ಓವರ್ ಡ್ರಾಫ್ಟ್ ಸೆಕ್ಯುರಿಟಿ ಡೆಪಾಸಿಟ್

ಮೂಲಸೌಕರ್ಯ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿವಿಲ್ ಗುತ್ತಿಗೆದಾರರಿಗಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿರುವ ಸದೃಢ ಹಣಕಾಸು ಪರಿಹಾರ ಇದಾಗಿದೆ. ನಿಮ್ಮ ಉದ್ಯಮದ ವಿಶಿಷ್ಟ ಬೇಡಿಕೆಗಳನ್ನು ಪರಿಗಣಿಸುತ್ತ, ಈ ಯೋಜನೆಯು ಬ್ಯಾಂಕ್ ಖಾತ್ರಿಯಾಗಿ ಸ್ಥಿರ ಠೇವಣಿ ರಶೀತಿಗಳ(FDRಗಳು) ವಿತರಣೆಯನ್ನು ಸುಗಮಗೊಳಿಸುತ್ತದೆ. ಇದರ ಮೂಲಕ ಅಗತ್ಯವಿರುವ ಹಣಕಾಸಿನ ಬೆಂಬಲವನ್ನು ಒದಗಿಸಲಾಗುತ್ತದೆ. ಸ್ಪರ್ಧಾತ್ಮಕ ಬಡ್ಡಿ ದರಗಳು ಮತ್ತು ನೇರ 10% ಕ್ಯಾಶ್ ಮಾರ್ಜಿನ್ ನೊಂದಿಗೆ, ನಮ್ಮ ಯೋಜನೆಯು ನಿಮ್ಮ ಹಣಕಾಸಿನ ನಿರ್ವಹಣೆಯನ್ನು ಸುಗಮಗೊಳಿಸುವ ಮೂಲಕ ಕಟ್ಟಡ ಮತ್ತು ಪ್ರಮುಖ ಮೂಲಸೌಕರ್ಯಗಳಲ್ಲಿ ನಿಮ್ಮ ಕೆಲಸವನ್ನು ಅತ್ಯುತ್ತಮವಾಗಿಸಲು ನಿಮಗೆ ಸಹಾಯ ಮಾಡುತ್ತದೆ. ನಮ್ಮ ಹಣಕಾಸಿನ ಪರಿಹಾರಗಳೊಂದಿಗೆ ನಿಮ್ಮ ಪ್ರಯಾಣವನ್ನು ಸುಲಭಗೊಳಿಸಲು ನಾವಿದ್ದೇವೆ ಮತ್ತು ನಾವು ಸ್ಥಿರತೆ ಮತ್ತು ನಂಬಿಕೆಯೊಂದಿಗೆ ನಿಮ್ಮ ಕಾರ್ಯಗಳಲ್ಲಿನ ಸಿವಿಲ್ ಕೆಲಸಗಳ ನಿರ್ದಿಷ್ಟ ಅಗತ್ಯತೆಗಳನ್ನು ಅರ್ಥಮಾಡಿಕೊಂಡು ಅದಕ್ಕಾಗಿ ಸಹಾಯ ನೀಡುತ್ತೇವೆ.Read more

ನಿಮಗೇಕೆ ಈ ಸಾಲ ಸೂಕ್ತ

ನಿಮಗೆ ಅಗತ್ಯವಿರುವುದನ್ನು ನೀಡಲು ವಿನ್ಯಾಸ 

ನಿಮ್ಮ ಬಂಡವಾಳ ಖಾತೆಯ ಕೊನೆಯ ದಿನಾಂಕದೊಂದಿಗೆ ಸಾಲದ ಅವಧಿ ಹೊಂದುತ್ತದೆ

ಭದ್ರತೆಗಾಗಿ ಫಲಾನುಭವಿಯ ಹೆಸರಿನಲ್ಲಿ ಸ್ಥಿರ ಠೇವಣಿ ರಶೀತಿಗಳನ್ನು ವಿತರಿಸಲಾಗುವುದು.

