಡ ನಾಣ್ಯಗಳೆರಡರನ್ನೂ ಸಹ ಸ್ವೀಕರಿಸುತ್ತೇವೆ, ಆದರೆ ಇದು ಪ್ರತಿ ಸಾಲಗಾರನಿಗೆ 50ಗ್ರಾಂ ವರೆಗೆ ಮಾತ್ರ ಸೀಮಿತ. ಇದು ನಿಮ್ಮ ಸಾಲಕ್ಕಾಗಿ ಉತ್ತಮ ಭದ್ರತೆಯನ್ನು ಒದಗಿಸುತ್ತದೆ.

ನಿಮ್ಮ ಅನುಕೂಲತೆಗಾಗಿ ಬಡ್ಡಿಯನ್ನು ವಾರ್ಷಿಕವಾಗಿ ಪಾವತಿಸಬಹುದು. ಅಸಲು ಮರುಪಾವತಿ ಯೋಜನೆಯು ಬಹಳ ಅನುಕೂಲಕರವಾಗಿದೆ. ನಿಮ್ಮ ಹಣಕಾಸಿನ ಪರಿಸ್ಥಿತಿಗನುಗುಣವಾಗಿ ಮರುಪಾವತಿ ನಿಯಮವನ್ನು ಹೊಂದಿಸಲು ಚರ್ಚಿಸಬಹುದಾಗಿದೆ.

ಈ ಸಾಲಕ್ಕಾಗಿ ಯಾವುದೇ ಡೌನ್ ಪೇಮೆಂಟ್ ಪಾವತಿಸುವ ಅಗತ್ಯವಿಲ್ಲ. ಆದ್ದರಿಂದ ನಿಮ್ಮ ಕೃಷಿಗಾಗಿ ಹಣಕಾಸು ಒದಗಿಸುವುದನ್ನು ಬಹಳ ಸರಳವಾಗಿಸಿದೆ.

ಒಂದುವೇಳೆ ಮರುಪಾವತಿಗಳಲ್ಲಿ ಸಮಸ್ಯೆ ಉಂಟಾದರೆ, ಸಮಸ್ಯೆಯನ್ನು ಬಗೆಹರಿಸಲು ನಮ್ಮನ್ನು ತಕ್ಷಣವೇ ಭೇಟಿ ಮಾಡಿ.

ಹೈನುಗಾರಿಕೆ, ಕೋಳಿ ಸಾಕಾಣಿಕೆ, ಜೇನು ಕೃಷಿ, ಮತ್ತು ಇತ್ಯಾದಿ ರೀತಿಯ ಚಟುವಟಿಕೆಗಳು ಅರ್ಹ. ನೇರವಾಗಿ ಕೃಷಿ ವ್ಯವಸಾಯದೊಂದಿಗೆ ಸಂಬಂಧಿಸಿಲ್ಲದಿದ್ದರೂ ಅಗತ್ಯ ಕೃಷಿ ಚಟುವಟಿಕೆಗಳನ್ನು ಒಳಗೊಂಡಿವೆ.

ಮೇಲಾಧಾರವಾಗಿ ತೆಗೆದುಕೊಂಡ ಚಿನ್ನವನ್ನು ಬ್ಯಾಂಕಿನಲ್ಲಿ ಭದ್ರವಾಗಿ ಸಂಗ್ರಹಿಸಿಡಲಾಗುತ್ತದೆ. ಆದ್ದರಿಂದ ಸಾಲವನ್ನು ಮರುಪಾವತಿಸುವವರೆಗೆ ನಿಮ್ಮ ಚಿನ್ನವನ್ನು ಜೋಪಾನವಾಗಿ ಇರಿಸಲಾಗುತ್ತದೆ.

ನಿಮಗಾಗಿಯೆಂದು ಪೂರ್ವಪಾವತಿ ಆಯ್ಕೆಯೂ ಸಹ ಲಭ್ಯವಿದೆ. ಇದು ನಿಮ್ಮ ಬಡ್ಡಿಗಾಗಿ ಕಟ್ಟುವ ಹಣದ ಮೊತ್ತವನ್ನೂ ಸಹ ಕಡಿಮೆಯಾಗಿಸುತ್ತದೆ. ಸಾಲದ ಕುರಿತು ನಿಯಮಗಳು ಮತ್ತು ಷರತ್ತುಗಳನ್ನು ಅರ್ಥಮಾಡಿಕೊಳ್ಳಲು ನಮ್ಮನ್ನು ಸಂಪರ್ಕಿಸಿ.

