ಕೆಬಿಎಲ್ ಎಕ್ಸ್ಪ್ರೆಸ್ MSME ಸಾಲ
ಸೂಕ್ಶ್ಮ, ಸಣ್ಣ ಅಥವಾ ಮಧ್ಯಮ ಗಾತ್ರದ ಉದ್ಯಮಗಳಿಗಾಗಿ(MSME) ವಿನ್ಯಾಸಗೊಳಿಸಲಾಗಿದ್ದು, ಇದು ಕ್ರಿಯಾತ್ಮಕ ವ್ಯವಹಾರದ ಪರಿಸರಗಳಿಗೆ ಅಗತ್ಯವಾಗಿದೆ. ನಮ್ಮ ಸಾಲಗಳು ನಿಮಗೆ ಅಗತ್ಯವಿರುವ ಆರ್ಥಿಕ ಬೆಂಬಲವನ್ನು ನೀಡುತ್ತದೆ. ನಿಮ್ಮ ಕೆಲಸಗಳನ್ನು ವಿಸ್ತರಿಸುವುದರಿಂದ ಹಿಡಿದು ಉಪಕರಣಗಳನ್ನು ನವೀಕರಿಸುವರೆಗೆ, ಈ ಸಾಲಗಳು ಬಹುಮುಖಿಯಾಗಿದ್ದು, ವಾರ್ಷಿಕ 9.48% ಬಡ್ಡಿ ದರಗಳೊಂದಿಗೆ ಆರಂಭವಾಗುವ ಬಡ್ಡಿ ದರಗಳನ್ನು ಒಳಗೊಂಡಿದೆ. ನಿಮ್ಮ ವ್ಯವಹಾರವು ಯಾವುದೇ ಅವಕಾಶವನ್ನು ಕಳೆದಿಕೊಳ್ಳದಂತೆ ನೋಡಿಕೊಳ್ಳಲು ನಾವು ಆಧುನಿಕ ಉದ್ಯಮಗಳ ಮುಂದಿನ ಪೀಳಿಗೆಗೆ ಹಣಕಾಸನ್ನು ಒದಗಿಸುತ್ತೇವೆ. ನಿಮ್ಮ ಉದ್ಯಮದಲ್ಲಿ ನಮ್ಮನ್ನು ನಿಮ್ಮ ಸಹಪಯಣಿಗನನ್ನಾಗಿ ಮಾಡಿ ಮತ್ತು ನಾವು ಕೊಡುವ ಬೆಂಬಲದಿಂದ ನಿಮ್ಮ ವ್ಯವಹಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಿರಿ. ಕಡಿಮೆ ಓದಿ
ನಿಮಗೇಕೆ ಈ ಸಾಲ ಸೂಕ್ತ
ನಿಮಗೆ ಅಗತ್ಯವಿರುವುದನ್ನು ನೀಡಲು ವಿನ್ಯಾಸ
ನಿಮ್ಮ ಸಹಾಯಕ್ಕಾಗಿ ಅನುಕೂಲಕರ ಮರುಪಾವತಿ ಆಯ್ಕೆಗಳು ಮತ್ತು ಅವಧಿ
ಅರ್ಹ ವ್ಯಾಪಾರಗಳಿಗೆ CGTMSE ಅಡಿಯಲ್ಲಿ ಮೇಲಾಧಾರ-ಮುಕ್ತ ಆಯ್ಕೆಗಳು
ಡಿಜಿಟಲ್-ಮೊದಲ ಪ್ರಕ್ರಿಯೆಯೊಂದಿಗೆ ತ್ವರಿತ ಆರ್ಥಿಕ ಬೆಂಬಲಕ್ಕಾಗಿ ತ್ವರಿತ ಅನುಮೋದನೆಗಳು
ಅರ್ಹತೆ
ಭಾರತೀಯ ನಿವಾಸಿಯಾಗಿರಬೇಕು, ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು, ಸಾಲದ ಅವಧಿ ಸೇರಿದಂತೆ ಗರಿಷ್ಠ ವಯಸ್ಸಿನ ಮಿತಿ 70 ವರ್ಷಗಳು, ಇದು ವ್ಯಾಪಾರಿಗಳು, ನಿರ್ವಾಹಕರು, ಸೇವಾ ಪೂರೈಕೆದಾರರನ್ನು ಒಳಗೊಂಡಿರುತ್ತದೆ.
