ಮ್ಯೂಚುಯಲ್ ಫಂಡ್ಸ್ ಅರ್ಥಮಾಡಿಕೊಳ್ಳುವುದು

ಹೂಡಿಕೆಯ ಜಗತ್ತಿನಲ್ಲಿ ಕಾಲಿಡಬೇಕೆನ್ನುವ ಯಾರಿಗಾದರೂ ಸಹ ಮ್ಯೂಚುಯಲ್ ಫಂಡ್ಸ್ ಒಂದು ಜಾಣತನದ ಆಯ್ಕೆಯಾಗಿದೆ. ಇದರಲ್ಲಿ ಇತರ ಹೂಡಿಕೆದಾರರೊಂದಿಗೆ ನಿಮ್ಮ ಹಣವನ್ನು ಒಟ್ಟುಗೂಡಿಸಿ, ಸಂಗ್ರಹವಾದ ನಿಧಿಯನ್ನು ಸ್ಟಾಕ್ಸ್ ಮತ್ತು ಬಾಂಡ್ಸ್ ರೀತಿಯ ವೈವಿಧ್ಯಮಯ ಸ್ವತ್ತುಗಳಲ್ಲಿ ವಿನಿಯೋಗಿಸಲಾಗುತ್ತದೆ ಮತ್ತು ಇದರ ಮೂಲಕ ನಿಮ್ಮ ಹೂಡಿಕೆಯನ್ನು ಸರಳೀಕೃತಗೊಳಿಸಲಾಗುತ್ತದೆ. ಈ ವಿಧಾನವು ವೈವಿಧ್ಯಮಯತೆಯ ಮೂಲಕ ನಿಮಗೆ ಸಂಭವನೀಯ ಅಪಾಯವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದ ಒಬ್ಬ ಪರಿಣಿತ ಫಂಡ್ ವ್ಯವಸ್ಥಾಪಕರ ಕೈಗಳಲ್ಲಿ ನಿಮ್ಮ ಹಣವನ್ನು ನೀಡುತ್ತದೆ. ನೀವು ಹೊಸಬರಾಗಿರಬಹುದು ಅಥವಾ ಒಬ್ಬ ಅನುಭವಿ ಹೂಡಿಕೆದಾರರಾಗಿರಬಹುದು, ಮ್ಯೂಚುಯಲ್ ಫಂಡ್ಸ್ ನಿಮ್ಮ ಹಣವನ್ನು ವೃದ್ಧಿಸಲು ಒಂದು ಅನುಕೂಲಕರ, ಸರಳ ಮತ್ತು ಅಗ್ಗದ ವಿಧಾನವಾಗಿದೆ. ವ್ಯವಸ್ಥಿತ ಹೂಡಿಕೆ ಯೋಜನೆಗಳಂತಹ(ಎಸ್ಐಪಿ) ಆಯ್ಕೆಗಳೊಂದಿಗೆ ಇವು ನಿಮ್ಮ ಹಣಕಾಸಿನ ಗುರಿಗಳು ಮತ್ತು ಉದ್ದೇಶಗಳಿಗೆ ಹೊಂದಿಕೊಳ್ಳುವ ಮೂಲಕ ಸದೃಢ ಹಣಕಾಸಿನ ಪೋರ್ಟ್ಫೋಲಿಯೋ ನಿರ್ಮಿಸಲು ಆಗ್ರ ಆಯ್ಕೆಯಾಗುತ್ತದೆ. ಮತ್ತಷ್ಟು ಓದು ಕಡಿಮೆ ಓದಿ

ಫಂಡ್ ವಿಧಗಳು

ಈಕ್ವಿಟಿ ಫಂಡ್ಸ್ ನೊಂದಿಗೆ ನಿಮ್ಮ ಧನವೃದ್ಧಿಯನ್ನು ಗರಿಷ್ಠಗೊಳಿಸಿ, ಅಧಿಕ ಸಂಭಾವ್ಯ ಆದಾಯಗಳಿಗಾಗಿ ಷೇರುಮಾರುಕಟ್ಟೆ ಹೂಡಿಕೆಗಳನ್ನು ಕೇಂದ್ರೀಕರಿಸಿ ದೀರ್ಘಾವಧಿಯ ಹೂಡಿಕೆಯ ಆಯ್ಕೆಗಳಿಗಾಗಿ ಸೂಕ್ತ

ಸ್ಥಿರ ಮತ್ತು ವಿಶ್ವಾಸಾರ್ಹ, ಡೆಟ್ ಫಂಡ್ ಗಳು ಬಾಂಡ್ ಮತ್ತು ಸ್ಥಿರ-ಆದಾಯ ಭದ್ರತೆಗಳಲ್ಲಿ ಹೂಡಿಕೆ ಮಾಡುತ್ತದೆ. ಇದು ನಿರಂತರ ಆದಾಯವನ್ನು ಬಯಸುವ, ಅಪಾಯ ಇಷ್ಟಪಡದ ಹೂಡಿಕೆದಾರರಿಗೆ ಸೂಕ್ತವಾಗಿದೆ.

ಎರಡೂ ಜಗತ್ತಿನ ಅಗ್ರಜ-ಈ ಫಂಡ್ ಗಳು ಸ್ಟಾಕ್ ಮತ್ತು ಬಾಂಡ್ ಗಳ ಮಿಶ್ರಣವಾಗಿದೆ, ಅಪಾಯ ಮತ್ತು ಆದಾಯವನ್ನು ಸಮತೋಲನಗೊಳಿಸುವುದರಿಂದ ಇದು ವೈವಿಧ್ಯಮಯದ ಹೂಡಿಕೆಯ ಕಾರ್ಯತಂತ್ರಗಳಿಗಾಗಿ ಅತ್ಯಂತ ಸೂಕ್ತವಾಗಿದೆ.

ಫಂಡ್ ಗಳು ನಿರ್ದಿಷ್ಟ ಮಾರುಕಟ್ಟೆ ಸೂಚ್ಯಂಕಗಳನ್ನು ತೋರಿಸುವುದರಿಂದ ಮಾರುಕಟ್ಟೆಯನ್ನು ಸುಲಭವಾಗಿ ಟ್ರ್ಯಾಕ್ ಮಾಡುವುದರೊಂದಿಗೆ ಪಾರದರ್ಶಕ ಮತ್ತು ಉತ್ತಮ ಹಣಕಾಸಿನ ಹೂಡಿಕೆಯ ಆಯ್ಕೆಯನ್ನು ನೀಡುತ್ತದೆ.

ನಿರ್ದಿಷ್ಟ ಗುರಿಗಳಿಗಾಗಿ ಇದನ್ನು ರೂಪಿಸಲಾಗಿದೆ, ಈ ಫಂಡ್ ಗಳು ನಿವೃತ್ತಿ ಅಥವಾ ಶಿಕ್ಷಣ ಕೇಂದ್ರಿತ ಹೂಡಿಕೆಯನ್ನು ಮಾಡುತ್ತದೆ. ಇದರಲ್ಲಿ ಶಿಸ್ತುಬದ್ಧ ಉಳಿತಾಯಕ್ಕಾಗಿ ಸ್ಥಿರ ಲಾಕ್-ಇನ್ ಅವಧಿ ಇರುತ್ತದೆ.

ಅಲ್ಪಾವಧಿ ಗುರಿಗಳಿಗಾಗಿ ಸೂಕ್ತವಾಗಿದ್ದು ಇದರಲ್ಲಿ ಅಲ್ಪಾವಧಿ ಹಣದ ಮಾರುಕಟ್ಟೆ ಉತ್ಪನ್ನಗಳಲ್ಲಿ ಹೂಡಿಕೆ ಮಾಡುವುದರಿಂದ ಕಡಿಮೆ ಅಪಾಯ ಮತ್ತು ಅತ್ಯಧಿಕ ಲಿಕ್ವಿಡಿತು ನೀಡುತ್ತದೆ

ನಮ್ಮಲ್ಲಿ ಏಕೆ ಹೂಡಿಕೆ ಮಾಡಬೇಕು

ಮ್ಯೂಚುಯಲ್ ಫಂಡ್ ಹೂಡಿಕೆಗಳನ್ನು ಸರಳ ಮತ್ತು ಸ್ಮಾರ್ಟ್ ಮಾಡಿದೆ, ಫಿಸ್ಡಮ್ ನಿಂದ ನಡೆಸಲ್ಪಡುತ್ತಿದೆ.