ಕೃಷಿ ಉದ್ದೇಶಗಳಿಗಾಗಿ ಚಿನ್ನವನ್ನು ಅಡವಿರಿಸುವುದು

ಕೃಷಿ ಚಟುವಟಿಕೆಗಳಿಗಾಗಿ ಹಣವನ್ನು ಪಡೆಯಲು ತಮ್ಮ ಚಿನ್ನವನ್ನು ಅಡವಿರಿಸಲು ಬಯಸುವ ರೈತರಿಗಾಗಿ ಕೆಬಿಎಲ್ ಅಗ್ರಿ ಗೋಲ್ಡ್ ಲೋನ್ ವಿನ್ಯಾಸಗೊಳಿಸಲಾಗಿದೆ. ಆಕರ್ಷಕ ಬಡ್ಡಿ ದರಗಳೊಂದಿಗೆ, ರೈತರು ಈ ಯೋಜನೆಯ ಮೂಲಕ  ತಮ್ಮ ಚಿನ್ನದ ಭದ್ರತೆಯನ್ನು ನೀಡಿ ಸುಲಭವಾಗಿ ಹಣವನ್ನು ಪಡೆಯಬಹುದಾಗಿದೆ. 

ಕೃಷಿ -ವ್ಯವಹಾರ ಸಾಲಗಳ ಮೇಲೆ ಬಡ್ಡಿ ದರಗಳನ್ನು ಸಾಮಾನ್ಯವಾಗಿ ಕೃಷಿ ಸಮುದಾಯವನ್ನು ಬೆಂಬಲಿಸಲು ವಿಶಿಷ್ಟವಾಗಿ ರೂಪಿಸಲಾಗಿದೆ. ಇದರಿಂದ ಇದು ಇತರೆ ಸಾಮಾನ್ಯ ವಾಣಿಜ್ಯ ಸಾಲಗಳಿಗೆ ಹೋಲಿಸಿದರೆ ಬಹಳ ಅನುಕೂಲಕರವಾಗಿರುತ್ತದೆ. ನೀವು ನಿಮ್ಮ ಅರ್ಜಿ ಪ್ರಕ್ರಿಯೆಯನ್ನು ಆರಂಭಿಸುವಾಗ ಈ ದರಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ ಏಕೆಂದರೆ ಇದು ನೇರವಾಗಿ ನಿಮ್ಮ ಮರುಪಾವತಿ ನಿಯಮಗಳು ಮತ್ತು ಸಾಲದ ಒಟ್ಟಾರೆ ವೆಚ್ಚಗಳ ಮೇಲೆ ಪರಿಣಾಮ ಬೀರುತ್ತದೆ.

ಸಾಲದ ಬಳಕೆ ಮತ್ತು ಮರುಪಾವತಿಯ ಕುರಿತು ನೀವು ಸ್ಪಷ್ಟ ಯೋಜನೆಯನ್ನು ಹೊಂದಿರುವಿರಿ ಎಂದು ಖಚಿತಪಡಿಸಿಕೊಳ್ಳಿ. ಆನ್ಲೈನ್ ಅರ್ಜಿ ಪ್ರಕ್ರಿಯೆಯನ್ನು ಸಲ್ಲಿಸಲು ಎಲ್ಲಾ ಅಗತ್ಯ ದಾಖಲೆಗಳನ್ನು ತಯಾರಿಟ್ಟುಕೊಳ್ಳಿ. ಕೃಷಿ-ವ್ಯವಹಾರ ಸಾಲಗಳಿಗಾಗಿ ಲಭ್ಯವಿರುವ ಸರ್ಕಾರೀ ಸಬ್ಸಿಡಿಗಳು ಅಥವಾ ವಿಶೇಷ ಕಾರ್ಯಕ್ರಮಗಳನ್ನು ನಿರ್ಲಕ್ಷಿಸದಿರಿ. ನಿಮ್ಮ ಆರ್ಥಿಕ ಸ್ಥಿತಿಯನ್ನು ನಿರ್ವಹಿಸಲು ನಿಮ್ಮ ಸಾಲವನ್ನು ನಿಯಮಿತವಾಗಿ ನಿಗಾವಣೆ ಮತ್ತು ನಿರ್ವಹಣೆ ಮಾಡಿ.