- MSME ಮಾರ್ಗಸೂಚಿಗಳಡಿಯಲ್ಲಿ ಕಾನೂನಾತ್ಮಕವಾಗಿ ಗುರುತಿಸಲ್ಪಟ್ಟಿದೆ
- ತಯಾರಿಕಾ, ಉತ್ಪಾದನಾ ಮತ್ತು ಸೇವಾ ವಲಯಗಳಿಗೆ ತೆರೆಯಲ್ಪಟ್ಟಿದೆ
- ನಿರ್ದಿಷ್ಟಪಡಿಸಿದ MSME ಹೂಡಿಕೆ ಮತ್ತು ವಾರ್ಷಿಕ ಆದಾಯ ಮಿತಿಯೊಳಗೆ ವ್ಯವಹಾರ
ಅಗತ್ಯವಿರುವ ದಾಖಲೆಗಳು
- ಉದ್ಯಮ ನೋಂದಣಿ ಪ್ರಮಾಣಪತ್ರ
- ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್
- ದೂರವಾಣಿ ಬಿಲ್ಗಳು, ವಿದ್ಯುತ್ ಬಿಲ್, ಆಸ್ತಿ ತೆರಿಗೆ ರಶೀದಿ
- ವ್ಯವಹಾರ ಸ್ಥಳದ ವಿಳಾಸ ಪುರಾವೆ
- ಬ್ಯಾಂಕಿಂಗ್ ವಿವರಗಳು
- ಹಣಕಾಸಿನ ಸ್ಟೇಟ್ಮೆಂಟ್ ಗಳು, ಬ್ಯಾಲೆನ್ಸ್ ಶೀಟ್ಸ್ ಮತ್ತು ತೆರಿಗೆ ಪಾವತಿಗಳು
- ದೊಡ್ಡ ಮಾನ್ಯತೆಗಾಗಿ ಕಡ್ಡಾಯ ಲೆಕ್ಕಪರಿಶೋಧನೆಗಳು
- ವಿವರಗಳೊಂದಿಗೆ ಕಂಪನಿಯ ಪ್ರೊಫೈಲ್
- ಗುಂಪು ಹಣಕಾಸು ಮತ್ತು ಬ್ಯಾಲೆನ್ಸ್ ಶೀಟ್
- ಯಂತ್ರೋಪಕರಣಗಳ ವಿವರಗಳೊಂದಿಗೆ ಯೋಜನಾ ವರದಿಗಳು ಮತ್ತು ಹಣಕಾಸು ಪ್ರಕ್ಷೇಪಗಳು
- ತಿಂಗಳ-ವಾರು ಮಾರಾಟ, ಉತ್ಪಾದನೆ, ಕಚ್ಚಾ ವಸ್ತುಗಳ ವಿವರಗಳೊಂದಿಗೆ ವ್ಯಾಪಾರ ವಿಮರ್ಶೆ
1,2,3 ಅಷ್ಟು ಸುಲಭ...
