ಸಾವರಿನ್ ಚಿನ್ನದ ಬಾಂಡ್ ಗಳು(SGB) ಅರ್ಥಮಾಡಿಕೊಳ್ಳುವುದು

ಸಾವರಿನ್ ಚಿನ್ನದ ಬಾಂಡ್(SGB) ಯೋಜನೆಯು ಯಾವುದೇ ದರಗಳು ಅಥವಾ ಭೌತಿಕ ಅಡಮಾನ ಅಪಾಯಗಳಿಲ್ಲದೆ ಚಿನ್ನದಲ್ಲಿ ಹೂಡಿಕೆ ಮಾಡಲು ಬಯಸುತ್ತಿರುವವರಿಗಾಗಿ ಒಂದು ಸುವರ್ಣವಕಾಶವನ್ನು ಒದಗಿಸುತ್ತದೆ. ಚಿನ್ನದಲ್ಲಿ ಸರ್ಕಾರದ ಭದ್ರತೆಯಿಂದಾಗಿ ಇದು ಹೂಡಿಕೆದಾರರಿಗೆ ನಿಯಮಿತ ಬಡ್ಡಿ ಮತ್ತು ಚಿನ್ನದ ದರ ಏರಿಕೆಯ ಲಾಭವನ್ನು ಗಳಿಸಿಕೊಡಲು ಸಹಾಯ ಮಾಡುತ್ತದೆ. ಠೇವಣಿ ಸಮಯ ಮುಗಿದಾಗ ಚಿನ್ನದ ಪ್ರಸ್ತುತ ಮಾರುಕಟ್ಟೆ ಮೌಲ್ಯ ಪಡೆಯುವುದರೊಂದಿಗೆ ನಿಮ್ಮ ಹೂಡಿಕೆಯನ್ನು ನೀವು ದರ ಏರಿಳಿತಗಳ ವಿರುದ್ಧ ರಕ್ಷಣೆ ಮಾಡಿರುತ್ತೀರಿ. ಇಷ್ಟಲ್ಲದೆ, SGB ಯೋಜನೆಯು ಭೌತಿಕ ಚಿನ್ನದೊಂದಿಗಿರುವ ಶುದ್ಧತೆ ಮತ್ತು ತಯಾರಿಕಾ ವೆಚ್ಚಗಳನ್ನು ಹೊರಗಿಡುತ್ತದೆ. ಭಾರತ ಸರ್ಕಾರದಿಂದ ಕೊಡುಗೆ ನೀಡಲ್ಪಟ್ಟು, ವಿನಿಮಯಗಳಲ್ಲಿ ವ್ಯವಹಾರ ನಡೆಸಲು SGB ಸುರಕ್ಷಿತ, ವೆಚ್ಚ-ಪರಿಣಾಮಕಾರಿ ಮತ್ತು ಚಿನ್ನದ ಹೂಡಿಕೆಯ ಅನುಕೂಲಕರ ವಿಧಾನವನ್ನು ಪ್ರತಿನಿಧಿಸುತ್ತದೆ. ಇದರಿಂದ ಇದು ಚಿನ್ನದೊಂದಿಗೆ ನಿಮ್ಮ ಹಣಕಾಸಿನ ಭವಿಷ್ಯವನ್ನು ಭದ್ರಗೊಳಿಸಲು ಅಕಾರ್ಷಕ ಪರ್ಯಾಯವಾಗಿದೆ. Read more

ನೀವು ತಿಳಿದುಕೊಳ್ಳಬೇಕಾದ ವಿಷಯಗಳು

SGB ಗಳನ್ನು ಒಂದು ವರ್ಷಕ್ಕೆ ಸಾಮಾನ್ಯ ಜನರು ಮತ್ತು HUFಗಳು ಒಂದು ಗ್ರಾಂನಿಂದ ಹಿಡಿದು ಗರಿಷ್ಟ 4ಕೆಜಿ ಮಿತಿಯವರೆಗೆ ಮತ್ತು ಟ್ರಸ್ಟ್ ಗಳು 20ಕೆಜಿಯವರೆಗೆ ಹೂಡಿಕೆ ಮಾಡಬಹುದು.

SGB ​​ಗಳು ಪ್ರತಿ ಆರು ತಿಂಗಳಿಗೊಮ್ಮೆ ಪಾವತಿಸುವ ಸ್ಥಿರ ಬಡ್ಡಿದರವನ್ನು ನೀಡುತ್ತವೆ, ಸಂಭಾವ್ಯ ಚಿನ್ನದ ಬೆಲೆ ಹೆಚ್ಚಳದೊಂದಿಗೆ ಹೂಡಿಕೆಯ ಮೌಲ್ಯವನ್ನು ಹೆಚ್ಚಿಸುತ್ತವೆ

SGB ​​ಬೆಲೆಯನ್ನು ಪ್ರಸ್ತುತ ಚಿನ್ನದ ಮಾರುಕಟ್ಟೆ ದರಕ್ಕೆ ಲಿಂಕ್ ಮಾಡಲಾಗಿದೆ, ಹೂಡಿಕೆದಾರರು ಪಾರದರ್ಶಕ ಮತ್ತು ನ್ಯಾಯಯುತ ಬೆಲೆಯನ್ನು ಪಡೆಯುತ್ತಾರೆ ಎಂದು ಖಚಿತಪಡಿಸುತ್ತದೆ

SGB ನಲ್ಲಿ ಏಕೆ ಹೂಡಿಕೆ ಮಾಡಬೇಕು?

image

ಜಂಜಾಟ-ರಹಿತ

ಭೌತಿಕ ಚಿನ್ನವಿಲ್ಲದೆ ಚಿನ್ನದ ಮಾಲೀಕತ್ವ (ಸಂಗ್ರಹಣೆಯ ಅಪಾಯಗಳು ಅಥವಾ ವೆಚ್ಚಗಳು ಇರುವುದಿಲ್ಲ)
 

image

ವ್ಯವಹರಿಸಬಲ್ಲ

RBI ಸೂಚನೆ ನೀಡಿದಂತೆ ವಿತರಣೆಯ ದಿನಾಂಕದ 15 ದಿನಗಳೊಳಗಾಗಿ ಷೇರು ಮಾರುಕಟ್ಟೆಯಲ್ಲಿ ಬಾಂಡ್ ಗಳ ವ್ಯವಹಾರ ನಡೆಸಬಹುದು. 

image

ಮೇಲಾಧಾರವಾಗಿ ಬಳಸಲು

ಈ ಬಾಂಡ್ ಗಳ ಭದ್ರತೆಯಲ್ಲಿ ಬ್ಯಾಂಕುಗಳಿಂದ ಸಾಲವನ್ನು ಪಡೆಯಬಹುದು 

ಅರ್ಹತಾ ಮಾನದಂಡ

ಈ ಬಾಂಡ್ ನಲ್ಲಿ ಮಾಡಬಹುದಾದ ಕನಿಷ್ಠ ಹೂಡಿಕೆ ಎಂದರೆ 1 ಗ್ರಾಂ. ಪ್ರತಿ ಸಾಮಾನ್ಯ ಪ್ರಜೆ ಅಥವಾ HUF ಪ್ರತಿ ವರ್ಷ ಗರಿಷ್ಟ 4 ಕೆಜೆವರೆಗೆ ಇವುಗಳನ್ನು ಕೊಳ್ಳಬಹುದು. ಟ್ರಸ್ಟ್, ಚಾರಿಟೇಬಲ್ ಸಂಸ್ಥೆಗಳಿಗಾಗಿ ಗರಿಷ್ಟ ಮಿತಿ 20 ಕೆಜಿ ಆಗಿರುತ್ತದೆ

SGB ಹೇಗೆ ತೆಗೆದುಕೊಳ್ಳುವುದು

ಹಂತ 1

ಆಪ್ ಲಾಗಿನ್

ಕೆಬಿಎಲ್ ಮೊಬೈಲ್ ಪ್ಲಸ್ ಆಪ್ ಅನ್ನು ತೆರೆದು ಅದರಲ್ಲಿ ನಿಮ್ಮ MPIN ಬಳಸಿ ಲಾಗಿನ್ ಮಾಡಿ 

ಹಂತ 2

ಸಾವರಿನ್ ಚಿನ್ನದ ಬಾಂಡ್ ಗಳಿಗಾಗಿ ಅರ್ಜಿ ಸಲ್ಲಿಸಿ 

“ಹೂಡಿಕೆ ಮತ್ತು ವಿಮೆ” ಗೆ ಹೋಗಿ, ಸಾವರಿನ್ ಚಿನ್ನದ ಬಾಂಡ್ ಆಯ್ಕೆ ಮಾಡಿ ಮತ್ತು ನಂತರ ನಿಯಮಗಳು ಹಾಗೂ ಷರತ್ತುಗಳಿಗೆ ಒಪ್ಪಿದ ಮೇಲೆ ಮುಂದುವರೆಸಿ 

ಹಂತ 3

ನಿಮ್ಮ ಅಗತ್ಯತೆಗಳು 

ಅಗತ್ಯವಿರುವ ಯೂನಿಟ್ ಸಂಖ್ಯೆಗಳನ್ನು “ಗ್ರಾಂಗಳಲ್ಲಿ ಪ್ರಮಾಣ’ ದಲ್ಲಿ ನಮೂದಿಸಿ 

ಹಂತ 4

ನಿಮ್ಮ ವಿವರಗಳನ್ನು ನಮೂದಿಸಿ ಮತ್ತು ಸಲ್ಲಿಸಿ 

ನಾಮಿನಿ ವಿವರಗಳನ್ನು ನಮೂದಿಸಿ, ಮುಂದಿನ ಪುಟದಲ್ಲಿ ವಿವರಗಳನ್ನು ಮತ್ತೊಮ್ಮೆ ದೃಢಪಡಿಸಿ 
ಒಟಿಪಿ ನಮೂದಿಸಿ, ಸಲ್ಲಿಸಿ 

steps

ಮುಖ್ಯ ಮಾರ್ಗಸೂಚಿಗಳು

ರಿಡೀಮ್ ಮಾಡುವುದು ಮತ್ತು ಅವಧಿ ಪೂರ್ವದ ಆಯ್ಕೆಗಳು

ಹೂಡಿಕೆದಾರರಿಗೆ ಸೂಚನೆಗಳು ಮತ್ತು ಹಕ್ಕುಗಳು

ಕಾರ್ಯಾಚರಣೆಯ ಮಾರ್ಗಸೂಚಿಗಳು

ಪ್ರಶ್ನೆಗಳಿವೆಯೇ? ನಾವು ಉತ್ತರಿಸುತ್ತೇವೆ.

SGB ಒಂದು ಸರ್ಕಾರೀ ಭದ್ರತೆಯಾಗಿದ್ದು ಇದು ಚಿನ್ನವಾಗಿ ಭೌತಿಕವಾಗಿ ಪಡೆಯದೆ ಅದರ ಮಾಲೀಕತ್ವವನ್ನು ಪಡೆಯುವುದನ್ನು ಪ್ರತಿನಿಧಿಸುತ್ತದೆ. ಇದನ್ನು ಭಾರತೀಯ ರಿಸರ್ವ್ ಬ್ಯಾಂಕ್ ವಿತರಿಸುತ್ತದೆ.

SGBಗಳು ಸುರಕ್ಷಿತ, ವೆಚ್ಚ-ಪರಿಣಾಮಕಾರಿ ಮತ್ತು ಸಂಗ್ರಹಣೆ ಹಾಗೂ ಶುದ್ಧತೆ ರೀತಿಯ ಭೌತಿಕ ಚಿನ್ನದೊಂದಿಗಿರುವ ಅಪಾಯಗಳನ್ನು ತೆಗೆದುಹಾಕುತ್ತದೆ. ಇದರೊಂದಿಗೆ ನಿಮಗೆ ನಿಯಮಿತವಾಗಿ ಬಡ್ಡಿ ಸಹ ಸಿಗುತ್ತದೆ.

ಮಾರಾಟ ದರಗಳು ಹೆಚ್ಚು ಕಡಿಮೆಯಾದರೂ, ನೀವು ಪಾವತಿಸಿದ ಚಿನ್ನದ ಪ್ರಮಾಣವನ್ನು ನೀವು ಉಳಿಸಿಕೊಳ್ಳುವುದನ್ನು ಖಾತ್ರಿಪಡಿಸಿಕೊಳ್ಳುತ್ತಾ ಖರೀದಿಸಿದ ಚಿನ್ನದ ಮೊತ್ತ ಕಡಿಮೆಯಾಗುವುದಿಲ್ಲ.

ನೀವು ಅಗತ್ಯ ದಾಖಲೆಗಳನ್ನು ನೀಡಿ, ಅರ್ಹತಾ ಮಾನದಂಡವನ್ನು ಪೂರೈಸುವ ಮೂಲಕ ಕೆಬಿಎಲ್ ಮೊಬೈಲ್ ಪ್ಲಸ್ ಆಪ್ ಅಥವಾ ಯಾವುದೇ ಕರ್ಣಾಟಕ ಶಾಖೆಯಿಂದ SGB ಗಳನ್ನು ಖರೀದಿಸಬಹುದು

ಇಲ್ಲ. ಮೆಚ್ಯುರಿಟಿ ಸಮಯದಲ್ಲಿ, SGBಗಳನ್ನು ಚಿನ್ನದ ಆಗಿನ ಮಾರುಕಟ್ಟೆ ಮೌಲ್ಯಕ್ಕೆ ಸಮನಾಗುವ ನಗದನ್ನು ರಿಡೀಮ್ ಮಾಡಿಕೊಳ್ಳಬಹುದು. ಆದರೆ ಭೌತಿಕ ಚಿನ್ನವನ್ನು ಕೊಡಲಾಗುವುದಿಲ್ಲ.

ಪ್ರಯೋಜನಗಳಲ್ಲಿ ಬಾಂಡ್ ನ ಅವಧಿಯ ಮೇಲೆ ಸ್ಥಿರ ಬಡ್ಡಿಗಳನ್ನು ಗಳಿಸುವುದನ್ನೂ ಒಳಗೊಂಡಂತೆ ಹೂಡಿಕೆ ಮಾಡಿದ ಅಸಲಿನ ಜೊತೆಯಲ್ಲಿ ಬಡ್ಡಿಯ ಖಾತ್ರಿಯನ್ನೂ ಸಾವರಿನ್ ನೀಡುತ್ತದೆ. ಇದರೊಂದಿಗೆ ಈ ಬಾಂಡ್ ಗಳನ್ನು ಸಾಲಕ್ಕಾಗಿ ಆಧಾರವಾಗಿಯೂ ಸಹ ಬಳಸಿಕೊಳ್ಳಬಹುದು

SGB ಗಳಲ್ಲಿ ಒಂದು ವರ್ಷಕ್ಕೆ ಸಾಮಾನ್ಯ ಜನರು ಮತ್ತು HUFಗಳು ಒಂದು ಗ್ರಾಂನಿಂದ ಹಿಡಿದು ಗರಿಷ್ಟ 4ಕೆಜಿ ಮಿತಿಯವರೆಗೆ ಮತ್ತು ಟ್ರಸ್ಟ್ ಗಳು 20ಕೆಜಿಯವರೆಗೆ ಹೂಡಿಕೆ ಮಾಡಬಹುದು.

ಹೌದು, RBI ಸೂಚಿಸಿದಂತೆ ಹೂಡಿಕೆದಾರರಿಗೆ ಲಿಕ್ವಿಡಿಟಿ ಒದಗಿಸಲು SGBಗಳನ್ನು ವಿತರಿಸಿದ 15 ದಿನಗಳೊಳಗಾಗಿ ಸ್ಟಾಕ್ ವಿನಿಮಯಗಳಲ್ಲಿ ವ್ಯವಹಾರ ನಡೆಸಬಹುದು.

SGBಗಳನ್ನು ಸಾಲದ ಮೇಲಾಧಾರವಾಗಿ ಬಳಸಬಹುದು. ಭಾರತೀಯ ರಿಸರ್ವ್ ಬ್ಯಾಂಕಿನ ಮಾರ್ಗಸೂಚಿಗಳ ಪ್ರಕಾರ ಪ್ರತ್ಯೇಕ ಬ್ಯಾಂಕ್ ನಿಂದ ಹೊಂದಿಸಲಾದ ಮೌಲ್ಯಕ್ಕಾಗಿ ಸಾಲದ(LTV) ಅನುಪಾತವನ್ನು ಹೊಂದಿಸಲಾಗುವುದು.

SGBಗಳಲ್ಲಿ ಹೂಡಿಕೆ ಮಾಡಿದವರು ಮೆಚ್ಯುರಿಟಿ ಸಮಯದಲ್ಲಿ ಬರುವ ಒಟ್ಟು ಮೊತ್ತದ ಮೇಲೆ ತೆರಿಗೆ ವಿನಾಯ್ತಿಯನ್ನು ನೀಡುವುದನ್ನೂ ಒಳಗೊಂಡಂತೆ ಕೆಲವು ನಿರ್ದಿಷ್ಟ ಷರತ್ತುಗಳೊಂದಿಗೆ ಗಳಿಸಿದ ಬಡ್ಡಿ ಮೇಲೆ ತೆರಿಗೆ ವಿನಾಯ್ತಿಯನ್ನು ಸಹ ನೀಡಲಾಗುತ್ತದೆ.

ಸಾವರಿನ್ ಚಿನ್ನದ ಬಾಂಡ್ ಗಳ ಪ್ರಯೋಜನಗಳು

ಸಾವರಿನ್ ಚಿನ್ನದ ಬಾಂಡ್ ಗಳು(SGBಗಳು) ಭೌತಿಕ ಚಿನ್ನದ ಸಂಗ್ರಹಣೆಯ ಜಂಜಾಟವಿಲ್ಲದೆ ಚಿನ್ನದಲ್ಲಿ ಹೂಡಿಕೆ ಮಾಡುವ ಸುರಕ್ಷಿತ ಮತ್ತು ಪರ್ಯಾಯ ವಿಧಾನವಾಗಿದೆ. ಇದು ಚಿನ್ನದ ಗ್ರಾಂಗಳನ್ನು ಪ್ರತಿನಿಧಿಸುವ ಸರ್ಕಾರದ ಭದ್ರತೆಯಾಗಿದೆ. ಇವು ಚಿನ್ನದ ದರಗಳನ್ನು ಮಾತ್ರ ಲೆಕ್ಕ ಮಾಡದೆ ಅದರೊಂದಿಗೆ ಸಿಗುವ ಬಡ್ಡಿ ದರಗಳನ್ನು ಸಂಯೋಜಿಸಿ ನಿಯಮಿತ ಆದಾಯದೊಂದಿಗೆ ಚಿನ್ನದ ಸ್ಥಿರತೆಯನ್ನು ಸಹ ನೀಡುತ್ತದೆ. SGB ಗಳು ಸರ್ಕಾರದ ಅಡಿಯಲ್ಲಿರುವ ಕಾರಣ ಇವು ಬಹಳ ಸುರಕ್ಷಿತವಾಗಿದೆ. ಇವುಗಳನ್ನು ಮೆಚ್ಯುರಿಟಿ ಸಮಯದವರೆಗೆ ಉಳಿಸಿಕೊಂಡಾಗ ಸಿಗುವ ಹಣದ ಮೇಲೆ ತೆರಿಗೆ ವಿನಾಯಿತಿಯೊಂದಿಗೆ ತೆರಿಗೆ ಪರಿಣಾಮಕಾರಿಯೂ ಆಗಿದೆ. ಇದಲ್ಲದೆ, SGBಗಳನ್ನು ಸಾಲಗಳಿಗಾಗಿ ಮೇಲಾಧಾರವಾಗಿ ಪಡೆದುಕೊಳ್ಳಬಹುದಾದ್ದರಿಂದ ಇದು ಅನುಕೂಲಕರ ಹೂಡಿಕೆ ಆಯ್ಕೆಯಾಗಿದೆ. ಸಾವರಿನ್ ಚಿನ್ನದ ಬಾಂಡ್ ನೊಂದಿಗೆ ಭವಿಷ್ಯದಲ್ಲಿ ಹೂಡಿಕೆ ಮಾಡಿ, ಇದ್ರಲ್ಲಿ ಭೌತಿಕ ಸಂಗ್ರಹಣೆಯ ಸಮಸ್ಯೆಗಳಿಲ್ಲದೆ ಚಿನ್ನದ ಮಾಲೀಕತ್ವವನ್ನು ಪಡೆಯಬಹುದಾಗಿದೆ. ಸಾವರಿನ್ ಬಾಂಡ್ ಗಳು ಸುರಕ್ಷೆ ಮತ್ತು ಸಂಭಾವ್ಯ ಬಂಡವಾಳ ಗಳಿಕೆಯ ಎರಡೂ ಲಾಭಗಳನ್ನು ಹೊಂದಿರುವುದರಿಂದ ಚಿನ್ನದ ಬಾಂಡ್ ನಲ್ಲಿ ಹೂಡಿಕೆ ಮಾಡಲು ಬಯಸುತ್ತಿರುವವರಿಗೆ ನಮ್ಮ ಸಾವರಿನ್ ಚಿನ್ನದ ಬಾಂಡ್ ಅತ್ಯುತ್ತಮ ಹೂಡಿಕೆಯಾಗಿದೆ. SGB ಚಿನ್ನದ ಬಾಂಡ್ ಕೇವಲ ಒಳ್ಳೆಯ ಹೂಡಿಕೆ ಮಾತ್ರವಷ್ಟೇ ಅಲ್ಲದೆ ಇದು ಹಣದುಬ್ಬರದ ವಿರುದ್ಧ ಒಳ್ಳೆಯ ಸಂಪತ್ತಾಗಿದೆ.

SGBಗಳು ಸರ್ಕಾರ ವಿತರಣೆಯ ಸಮಯದಲ್ಲಿ ತಿಳಿಸಿದಂತೆ ಸ್ಥಿರ ಬಡ್ಡಿ ದರಗಳನ್ನು ಒದಗಿಸುತ್ತದೆ. ಈ ಬಡ್ಡಿ ಹಣವನ್ನು ಹೂಡಿಕೆಯ ಆರಂಭಿಕ ಮೊತ್ತದ ಮೇಲೆ ಅರ್ಧ ವಾರ್ಷಿಕವಾಗಿ ಪಾವತಿಸಲಾಗುತ್ತದೆ ಮತ್ತು ಇದು ಚಿನ್ನದ ದರದ ಏರಿಳಿತಗಳೊಂದಿಗೆ ಹೊಂದಿಕೊಂಡಿರುವ ಸಂಭಾವ್ಯ ಬಂಡವಾಳದ ಗಳಿಕೆಯಿಂದ ಬೇರೆಯದ್ದೇ ಆಗಿರುತ್ತದೆ. ಮಾರುಕಟ್ಟೆ ಚಿನ್ನದ ದರಗಳೊಂದಿಗೆ ಬಾಂಡ್ ನ ಅಸಲು ಮೊತ್ತ ಏರಿಳಿತ ಕಂಡರೂ ಸಹ ಈ ಬಡ್ಡಿ ಆದಾಯಗಳು ಮಾತ್ರ ನಿಯಮಿತ ಆದಾಯವನ್ನು ನೀಡುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಮೆಚ್ಯುರಿಟಿ ಸಮಯದಲ್ಲಿ, ರಿಡೀಮ್ ಮಾಡುವ ದರಗಳು ಆಗಿನ ಚಿನ್ನದ ದರಗಳನ್ನು ಆಧರಿಸಿರುತ್ತದೆ, ಇದು ಬಂಡವಾಳ ವೃದ್ಧಿಗೆ ಒಂದು ಅವಕಾಶವನ್ನು ನೀಡಿರುತ್ತದೆ.