ಕೆಬಿಎಲ್ ಕಮಾಡಿಟಿ ಪ್ಲೆಡ್ಜ್ ಲೋನ್
ಒಂದುವೇಳೆ ನೀವು ವ್ಯಾಪಾರ ಅಥವಾ ಕೃಷಿ ಸರಕುಗಳನ್ನು ಸಂಸ್ಕರಣೆ ಮಾಡುವ ವ್ಯಕ್ತಿ, ಪಾಲುದಾರಿಕೆ ಫರ್ಮ್ ಅಥವಾ ಸಂಸ್ಥೆಯಾಗಿದ್ದಲ್ಲಿ, ಕೆಬಿಎಲ್ ಕಮಾಡಿಟಿ ಪ್ಲೆಡ್ಜ್ ಸಾಲವು ಹಣಕಾಸುಗಳಿಗಾಗಿ ವಿಶಿಷ್ಟ ಅವಕಾಶವನ್ನು ಒದಗಿಸುತ್ತದೆ. ಈ ಸಾಲವು ನಿಮ್ಮ ಕೃಷಿ ಉತ್ಪಾದನೆಯನ್ನು ಅಡವಿರಿಸಿ ನಿಮಗೆ ಹಣವನ್ನು ಪಡೆಯುವ ಅವಕಾಶವನ್ನು ನೀಡುವುದರ ಮೂಲಕ ನಿಮ್ಮ ಕೆಲಸಗಳಿಗೆ ಹಣದ ಅಗತ್ಯತೆಯನ್ನು ಪೂರೈಸುತ್ತದೆ. ಸರಕುಗಳ ಜೀವಿತಾವಧಿಯನ್ನು ಆಧರಿಸಿದ ಅವಧಿ, ಅನುಕೂಲಕರ ಮರುಪಾವತಿ ನಿಯಮಗಳು ಮತ್ತು ನಿಮ್ಮ ಉತ್ಪನ್ನದ ಮೌಲ್ಯದ 70%ವರೆಗೆ ಸುರಕ್ಷಿತವಾಗಿಡುವ ಸಾಮರ್ಥ್ಯದೊಂದಿಗೆ ಈ ಸಾಲ ಕೃಷಿ ವ್ಯಾಪಾರಿಗಳು ಮತ್ತು ಮಿಲ್ ಮಾಲೀಕರ ನಿರ್ದಿಷ್ಟ ಅಗತ್ಯತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ನಿಮಗೆ ಖರೀದಿ ಮಾಡಲು ಅಥವಾ ಕೃಷಿ ಸರಕುಗಳನ್ನು ಸಂಸ್ಕರಿಸಲು ಬಂಡವಾಳದ ಅಗತ್ಯವಿರಬಹುದು, ಈ ಸಾಲ ನಿಮಗೆ ನಿಮ್ಮ ಮುಂದಿನ ಚಟುವಟಿಕೆಗೆ ನೇರ ಮತ್ತು ಸುಲಭ ರೀತಿಯಲ್ಲಿ ಹಣವನ್ನು ಒದಗಿಸುತ್ತದೆ. Read more
ನಿಮಗೇಕೆ ಈ ಸಾಲ ಸೂಕ್ತ
ನಿಮಗೆ ಅಗತ್ಯವಿರುವುದನ್ನು ನೀಡಲು ವಿನ್ಯಾಸ
ಕೃಷಿ ವ್ಯಾಪಾರ ಅಗತ್ಯತೆಗಳಿಗೆ ಹೊಂದುವಂತೆ ಅನುಕೂಲಕರ ಅವಧಿ ಮತ್ತು ಮರುಪಾವತಿ
ಕೆಲಸದ ಬಂಡವಾಳಕ್ಕಾಗಿ ಉತ್ಪಾದನೆಯ ಮೌಲ್ಯಕ್ಕಾಗಿ ಶೇಖಡಾ 70%ವರೆಗೆ ಸಾಲ
ಕೊನೆಯ ದಿನಾಂಕದ ಮೊದಲು ಅಥವಾ ಗಿರವಿ ಸರಕುಗಳ ಬಿಡುಗಡೆಯ ಸಮಯದಲ್ಲಿ ಲಂಸಂ ಮರುಪಾವತಿ ಆಯ್ಕೆ
ಅರ್ಹತೆ
- ವ್ಯಕ್ತಿಗಳು, HUF, ಪಾಲುದಾರಿಕೆ ಸಂಸ್ಥೆಗಳು, ಸಂಸ್ಥೆಗಳು ಮತ್ತು ಕೃಷಿಯಲ್ಲಿ ಇತರ ಕಾನೂನು ಘಟಕಗಳು
- ಕನಿಷ್ಠ 3 ವರ್ಷಗಳ ಕಾಲ ಕೃಷಿ ಸರಕುಗಳ ವ್ಯಾಪಾರ/ಸಂಸ್ಕರಣೆಯಲ್ಲಿ ತೊಡಗಿಸಿಕೊಂಡಿರುವವರು