ಕರ್ಣಾಟಕ ಬ್ಯಾಂಕ್ 21-03-2017 ರಿಂದ AMFI ನೋಂದಣಿ ಸಂಖ್ಯೆ (ARN)-36805 ನೊಂದಿಗೆ AMFI ನೋಂದಾಯಿತ ಮ್ಯೂಚುಯಲ್ ಫಂಡ್ ಸಲಹೆಗಾರ (ARMFA) ಆಗಿದೆ. ARN -36805 ರ ಪ್ರಸ್ತುತ ಮಾನ್ಯತೆಯು 20-03-2026 ವರೆಗೆ ಇರುತ್ತದೆ.

icon

ಕಾಗದ-ರಹಿತ ಪಯಣ

ಸಂಪೂರ್ಣ ಡಿಜಿಟಲ್ ವಹಿವಾಟುಗಳೊಂದಿಗೆ ತ್ವರಿತ ಹಾಗೂ ಕಾಗದ-ರಹಿತ ಕೆವೈಸಿ ಪ್ರಕ್ರಿಯೆ

icon

ಬುದ್ಧಿವಂತ ಹೂಡಿಕೆ

ಸ್ಮಾರ್ಟ್ ಫಂಡ್ ಶಿಫಾರಸ್ಸು ಜೊತೆಗೆ ಗುರಿ ಆಧಾರಿತ ಹೂಡಿಕೆ

icon

ರಿಯಲ್-ಟೈಮ್ ಟ್ರಾಕಿಂಗ್

ಹೂಡಿಕೆಗಳನ್ನು ಸುಭದ್ರವಾಗಿ ರಿಡೀಮ್ ಮಾಡಲು, ಮರುಹೂಡಿಕೆ ಮತ್ತು ಬದಲಿಸಲು ನಿಮ್ಮ ಹಣವನ್ನು ಆನ್ಲೈನ್ ನಲ್ಲಿ ನಿರ್ವಹಣೆ ಮಾಡಿ

icon

ಎಲ್ಲರಿಗಾಗಿ ಒಂದು ವೇದಿಕೆ

ಹೂಡಿಕೆಗಳನ್ನು ಸುಭದ್ರವಾಗಿ ರಿಡೀಮ್ ಮಾಡಲು, ಮರುಹೂಡಿಕೆ ಮತ್ತು ಬದಲಿಸಲು ನಿಮ್ಮ ಹಣವನ್ನು ಆನ್ಲೈನ್ ನಲ್ಲಿ ನಿರ್ವಹಣೆ ಮಾಡಿ

SIP (ಎಸ್ಐಪಿ)

ವ್ಯವಸ್ಥಿತ ಹೂಡಿಕೆ ಯೋಜನೆ(ಎಸ್ಐಪಿ) ವಿಧಾನದಲ್ಲಿ ನಿಯಮಿತವಾಗಿ ಮ್ಯೂಚುಯಲ್ ಫಂಡ್ ಗಳಲ್ಲಿ ನಿಗದಿತ ಮೊತ್ತವನ್ನು ಹೂಡಿಕೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಇದು ತಿಂಗಳಿಗೆ ಒಮ್ಮೆಯಂತೆ ಕಾಲಕ್ರಮೇಣ ಉಳಿತಾಯವನ್ನು ವೃದ್ಧಿಸುತ್ತದೆ.

SIP (ಎಸ್ಐಪಿ) ರಷ್ಟು ಕಡಿಮೆ ಮೊತ್ತದೊಂದಿಗೆ ಆರಂಭಿಸಿ

ಪ್ರತಿ ತಿಂಗಳಿಗೆ ₹1,000

  • ನೀವು ಹಣವನ್ನು ಉಳಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತೀರಿ ಎಂದು ಖಚಿತಪಡಿಸುತ್ತದೆ
  • ಅನುಕೂಲಕರವಾದ ಹೂಡಿಕೆಯ ಅವಧಿಗಳನ್ನು ಆಯ್ಕೆ ಮಾಡಿ
  • ಮ್ಯೂಚುಯಲ್ ಫಂಡ್ ಯೂನಿಟ್‌ಗಳನ್ನು ಖರೀದಿಸುವ ವೆಚ್ಚವು ಅಧಿಕಾರಾವಧಿಯಲ್ಲಿ ಸರಾಸರಿ ಎಂದು SIP ಖಚಿತಪಡಿಸುತ್ತದೆ

ಲಂಸಂ ಮೊತ್ತ

ಅನೇಕ ಸಣ್ಣ ಪಾವತಿಗಳ ಬದಲಾಗಿ ನೀವು ಒಂದೇ ಸಮಯದಲ್ಲಿ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿದಾಗ ಲಂಸಂ ಹೂಡಿಕೆ ಎನ್ನಲಾಗುತ್ತದೆ. ಇದು ಒಂದು ಸಮಯದ ಹೂಡಿಕೆಯಾಗಿದ್ದು ನಿಮಗೆ ಗಮನಾರ್ಹ ಆದಾಯಗಳನ್ನು ಗಳಿಸಿಕೊಡುವ ಅವಕಾಶ ನೀಡುವ ಹೂಡಿಕೆಯಾಗಿದೆ.