3 ಸರಳ ಹಂತಗಳಲ್ಲಿ ಕೆಬಿಎಲ್ ಎಕ್ಸ್ಪ್ರೆಸ್ MSME ಸಾಲಕ್ಕಾಗಿ ಅರ್ಜಿ ಸಲ್ಲಿಸಿ
ಹಂತ 1
ಹಂತ 2
ನಿಮ್ಮ ಮೂಲ ವಿವರಗಳನ್ನು ನಮೂದಿಸಿ
ನಿಮ್ಮ ಮೂಲ ವಿವರಗಳನ್ನು ನೀಡಿ ಮತ್ತು ದಾಖಲೆಗಳನ್ನು ತಯಾರಿಟ್ಟುಕೊಳ್ಳಿ
ಹಂತ 3
ನಿಮ್ಮ ಸಾಲವನ್ನು ಮಂಜೂರು
ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ ನಿಮ್ಮ ಹತ್ತಿರದ ಕರ್ನಾಟಕ ಬ್ಯಾಂಕ್ ಶಾಖೆಗೆ ಹೋಗಿ ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ ನಿಮ್ಮ ಸಾಲವನ್ನು ಮಂಜೂರು ಮಾಡಿದಾಗ ನಮ್ಮ ಶಾಖೆಯ ಅಧಿಕಾರಿಗಳು ನಿಮಗೆ ತಿಳಿಸುತ್ತಾರೆ
ನಿಮಗಾಗಿರುವ ಇತರ ಆಯ್ಕೆಗಳನ್ನು ನೋಡಿ
ಹಣಕಾಸಿನ ಶ್ರೇಷ್ಠತೆಗಾಗಿ ಆರಿಸಲಾಗಿರುವ ಸಾವಿರಾರು ಜನರ ಭರವಸೆ
ಸುಲಭವಾದ ಓದುವಿಕೆಯೊಂದಿಗೆ ಸಾಲಗಳನ್ನು ಸರಳಗೊಳಿಸಿ
ನಿಮಗೆ ಮಾಹಿತಿ ನೀಡುವ ಬೈಟ್-ಗಾತ್ರದ ಸಂಪನ್ಮೂಲಗಳು
ಪ್ರಶ್ನೆಗಳಿವೆಯೇ? ನಾವು ಉತ್ತರಿಸುತ್ತೇವೆ
ಕೆಬಿಎಲ್ ಎಕ್ಸ್ಪ್ರೆಸ್ MSME ಯೋಜನೆಯು ಅನೇಕ ರೀತಿಯ ವ್ಯವಹಾರದ ಅಗತ್ಯತೆಗಳಿಗಾಗಿ ರೂಪಿಸಲಾಗಿದೆ. ಇದು ಕೆಲಸದ ಬಂಡವಾಳ, ಯಂತ್ರೋಪಕರಣಗಳು ಅಥವಾ ವಾಹನಗಳ ಖರೀದಿ, ರಿಪೇರಿ ಅಥವಾ ನವೀಕರಣ ಕಾರ್ಯಗಳು, ಮತ್ತು ಅಂಗಡಿಗಳು, ಕಾರ್ಖಾನೆಗಳು ಅಥವಾ ಕಚೇರಿಗಳು ರೀತಿಯ ವ್ಯವಹಾರ ಬಳಕೆಗಾಗಿ ಸ್ವತ್ತುಗಳನ್ನು ಖರೀದಿಸುವುದಕ್ಕಾಗಿ ಬಹಳ ಸೂಕ್ತವಾಗಿದೆ. ಈ ಅನುಕೂಲತೆಯು ನಿಮ್ಮ ವ್ಯವಹಾರವನ್ನು ಬೆಳೆಸಲು, ವೈವಿಧ್ಯಮಯಗೊಳಿಸಲು ಅಥವಾ ಕೇವಲ ಉದ್ಯಮಕ್ಕಾಗಿ ವಿಭಿನ್ನ ಹಂತಗಳಲ್ಲಿ ವ್ಯವಹಾರ ನಡೆಸಲು ಸೂಕ್ತವಾಗಿದೆ.
ಈ ಯೋಜನೆಯಡಿಯಲ್ಲಿ, ನೀವು ₹30 ಕೋಟಿಗಳವರೆಗಿನ ಸಾಲಾವನ್ನು ಪಡೆಯಬಹುದು. ಆದರೆ, ಒಂದುವೇಳೆ ನಿಮ್ಮ ಸಾಲವು ಸೂಕ್ಶ್ಮ ಮತ್ತು ಸಣ್ಣ ಉದ್ಯಮಗಳಿಗಾಗಿ ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ ಅಡಿಯಲ್ಲಿ ಅರ್ಹತೆ ಪಡೆದುಕೊಂಡಿದ್ದರೆ ನೀವು ಯಾವುದೇ ಮೇಲಾಧಾರವಿಲ್ಲದೆಯೇ ₹5 ಕೋಟಿವರೆಗೆ ಹಣವನ್ನು ಪಡೆಯಬಹುದು. ಈ ವೈಶಿಷ್ಟ್ಯವು ಸಾಕಷ್ಟು ಮೇಲಾಧಾರವಿಲ್ಲದ ಸಣ್ಣ ವ್ಯವಹಾರಗಳಿಗೆ ಬಹಳ ಸೂಕ್ತವಾಗಿದೆ.