- ಮಾಲೀಕರು ನಿರ್ಧರಿಸಿದಂತೆ ಜೀವಿತಾವಧಿಯೊಂದಿಗೆ ಸರಕುಗಳು
ಅಗತ್ಯವಿರುವ ದಾಖಲೆಗಳು
- PAN ಕಾರ್ಡ್
- ಆಧಾರ್ ಕಾರ್ಡ್
- ಉದ್ಯಮ ನೋಂದಣಿ ಪ್ರಮಾಣಪತ್ರ
- ನಗರ ಸ್ಥಳೀಯ ಸಂಸ್ಥೆಗಳು ನೀಡುವ ವಿತರಣಾ ಪ್ರಮಾಣಪತ್ರ ಅಥವಾ ಗುರುತಿನ ಚೀಟಿ
- ನಿಯಂತ್ರಕ ಪ್ರಾಧಿಕಾರದಿಂದ ಪರವಾನಗಿ ಅಥವಾ ಅನುಮೋದನೆ
1,2,3...ರೀತಿಯಾಗಿ ಸರಳ
3 ಸರಳ ಹಂತಗಳಲ್ಲಿ KBL ಸರಕು ಪ್ರತಿಜ್ಞೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿ
ಹಂತ 1
ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ
ನಿಮ್ಮ ಹತ್ತಿರದ ಕರ್ನಾಟಕ ಬ್ಯಾಂಕ್ ಶಾಖೆಗೆ ಹೋಗಿ
ಹಂತ 2
ನಿಮ್ಮ ಮೂಲ ವಿವರಗಳನ್ನು ನಮೂದಿಸಿ
ನಿಮ್ಮ ಮೂಲ ವಿವರಗಳನ್ನು ನೀಡಿ ಮತ್ತು ದಾಖಲೆಗಳನ್ನು ತಯಾರಿಟ್ಟುಕೊಳ್ಳಿ
ಹಂತ 3
ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ
ನಿಮ್ಮ ಖಾತೆಯನ್ನು ತೆರೆದಾಗ ನಮ್ಮ ಶಾಖೆಯ ಅಧಿಕಾರಿಗಳು ನಿಮಗೆ ತಿಳಿಸುತ್ತಾರೆ
ನಿಮಗಾಗಿರುವ ಇತರ ಆಯ್ಕೆಗಳನ್ನು ನೋಡಿ
ಹಣಕಾಸಿನ ಶ್ರೇಷ್ಠತೆಗಾಗಿ ಆರಿಸಲಾಗಿರುವ ಸಾವಿರಾರು ಜನರ ಭರವಸೆ
ಸರಳ ಮಾಹಿತಿಯೊಂದಿಗೆ ಸರಳ ಸಾಲಗಳು
ಪ್ರತಿ ಕ್ಷಣವೂ ನಿಮಗೆ ಮಾಹಿತಿ ಒದಗಿಸುವ ನಮ್ಮ ಸಂಪನ್ಮೂಲಗಳು
ಪ್ರಶ್ನೆಗಳಿವೆಯೇ? ನಾವು ಉತ್ತರಿಸುತ್ತೇವೆ
ಇದೊಂದು ಕರ್ನಾಟಕ ಬ್ಯಾಂಕಿನ ಹಣಕಾಸಿನ ಯೋಜನೆಯಾಗಿದ್ದು ಇದು ಮುಖ್ಯವಾಗಿ ಕೃಷಿ ವ್ಯಾಪಾರಿಗಳು ಮತ್ತು ಮಿಲ್ ಮಾಲೀಕರು ತಮ್ಮ ಕೃಷಿ ಸರಕುಗಳನ್ನು ಅಡವಿಡುವ ಮೂಲಕ ಹಣವನ್ನು ಪಡೆಯಬಹುದಾಗಿದೆ. ಇದು ಅಸಲಿ ಸಂಗ್ರಹಣೆ ರಶೀತಿಗಳ ಜಮೆಯೊಂದಿಗೆ ನಿಮಗೆ ನಿಮ್ಮ ಕೃಷಿ ಕೆಲಸಗಳಿಗಾಗಿ ಬಂಡವಾಳ ಪಡೆಯಲು ಸಹಾಯಮಾಡುತ್ತದೆ.
