ಕ್ಲಾಸಿಕ್ ಪ್ರಯೋಜನಗಳೊಂದಿಗೆ ನಗದು ರಹಿತ ಅನುಕೂಲ
ಪ್ರತಿಯೊಂದು ವಹಿವಾಟು ಸುಲಭ, ಸುರಕ್ಷಿತ ಮತ್ತು ನಗದುರಹಿತವಾಗಿರುವ ಜಗತ್ತಿಗೆ ತೆರೆದುಕೊಳ್ಳಿರಿ. ಎಟಿಎಮ್ ಮತ್ತು ಪಿಒಎಸ್ ಗಳ ವಿಶಾಲ ಜಾಲಗಳಲ್ಲಿ ಇದು ಸ್ವೀಕೃತವಾಗುತ್ತದೆ. ನಿಮ್ಮ ಹಣವನ್ನು ಸುಲಭವಾಗಿ ಪಡೆಯಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಅನುಕೂಲತೆ ಮತ್ತು ರಕ್ಷಣೆಯನ್ನು ಗೌರವಿಸುವ ಆಧುನಿಕ ಗ್ರಾಹಕರಿಗೆ ಇದು ಹೊಂದುತ್ತದೆ.
ಪ್ರಮುಖ ಲಕ್ಷಣಗಳು
NFS ನೆಟ್ವರ್ಕ್ ಹೊಂದಿರುವ ಭಾರತದ ಒಂದು ಲಕ್ಷಕ್ಕೂ ಹೆಚ್ಚು ಎಟಿಎಮ್ ಮತ್ತು ಪಿಒಎಸ್ ಟರ್ಮಿನಲ್ ಗಳಲ್ಲಿ ಸ್ವೀಕರಿಸಲಾಗುತ್ತದೆ.
ಮೋಸದ ಬಳಕೆ ಅಥವಾ ಕಳ್ಳತನದಿಂದಾಗಿ ಆಗುವ ನಷ್ಟಕ್ಕೆ ವಿಮೆ
ಮ್ಯಾನೇಜ್ ಡೆಬಿಟ್ ಕಾರ್ಡ್ ಆಯ್ಕೆಯೊಂದಿಗೆ ಸುರಕ್ಷಿತ ವೈಶಿಷ್ಟ್ಯಗಳು
ಕಾರ್ಡ್ ಮಿತಿಗಳು
ನಗದು ಹಿಂಪಡೆಯುವ ಮಿತಿ
ದಿನಕ್ಕೆ ₹25,000
ಇ-ಕಾಮರ್ಸ್/ಪಿಒಎಸ್ ಮಿತಿ
ದಿನಕ್ಕೆ ₹75,000
24 ಗಂಟೆಗಳ ತುರ್ತು ಸಹಾಯವಾಣಿ
ನಿಮ್ಮ ಕಾರ್ಡ್ ಅನ್ನು ಬ್ಲಾಕ್ ಮಾಡಲು ಅಥವಾ ಸಹಾಯವನ್ನು ಪಡೆಯಲು, ಕರೆ ಮಾಡಿ
+91 802 202 1500
SMS ಮೂಲಕ ನಿಮ್ಮ ಡೆಬಿಟ್ ಕಾರ್ಡ್ ಅನ್ನು ಬ್ಲಾಕ್ ಮಾಡಿಸಿ
+91 988 065 4321 ಗೆ SMS ಕಳುಹಿಸಿ
ಬ್ಲಾಕ್ XXXX
XXXX ಡೆಬಿಟ್ ಕಾರ್ಡ್ ಸಂಖ್ಯೆಯ ಕೊನೆಯ 4 ಅಂಕೆಗಳು
ಶುಲ್ಕಗಳು
ಕಾರ್ಡ್ ವಿತರಣಾ ಶುಲ್ಕಗಳು
ಉಚಿತ
ಕಾರ್ಡ್ ಬದಲಿ ಶುಲ್ಕಗಳು
₹100 ಜೊತೆಗೆ ಜಿಎಸ್ಟಿ
ಎರಡನೇ ವರ್ಷದಿಂದ ವಾರ್ಷಿಕ ನಿರ್ವಹಣಾ ಶುಲ್ಕಗಳು (AMC)
₹200 ಜತೆಗೆ ಜಿಎಸ್ಟಿ
ನಿಮಗಾಗಿ ಇತರ ಆಯ್ಕೆಗಳನ್ನು ಅನ್ವೇಷಿಸಿ
ಪ್ರಶ್ನೆಗಳಿವೆಯೇ? ನಮ್ಮಲ್ಲಿ ಉತ್ತರಗಳಿವೆ