ಮೂಲಸೌಕರ್ಯ ವಿಭಾಗದ ಸಿವಿಲ್ ಗುತ್ತಿಗೆದಾರರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ

ಡೌನ್ ಪೇಮೆಂಟ್ ಮೊತ್ತ

ಸಾಲದ ಮೊತ್ತದ ಶೇಕಡಾ 10% ಡೌನ್ ಪೇಮೆಂಟ್

ಸಾಲದ ಮರುಪಾವತಿ

ಮರುಪಾವತಿಯು ಪ್ರಮಾಣಿತ ಓವರ್ ಡ್ರಾಫ್ಟ್ ನಿಯಮಗಳನ್ನು ಆಧರಿಸಿದೆ

ಸಾಲದ ಮೊತ್ತ

ನಾವು ನಿರ್ದಿಷ್ಟ ಯೋಜನೆಯ ಅಗತ್ಯತೆಗಳನ್ನು ಆಧರಿಸಿ ಸಾಲದ ಹಣವನ್ನು ಒದಗಿಸುತ್ತೇವೆ.

ಸ್ಥಿರ ಠೇವಣಿ ರಶೀತಿಗಳು

ಈ ಯೋಜನೆಯು ಸ್ಥಿರ ಠೇವಣಿ ರಶೀತಿಗಳ(FDR) ವಿತರಣೆಗಾಗಿ ಹಣಕಾಸನ್ನು ಒದಗಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ FDRಗಳು ಸಾಂಪ್ರದಾಯಿಕ ಬ್ಯಾಂಕ್ ಗ್ಯಾರಂಟಿಗಳಿಗೆ ಪರ್ಯಾಯವಾಗಿದ್ದು, ಭದ್ರತೆಯ ಮತ್ತೊಂದು ವಿಧಾನವನ್ನು ಒದಗಿಸುತ್ತದೆ 

ಬಡ್ಡಿ ದರಗಳು

ನಾವು ಕೆಬಿಎಲ್ KBL MSME ದರಗಳ  ಪ್ರಕಾರ ಅಥವಾ ಯೋಜನೆ ಅನ್ವಯವಾಗದೇ ಇದ್ದಲ್ಲಿ ಸಾಮಾನ್ಯ ಓವರ್ ಡ್ರಾಫ್ಟ್ ದರಗಳಂತೆ ಬಡ್ಡಿ ದರಗಳನ್ನು ವಿಧಿಸುತ್ತೇವೆ. 

ಸ್ವತ್ತುಗಳ ಹೈಪೋಥಿಕೇಷನ್

ಬ್ಯಾಂಕ್ ಒದಗಿಸಿದ ಸಾಲದಿಂದ ಪಡೆದುಕೊಂಡ ಸ್ವತ್ತುಗಳ ಹೈಪೋಥಿಕೇಷನ್ 

MSME ಪ್ರಯೋಜನ

 ನಮ್ಮ ಸಾಲಗಳು ಸೌಲಭ್ಯಗಳು MSME  ವಿಧಿಗಳಿಗೆ ಬದ್ಧವಾಗಿರುತ್ತದೆ.

ಲೆಕ್ಕವಾಗುವುದು ಸರಳ ಮತ್ತು ಸುಲಭ

ಸ್ಮಾರ್ಟ್ ಉಳಿತಾಯ ಮತ್ತು ವೆಚ್ಚಗಳಿಗಾಗಿ ಸ್ಮಾರ್ಟ್ ಕ್ಯಾಲ್ಕುಲೇಟರ್

ಇ ಎಮ್ ಐ ಕ್ಯಾಲ್ಕುಲೇಟರ್

ಸಾಲದ ಮೊತ್ತ
25000 1000000
ಬಡ್ಡಿ ದರ
2% 18%
ಸಾಲದ ಅವಧಿ
1 ತಿಂಗಳುಗಳು 60 ತಿಂಗಳುಗಳು

ನೀವು ಪಾವತಿಸುವಿರಿ

₹13,800/ತಿಂಗಳುಗಳು

ನಿಮಗಾಗಿ ಯಾವ ಉತ್ಪನ್ನವು ಖಚಿತವಾಗಿಲ್ಲವೇ?