ಗರಿಷ್ಟ ಸಾಲದ ಮೊತ್ತವೆಂದರೆ ₹2 ಕೋಟಿಗಳು ಮತ್ತು ಕನಿಷ್ಠ ಸಾಲದ ಮೊತ್ತವೆಂದರೆ ₹10 ಲಕ್ಷ ರೂಪಾಯಿಗಳು.
ನೀವು ಶೈತ್ಯಾಗಾರ, ಉಗ್ರಾಣ ಅಥವಾ ಗೋದಾಮಿನಲ್ಲಿ ಇರಿಸಿದ ಉತ್ಪನ್ನಗಳ ಮೌಲ್ಯದ ಮೇಲೆ ಶೇಖಡಾ 70%ವರೆಗೆ ಹಣವನ್ನು ಪಡೆಯಬಹುದಾಗಿದೆ.
ಸರಕನ್ನು ಹೊಂದಿರುವವರು ನಿರ್ಧರಿಸಿದಂತೆ ಸರಕಿನ ಜೀವಿತಾವಧಿಯನ್ನು ಆಧರಿಸಿ, 12 ತಿಂಗಳು ಅಥವಾ ಸಂಗ್ರಹಣಾ ರಶೀತಿಯಲ್ಲಿ ನಮೂದಿಸಿದ ಅವಧಿಗಿಂತ 3 ತಿಂಗಳು ಕಡಿಮೆ(ಕಡಿಮೆ ಇರುವುದನ್ನು ಆಯ್ಕೆ ಮಾಡಲಾಗುತ್ತದೆ) ಸಾಲದ ಅವಧಿಯಾಗಿರುತ್ತದೆ.
ನೋಂದಾಯಿತ ಮೇಲಾಧಾರ ವ್ಯವಸ್ಥಾಪಕರು ವಿತರಿಸಿದ ನಿರ್ಧಿಷ್ಟ ಉತ್ಪಾದನೆಯ ಸಂಗ್ರಹಣೆ ಪುರಾವೆ ನೀಡಿದ ನಂತರ ಅಸಲಿ ಸಂಗ್ರಹಣೆ ರಶೀತಿಗಳನ್ನು ಜಮೆ ಮಾಡಿದಾಗ ಕೃಷಿ ಸರಕುಗಳ ಗಿರವಿ ಮೂಲಕ ಸಾಲವನ್ನು ಭದ್ರಪಡಿಸಲಾಗುತ್ತದೆ.
ಬ್ಯಾಂಕ್ ಸಂಸ್ಕರಣಾ ಶುಲ್ಕಗಳು ಅಥವಾ ಮುಂಗಡ ಶುಲ್ಕಗಳನ್ನು ವಿಧಿಸುತ್ತದೆ. ಇದರಲ್ಲಿ ಕಾನೂನು, ಮೌಲ್ಯೀಕರಣ ಮತ್ತು ಹಿನ್ನಲೆ ಮಾಹಿತಿ ವರದಿಗಳ ಶುಲ್ಕಗಳು ಒಳಗೊಂಡಿರುತ್ತದೆ.
ನಾವು ಜೀರೋ ಡಿಫೆಕ್ಟ್ ಜೀರೋ ಎಫೆಕ್ಟ್(ZED) ಪ್ರಮಾಣಪತ್ರದೊಂದಿಗೆ ಮಹಿಳಾ ಉದ್ಯಮಿಗಳಿಗಾಗಿ ಮತ್ತು MSMEಗಳಿಗಾಗಿ ವಿಶೇಷ ಬಡ್ಡಿ ರಿಯಾಯಿತಿಗಳನ್ನು ಒದಗಿಸುತ್ತೇವೆ. ಜೊತೆಗೆ, ಒಂದುವೇಳೆ ನಿಮ್ಮ ಭದ್ರತೆಯು 125% ಕ್ಕಿಂತ ಹೆಚ್ಚಾದಲ್ಲಿ, ನೀವು ಹೆಚ್ಚುವರಿ ಪ್ರಯೋಜನಗಳಿಗೆ ಅರ್ಹರಾಗುತ್ತೀರಿ.