ಕೆಬಿಎಲ್ ಮನಿ ಪ್ಲಾಂಟ್ ಡೆಬಿಟ್ ಕಾರ್ಡ್ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಲಿಂಕ್ ಮಾಡಲಾಗಿದೆ. ನೀವು ಖರೀದಿ ಅಥವಾ ಹಣನ್ನು ಹಿಂಪಡೆಯುವಾಗ ನಿಮ್ಮ ಖಾತೆಯ ಬ್ಯಾಲೆನ್ಸ್ ನಿಂದ ಹಣ ಕಡಿತವಾಗುತ್ತದೆ. ಇದನ್ನು ನೀವು ಅಂಗಡಿಗಳಲ್ಲಿ, ಆನ್ ಲೈನ್ ಖರೀದಿಗಳಲ್ಲಿ, ಎಟಿಎಂ ಗಳಲ್ಲಿ ನಗದು ಹಿಂಪಡೆಯಲು ಅಥವಾ ಕಾಂಟಕ್ಟ್ ಲೆಸ್ ಪಾವತಿಗಳಿಗೆ ಇವನ್ನು ಬಳಸಬಹುದು. ನಿಮ್ಮ ಹಣವನ್ನು ನೀವು ಕೊಂಡೊಯ್ಯದೆ ನಿಮ್ಮ ಹಣ ನಿಮ್ಮ ಉಪಯೋಗಕ್ಕೆ ಒದಗುತ್ತದೆ.
ಕೆಬಿಎಲ್ ಮನಿ ಪ್ಲಾಂಟ್ ವೀಸಾ ಕ್ಲಾಸಿಕ್ ಡೆಬಿಟ್ ಕಾರ್ಡ್ ಹೊಂದಿರುವವರು ಎಲ್ಲಾ ಎಟಿಎಮ್ ಗಳಿಂದ ದಿನಕ್ಕೆ ₹25,000 ವರೆಗೆ; ಮತ್ತು ದೈನಂದಿನ ಪಾಯಿಂಟ್ ಆಫ್ ಸೇಲ್ ಗಳಿಂದ ₹75,000 ವರೆಗೆ , ಖಾತೆಯ ಬ್ಯಾಲೆನ್ಸ್ ಹೊಂದಿಕೊಂಡು, ಹಿಂಪಡೆಯಬಹುದು.
ಒಂದು ವೇಳೆ ನೀವು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡನ್ನು ಕಳೆದುಕೊಂಡಿದ್ದರೆ ಅಥವಾ ಅದು ಕಳ್ಳತನವಾಗಿದ್ದರೆ, ನಿಮ್ಮ ಖಾತೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನೀವು ತಕ್ಷಣ ಘಟನೆಯನ್ನು ಕರ್ಣಾಟಕ ಬ್ಯಾಂಕ್ಗೆ ವರದಿ ಮಾಡಬೇಕು. ನೀವು ಪರಿಸ್ಥಿತಿಯನ್ನು ವಿವರಿಸುವ ಇಮೇಲ್ ಅನ್ನು info@ktkbank.com ಗೆ ಕಳುಹಿಸಬಹುದು. ಅದರೊಂದಿಗೆ ನೀವು ನಮ್ಮ ಟೋಲ್-ಫ್ರೀ ಗ್ರಾಹಕ ಸಂಖ್ಯೆಗಳಿಗೆ 1800 425 1444 ಅಥವಾ 1800 572 8031 ಗೆ ಕರೆ ಮಾಡಬಹುದು. ಯಾವುದೇ ಅನಧಿಕೃತ ವಹಿವಾಟುಗಳನ್ನು ತಡೆಗಟ್ಟಲು ಮತ್ತು ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಲು ವರದಿ ಮಾಡುವುದು ಮುಖ್ಯವಾಗಿದೆ.
ಯಾವುದೇ ಮನಿಪ್ಲಾಂಟ್ ಎಟಿಎಮ್ ಅಥವಾ ಎನ್ ಎಫ್ ಎಸ್ ಎಟಿಎಮ್ ನಲ್ಲಿ ನೀವು ನಗದು ಹಿಂಪಡೆದ 24 ಗಂಟೆಗಳೊಳಗೆ ವ್ಯಾಪಾರಿ ಔಟ್ಲೆಟ್ಗಳಲ್ಲಿ ಪಾವತಿ ವಹಿವಾಟುಗಳಿಗಾಗಿ ನಿಮ್ಮ ಕಾರ್ಡ್ ಅನ್ನು ಸ್ವಯಂಚಾಲಿತವಾಗಿ ಸಕ್ರಿಯಗೊಳಿಸಲಾಗುತ್ತದೆ.
ಹೌದು, ನೀವು ಸಾಮಾನ್ಯವಾಗಿ ನಿಮ್ಮ ಡೆಬಿಟ್ ಕಾರ್ಡ್ ಅನ್ನು ಯಾವುದೇ ಎಟಿಎಮ್ ನಲ್ಲಿ ಬಳಸಬಹುದು. ಆದಾಗ್ಯೂ, ನಿಮ್ಮ ಬ್ಯಾಂಕ್ನ ನೆಟ್ವರ್ಕ್ಗಿಂತ ಹೊರಗಿನ ಎಟಿಎಮ್ ಅನ್ನು ಬಳಸುವುದರಿಂದ ಹೆಚ್ಚುವರಿ ಶುಲ್ಕಗಳು ಉಂಟಾಗಬಹುದು. ಕೆಲವು ಬ್ಯಾಂಕ್ಗಳು ಇತರ ನೆಟ್ವರ್ಕ್ಗಳೊಂದಿಗೆ ಒಪ್ಪಂದಗಳನ್ನು ಹೊಂದಿದ್ದು, ಉಚಿತ ಹಿಂಪಡೆಯುವಿಕೆ ಇರುತ್ತದೆ, ಈ ಕುರಿತು ನಿಮ್ಮ ಬ್ಯಾಂಕಿನ ಬಳಿ ಕೇಳಿ ತಿಳಿದುಕೊಳ್ಳಿ.
ನಿಮ್ಮ ಬ್ಯಾಂಕ್ ಖಾತೆಯಲ್ಲಿ ನೀವು ಈಗಾಗಲೇ ಠೇವಣಿ ಮಾಡಿದ ಹಣವನ್ನು ಡ್ರಾ ಮಾಡುವ ಮೂಲಕ ಹಣವನ್ನು ಖರ್ಚು ಮಾಡಲು ಡೆಬಿಟ್ ಕಾರ್ಡ್ ಇರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಕ್ರೆಡಿಟ್ ಕಾರ್ಡ್ ನಿಂದ ನಿಮಗೆ ಖರೀದಿಗಳಿಗೆ ನಿರ್ದಿಷ್ಟ ಮಿತಿಯವರೆಗೆ ಹಣವನ್ನು ಸಾಲ ಪಡೆಯಲು ಸಾಧ್ಯವಾಗುತ್ತದೆ, ಬಿಲ್ಲಿಂಗ್ ಅವಧಿ ಅಂತ್ಯದ ವೇಳೆಗೆ ಪೂರ್ಣವಾಗಿ ಪಾವತಿಸದಿದ್ದರೆ ನೀವು ಬಡ್ಡಿಯೊಂದಿಗೆ ಮರುಪಾವತಿ ಮಾಡಬೇಕಾಗುತ್ತದೆ.
ಎಸ್ ಎಮ್ ಎಸ್ ಬ್ಯಾಂಕಿಂಗ್ ಸೇವಾ ಸೌಲಭ್ಯದ ಜತೆಗಿನ ಡೆಬಿಟ್ ಕಾರ್ಡ್ಗಳಲ್ಲಿ ಡೆಬಿಟ್ ಕಾರ್ಡ್ ನಮೂಲಕ ನಡೆಸಿದ ವಹಿವಾಟುಗಳಿಗೆ ಸ್ವಯಂಚಾಲಿತ ಎಚ್ಚರಿಕಾ ಸಂದೇಶಗಳು ಸೇವೆಗಳಿಂದ ಲಭ್ಯವಿದೆ.
ಇದು ಹಣ ಹಿಂಪಡೆಯುವಿಕೆಗಳು, ಖರೀದಿಗಳು ಅಥವಾ ಯಾವುದೇ ಇತರ ಕಾರ್ಡ್ ಚಟುವಟಿಕೆಗಳಿಗೆ ಎಚ್ಚರಿಕೆಗಳನ್ನು ಒಳಗೊಂಡಿರಬಹುದು. ಈ ಸೇವೆಯು ವಹಿವಾಟುಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಯಾವುದೇ ಅನಧಿಕೃತ ಬಳಕೆಯನ್ನು ಬೇಗನೇ ಪತ್ತೆಹಚ್ಚಲು ಸಹಾಯ ಮಾಡುತ್ತದೆ.
ಡೆಬಿಟ್ ಕಾರ್ಡ್ನಲ್ಲಿರುವ RFID (ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್) ಚಿಪ್ ಕಾಂಟಾಕ್ಟ್ ಲೆಸ್ ಪಾವತಿಗಳಿಗೆ ಅನುಮತಿಸುತ್ತದೆ. ಕಾರ್ಡ್ ಅನ್ನು ಕಾರ್ಡ್ ರೀಡರ್ನ ಹತ್ತಿರ ಹಿಡಿದಾಗ ಅದರೊಂದಿಗೆ ಸಂಪರ್ಕ ಪಡೆಯಲು ರೇಡಿಯೋ ತರಂಗಗಳನ್ನು ಬಳಸುತ್ತದೆ. ಈ ತಂತ್ರಜ್ಞಾನವು ಕಾರ್ಡ್ ಅನ್ನು ರೀಡರ್ಗೆ ಸೇರಿಸುವ ಅಗತ್ಯವಿಲ್ಲದೇ ವೇಗವಾಗಿ ಮತ್ತು ಹೆಚ್ಚು ಅನುಕೂಲಕರ ವಹಿವಾಟುಗಳನ್ನು ಸಕ್ರಿಯಗೊಳಿಸುತ್ತದೆ.
ಸಿವಿವಿ (ಕಾರ್ಡ್ ವೆರಿಫಿಕೇಷನ್ ವ್ಯಾಲ್ಯು) ಇದು ಮೂರು ಅಥವಾ ನಾಲ್ಕು ಅಂಕಿಯ ಕೋಡ್ ಆಗಿದೆ. ಇದನ್ನು ಆನ್ಲೈನ್ ಅಥವಾ ಫೋನ್ ವಹಿವಾಟುಗಳಿಗೆ ಹೆಚ್ಚುವರಿ ಭದ್ರತಾ ಕ್ರಮವಾಗಿ ಬಳಸಲಾಗುತ್ತದೆ. ವಹಿವಾಟು ಮಾಡುವ ವ್ಯಕ್ತಿಯ ಸ್ವಾಧೀನದಲ್ಲಿ ಕಾರ್ಡ್ ಇದೆಯೇ ಎಂದು ಪರಿಶೀಲಿಸಲು ಇದು ಸಹಾಯ ಮಾಡುತ್ತದೆ.
ಕೆಬಿಎಲ್ ಮೊಬೈಲ್ ಪ್ಲಸ್ ಡೌನ್ಲೋಡ್ ಮಾಡಲು ಹೀಗೆ ಮಾಡಿ:
ಮೊಬೈಲ್ ಫೋನ್ ನಲ್ಲಿ ಗೂಗಲ್ ಪ್ಲೇಸ್ಟೋರ್ ಅಥವಾ ಆಪ್ ಸ್ಟೋರ್ ನಲ್ಲಿ ಕರ್ಣಾಟಕ ಬ್ಯಾಂಕಿನ ʼಕೆಬಿಎಲ್ ಮೊಬೈಲ್ ಪ್ಲಸ್ʼ ಹುಡುಕಿ ಅನಂತರ ಅದನ್ನು ಆಯ್ದು ನಿಮ್ಮ ಮೊಬೈಲ್ ಫೋನ್ಗೆ ಇನ್ಸ್ಟಾಲ್ ಮಾಡಿ/ಅಳವಡಿಸಿಕೊಳ್ಳಿ
ಪ್ರತಿ ಹಂತದಲ್ಲೂ ಭದ್ರತೆಯ ಭರವಸೆಯೊಂದಿಗೆ ತಡೆರಹಿತ ವಹಿವಾಟುಗಳ ಪ್ರಯೋಜನಗಳನ್ನು ಪಡೆಯಿರಿ. ಕಳೆದುಹೋದ ಕಾರ್ಡ್‌ಗೆ ಶೂನ್ಯ ಹೊಣೆಗಾರಿಕೆ ಎಂದರೆ ನಿಮ್ಮ ಕಾರ್ಡ್ ಕಾಣೆಯಾದಾಗ ನೀವು ಎಂದಿಗೂ ಹಣಕಾಸಿನ ಅಪಾಯವನ್ನು ಹೊಂದಿರುವುದಿಲ್ಲ ಮತ್ತು ಇಲ್ಲಿನ ಹೆಚ್ಚಿನ ಭದ್ರತಾ ಪ್ರೋಟೋಕಾಲ್‌ಗಳು ವಂಚನೆಯಿಂದ ರಕ್ಷಿಸುತ್ತವೆ. ಎಟಿಎಮ್ ಗಳು ಮತ್ತು ಪಿಒಎಸ್ ಟರ್ಮಿನಲ್‌ಗಳ ವ್ಯಾಪಕ ನೆಟ್‌ವರ್ಕ್‌ಗಳಲ್ಲಿ ಇದು ಸ್ವೀಕೃತವಾಗಿದೆ. ಸರಳ ಕಾರ್ಯವಿಧಾನದಿಂದಾಗಿ ನಿಮ್ಮ ಹಣ ನಿಮ್ಮೊಡನೆಯೇ ಇರುತ್ತದೆ. ಇದು ಆಧುನಿಕ ಬ್ಯಾಂಕಿಂಗ್ ಗ್ರಾಹಕ ವರ್ಗಕ್ಕೆ ತಕ್ಕುದಾಗಿ ಭಾರತಾದ್ಯಂತ ವ್ಯಾಲೆಟ್‌ಗಳಲ್ಲಿ ಪ್ರಧಾನವಾಗಿದೆ.
ಕ್ರೆಡಿಟ್ ಕಾರ್ಡ್ ಬಡ್ಡಿದರವು ಸಾಮಾನ್ಯವಾಗಿ ಹೆಚ್ಚಿರುತ್ತದೆ. ಇದಕ್ಕೆ ಕಾರಣ ಅವುಗಳಲ್ಲಿರುವ ರಿಸ್ಕ್ ಕಾರಣದಿಂದ. ಇವಕ್ಕೆ ಬಡ್ಡಿದರವು ಪಾವತಿ ದಿನಾಂಕ ಮೀರಿದ ಬ್ಯಾಲೆನ್ಸ್ಗಳಿಗೆ ಅನ್ವಯಿಸುತ್ತದೆ. ವಾರ್ಷಿಕ ಸರಾಸರಿ ಬಡ್ಡಿದರ ಮತ್ತು ಬಡ್ಡಿ –ಮುಕ್ತ ಅವಧಿಯ ಕುರಿತಾದ ಅರ್ಥೈಸುವಿಕೆ ಇಲ್ಲಿ ಮುಖ್ಯವಾಗುತ್ತದೆ. ಡೆಬಿಟ್ ಕಾರ್ಡ್ ಗಳು ಈಗಾಗಲೇ ಹಣವನ್ನು ಬಳಸುವುದರಿಂದ ಅವು ಬಡ್ಡಿದರಗಳನ್ನು ಹೊಂದಿರುವುದಿಲ್ಲ. ಕೆಲವು ಬ್ಯಾಂಕ್‌ಗಳು ಡೆಬಿಟ್ ಕಾರ್ಡ್ ವಹಿವಾಟಿನ ಮೇಲೆ ಪ್ರೋತ್ಸಾಹ ಅಥವಾ ಕ್ಯಾಶ್‌ಬ್ಯಾಕ್ ನೀಡುತ್ತವೆ.
ನಿಮ್ಮ ಖಾತೆಯಮೇಲೆ ಸದಾ ನಿಗಾಇರಲಿ. ವಹಿವಾಟುಗಳನ್ನು ಗಮನಿಸಿ. ನೀವು ಡೆಬಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದಾಗ ಯಾವುದೇ ಅನಧಿಕೃತ ಚಟುವಟಿಕೆಯನ್ನು ಇದರಿಂದ ಗುರುತಿಸಬಹುದು. ನಿಮ್ಮ ಕಾರ್ಡ್ ವಿವರಗಳು ಅಥವಾ ಪಿನ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.ಎಟಿಎಮ್ ಅಥವಾ ಪಿಒಎಸ್ ಟರ್ಮಿನಿಲ್ ಗಳಲ್ಲಿ ಡೆಬಿಟ್ ಕಾರ್ಡ್ ಬಳಸುವಾಗ ಜಾಗರೂಕರಾಗಿರಿ.
ಬ್ಯಾಂಕ್ ಕಾರ್ಡ್ ಗಳು ವಿವಿಧ ಅನುಕೂಲತೆಗಳನ್ನು ಕೊಡುವ ನಮ್ಮ ಹಣಕಾಸು ಚಟುವಟಿಕೆಗಳ ಅಗತ್ಯ ಸಾಧನವಾಗಿದೆ. ನಿಮ್ಮ ದಿನವಹಿ ವಹಿವಾಟುಗಳಾದ ಬ್ಯಾಂಕಿನಿಂದ ನಿಮ್ಮ ಹಣದ ಹಿಂಪಡೆಯುವಿಕೆ, ದೈನಂದಿನ ಖರೀದಿಗಳು ಇತ್ಯಾದಿಗಳಿಗೆ ಇವು ಸಹಕಾರಿಯಾಗಿದೆ. ಕ್ರೆಡಿಟ್ ಕಾರ್ಡ್ ಗಳು ನೀವು ಮಾಡಬೇಕಾದ ಪಾವತಿ ಮುಂದೂಡಿಕೆಯಂತಹ ಅನುಕೂಲತೆಗಳನ್ನು ಒದಗಿಸುತ್ತದೆ. ಜತೆಗೆ, ಕ್ಯಾಶ್ ಬ್ಯಾಕ್ ಆಫರ್ ಗಳು ಮತ್ತು ಅದಕ್ಕೆ ಸಂಬಂಧಿಸಿದ ರಿವಾರ್ಡ್ ಗಳನ್ನೂ ಒದಗಿಸುತ್ತದೆ. ಜಾಗರೂಕವಾಗಿ ಮಾಡುವ ಖರ್ಚು-ವೆಚ್ಚಗಳಿಗೆ ಪ್ರಿಪೈಡ್ ಕಾರ್ಡ್ ಅತ್ಯಂತ ಸೂಕ್ತ. ಅದು ನಿಮ್ಮ ಖರ್ಚು-ವೆಚ್ಚಕ್ಕೆ ನಿಯಂತ್ರಕದಂತೆ ಇರುತ್ತದೆ. ವ್ಯಾಪಾರ ಕಾರ್ಡ್‌ಗಳು ನಿರ್ದಿಷ್ಟವಾಗಿ ಕಂಪನಿಗಳ ಮತ್ತು ಉದ್ಯಮಿಗಳ ಅಗತ್ಯಗಳನ್ನು ಪೂರೈಸುತ್ತವೆ, ವೆಚ್ಚ ನಿರ್ವಹಣೆಯನ್ನು ಸುಗಮಗೊಳಿಸುತ್ತವೆ ಮತ್ತು ಹೆಚ್ಚಿನ ಕ್ರೆಡಿಟ್ ಮಿತಿಗಳು ಮತ್ತು ವಿವರವಾದ ಖರ್ಚು ವರದಿಗಳನ್ನು ನೀಡುತ್ತವೆ.