ಹೂಡಿಕೆ ರಷ್ಟು ಕಡಿಮೆ ಮೊತ್ತದೊಂದಿಗೆ ಆರಂಭಿಸಿ

ಪ್ರತಿ ತಿಂಗಳಿಗೆ ₹5,000

  • ಹೂಡಿಕೆ ಮಾಡಲು ದೊಡ್ಡ ಪ್ರಮಾಣದ ಹಣವನ್ನು ಹೊಂದಿರುವವರಿಗೆ ಸೂಕ್ತವಾಗಿದೆ
  • ಹೂಡಿಕೆ ಮಾಡಲು ದೊಡ್ಡ ಪ್ರಮಾಣದ ಹಣವನ್ನು ಹೊಂದಿರುವವರಿಗೆ ಸೂಕ್ತವಾಗಿದೆ

ನಮ್ಮ ಪಾಲುದಾರರನ್ನು ಅನ್ವೇಷಿಸಿ

ನಿಮಗಾಗಿ ನೀಡಲೆಂದು ಅನೇಕ AMCಗಳು ಮತ್ತು ಅದರ ಮ್ಯೂಚುಯಲ್ ಫಂಡ್ ಉತ್ಪನ್ನಗಳೊಂದಿಗೆ ನಾವು ಉತ್ತಮ ಬಾಂಧವ್ಯ ಹೊಂದಿದ್ದೇವೆ

logo
logo
logo
logo
logo

ಕಮಿಷನ್ ಮತ್ತು ಮ್ಯೂಚುಯಲ್ ಫಂಡ್ ಒಪ್ಪಂದಗಳ ಕುರಿತು ಮಾಹಿತಿ

ಮ್ಯೂಚುಯಲ್ ಫಂಡ್ಸ್ ಬಗ್ಗೆ ಮಾಹಿತಿ

ಕಮಿಷನ್ ಬಹಿರಂಗಪಡಿಸುವಿಕೆ

ನಿಮ್ಮ ಎಲ್ಲಾ ಮ್ಯೂಚುಯಲ್ ಫಂಡ್ಸ್, ಈಗ ನಿಮ್ಮ ಕೈ ಬೆರಳುಗಳ ಅಂಚಿನಲ್ಲಿ

ನಿಮ್ಮ ಹೂಡಿಕೆಗಳನ್ನು ರಿಡೀಮ್ ಮಾಡಿ, ಮರು ಹೂಡಿಕೆ ಮಾಡಿ ಮತ್ತು ಟ್ರ್ಯಾಕ್ ಮಾಡಿ- ಎಲ್ಲವೂ ಈಗ ಒಂದೇ ಆಪ್ ನಲ್ಲಿ. ಇಂದೇ ಕೆಬಿಎಲ್ ಮೊಬೈಲ್ ಪ್ಲಸ್ ಅನುಭವ ಪಡೆಯಿರಿ

phones

ಪ್ರಶ್ನೆಗಳಿವೆಯೇ? ನಾವು ಉತ್ತರಿಸುತ್ತೇವೆ

ಮ್ಯೂಚುಯಲ್ ಫಂಡ್ ಎಂದರೇನು?

ಮ್ಯೂಚುಯಲ್ ಫಂಡ್ ಅನೇಕ ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಿ ಸ್ಟಾಕ್ಸ್ ಅಥವಾ ಬಾಂಡ್ಸ್ ರೀತಿಯ ಅನೇಕ ಸ್ವತ್ತುಗಳಲ್ಲಿ ಹೂಡಿಕೆ ಮಾಡುತ್ತದೆ. ಇದು ವೈವಿದ್ಯತೆ, ವೃತ್ತಿಪರ ನಿರ್ವಣೆ ಮತ್ತು ಲಿಕ್ವಿಡಿಟಿಯನ್ನು ನೀಡುವ ಮೂಲಕ ಹೂಡಿಕೆಗೆ ಹೊಸಬರಾಗಿರುವವರಿಗೆ ಸಹಾಯ ಮಾಡುತ್ತದೆ.

ಎಸ್ಐಪಿ ಎಂದರೆ ಮ್ಯೂಚುಯಲ್ ಫಂಡ್ಸ್ ನಲ್ಲಿ ಹೂಡಿಕೆ ಮಾಡುವ ಒಂದು ವಿಧಾನವಾಗಿದೆ. ಇದು ನಿಮಗೆ ನಿಗದಿತ ಮೊತ್ತವನ್ನು ಹೂಡಿಕೆ ಮಾಡಲು ಅವಕಾಶ ನೀಡುವುದರೊಂದಿಗೆ ಕಾಲಕ್ರಮೇಣ ಧನವನ್ನು ವೃದ್ಧಿಸಲು ಸಹಾಯ ಮಾಡುತ್ತದೆ ಮತ್ತು ಮಾರುಕಟ್ಟೆ ಏರಿಳಿತಗಳಿಂದ ರಕ್ಷಿಸುತ್ತದೆ.

ಹೌದು, ಮ್ಯೂಚುಯಲ್ ಫಂಡ್ಸ್ ನಲ್ಲಿ ನಿರ್ವಹಣಾ ಶುಲ್ಕಗಳು ಮತ್ತು ಕೆಲವೊಮ್ಮೆ ಕಮಿಷನ್ ಶುಲ್ಕಗಳು ಇರುತ್ತದೆ. ಒಟ್ಟು ಹೂಡಿಕೆಯಿಂದ ಈ ಶುಲ್ಕಗಳು ಬಹಳ ಕಡಿಮೆಯಿರುತ್ತದೆ. ಆದ್ದರಿಂದ ಇದು ಅಗ್ಗದ ಆಯ್ಕೆಯಾಗಿರುತ್ತದೆ.

ಸಾಮಾನ್ಯವಾಗಿ ಮ್ಯೂಚುಯಲ್ ಫಂಡ್ ಲಿಕ್ವಿಡ್ ಸ್ಥಿತಿಯಲ್ಲಿರುವ ಕಾರಣ, ಪ್ರಸ್ತುತ ಮಾರುಕಟ್ಟೆ ಮೌಲ್ಯದಲ್ಲಿ ಬಹಳ ಬೇಗ ನೀವು ನಿಮ್ಮ ಹೂಡಿಕೆಯನ್ನು ಹಿಂಪಡೆಯಬಹುದು.

ಮ್ಯೂಚುಯಲ್ ಫಂಡ್ಸ್ ತನ್ನ ವೃತ್ತಿಪರ ನಿರ್ವಹಣೆ, ಅಪಾಯದ ವೈವಿದ್ಯತೆ, ಅಧಿಕ ಗಳಿಕೆಗಾಗಿ ಸಮರ್ಥತೆ ಮತ್ತು ಅನುಕೂಲಕರ ಹೂಡಿಕೆ ಆಯ್ಕೆಗಳಿಗಾಗಿ ಬಹಳ ಸೂಕ್ತವಾಗಿದೆ. ಮಾರುಕಟ್ಟೆಯಲ್ಲಿ ಹೆಚ್ಚು ಸಮಯವನ್ನು ಕಳೆಯಲು ಬಯಸ ಹೂಡಿಕೆದಾರರಿಗೆ ಇದು ಬಹಳ ಯೋಜನಕಾರಿಯಾಗಿದೆ.

ಹೂಡಿಕೆದಾರರು ಬೆಳವಣಿಗೆ ಸಾಮರ್ಥ್ಯಕ್ಕಾಗಿ ಈಕ್ವಿಟಿ ಫಂಡ್ ಗಳು, ಸ್ಥಿರ ಆದಾಯಕ್ಕಾಗಿ ಡೆಟ್ ಫಂಡ್ ಗಳು, ಸಮತೋಲಿತ ಆದಾಯಕ್ಕಾಗಿ ಹೈಬ್ರಿಡ್ ಫಂಡ್ ಗಳು, ಮಾರುಕಟ್ಟೆ ಸೂಚ್ಯಂಕಗಳಿಗೆ ಹೊಂದಿಕೊಳ್ಳಲು ಇಂಡೆಕ್ಸ್ ಫಂಡ್ ಗಳು, ನಿವೃತ್ತಿ ರೀತಿಯ ನಿರ್ದಿಷ್ಟ ಹೂಡಿಕೆಗಳಿಗಾಗಿ ಗುರಿಗಳಿಗಾಗಿ ಸಲ್ಯೂಷನ್-ಓರಿಯೆಂಟೆಡ್ ಫಂಡ್ ಗಳು ಮತ್ತು ಅಲ್ಪಾವಧಿಯ ಲಿಕ್ವಿಡಿಟಿ ಅಗತ್ಯತೆಗಳಿಗಾಗಿ ಲಿಕ್ವಿಡ್ ಫಂಡ್ ಗಳನ್ನೂ ಒಳಗೊಂಡಂತೆ ತಮ್ಮ ಹೂಡಿಕೆ ಗುರಿಗಳು ಮತ್ತು ಅಪಾಯ ಸಹಿಷ್ಣುತೆಯನ್ನು ಆಧರಿಸಿ ಅನೇಕ ಮ್ಯೂಚುಯಲ್ ಫಂಡ್ ವಿಧಗಳನ್ನು ಆಯ್ಕೆ ಮಾಡಬಹುದು.

ಹೂಡಿಕೆಯನ್ನು ಆರಂಭಿಸಲು, ನೀವು ಸರಳವಾಗಿರುವ ಕಾಗದರಹಿತ ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ(ಕೆವೈಸಿ) ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಮತ್ತು ನಂತರ ನಿಮ್ಮ ಹೂಡಿಕೆಯ ಗುರಿಗಳೊಂದಿಗೆ ಹೊಂದಿಕೊಳ್ಳುವ ಮ್ಯೂಚುಯಲ್ ಫಂಡ್ ಆಯ್ಕೆ ಮಾಡಬೇಕು. ಹೂಡಿಕೆಗಳನ್ನು ಪ್ರತಿ ತಿಂಗಳು ಕನಿಷ್ಠ ₹1,000ದಿಂದ ಆರಂಭಿಸಬಹುದು ಮತ್ತು ನೀವು ನಿಮ್ಮ ಹೂಡಿಕೆಗಳನ್ನು ರಿಯಲ್ ಟೈಮ್ ನಲ್ಲಿಯೂ ಸಹ ಟ್ರ್ಯಾಕ್ ಮಾಡಬಹುದು.

ಹೂಡಿಕೆಯನ್ನು ಆರಂಭಿಸಲು, ನೀವು ಸರಳವಾಗಿರುವ ಕಾಗದರಹಿತ ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ(ಕೆವೈಸಿ) ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಮತ್ತು ನಂತರ ನಿಮ್ಮ ಹೂಡಿಕೆಯ ಗುರಿಗಳೊಂದಿಗೆ ಹೊಂದಿಕೊಳ್ಳುವ ಮ್ಯೂಚುಯಲ್ ಫಂಡ್ ಆಯ್ಕೆ ಮಾಡಬೇಕು. ಹೂಡಿಕೆಗಳನ್ನು ಪ್ರತಿ ತಿಂಗಳು ಕನಿಷ್ಠ ₹1,000ದಿಂದ ಆರಂಭಿಸಬಹುದು ಮತ್ತು ನೀವು ನಿಮ್ಮ ಹೂಡಿಕೆಗಳನ್ನು ರಿಯಲ್ ಟೈಮ್ ನಲ್ಲಿಯೂ ಸಹ ಟ್ರ್ಯಾಕ್ ಮಾಡಬಹುದು.

ದೀರ್ಘಾವಧಿಯ ಬಂಡವಾಳ ವೃದ್ಧಿಯನ್ನು ನೋಡುತ್ತಿರುವವರಿಗೆ ಈಕ್ವಿಟಿ ಫಂಡ್ ಗಳು ಸೂಕ್ತವಾಗಿವೆ. ಏಕೆಂದರೆ ಇವು ಪ್ರಮುಖವಾಗಿ ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುತ್ತದೆ ಮತ್ತು ಡೆಟ್ ಫಂಡ್ಸ್ ಗೆ ಹೋಲಿಸಿದರೆ ಹೆಚ್ಚು ಅಪಾಯ ತೆಗೆದುಕೊಳ್ಳುವುದರಿಂದ ಹೆಚ್ಚು ಆದಾಯ ಸಹ ಸಿಗುತ್ತದೆ.

ಹೌದು, ಹೂಡಿಕೆದಾರರು ರಿಯಲ್ ಟೈಮ್ ನಲ್ಲಿ ತಮ್ಮ ಮ್ಯೂಚುಯಲ್ ಫಂಡ್ ಹೂಡಿಕೆಗಳನ್ನು ಟ್ರ್ಯಾಕ್ ಮಾಡಬಹುದು. ಇದರ ಮೂಲಕ ಅವರು ಫಂಡ್ ನ ಕಾರ್ಯಕ್ಷಮತೆಯ ಮೇಲೆ ನಿಗಾ ವಹಿಸಬಹುದು ಮತ್ತು ತಮ್ಮ ಹೂಡಿಕೆ ಪೋರ್ಟ್ಫೋಲಿಯೋ ಕುರಿತು ಮಾಹಿತಿಯುಳ್ಳ ನಿರ್ಧಾರಗಳನ್ನು ಸಹ ಕೈಗೊಳ್ಳಬಹುದು.