ಯೋಜನೆಯು ವಾರ್ಷಿಕ 9.8% ಆರಂಭವಾಗುವ ಸ್ಪರ್ಧಾತ್ಮಕ ಬಡ್ಡಿ ದರಗಳನ್ನು ಒದಗಿಸುತ್ತದೆ. ಈ ದರಗಳು MSMEಗಳಿಗೆ ಕೈಗೆಟುಕುವಂತೆ ವಿನ್ಯಾಸಗೊಳಿಸಲಾಗಿದ್ದು, ಇದು ಮಾರುಕಟ್ಟೆ ಸ್ಥಿತಿಗತಿಗಳು ಮತ್ತು ಬ್ಯಾಂಕಿನ ಆಂತರಿಕ ನೀತಿಗಳನ್ನೂ ಒಳಗೊಂಡಂತೆ ಅನೇಕ ಅಂಶಗಳನ್ನು ಆಧರಿಸಿರುತ್ತದೆ. ನಿಮ್ಮ ವ್ಯವಹಾರದ ಹಣಕಾಸಿನ ಸ್ಥಿತಿ ಮತ್ತು ಕ್ರೆಡಿಟ್ ಮೌಲ್ಯೀಕರಣವನ್ನು ಆಧರಿಸಿ ನೈಜ ದರಗಳು ಅನ್ವಯವಾಗುತ್ತದೆ.
ಸಾಲದ ಅವಧಿ ಆಯ್ಕೆಗಳು ಬಹಳ ಅನುಕೂಲಕರವಾಗಿವೆ. ಉದ್ಯಮ ಬಂಡವಾಳದ ಓವರ್ ಡ್ರಾಫ್ಟ್ ಗಳಿಗಾಗಿ, 12 ತಿಂಗಳುಗಳ ಅವಧಿಯನ್ನು ಕೊಡಬಹುದು. ಅವಧಿ ಸಾಲಗಳಿಗಾಗಿ (ಟರ್ಮ್ ಲೋನ್), 120 ತಿಂಗಳುಗಳವರೆಗೆ ಅವಧಿಯನ್ನು ವಿಸ್ತರಿಸಬಹುದಾಗಿದೆ. ಇದರ ಮೂಲಕ ನಿಮ್ಮ ನಗದಿನ ಹರಿವು ಸುಗಮವಾಗಿ ನಿಮಗೆ ಮರುಪಾವತಿಗಾಗಿ ಸಾಕಷ್ಟು ಸಮಯ ಸಿಗುತ್ತದೆ.
ಓವರ್ ಡ್ರಾಫ್ಟ್ ಸೌಲಭ್ಯವು ನಿಮಗೆ ಒಂದು ನಿಗದಿತ ಮಿತಿಯವರೆಗೆ ನಿಮ್ಮ ಖಾತೆಯಿಂದ ಹಣವನ್ನು ಹಿಂಪಡೆಯಲು ಅವಕಾಶ ನೀಡುತ್ತದೆ. ಅಲ್ಪಾವಧಿಯ ಲಿಕ್ವಿಡಿಟಿ ಅಥವಾ ಅನಿರೀಕ್ಷಿತ ಖರ್ಚುಗಳನ್ನು ನಿರ್ವಹಣೆ ಮಾಡಲು ಇದು ಬಹಳ ಉಪಯೋಗಕಾರಿಯಾಗಿದೆ. ಇದು ಒಪ್ಪಿದ ಸಮಯದೊಳಗೆ, ಯೋಜನೆಯಲ್ಲಿ 18 ತಿಂಗಳುಗಳವರೆಗೆ ಒಪ್ಪಿಕೊಂಡ ಸಮಯದೊಳಗೆ ನಿಮ್ಮ ಅನುಕೂಲದಂತೆ ಸಾಲವನ್ನು ಮರುಪಾವತಿಸುವ ಅನುಕೂಲತೆ ಇರುತ್ತದೆ.