ಒಟ್ಟಿಗೆ ಅತ್ಯುತ್ತಮ ಫಿಟ್ ಅನ್ನು ಕಂಡುಹಿಡಿಯೋಣ

  • ಯಾವುದೇ ಸ್ಪ್ಯಾಮ್ ಕರೆಗಳಿಲ್ಲ
  • ಮೀಸಲಾದ ಕೆಬಿಎಲ್ ತಜ್ಞರು
  • ನಿಮ್ಮ ಸಮಯಕ್ಕೆ ಕರೆಯನ್ನು ಹೊಂದಿಸಿ

ಅರ್ಹತೆ

  • ಭಾರತೀಯ ಪ್ರಜೆಗಳಾಗಿರಬೇಕು 
  • ಮೂಲಸೌಕರ್ಯ ನಿರ್ಮಾಣ ಕೆಲಸದಲ್ಲಿರುವ ಸಿವಿಲ್ ಗುತ್ತಿಗೆದಾರರು 
  • ವಲಯದಲ್ಲಿ ಕನಿಷ್ಠ 3 ವರ್ಷಗಳ ಅನುಭವ 
  • ಉತ್ತಮ ಹಣಕಾಸಿನ ವ್ಯವಹಾರವನ್ನು ನಡೆಸಿದ ಸಕ್ರಿಯ ಕರ್ನಾಟಕ ಬ್ಯಾಂಕಿನ ಗ್ರಾಹಕರು 
     

ಅಗತ್ಯವಿರುವ ದಾಖಲೆಗಳು

  • ಸಂಸ್ಥೆ ಗುರುತಿನ ಚೀಟಿ (ಪ್ಯಾನ್, ನೋಂದಣಿ ಮಾಡಿದ ಪಾಲುದಾರಿಕೆ ಒಪ್ಪಂದ, MOA ಮತ್ತು AOA, ನೋಂದಾಯಿತ ಟ್ರಸ್ಟ್ ಡೀಡ್, LLP ಒಪ್ಪಂದ ಇತ್ಯಾದಿ) 
  • ಉದ್ಯಮ ನೋಂದಣಿ ಪ್ರಮಾಣಪತ್ರ
  • ನಿಯಂತ್ರಣ ಪ್ರಾಧಿಕಾರದಿಂದ ಗುತ್ತಿಗೆದಾರ ಪರವಾನಗಿ 

1,2,3...ರೀತಿಯಾಗಿ ಸರಳ

3 ಸರಳ ಹಂತಗಳಲ್ಲಿ ಓವರ್ ಡ್ರಾಫ್ಟ್ ಸೆಕ್ಯುರಿಟಿ ಡೆಪಾಸಿಟ್ ಗಾಗಿ ಅರ್ಜಿ ಸಲ್ಲಿಸಿ

ಹಂತ 1

ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ

ನಿಮ್ಮ ಹತ್ತಿರದ ಕರ್ನಾಟಕ ಬ್ಯಾಂಕ್ ಶಾಖೆಗೆ ಹೋಗಿ

ಹಂತ 2

ನಿಮ್ಮ ಮೂಲ ವಿವರಗಳನ್ನು ನಮೂದಿಸಿ 

 ನಿಮ್ಮ ಮೂಲ ವಿವರಗಳನ್ನು ನೀಡಿ ಮತ್ತು ದಾಖಲೆಗಳನ್ನು ತಯಾರಿಟ್ಟುಕೊಳ್ಳಿ

ಹಂತ 3

ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ

ನಿಮ್ಮ ಖಾತೆಯನ್ನು ತೆರೆದಾಗ ನಮ್ಮ ಶಾಖೆಯ ಅಧಿಕಾರಿಗಳು ನಿಮಗೆ ತಿಳಿಸುತ್ತಾರೆ

image of smiling girl

ನಿಮಗಾಗಿರುವ ಇತರ ಆಯ್ಕೆಗಳನ್ನು ನೋಡಿ

ಹಣಕಾಸಿನ ಶ್ರೇಷ್ಠತೆಗಾಗಿ ಆರಿಸಲಾಗಿರುವ ಸಾವಿರಾರು ಜನರ ಭರವಸೆ

ಕೆಬಿಎಲ್ ಬ್ಯುಸಿನೆಸ್ ಕ್ವಿಕ್ ಲೋನ್

  • ₹50 ಲಕ್ಷಗಳವರೆಗೆ ಗರಿಷ್ಟ ಸಾಲದ ಮೊತ್ತ
  • ಬಡ್ಡಿ ದರಗಳು ವಾರ್ಷಿಕ 10.23%ರಿಂದ ಆರಂಭ
  • 35 ತಿಂಗಳುಗಳವರೆಗೆ ಸಾಲದ ಅವಧಿ

ಕೆಬಿಎಲ್ ಮೈಕ್ರೋ ಮಿತ್ರಾ ಲೋನ್

  • ₹10 ಲಕ್ಷಗಳವರೆಗೆ ಗರಿಷ್ಟ ಸಾಲದ ಮೊತ್ತ
  • EBLR ಮಾರ್ಗಸೂಚಿಗಳ ಪ್ರಕಾರ ಬಡ್ಡಿ ದರಗಳು
  • 35-84 ತಿಂಗಳುಗಳ ಸಾಲದ ಅವಧಿ

ಸರಳ ಮಾಹಿತಿಯೊಂದಿಗೆ ಸರಳ ಸಾಲಗಳು

ಪ್ರತಿ ಕ್ಷಣವೂ ನಿಮಗೆ ಮಾಹಿತಿ ಒದಗಿಸುವ ನಮ್ಮ ಸಂಪನ್ಮೂಲಗಳು

match-made
ಬ್ಯಾಂಕಿಂಗ್ ಸ್ವರ್ಗದಲ್ಲಿ ಮಾಡಿದ ಹೊಂದಾಣಿಕೆ: ಉಳಿತಾಯ ಖಾತೆ ಆವೃತ್ತಿ

navigating-pers
ನಿಮ್ಮ ಆರಂಭಿಕ 20 ರ ದಶಕದಲ್ಲಿ ವೈಯಕ್ತಿಕ ಸಾಲಗಳನ್ನು ನ್ಯಾವಿಗೇಟ್ ಮಾಡುವುದು- ಇದು ಒಳ್ಳೆಯ ಐಡಿಯಾವೇ?

savings-accoun
ಉಳಿತಾಯ ಖಾತೆ: ರೂಢಿಗಳನ್ನು ಮುರಿಯುವುದು ಮತ್ತು ಸಂಪತ್ತನ್ನು ನಿರ್ಮಿಸುವುದು

vehicle-loans
ಮಹತ್ವಾಕಾಂಕ್ಷೆಯ ಡೆಲಿವರಿ ಪಾಲುದಾರರು ಮತ್ತು ಕ್ಯಾಬ್ ಚಾಲಕರಿಗೆ ವಾಹನ ಸಾಲಗಳು

why-should
ನೀವು ಅರೆ ಸುಸಜ್ಜಿತ ಅಪಾರ್ಟ್ಮೆಂಟ್ಗೆ ಏಕೆ ಹೋಗಬೇಕು?

ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ
ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ

ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ
ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ

the-wisdom
ನಿವೃತ್ತ ಜನರಿಗೆ ತ್ವರಿತ ಚಿನ್ನದ ಸಾಲಗಳ ಬುದ್ಧಿವಂತಿಕೆ - ಆರ್ಥಿಕ ಭದ್ರತೆಯನ್ನು ಅನ್ಲಾಕ್ ಮಾಡಿ

ಪ್ರಶ್ನೆಗಳಿವೆಯೇ? ನಾವು ಉತ್ತರಿಸುತ್ತೇವೆ

ಈ ಯೋಜನೆಗಾಗಿ ಓವರ್ ಡ್ರಾಫ್ಟ್ ಖಾತೆ ಕಡ್ಡಾಯವಾಗಿದೆಯೇ?

ಹೌದು. ನೀವು ಬಂಡವಾಳ ಓವರ್ ಡ್ರಾಫ್ಟ್ ಮಿತಿಯೊಂದಿಗೆ ಅಸ್ತಿತ್ವದಲ್ಲಿರುವ ಕರ್ನಾಟಕ ಬ್ಯಾಂಕಿನ ಗ್ರಾಹಕರಾಗಿರಬೇಕು ಮತ್ತು ಈ ಯೋಜನೆಯನ್ನು ಪಡೆಯಲು ಸಮಾಧಾನಕರ ಹಣದ ವ್ಯವಹಾರಗಳನ್ನು ಈ ಹಿಂದೆ ಮಾಡಿರಬೇಕು.

ಇಲ್ಲ. ಓವರ್ ಡ್ರಾಫ್ಟ್ ಸೆಕ್ಯುರಿಟಿ ಡೆಪಾಸಿಟ್ ಯೋಜನೆಗಾಗಿ ಯಾವುದೇ ಸ್ಟಾಕ್ ಸ್ಟೇಟ್ಮೆಂಟ್ ಗಳ ಅಗತ್ಯವಿರುವುದಿಲ್ಲ. ನಿಮಗಾಗಿಯೆಂದು ಅರ್ಜಿ ಪ್ರಕ್ರಿಯೆಯನ್ನು ಸುಲಭಗೊಳಿಸಿದ್ದೇವೆ.

ಸ್ಥಿರ ಠೇವಣಿ ರಶೀತಿಯನ್ನು ನಿಮ್ಮ ಖಾತೆಯ ಫಲಾನುಭವಿಯ ಹೆಸರಿನಲ್ಲಿ ವಿತರಿಸಲಾಗುವುದು. ಇದರ ಮೂಲಕ ಹಣದ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ಕಾರ್ಯನಿರ್ವಹಿಸುತ್ತಿರುವ ಯೋಜನೆ ಅಥವಾ ನಿರ್ದಿಷ್ಟ ಯೋಜನೆಗೆ ನೇರವಾಗಿ ಸಂಪರ್ಕ ಕಲ್ಪಿಸಲಾಗುತ್ತದೆ.

ಸ್ಪರ್ಧಾತ್ಮಕ ಮತ್ತು ನ್ಯಾಯೋಚಿತ ದರಗಳನ್ನು ಖಾತ್ರಿಪಡಿಸಿಕೊಳ್ಳಲು ಬಡ್ಡಿ ದರಗಳನ್ನು ಕೆಬಿಎಲ್ MSME ಯೋಜನೆ ಅಥವಾ ನಿಮ್ಮ ನಿಯಮಿತ ಬಂಡವಾಳ ಓವರ್ ಡ್ರಾಫ್ಟ್ ಖಾತೆಯ ಪ್ರಕಾರ ಅನ್ವಯಿಸಲಾಗುತ್ತದೆ.

ಓವರ್ ಡ್ರಾಫ್ಟ್ ಸೆಕ್ಯುರಿಟಿ ಡೆಪಾಸಿಟ್ ಯೋಜನೆಯ ಅವಧಿಯು ನಿಮ್ಮ ಪ್ರಸ್ತುತ ಬಂಡವಾಳ ಖಾತೆಯೊಂದಿಗೆ ಅನುಗುಣವಾಗಿರುತ್ತದೆ. ಇದು ನಿಮ್ಮ ಅಗತ್ಯತೆಗಳ ಪ್ರಕಾರ ನಿಮ್ಮ ಚಾಲ್ತಿಯಲ್ಲಿರುವ ಯೋಜನೆಯ ಸಮಯದ ಅವಧಿಗಳು ಮತ್ತು ನಿಧಿಗಳ ವಿತರಣೆಯನ್ನು ಹೊಂದಿಸುವುದಾಗಿರುತ್ತದೆ.

ಬ್ಯಾಂಕ್ ಸಂಸ್ಕರಣಾ ಶುಲ್ಕಗಳು ಅಥವಾ ಮುಂಗಡ ಶುಲ್ಕಗಳನ್ನು ವಿಧಿಸುತ್ತದೆ.

ಸ್ಥಿರ ಠೇವಣಿ ರಶೀತಿಗಳು ಎಂದರೆ ನೀವು ಬ್ಯಾಂಕಿನಲ್ಲಿ ಸ್ಥಿರ ಠೇವಣಿಯನ್ನು ಮಾಡಿದಾಗ ನಿಮಗೆ ವಿತರಿಸುವ ದಾಖಲೆಗಳನ್ನು FDR ಎನ್ನುವರು. ಸ್ಥಿರ ಠೇವಣಿಯು ಒಂದು ರೀತಿಯ ಹೂಡಿಕೆಯಾಗಿದ್ದು, ಇದರಲ್ಲಿ ಹಣವನ್ನು ಒಂದು ನಿರ್ದಿಷ್ಟ ಬಡ್ಡಿ ದರದಲ್ಲಿ ನಿಗದಿತ ಸಮಯದವರೆಗೆ ಜಮೆ ಮಾಡಲಾಗಿರುತ್ತದೆ. ಓವರ್ ಡ್ರಾಫ್ಟ್ ಸೆಕ್ಯುರಿಟಿ ಡೆಪಾಸಿಟ್-FD ಯೋಜನೆ ವಿಷಯದಲ್ಲಿ, FDRಗಳನ್ನು ಸಾಂಪ್ರದಾಯಿಕ ಬ್ಯಾಂಕ್ ಖಾತೆಗಳ ಬದಲಾಗಿ ಬಳಸಿಕೊಳ್ಳಲಾಗುತ್ತದೆ. ಅಗತ್ಯವಾಗಿ, FDRಗಳು ಸಾಲದ ಭದ್ರತೆ ಅಥವಾ ಮೇಲಾಧಾರವಾಗಿ ಕಾರ್ಯನಿರ್ವಹಿಸುತ್ತದೆ.

ಖಂಡಿತ. ನೀವು ಸಾಲಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಒಂದುವೇಳೆ ನಿಮಗೆ ವೈಯಕ್ತಿಕ ಸಹಾಯ ಬೇಕಾದಲ್ಲಿ ನೀವು ನಿಮ್ಮ ಹತ್ತಿರದ ಕೆಬಿಎಲ್ ಶಾಖೆಗೂ ಸಹ ಭೇಟಿ ನೀಡಬಹುದು. ನಿಮ್ಮ ಅರ್ಜಿ ಪ್ರಕ್ರಿಯೆಯನ್ನು ನಾವು ಸುಲಭಗೊಳಿಸುತ್ತೇವೆ.

ಒಂದುವೇಳೆ ನೀವು EMI ತಪ್ಪಿಸಿದರೆ, ನೀವು ಆದಷ್ಟು ಬೇಗ ಬ್ಯಾಂಕ್ ಸಂಪರ್ಕಿಸಬೇಕು. ನಿಮಗೆ ಸ್ವಲ್ಪ ಸಡಿಲತೆಯನ್ನು ನೀಡಿದ್ದರೂ ಸಹ ನಿಯಮಿತವಾಗಿ ಪಾವತಿಗಳನ್ನು ಮಾಡದಿದ್ದಾಹ ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ಭವಿಷ್ಯದ ಸಾಲಗಳ ಅರ್ಹತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಓವರ್ ಡ್ರಾಫ್ಟ್ ಸೆಕ್ಯುರಿಟಿ ಡೆಪಾಸಿಟ್ ಗಳ ಪ್ರಯೋಜನಗಳು