ಸಾಲಕ್ಕಾಗಿ ಬಡ್ಡಿ ದರಗಳನ್ನು ಬಾಹ್ಯ ಮಾನದಂಡ ಸಾಲ ದರ(EBLR) ಜೊತೆಗೆ ಸಂಪರ್ಕಗೊಂಡಿದೆ. ಕರ್ನಾಟಕ ಬ್ಯಾಂಕಿನ ಸಾಲಗಳ ವಿಷಯದಲ್ಲಿ, EBLR ಬಹಳ ನಿರ್ಣಾಯಕ ಉಲ್ಲೇಖ ದರವಾಗಿದೆ. ಇದು ಬಡ್ಡಿ ದರಗಳನ್ನು ಅಳೆಯಲು ಮತ್ತು ಹೊಂದಿಸಲು ಬಳಸಲಾಗುವ ಅಗತ್ಯ ಮಾನದಂಡ. ಈ ದರವು ಬಾಹ್ಯ ಮಾರುಕಟ್ಟೆ ಅಂಶಗಳಿಂದ ನಿರ್ಧರಿಸುತ್ತದೆ ಮತ್ತು ಪಾರದರ್ಶಕ ಹಾಗೂ ಕ್ರಿಯಾತ್ಮಕ ಮಾನದಂಡವಾಗಿ ಕಾರ್ಯನಿರ್ವಹಿಸುತ್ತದೆ. EBLRಗೆ ಸಾಲದ ಬಡ್ಡಿ ದರಗಳನ್ನು ಸೇರಿಸುವುದರಿಂದ, ನಾವು ಸಾಲದ ದರವು ನ್ಯಾಯೋಚಿತವಾಗಿದೆ, ಮಾರುಕಟ್ಟೆ ಸ್ಥಿತಿಗಳಿಗೆ ಸ್ಪಂದಿಸುವ ಮತ್ತು ನಿಯಂತ್ರಕ ಮಾರ್ಗಸೂಚಿಗಳಿಗೆ ಅನುಗುಣವಾಗಿರುವುದನ್ನು ಖಾತ್ರಿಪಡಿಸುವ ಮೂಲಕ ಸಾಲಗಾರರಿಗೆ ತಮ್ಮ ಸಾಲದ ಬಡ್ಡಿದರಗಳನ್ನು ಅರ್ತಿಮಾಡಿಕೊಳ್ಳಲು ಸ್ಪಷ್ಟ ಮತ್ತು ನಿರಂತರ ಆಧಾರವನ್ನು ಒದಗಿಸುತ್ತದೆ.
ಒಂದುವೇಳೆ ನೀವು ತಿಂಗಳ ಕಂತನ್ನು ಮರೆತರೆ, ಆದಷ್ಟು ಬೇಗ ಬ್ಯಾಂಕನ್ನು ಸಂಪರ್ಕಿಸಿ. ಸ್ವಲ್ಪ ಸಡಿಲತೆಯನ್ನು ನೀಡಿದ್ದರೂ ಸಹ, ನಿರಂತರವಾಗಿ ಕಂತುಗಳನ್ನು ಸಕಾಲಿಕ ಕಟ್ಟದೇ ಇದ್ದಾಗ ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ಭವಿಷ್ಯದ ಸಾಲಗಳ ಮೇಲೆ ಪರಿಣಾಮ ಬೀರುತ್ತದೆ.
₹5 ಲಕ್ಷದವರೆಗಿನ ಸಾಲಗಳಿಗೆ ಯಾವುದೇ ಸಂಸ್ಕರಣಾ ಶುಲ್ಕವಿರುವುದಿಲ್ಲ. ₹5 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಸಾಲಗಳಿಗೆ ಶೇ 0.50 ರಷ್ಟು ಸಂಸ್ಕರಣಾ ಶುಲ್ಕ ವಿಧಿಸಲಾಗುತ್ತದೆ.
ವಿಸ್ತರಿಸಲು, ಹೊಸ ಸಾಧನಗಳಲ್ಲಿ ಹೂಡಿಕೆ ಮಾಡಲು ಅಥವಾ ಕಾರ್ಯನಿರತ ಬಂಡವಾಳವನ್ನು ನಿರ್ವಹಿಸಲು ಬಯಸುವ ವ್ಯವಹಾರಗಳಿಗೆ ವ್ಯಾಪಾರ ಸಾಲಗಳು ಹಣಕಾಸಿನ ಬೆನ್ನೆಲುಬನ್ನು ಒದಗಿಸುತ್ತವೆ. ಈ ಸಾಲಗಳು ಬೆಳವಣಿಗೆ ಮತ್ತು ನಾವೀನ್ಯತೆಗೆ ವೇಗವರ್ಧಕವಾಗಿದ್ದು, ವ್ಯಾಪಾರದ ಆಕಾಂಕ್ಷೆಗಳನ್ನು ಸಾಕಾರಗೊಳಿಸಲು ಅಗತ್ಯವಾದ ಹಣವನ್ನು ಒದಗಿಸುತ್ತವೆ. ವ್ಯಾಪಾರ ಸಾಲವನ್ನು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಆಯ್ಕೆಗಳೊಂದಿಗೆ, ವ್ಯವಹಾರಗಳು ತಮ್ಮ ಅರ್ಜಿ ಪ್ರಕ್ರಿಯೆಯನ್ನು ಸುಲಭವಾಗಿ ಪ್ರಾರಂಭಿಸಬಹುದು, ಇದು ಹಣಕ್ಕೆ ತ್ವರಿತ ಮತ್ತು ಸಮರ್ಥ ಪ್ರವೇಶವನ್ನು ಖಾತ್ರಿಪಡಿಸುತ್ತದೆ. ಈ ಪ್ರಾಥಮಿಕ ಸರಕು ಸಾಲದ ಆಯ್ಕೆಯು ಮಾರುಕಟ್ಟೆ ಅವಕಾಶಗಳನ್ನು ಗರಿಷ್ಠಗೊಳಿಸಲು ಅಗತ್ಯವಾದ ಬೆಂಬಲವನ್ನು ಒದಗಿಸುತ್ತದೆ. ಸರಕು ಸಾಲಕ್ಕಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ಮತ್ತು ನಿಮ್ಮ ಉತ್ಪನ್ನಗಳ ಸಾಮರ್ಥ್ಯವನ್ನು ಅನ್ಲಾಕ್ ಮಾಡಿ. ಕೆಬಿಎಲ್ ಕಮಾಡಿಟಿ ಪ್ಲೆಡ್ಜ್ ಸಾಲವು ಅತ್ಯುತ್ತಮ ಕೃಷಿ-ವ್ಯಾಪಾರ ಸಾಲಗಳಲ್ಲಿ ಒಂದಾಗಿದೆ, ಇದು ರೈತರು ಮತ್ತು ಕೃಷಿ-ಉದ್ಯಮಿಗಳಿಗೆ ದ್ರವ್ಯತೆಯನ್ನು ಹೆಚ್ಚಿಸಲು ಅನುಕೂಲಕರವಾದ ನಿಯಮಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಈ ಸಾಲದ ಮೂಲಕ, ನಿಮ್ಮ ವ್ಯಾಪಾರವನ್ನು ಸ್ಪರ್ಧಾತ್ಮಕವಾಗಿ ಮತ್ತು ನಗದು ಹರಿವನ್ನು ಸಕಾರಾತ್ಮಕವಾಗಿಡಲು ನಿಮ್ಮ ಸರಕುಗಳನ್ನು ಬಳಸಿಕೊಳ್ಳಿ.
ಅನ್ವಯವಾಗುವ ಬಡ್ಡಿ ದರವು ಸ್ಥಿರವಾಗಿರಬಹುದು ಅಥವಾ ಫ್ಲೋಟಿಂಗ್ ಆಗಿರಬಹುದು. ನಿಗದಿತ ದರಗಳು ಅವಧಿಯುದ್ದಕ್ಕೂ ಸ್ಥಿರವಾಗಿರುತ್ತವೆ, ಬಜೆಟ್ ಯೋಜನೆಯಲ್ಲಿ ನಿಶ್ಚಿತತೆಯನ್ನು ಒದಗಿಸುತ್ತದೆ. ಹಾಗಿದ್ದರೂ ಕೂಡ, ಫ್ಲೋಟಿಂಗ್ ದರಗಳು ಮಾರುಕಟ್ಟೆಯ ಪರಿಸ್ಥಿತಿಗಳಿಗೆ ಸಂಬಂಧಿಸಿರುತ್ತವೆ ಹಾಗೂ ಏರಿಳಿತಕ್ಕೆ ಒಳಗಾಗಬಹುದು. ಕಡಿಮೆಗೊಳಿಸುವ ಬಾಕಿ ಆಧಾರದ ಮೇಲೆ ಬಡ್ಡಿ ಲೆಕ್ಕಾಚಾರ ಎಂದರೆ ನೀವು ಕ್ರಮೇಣ ಅಸಲು ಮರುಪಾವತಿ ಮಾಡುವುದರಿಂದ, ನಿಮ್ಮ EMI ಗಳ ಮೇಲಿನ ಬಡ್ಡಿ ಅಂಶವು ಕಡಿಮೆಯಾಗುತ್ತದೆ. ಗೃಹ ಸಾಲವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ನಿರ್ಣಯಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಡೌನ್ ಪೇಮೆಂಟ್, EMI ಕೈಗೆಟುಕುವಿಕೆ, ಸಾಲದ ಅವಧಿ ಹಾಗೂ ಸಂಸ್ಕರಣಾ ಶುಲ್ಕಗಳು, ಕಾನೂನು ಶುಲ್ಕಗಳು ಮತ್ತು ಸ್ಟ್ಯಾಂಪ್ ಡ್ಯೂಟಿಯಂತಹ ಹೆಚ್ಚುವರಿ ವೆಚ್ಚಗಳ ಅಂಶಗಳನ್ನು ಸಂಪೂರ್ಣವಾಗಿ ಪರಿಗಣಿಸಬೇಕಾಗುತ್ತದೆ. ಇದಲ್ಲದೆ, ಮಾರುಕಟ್ಟೆಯ ಪ್ರವೃತ್ತಿಗಳ ಮೇಲೆ ಕೂಡ ನಿಗಾ ಇರಿಸಬೇಕಾಗುತ್ತದೆ, ಏಕೆಂದರೆ ಅವುಗಳು ಫ್ಲೋಟಿಂಗ್ ಬಡ್ಡಿದರಗಳ ಮೇಲೆ ಪರಿಣಾಮವನ್ನು ಬೀರಬಹುದು. ನಿಮ್ಮ ಕನಸಿನ ಮನೆಯನ್ನು ನನಸಾಗಿಸಲು ನಿಮಗೆ ಅಗತ್ಯವಿರುವ ಹಣಕಾಸಿನ ಬೆಂಬಲವನ್ನು ಒದಗಿಸುವ ಸಲುವಾಗಿಯೇ ನಮ್ಮ ವೇಗದ ಗೃಹ ಸಾಲ ಸೇವೆಗಳನ್ನು ರಚಿಸಲಾಗಿದೆ.
ಅರ್ಜಿ ಸಲ್ಲಿಸುವ ಮೊದಲು ಸ್ಥಿರ ಆದಾಯದ ಮೂಲ ಹಾಗೂ ಉತ್ತಮ ಕ್ರೆಡಿಟ್ ಸ್ಕೋರ್ ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಉತ್ತಮ ಬಡ್ಡಿ ದರಗಳು ಮತ್ತು ನಿಯಮಗಳಿಗಾಗಿ ವಿವಿಧ ಸಾಲ ನೀಡುವವರನ್ನು ಹೋಲಿಕೆ ಮಾಡಿ. ಮುಂದೆ ತಗುಲಬಹುದಾದ ಹೆಚ್ಚುವರಿ ವೆಚ್ಚಗಳ ಪರಿಣಾಮವನ್ನು ಕಡಿಮೆ ಅಂದಾಜು ಮಾಡಬೇಡಿ. ಅನಿರೀಕ್ಷಿತ ವೆಚ್ಚಗಳಿಗಾಗಿ ಆಕಸ್ಮಿಕ ನಿಧಿಯನ್ನು ಇಟ್ಟುಕೊಳ್ಳಿ. ಸಕಾಲಿಕ ಮರುಪಾವತಿಯು ನಿರ್ಣಾಯಕವಾಗಿರುತ್ತದೆ, ಏಕೆಂದರೆ ಗೃಹ ಸಾಲದಲ್ಲಿ ಡೀಫಾಲ್ಟ್ ಮಾಡುವುದು ನಿಮ್ಮ ಮನೆಯನ್ನು ಕಳೆದುಕೊಳ್ಳುವುದೂ ಒಳಗೊಂಡಂತೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು.