ಕೆಬಿಎಲ್ ಸಮೃದ್ಧಿ ಎಂದರೇನು?

KBL ಸಮೃದ್ಧಿಯು ಹೆಚ್ಚಿನ ಆದಾಯವಿರುವ ಗಣ್ಯ ವ್ಯಕ್ತಿಗಳಿಗಾಗಿ ರೂಪಿಸಲಾದ ವಿಶೇಷವಾದ ಸಂಪತ್ತು ನಿರ್ವಹಣಾ ಮತ್ತು ಹಣಕಾಸು ಯೋಜನೆಯಾಗಿದೆ. ಇದು ತಜ್ಞರ ಸಲಹೆ ಮತ್ತು ಪ್ರೀಮಿಯಂ ಹೂಡಿಕೆಯ ಅವಕಾಶಗಳೊಂದಿಗೆ ಸಂಪತ್ತಿನ ನಿರ್ವಹಣೆಗಿರುವ ಸೇವಾ ಸೌಲಭ್ಯವಾಗಿದೆ. IIFL ಸೆಕ್ಯುರಿಟೀಸ್ ಲಿಮಿಟೆಡ್ನ ಸಹಯೋಗದೊಂದಿಗೆ ಈ ವಿಶೇಷ ಉತ್ಪನ್ನಗಳ ಪ್ಯಾಕ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಗಣ್ಯ ಗ್ರಾಹಕರ ಅತ್ಯಾಧುನಿಕ ಆರ್ಥಿಕ ಅಗತ್ಯಗಳನ್ನು ಪೂರೈಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಉನ್ನತ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಗಳಿಂದ (AMCs) ಪೋರ್ಟ್ಫೋಲಿಯೋ ಮ್ಯಾನೇಜ್ಮೆಂಟ್ ಸೇವೆಗಳಿಂದ (PMS), ಪರ್ಯಾಯ ಹೂಡಿಕೆ ನಿಧಿಗಳು (AIF) ಮತ್ತು ಸ್ಥಿರ ಆದಾಯ ಭದ್ರತೆಗಳವರೆಗೆ, ಪ್ರತಿ ಕೊಡುಗೆಯನ್ನು ಸೂಕ್ಷ್ಮವಾಗಿ ಸಂಗ್ರಹಿಸಲಾಗುತ್ತದೆ. ಕ್ಯಾಪಿಟಲ್ ಗೇನ್ಸ್ ತೆರಿಗೆ ವಿನಾಯಿತಿ ಬಾಂಡ್ಗಳಂತಹ ಆಯ್ಕೆಗಳೊಂದಿಗೆ, ಇದು ವೈವಿಧ್ಯಮಯ ಹೂಡಿಕೆಯ ಆದ್ಯತೆಗಳನ್ನು ಮಾತ್ರ ತಿಳಿಸುತ್ತದೆ ಆದರೆ ಪರಿಣಾಮಕಾರಿ ತೆರಿಗೆ-ಉಳಿತಾಯ ಪರಿಹಾರಗಳನ್ನು ಒದಗಿಸುತ್ತದೆ.ಹೆಚ್ಚು ಓದಿ

ಇದು ಏನನ್ನು ಒಳಗೊಂಡಿರುತ್ತದೆ

ಮ್ಯೂಚುಯಲ್ ಫಂಡ್ಸ್, ಶೇರುಗಳು, ಸ್ಟಾಕ್ಗಳು, ಬಾಂಡ್ ಗಳು ಮತ್ತು ಡಿಬೆಂಚರ್ಸ್ ಒಳಗೊಂಡಂತೆ ವೈವಿಧ್ಯಮಯ ಶ್ರೇಣಿಯ ಭದ್ರತೆಗಳು. ನಿಮ್ಮ ಹಣಕಾಸಿನ ಪ್ರೊಫೈಲ್ ಮತ್ತು ಅಪಾಯದ ಸಾಮರ್ಥ್ಯವನ್ನು ಆಧರಿಸಿ ವೈಯಕ್ತಿಕಗೊಳಿಸಲಾದ ಹೂಡಿಕೆ ನೀತಿಗಳನ್ನು ರಚಿಸಲಾಗಿದೆ

ಅನೇಕ ಸ್ವತ್ತುಗಳಲ್ಲಿ ಹೂಡಿಕೆಗೆ ಅವಕಾಶ ಇಲ್ಲಿದೆ. ಖಾಸಗಿ ಹೂಡಿಕೆದಾರರಿಂದ ಹಣಗಳನ್ನು ಸಂಗ್ರಹಿಸಿಕೊಂಡು ನಿರ್ದಿಷ್ಟ ಹೂಡಿಕೆಯ ಉದ್ದೇಶಗಳು ಮತ್ತು ನೀತಿಗಳೊಂದಿಗೆ ಹೂಡಿಕೆ ಮಾಡಲಾಗುತ್ತದೆ.

ಒಂದು ನಿಗದಿತ ಸಮಯದ ಅವಧಿಯೊಳಗೆ ಸ್ಥಿರ ದರದ ಆದಾಯವನ್ನು ಒದಗಿಸುವ ಹಣಕಾಸಿನ ಉತ್ಪನ್ನಗಳಾಗಿವೆ. ಸರ್ಕಾರೀ ಮತ್ತು ಖಾಸಗಿ ಘಟಕಗಳಿಂದ ವಿತರಿಸಲಾಗಿದ್ದು, ಇವು ನಿಮಗಾಗಿ ಸ್ಥಿರ ಆದಾಯವನ್ನು ಖಾತ್ರಿಪಡಿಸುತ್ತದೆ

ಕೆಬಿಎಲ್ ಸಮೃದ್ಧಿಯನ್ನು ಏಕೆ ಆಯ್ಕೆ ಮಾಡಬೇಕು

feature1

ಪರಿಣಿತರ ನಿರ್ವಹಣೆ

ಉನ್ನತ AMCಗಳಿಂದ ಹೇಳಿ ಮಾಡಿಸಿದಂತಹ ಹೂಡಿಕೆ ಕಾರ್ಯತಂತ್ರಗಳು 

feature2

ವೈವಿಧ್ಯಮಯ ಹೂಡಿಕೆ ಆಯ್ಕೆಗಳು

ಮ್ಯೂಚುಯಲ್ ಫಂಡ್ಸ್, ಷೇರುಗಳು, ಸ್ಟಾಕ್ ಗಳು, ಬಾಂಡ್ ಗಳು  ಡಿಬೆಂಚರ್ಸ್ ಗೆ ಪ್ರವೇಶಾವಕಾಶ 

feature3

ವೈಯಕ್ತಿಕಗೊಳಿಸಲಾದ AIF ಅವಕಾಶಗಳು

ಅತ್ಯಾಧುನಿಕ ಹೂಡಿಕೆದಾರರಿಗಾಗಿ ವಿಶಿಷ್ಟ ಪರ್ಯಾಯ ಹೂಡಿಕೆ ಆಯ್ಕೆಗಳು 

feature4

ಸ್ಥಿರ ಆದಾಯದ ಭರವಸೆ

ನಿಶ್ಚಿತ ಆದಾಯದ ಭದ್ರತೆಗಳೊಂದಿಗೆ ಖಾತರಿಪಡಿಸಿದ ಆದಾಯ

feature5

ತೆರಿಗೆ ದಕ್ಷತೆ

ಸೆಕ್ಷನ್ 54 EC ಬಾಂಡ್‌ಗಳೊಂದಿಗೆ ಕ್ಯಾಪಿಟಲ್ ಗೇನ್ಸ್ ತೆರಿಗೆ ವಿನಾಯಿತಿ

feature6

ಸಮಗ್ರ ಯೋಜನೆ

ನಿಮ್ಮ ಎಲ್ಲಾ ಹಣಕಾಸಿನ ಅಗತ್ಯಗಳಿಗಾಗಿ ಸಮಗ್ರ ಪರಿಹಾರಗಳು

feature7

ಕಾರ್ಯತಾಂತ್ರಿಕ ಸಂಪತ್ತಿನ ರಚನೆ

ಗರಿಷ್ಟ ಸ್ವತ್ತು ಬೆಳವಣಿಗೆಗಾಗಿ ರಚಿಸಲಾದ ಉತ್ಪನ್ನಗಳು 

feature8

ವೈಯಕ್ತಿಕಗೊಳಿಸಲ್ಪಟ್ಟ

ವ್ಯಕ್ತಿಯ ಹಣಕಾಸಿನ ಗುರಿಗಳಿಗೆ ಸಮರ್ಪಿತ ಗಮನ 

feature9

ಸದೃಢ ಸಹಕಾರ

ಉತ್ಕೃಷ್ಟ ಕೊಡುಗೆಗಳಿಗಾಗಿ IIFLನೊಂದಿಗೆ ಜಂಟಿ ಸಹಯೋಗ 

ನಿಮಗಾಗಿ ಯಾವ ಉತ್ಪನ್ನ ಸೂಕ್ತವೆಂದು ಖಚಿತವಾಗಿಲ್ಲವೇ?

ನಿಮಗಾಗಿ ಯಾವ ಉತ್ಪನ್ನ ಸೂಕ್ತವೆಂದು ಖಚಿತವಾಗಿಲ್ಲವೇ

  • ಯಾವುದೇ ಸ್ಪ್ಯಾಮ್ ಕರೆಗಳಿಲ್ಲ
  • ಸಮರ್ಪಿತ KBL ತಜ್ಞರು
  • ನಿಮ್ಮ ಸಮಯಕ್ಕೆ ಕರೆಯನ್ನು ಹೊಂದಿಸಿ

ನಿಮ್ಮಲ್ಲಿ ಪ್ರಶ್ನೆಗಳಿವೆಯೇ? ನಾವು ಉತ್ತರ ಕೊಡುತ್ತೇವೆ

ಕೆಬಿಎಲ್ ಸಮೃದ್ಧಿ ಎಂದರೇನು?

ಕೆಬಿಎಲ್ ಸಮೃದ್ಧಿ ಎಂದರೆ ಗಣ್ಯ ಹೂಡಿಕೆ ಪರಿಹಾರಗಳ ಶ್ರೇಣಿಯನ್ನು ಒದಗಿಸುವ ಹೆಚ್ಚಿನ ನಿವ್ವಳ ಮೌಲ್ಯದ ಗ್ರಾಹಕರಿಗಾಗಿ ಕರ್ಣಾಟಕ ಬ್ಯಾಂಕ್ ನಿಂದ ವಿಶೇಷವಾದ ಹಣಕಾಸಿನ ಉತ್ಪನ್ನಗಳ ಪ್ಯಾಕ್ ಆಗಿದೆ.

PMS, AIF ಮತ್ತು ಸ್ಥಿರ ಆದಾಯ ಭದ್ರತೆಗಳನ್ನೂ ಒಳಗೊಂಡಂತೆ ಸುಧಾರಿತ ಮತ್ತು ವೈವಿಧ್ಯಮಯ ಹೂಡಿಕೆ ಮಾರ್ಗಗಳನ್ನು ಹುಡುಕುತ್ತಿರುವ ವಿಶೇಷ ಗ್ರಾಹಕರಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ

ಸಮರ್ಥ ತೆರಿಗೆ-ವಿನಾಯ್ತಿ ಅವಕಾಶಗಳನ್ನು ಒದಗಿಸುವ ಮೂಲಕ ಸೆಕ್ಷನ್ 54EC ಅಡಿಯಲ್ಲಿ ಯೋಜನೆಯು ಕ್ಯಾಪಿಟಲ್ ಗೇನ್ಸ್ ತೆರಿಗೆ ವಿನಾಯಿತಿ ಬಾಂಡ್ ಒಳಗೊಂಡಿರುತ್ತದೆ

ಪ್ರತಿಯೊಬ್ಬ ವ್ಯಕ್ತಿಯ ಹಣಕಾಸಿನ ಗುರಿಗಳು ಮತ್ತು ಭವಿಷ್ಯದ ಅಪಾಯಗಳಿಗೆ ಸರಿಹೊಂದುವಂತೆ ಪರಿಣಿತ ಪೋರ್ಟ್ಫೋಲಿಯೋ ವ್ಯವಸ್ಥಾಪಕರ ಮೂಲಕ ಹೂಡಿಕೆಗಳನ್ನು ವೃತ್ತಿಪರವಾಗಿ ನಿರ್ವಹಣೆ ಮಾಡಲಾಗುತ್ತದೆ