ಹೌದು, ನಿಮ್ಮ ಹೂಡಿಕೆಯ ಪಯಣದ ಪ್ರತಿಯೊಂದು ಹೆಜ್ಜೆಯಲ್ಲಿಯೂ ನಾವು ನಿಮಗೆ ಸಹಾಯ ಮಾಡುತ್ತೇವೆ. ನಾವು ನಿಮ್ಮ ವೈಯಕ್ತಿಕಗೊಳಿಸಲಾದ ಹಣಕಾಸಿನ ಗುರಿಗಳು ಮತ್ತು ಅಗತ್ಯತೆಗಳಿಗೆ ತಕ್ಕಂತೆ ಸಲಹೆ ಮತ್ತು ಶಿಫಾರಸ್ಸುಗಳನ್ನು ನೀಡುತ್ತೇವೆ.

ಮ್ಯೂಚುಯಲ್ ಫಂಡ್ ಗಳ ಪ್ರಯೋಜನಗಳು

ಮ್ಯೂಚುಯಲ್ ಫಂಡ್ ಗಳು ವೃತ್ತಿಪರ ಫಂಡ್ ವ್ಯವಸ್ತಾಪಕರು ನಿರ್ವಹಣೆ ಮಾಡುವ ವೈವಿಧ್ಯಮಯ ಪೋರ್ಟ್ಫೋಲಿಯೋದಲ್ಲಿ ಹೂಡಿಕೆ ಮಾಡುವ ಮಾರ್ಗವನ್ನು ಒದಗಿಸುತ್ತದೆ. ವಿಸ್ತೃತ ಶ್ರೇಣಿಯ ಹೂಡಿಕೆಗಳು ಧನ ವೃದ್ಧಿಯಿಂದ ತೊಡಗಿ ಆದಾಯ ಗಳಿಕೆಯವರಗೆ ಸೂಕ್ತವಾಗಿವೆ. ಮ್ಯೂಚುಯಲ್ ಫಂಡ್ಸ್ ಈಕ್ವಿಟಿಗಳು, ಬಾಂಡ್ ಮತ್ತು ಕಮೊಡಿಟಿಗಳನ್ನೂ ಒಳಗೊಂಡಂತೆ ಸ್ವತ್ತುಗಳ ಅನೇಕ ವರ್ಗಗಳಾದ್ಯಂತ ಪ್ರವೇಶಾವಕಾಶವನ್ನು ಒದಗಿಸುತ್ತದೆ. ಅವುಗಳು ಲಿಕ್ವಿಡಿಟಿ, ಪಾರದರ್ಶಕತೆ ಮತ್ತು ಹೂಡಿಕೆಯ ಮೊತ್ತವನ್ನು ಆಧರಿಸಿ ಅನುಕೂಲತೆ ಮತ್ತು ಹಣದ ಹಿಂಪಡೆಯುವಿಕೆಯನ್ನು ನೀಡುತ್ತದೆ. ಒಂದು ಸಂಸ್ಥೆಯ ಬಾಂಡ್ ಅಥವಾ ಷೇರುಗಳ ನಿರ್ವಹಣೆಯನ್ನು ತಿಳಿಯದವರು ಅಥವಾ ಹೂಡಿಕೆ ವಹಿವಾಟಿನಲ್ಲಿ ಸಂಪೂರ್ಣವಗಿ ತೊಡಗಿಸಿಕೊಳ್ಳಲು  ಸಮಯವಿಲ್ಲದ ಹೂಡಿಕೆದಾರರಿಗೆ ಮ್ಯೂಚುಯಲ್ ಫಂಡ್ಸ್ ಬಹಳ ಪರಿಣಾಮಕಾರಿಯಾದ ಹೂಡಿಕೆ ಪರಿಹಾರವಾಗಿದೆ. ಒಂದು ಬಹುಮುಖ ಮ್ಯೂಚುಯಲ್ ಫಂಡ್ ನಲ್ಲಿ ಮಾಡುವ ಹೂಡಿಕೆಯು ವೈವಿಧ್ಯೀಕರಣ, ವೃತ್ತಿಪರ ನಿರ್ವಹಣೆ ಮತ್ತು ಲಿಕ್ವಿಡಿಟಿ ಸೇರಿದಂತೆ ಮ್ಯೂಚುಯಲ್ ಫಂಡ್ಗಳ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ನಿಮ್ಮ ಹೂಡಿಕೆಯ ಪೋರ್ಟ್ಫೋಲಿಯೋವನ್ನು ಬೆಳೆಸಲು ಮ್ಯೂಚುಯಲ್ ಫಂಡ್ಗಳ ಪ್ರಯೋಜನಗಳ ಬಗ್ಗೆ ತಿಳಿಯಿರಿ ಮತ್ತು ಮ್ಯೂಚುಯಲ್ ಫಂಡ್ ಯೋಜನೆಯ ಆಯ್ಕೆಯನ್ನು ಅನ್ವೇಷಿಸಿ. 

ಮ್ಯೂಚುಯಲ್ ಫಂಡ್ ಗಳಲ್ಲಿ, ಬಡ್ಡಿ ದರಗಳ ಕಲ್ಪನೆಯು ಆದಾಯದೊಂದಿಗೆ ವಿನಿಮಯಗೊಂಡಿದೆ. ಆದರೆ ಇದು ಸ್ಥಿರವಾಗಿಲ್ಲ ಮತ್ತು ಫಂಡ್ ಕಾರ್ಯನಿರ್ವಹಣೆಯನ್ನು ಆಧರಿಸಿದೆ. ಈಕ್ವಿಟಿ ಫಂಡ್ ಗಳಲ್ಲಿನ ಆದಾಯಗಳು ಷೇರು ಮಾರುಕಟ್ಟೆ ಮೇಲೆ ಅವಲಂಬಿಸಿರುತ್ತದೆ, ಅದೇ ಡೆಟ್ ಫಂಡ್ಸ್ ವಿಷಯದಲ್ಲಿ ಅದರಡಿಯಲ್ಲಿರುವ ಭದ್ರತೆಗಳ ಬಡ್ಡಿ ದರಗಳು ಮತ್ತು ಕ್ರೆಡಿಟ್ ಗುಣಮಟ್ಟವನ್ನು ಆಧರಿಸಿರುತ್ತದೆ. ಹೂಡಿಕೆ ಮಾಡುವ ಮುನ್ನ ಫಂಡ್ ನ ಹೂಡಿಕೆಯ ಗುರಿ, ಅದಕ್ಕೆ ಸಂಬಂಧಿಸಿದ ಅಪಾಯಗಳು ಮತ್ತು ಫಂಡ್ ಹಿಂದಿನ ವರ್ಷಗಳ ಸಾಧನೆಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. 

ನಿಮ್ಮ ಅಪಾಯ ಸಹಿಸುವ ಸಾಮರ್ಥ್ಯ ಮತ್ತು ಹೂಡಿಕೆ ಗುರಿಗಳೊಂದಿಗೆ ಸಮನಾಗಿರುವ ಮ್ಯೂಚುಯಲ್ ಫಂಡ್ಸ್ ಆಯ್ಕೆ ಮಾಡಿ ಮತ್ತು ಅದರ ಕುರಿತು ಮಾಹಿತಿ ಪಡೆಯಿರಿ. ವಿಭಿನ್ನ ಫಂಡ್ ವರ್ಗಗಳಾದ್ಯಂತ ನಿಮ್ಮ ಹೂಡಿಕೆಗಳನ್ನು ವೈವಿಧ್ಯಮಯಗೊಳಿಸಿ. ನಿಮ್ಮ ಫಂಡ್ ಗಳ ಕಾರ್ಯನಿರ್ವಹಣೆ ಹಾಗೂ ಮಾರುಕಟ್ಟೆ ಸ್ಥಿತಿಗತಿಗಳನ್ನು ನಿಯಮಿತವಾಗಿ ಪರಿಶೀಲಿಸುತ್ತಿರಿ. ಅಲ್ಪಾವಧಿಯ ಗಳಿಕೆಯನ್ನು ನೋಡದಿರಿ; ದೀರ್ಘಾವಧಿಯ ಹೂಡಿಕೆಯ ಸಮಯವನ್ನು ಪರಿಗಣಿಸಿ. ನಿಮ್ಮ ಪೋರ್ಟ್ಫೋಲಿಯೋ ನಿರ್ವಹಣೆಯನ್ನು ಸಂಕೀರ್ಣಗೊಳಿಸುವ ಅನೇಕ ಫಂಡ್ ಗಳಲ್ಲಿ ಹೂಡಿಕೆ ಮಾಡುವುದನ್ನು ನಿಲ್ಲಿಸಿ.