ಸ್ಟಾಕ್ ಗಳು, ಬುಕ್ ಡೆಟ್ಸಗಳು ಅಥವಾ ಸ್ವತ್ತುಗಳ ಹೈಪೋಥಿಕೇಷನ್ ಮೇಲಾಧಾರದ ಅಗತ್ಯತೆಗಳಾಗಿವೆ. ಇದರೊಂದಿಗೆ, ವ್ಯವಹಾರದ ಸ್ಥಳ ಅಥವಾ ಆಸ್ತಿಯ ಅಡಮಾನ ಸಹ ಅಗತ್ಯವಿರುತ್ತದೆ. ಸಾಲಕ್ಕಾಗಿ ಸುರಕ್ಷತೆಯನ್ನು ಖಾತ್ರಿಪಡಿಸಲು ಸಾಲದ ಮೊತ್ತದ ಶೇಖಡಾ 60% ಮೇಲಾಧಾರದ ಭದ್ರತೆ ಇರಬೇಕು ಎಂದು ಬ್ಯಾಂಕ್ ಸ್ಪಷ್ಟಪಡಿಸುತ್ತದೆ.
ಹೌದು, CGTMSE ಅಡಿಯಲ್ಲಿ ₹10 ಲಕ್ಷಗಳವರೆಗೆ ಸಾಲಗಳಿಗಾಗಿ ಮೇಲಾಧಾರದ ಅಗತ್ಯವಿರುವುದಿಲ್ಲ. ಈ ವೈಶಿಷ್ಟ್ಯವು ಭದ್ರತೆಯಾಗಿ ನೀಡಲು ಸ್ವತ್ತುಗಳನ್ನು ಹೊಂದಿರದ ಸಣ್ಣ ವ್ಯಾಪಾರಗಳಿಗೆ ಯೋಜನೆಯು ಲಭ್ಯವಾಗುವಂತೆ ಮಾಡುತ್ತದೆ.
MSME ವರ್ಗೀಕರಣವನ್ನು ಅನುಸರಿಸುವ ಯಾವುದೇ ಸಾಂಸ್ಥಿಕ ಘಟಕಗಳು ಅರ್ಹವಾಗಿವೆ. ಇದರಡಿಯಲ್ಲಿ ₹5 ಕೋಟಿವರೆಗಿನ ಹೂಡಿಕೆಗಳೊಂದಿಗೆ ಸೂಕ್ಶ್ಮ ಗಾತ್ರದ ಉದ್ಯಮಗಳು, ₹50 ಕೋಟಿಗಳವರೆಗೆ ಸಣ್ಣ ಗಾತ್ರದ ಉದ್ಯಮಗಳು, ಮತ್ತು ₹250 ಕೋಟಿಗಳವರೆಗೆ ಮಧ್ಯಮ ಗಾತ್ರದ ಉದ್ಯಮಗಳನ್ನು ಇರುತ್ತವೆ. ಈ ಯೋಜನೆಯಲ್ಲಿ ತಯಾರಿಕಾ, ಸೇವಾ, ವರ್ತಕರು ಮತ್ತು ಸಾರಿಗೆ ಆಪರೇಟರ್ ಗಳನ್ನು ಒಳಗೊಂಡಿರಲಾಗುತ್ತದೆ.
ಮರುಪಾವತಿ ಆಯ್ಕೆಗಳನ್ನು ಅನುಕೂಲತೆಗಾಗಿ ವಿನ್ಯಾಸಗೊಳಿಸಲಾಗಿದೆ. ನೀವು ಇದನ್ನು ಆಗಿಂದಾಗ್ಗೆ ಬಡ್ಡಿ ಸಮೇತ ಸಮಾನ ಕಂತುಗಳಲ್ಲಿ ಅಥವಾ ಇಎಂಐ ಯೋಜನೆಯ ಮೂಲಕ ಪಾವತಿ ಮಾಡಬಹುದಾಗಿದೆ. ಈ ಅನುಕೂಲತೆಯು ನಿಮ್ಮ ಹಣಕಾಸನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ವ್ಯವಹಾರದ ಹಣಕಾಸಿನ ಸ್ಥಿತಿಗೆ ಹೊಂದುವಂತೆಯೂ ಮರುಪಾವತಿ ಸಮಯವನ್ನು ಆಯ್ಕೆ ಮಾಡಬಹುದು
ಕರ್ನಾಟಕ ಬ್ಯಾಂಕಿನ ಸಾಲಗಳ ವಿಷಯದಲ್ಲಿ, EBLR ( External Benchmark Lending Rate) ಅಥವಾ ಬಾಹ್ಯ ಮಾನದಂಡ ಸಾಲ ದರಗಳು ಒಂದು ನಿರ್ಣಾಯಕ ಉಲ್ಲೇಖ ದರವಾಗಿದೆ. ಈ ಮಾನದಂಡಕ್ಕೆ ಸರಿಯಾಗಿ ಸಾಲಗಳ ಬಡ್ಡಿ ದರಗಳನ್ನು ಲೆಕ್ಕಮಾಡಲಾಗುತ್ತದೆ ಮತ್ತು ಹೊಂದಿಸಲಾಗುತ್ತದೆ. ಈ ದರವನ್ನು ಬಾಹ್ಯ ಮಾರುಕಟ್ಟೆ ಅಂಶಗಳಿಂದ ನಿರ್ಧರಿಸಲಾಗುತ್ತದೆ. ಇದು ಪಾರದರ್ಶಕ ಹಾಗೂ ಕ್ರಿಯಾತ್ಮಕ ಮಾನದಂಡವಾಗಿ ಕಾರ್ಯನಿರ್ವಹಿಸುತ್ತದೆ. EBLR ನೊಂದಿಗೆ ಸಾಲದ ಬಡ್ಡಿ ದರಗಳನ್ನು ಸೇರಿಸುವುದರಿಂದ, ನಾವು ಸಾಲದ ದರಗಳನ್ನು ನ್ಯಾಯೋಚಿತ, ಮಾರುಕಟ್ಟೆ ಸ್ಥಿತಿಗಳಿಗೆ ಪ್ರತಿಕ್ರಿಯಿಸುತ್ತದೆ ಮತ್ತು ನಿಯಂತ್ರಕ ಮಾರುಕಟ್ಟೆ ಸ್ಥಿತಿಗೆ ಸಂವೇದಿಸುವಂಥದ್ದು ಎಂದು ಖಾತ್ರಿಪಡಿಸಿಕೊಳ್ಳುವ ಮೂಲಕ ನಾವು ಸಾಲಗಾರರಿಗೆ ತಮ್ಮ ಸಾಲದ ಬಡ್ಡಿದರಗಳನ್ನು ಹೇಗೆ ಹೊಂದಿಸಲಾಗುತ್ತದೆ ಎಂಬುದನ್ನು ಅರ್ಥೈಸಲು ಪ್ರಯತ್ನಿಸುತ್ತೇವೆ.
₹ 5 ಲಕ್ಷದವರೆಗಿನ ಸಾಲಗಳಿಗೆ ಯಾವುದೇ ಪ್ರಕ್ರಿಯೆ ಶುಲ್ಕವಿಲ್ಲ. ₹5 ಲಕ್ಷಕ್ಕಿಂತ ಹೆಚ್ಚಿನ ಸಾಲಗಳ ಮೇಲೆ 0.50% ವರೆಗಿನ ಪ್ರಕ್ರಿಯೆ ಶುಲ್ಕಗಳು ಅನ್ವಯವಾಗುತ್ತವೆ.
MSME ಸಾಲಗಳನ್ನು ಸೂಕ್ಶ್ಮ, ಸಣ್ಣ ಮತ್ತು ಮಾಧ್ಯಮ ವ್ಯವಹಾರಗಳ ಆರ್ಥಿಕ ಅಗತ್ಯತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ಯಂತ್ರೋಪಕರಣ ಖರೀದಿ, ವ್ಯವಹಾರ ವಿಸ್ತರಣೆ ಮತ್ತು ಕೆಲಸದ ಬಂಡವಾಳ ಅಗತ್ಯತೆಗಳು ರೀತಿಯ ಖರ್ಚುಗಳನ್ನು ಒಳಗೊಂಡಂತೆ MSME ಗಳ ಅಭಿವೃದ್ಧಿಯಲ್ಲಿ ಬಹಳ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಈ ಸಾಲಗಳು ಸಾಮಾನ್ಯವಾಗಿ ಅನುಕೂಲಕರ ನಿಯಮಗಳು ಮತ್ತು ಸರ್ಕಾರೀ ಬೆಂಬಲದೊಂದಿಗೆ ಬರುತ್ತದೆ. ಸಾಲ ಪಡೆಯಲು ಬಯಸುವವರು MSME ಸಾಲಕ್ಕಾಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
MSME ಸಾಲಗಳ ಬಡ್ಡಿ ದರಗಳು ಸಾಮಾನ್ಯವಾಗಿ ಸ್ಪರ್ಧಾತ್ಮಕವಾಗಿದೆ. ವ್ಯವಹಾರದ ಹಣಕಾಸಿನ ಸ್ಥಿತಿ, ಸಾಲದ ಮೊತ್ತ ಮತ್ತು ಅವಧಿ ರೀತಿಯ ಅಂಶಗಳ ಮೇಲೆ ಬಡ್ಡಿ ಆಧರಿಸಿರುತ್ತದೆ. ಸಾಲದ ಮೊತ್ತ ಮತ್ತು ಅವಧಿಯ ವಿಧಗಳ ಮೇಲೆ ಬಡ್ಡಿದರದ ನಿರ್ಣಯ ನಿಂತಿದೆ. ನೀವು ನಿಮ್ಮ ಸಾಲದ ಅರ್ಜಿ ಪ್ರಕ್ರಿಯೆಯನ್ನು ಆರಂಭಿಸಿದ ನಂತರ ಮರುಪಾವತಿಯ ಮೇಲೆ ಈ ಬಡ್ಡಿದರಗಳ ಪ್ರಭಾವವನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಕೆಬಿಎಲ್ ಎಕ್ಸ್ಪ್ರೆಸ್ MSME ಸಾಲದೊಂದಿಗೆ ನಿಮ್ಮ MSMEಯನ್ನು ಸಶಕ್ತಗೊಳಿಸಿ, ಇದು ಹೊಸ ವ್ಯವಹಾರ ಚಟುವಟಿಕೆಗಳಿಗಾಗಿ ರೂಪಿಸಿದ ಸಾಲ ಸೌಲಭ್ಯವಾಗಿದೆ. ನಿಮ್ಮ ಸಾಲವನ್ನು ಆನ್ ಲೈನ್ ನಲ್ಲೂ ನೀವು ನಿರ್ವಹಿಸಬಹುದಾಗಿದೆ.
ನಿಮ್ಮ ಸಾಲದ ಅರ್ಜಿಯನ್ನು ಸ್ವೀಕೃತವಾಗಲು ಒಂದು ಅತ್ಯುತ್ತಮ ವ್ಯವಹಾರ ಯೋಜನೆಯನ್ನು ಸಿದ್ಧಪಡಿಸಿಕೊಳ್ಳಿ. ಅರ್ಜಿ ಪ್ರಕ್ರಿಯೆಗಾಗಿ ನಿಮ್ಮ ಹಣಕಾಸಿನ ದಾಖಲೆಗಳನ್ನು ಕ್ರಮವಾಗಿ ಜೋಡಿಸಿಕೊಳ್ಳಿ ಮತ್ತು ನವೀಕರಿಸಿಕೊಳ್ಳಿ. ಸಾಲದ ಒಪ್ಪಂದ, ಅದರಲ್ಲೂ ನಿರ್ದಿಷ್ಟವಾಗಿ ಮರುಪಾವತಿ ಷರತ್ತುಗಳು ಮತ್ತು ಯಾವುದೇ ಸಂಬಂಧಿತ ಶುಲ್ಕಗಳನ್ನು ಸರಿಯಾಗಿ ಓದಿ ಅರ್ಥಮಾಡಿಕೊಳ್ಳಿ.