ಹೌದು, ನಿಮ್ಮ ಹೂಡಿಕೆಯ ಮೇಲೆ ಸ್ಥಿರ ಗಳಿಕೆಯನ್ನು ಖಾತ್ರಿಪಡಿಸಿಕೊಳ್ಳಲು ಯೋಜನೆಯು ಸ್ಥಿರ ಆದಾಯ ಭದ್ರತೆಗಳನ್ನು ನೀಡುತ್ತದೆ.

ಕೆಬಿಎಲ್ ಸಮೃದ್ಧಿ ಪ್ರಯೋಜನಗಳು

ಪೋರ್ಟ್ಫೋಲಿಯೋ ನಿರ್ವಹಣಾ ಸೇವೆಗಳು(PMS), ಸ್ವತ್ತು ನಿರ್ವಹಣಾ ಸಂಸ್ಥೆಗಳು(AMC) ಮತ್ತು ಪರ್ಯಾಯ ಹೂಡಿಕೆ ನಿಧಿಗಳೂ(AIF) ಒಳಗೊಂಡಂತೆ ಸಂಪತ್ತು ನಿರ್ವಹಣಾ ಸೇವೆಗಳು ಹೆಚ್ಚಿನ ನಿವ್ವಳ ಮೌಲ್ಯದ ಗ್ರಾಹಕರಿಗಾಗಿರುವ ವೈಯಕ್ತಿಕಗೊಳಿಸಲಾದ ಹೂಡಿಕೆಯ ಸೇವಾ ಸೌಲಭ್ಯಗಳಾಗಿವೆ. ಈ ಸೇವೆಗಳು ವಿಭಿನ್ನ ಶ್ರೇಣಿಯ ಹೂಡಿಕೆಗೆ ಪರಿಣಿತ ನಿರ್ವಹಣೆ ಮತ್ತು ವ್ಯಕ್ತಿಯ ಹಣಕಾಸಿನ ಗುರಿಗಳು ಮತ್ತು ಅಪಾಯ ಪ್ರೊಫೈಲ್ ಗಳಿಗೆ ಹೊಂದುವಂತಹ ವೈಯಕ್ತಿಕಗೊಳಿಸಲಾದ ಕಾರ್ಯತಂತ್ರಗಳಿಗೆ ಪ್ರವೇಶಾವಕಾಶವನ್ನು ಒದಗಿಸುತ್ತದೆ. ಇವು ತೆರಿಗೆ ಯೋಜನೆ, ಎಸ್ಟೇಟ್ ಯೋಜನೆ ಮತ್ತು ನಿವೃತ್ತಿ ಯೋಜನೆ ರೀತಿಯ ಅಂಶಗಳನ್ನು ಸೇರಿಕೊಂಡಂತೆ ಸಮಗ್ರ ಸಂಪತ್ತು ಸಂರಕ್ಷಣೆ ಮತ್ತು ಬೆಳವಣಿಗೆಯ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸುತ್ತದೆ. ಕೆಬಿಎಲ್ ಸಮೃದ್ಧಿಯೊಂದಿಗೆ ನಮ್ಮ ಕ್ಯಾಪಿಟಲ್ ಗೇನ್ ಯೋಜನೆ ಮತ್ತು ಕ್ಯಾಪಿಟಲ್ ಗೇನ್ ಠೇವಣಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಿ, ಇದನ್ನು ನಿಮ್ಮ ಬಂಡವಾಳ ಲಾಭಗಳನ್ನು ಸಮರ್ಥವಾಗಿ ಹೂಡಿಕೆ ಮಾಡಲು ಸಹಾಯ ಮಾಡುತ್ತದೆ. ನಮ್ಮ ಕ್ಯಾಪಿಟಲ್ ಗೇನ್ ಬಾಂಡ್ ಯೋಜನೆಯು ಅತ್ಯಾಕರ್ಷಕ ಗಳಿಕೆಯೊಂದಿಗೆ ನಿಮ್ಮ ಗಳಿಕೆಯನ್ನು ಭದ್ರಗೊಳಿಸಲು ಮತ್ತು ಮರು ಹೂಡಿಕೆ ಮಾಡಲು ಅತ್ಯುತ್ತಮ ಅವಕಾಶವಾಗಿದೆ.

ಸಂಪತ್ತು ನಿರ್ವಹಣೆಯಲ್ಲಿ, ಗಮನವು ವ್ಯಕ್ತಿಯ ಬಡ್ಡಿ ದರಗಳ ಬದಲಾಗಿ ಒಟ್ಟಾರೆ ಪೋರ್ಟ್ಫೋಲಿಯೋ ಆದಾಯ ಗಳಿಕೆಯ ಮೇಲಿರುತ್ತದೆ. ಆದಾಯವು ಈಕ್ವಿಟಿಗಳು, ಸ್ಥಿರ ಆದಾಯ, ರಿಯಲ್ ಎಸ್ಟೇಟ್ ಅಥವಾ ಪರ್ಯಾಯ ಹೂಡಿಕೆಗಳನ್ನು ಒಳಗೊಂಡಂತೆ ಅದರಲ್ಲಿರುವ ಸ್ವತ್ತುಗಳ ಕಾರ್ಯಕ್ಷಮತೆಯನ್ನು ಆಧರಿಸಿರುತ್ತದೆ.

ಸಂಪತ್ತು ನಿರ್ವಹಣಾ ಸೇವೆಗಳಲ್ಲಿ ತೊಡಗಿಸಿಕೊಳ್ಳುವಾಗ, ಅದರ ಹೂಡಿಕೆ ಕಾರ್ಯತಂತ್ರಗಳು, ಕ್ಷಮತೆಯ ಹಿನ್ನಲೆ ಮತ್ತು ಶುಲ್ಕಗಳನ್ನು ಅರ್ಥಮಾಡಿಕೊಳ್ಳಲು ವಿವರವಾದ ಸಂಶೋಧನೆ ನಡೆಸುವುದು ಬಹಳ ಮುಖ್ಯ. ಒದಗಿಸಿದ ಹೂಡಿಕೆಯೊಂದಿಗೆ ಹೊಂದಾಣಿಕೆಯಾಗಲು ಯಾವಾಗಲೂ ನಿಮ್ಮ ಹಣಕಾಸಿನ ಗುರಿಗಳು, ಅಪಾಯ ಸಹಿಷ್ಣುತೆ ಮತ್ತು ಹೂಡಿಕೆಯ ವ್ಯಾಪ್ತಿಯನ್ನು ತಿಳಿದುಕೊಳ್ಳಿ. ಅಪಾಯವನ್ನು ತಗ್ಗಿಸಲು ವಿಭಿನ್ನ ಸ್ವತ್ತುಗಳಾದ್ಯಂತ ನಿಮ್ಮ ಹೂಡಿಕೆಯನ್ನು ಮಾಡಿ. ನಿಮ್ಮ ಹೂಡಿಕೆಯ ನಿರ್ಧಾರಗಳಲ್ಲಿ ಸಕ್ರಿಯವಾಗಿರಿ, ಮತ್ತು ಅಗತ್ಯವಿದ್ದಂತೆ ಹೊಂದಾಣಿಕೆ ಮಾಡಿ. ನಿಮ್ಮ ದೀರ್ಘಾವಧಿಯ ಕಾರ್ಯತಂತ್ರವನ್ನು ಮರೆತು ಅಲ್ಪಾವಧಿ ಗಳಿಕೆಯ ಹಿಂದೆ ಬೀಳಬೇಡಿ ಮತ್ತು ಅನ್ವಯವಾಗುವ ತೆರಿಗೆಗಳು ಮತ್ತು ನಿಮ್ಮ ಆದಾಯ ಗಳಿಕೆಯ ಮೇಲಿನ ಶುಲ್ಕಗಳನ್ನು ಸಹ ನಿರ್ಲಕ್ಷಿಸದಿರಿ.