ಓವರ್ ಡ್ರಾಫ್ಟ್ ಸೆಕ್ಯುರಿಟಿ  ಠೇವಣಿಯೊಂದಿಗೆ ನಿಮ್ಮ ವ್ಯವಹಾರದ ಆರ್ಥಿಕ ಬಾಧ್ಯತೆಗಳನ್ನು ಭದ್ರಪಡಿಸಿಕೊಳ್ಳಿ. ಈ ಸೌಲಭ್ಯವು ನಿಮಗೆ FD ಮೇಲೆ ಓವರ್ ಡ್ರಾಫ್ಟ್ ಸೌಲಭ್ಯವನ್ನು ನೀಡುತ್ತಿದ್ದು, ನಿಮ್ಮ ಸ್ಥಿರ ಠೇವಣಿಗಳನ್ನು ಮುರಿಯದೆ ನಿಮ್ಮ ಅನಿರೀಕ್ಷಿತ ವ್ಯವಹಾರ ಖರ್ಚುಗಳನ್ನು ಪೂರೈಸಲು ಸಹಾಯ ಮಾಡುತ್ತದೆ. ನಿಮ್ಮ ಉಳಿತಾಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ನಿಮ್ಮ ನಗದಿನ ಹರಿವನ್ನು ನಿರ್ವಹಣೆ ಮಾಡಲು ಇದು ಸ್ಮಾರ್ಟ್ ವಿಧಾನವಾಗಿದೆ. 

ಓವರ್ ಡ್ರಾಫ್ಟ್ ಸೌಲಭ್ಯಗಳ ಅಡಿಯಲ್ಲಿ ಒಟ್ಟು ಸಾಲದ ಮೊತ್ತದ ಬದಲಾಗಿ ಬಳಸಿದ ಮೊತ್ತಕ್ಕೆ ಮಾತ್ರ ಬಡ್ಡಿಯನ್ನು ವಿಧಿಸಲಾಗುತ್ತದೆ. ಆದರೆ ಸಾಮಾನ್ಯವಾಗಿ ಈ ಬಡ್ಡಿ ದರಗಳು ನಿಯಮಿತ ಸಾಲದ ಬಡ್ಡಿಗಳಿಗಿಂತ ತುಸು ಹೆಚ್ಚಾಗಿರುತ್ತದೆ ಮತ್ತು ಓವರ್ ಡ್ರಾಫ್ಟ್ ಮೊತ್ತ ಮತ್ತು ವ್ಯವಹಾರದ ಕ್ರೆಡಿಟ್ ವಿವರಗಳು ರೀತಿಯ ಕೆಲವು ಅಂಶಗಳನ್ನು ಆಧರಿಸಿರುತ್ತದೆ. ನಿಮ್ಮ ಸಾಲದ ಪ್ರಕ್ರಿಯೆಯನ್ನು ಆರಂಭಿಸುವ ಮುನ್ನ ಈ ದರಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. 

ನಿಮ್ಮ ಓವರ್ ಡ್ರಾಫ್ಟ್ ಸೌಲಭ್ಯವನ್ನು ಸರಿಯಾದ ರೀತಿಯಲ್ಲಿ ಅಲ್ಪಾವಧಿ ಹಣಕಾಸಿನ ಅಗತ್ಯತೆಗಳಿಗಾಗಿ ಬಳಸಿಕೊಳ್ಳಿ. ಸೌಲಭ್ಯವನ್ನು ವಿಸ್ತರಿಸದಂತೆ ನೋಡಿಕೊಳ್ಳಲು ನಿಮ್ಮ ಖಾತೆಯನ್ನು ನಿರ್ವಹಣೆ ಮಾಡಿ. ಮರುಪಾವತಿಯನ್ನು ನಿರ್ಲಕ್ಷಿಸದಿರಿ; ಸಾಧ್ಯವಾದಷ್ಟು ಬೇಗ ಖಾತೆಯಲ್ಲಿ ಹಣವನ್ನು ತುಂಬಿ. ಓವರ್ ಡ್ರಾಫ್ಟ್ ಬ್ಯುಸಿನೆಸ್ ಯೋಜನೆಗಾಗಿ ನೀವು ಆನ್ಲೈನ್ ಅರ್ಜಿ ಸಲ್ಲಿಸುವಾಗ ನಿಯಮಗಳು ಮತ್ತು ಷರತ್ತುಗಳ ಕುರಿತು ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ.