ಕೆ‌ಬಿ‌ಎಲ್ ಸುವಿಧಾ ಓವರ್‌ಡ್ರಾಫ್ಟ್ ಸಾಲ

ಇದು ನಿಮ್ಮ ವೈಯಕ್ತಿಕ ಅಗತ್ಯತೆಗಳಿಗೆ ಅನುಗುಣವಾದ ಸೌಲಭ್ಯವಾಗಿದ್ದು, ನಿಮಗೆ ಬೇಕಾಗುವ ಸೌಕರ್ಯ ಮತ್ತು ಹೊಂದಾಣಿಕೆಯನ್ನು ನೀಡುತ್ತದೆ. ಇದು ಅನಿರೀಕ್ಷಿತ ವೆಚ್ಚಕ್ಕಾಗಿ, ಕನಸಿನ ರಜೆಗಾಗಿ ಅಥವಾ ಹಣಕಾಸಿನ ರಕ್ಷಣೆಗಾಗಿ, ಆಸ್ತಿಯ ಮೇಲಿನ ಈ ಓವರ್‌ಡ್ರಾಫ್ಟ್ ಸಾಲವನ್ನು ನಿಮಗೆ ತ್ವರಿತವಾಗಿ ಹಣಕಾಸನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ನಿಮಗೆ ಹಣದ ಅಗತ್ಯವಿರುವಾಗ ದೀರ್ಘಾವಧಿಯ ಕಾಯುವಿಕೆ ಇಲ್ಲದೆ, ಸರಳವಾದ ಅರ್ಜಿ ಪ್ರಕ್ರಿಯೆ ಹಾಗೂ ತ್ವರಿತ ಮಂಜೂರಾತಿಯ ಮೂಲಕ ನೀಡುವುದರಿಂದ ಇದು ನಿಮಗೆ ಸೂಕ್ತವಾಗಿದೆ. ಈ ಸೌಲಭ್ಯವು ಸಂಬಳ ಪಡೆಯುವ ವ್ಯಕ್ತಿಗಳಿಗೆ, ಉಪಯೋಗಿಸಬಹುದಾದ ಆದಾಯವನ್ನು ಹೊಂದಿರುವ ನಿವೃತ್ತರಿಗೆ ಹಾಗೂ ನಮ್ಮ ಆದಾಯದ ಮಾನದಂಡಗಳನ್ನು ಪೂರೈಸುವ ಇತರರಿಗೆ ತಕ್ಕುದಾಗಿದೆ. ಸಾಲವು ಸ್ಪರ್ಧಾತ್ಮಕ ಬಡ್ಡಿದರಗಳು ಹಾಗೂ ಒಗ್ಗುವ ಮರುಪಾವತಿಯ ಅವಕಾಶದೊಂದಿಗೆ ನಿಮಗೆ ಅಗತ್ಯವಿರುವಾಗ ನಿಮಗೆ ಹಣಕಾಸಿನ ಅಗತ್ಯತೆಯನ್ನು ಪೂರೈಸುತ್ತದೆ. Read more

ಈ ಸಾಲವು ನಿಮಗಾಗಿ ಏಕೆ

ನಿಮಗೆ ಅಗತ್ಯಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ

ತಕ್ಷಣದ ಹಣಕಾಸಿನ ಅಗತ್ಯತೆಗಳಿಗಾಗಿ ತ್ವರಿತ ಮಂಜೂರಾತಿ

ವೈಯಕ್ತಿಕ ವೆಚ್ಚಗಳ ಶ್ರೇಣಿಗೆ ಸೂಕ್ತವಾಗಿದೆ

ಹೊಂದಿಕೊಳ್ಳುವ ನಿಯಮಗಳೊಂದಿಗೆ ನಿರ್ವಹಣೆ ಮಾಡಲು ಸುಲಭ

ತಕ್ಷಣವೇ ನೀಡಬೇಕಾದ ಪಾವತಿ ಮೊತ್ತ

ಭದ್ರತೆಯ ಮೌಲ್ಯದ 33.33% ವರೆಗೆ.

ಸಾಲ ಮರುಪಾವತಿ

ಓವರ್‌ಡ್ರಾಫ್ಟ್ ನಿಯಮಗಳ ಪ್ರಕಾರ ನಿಮ್ಮ ಸಾಲದ ಪಾವತಿಗಳನ್ನು ಬೇಡಿಕೆಯ ಮೇರೆಗೆ ಮಾಡಿ.

ಸಂಬಳ ಪಡೆಯುವ ವ್ಯಕ್ತಿಗಳಿಗೆ

ನಿಮ್ಮ ಇತ್ತೀಚಿನ ವಾರ್ಷಿಕ ಟೇಕ್-ಹೋಮ್ ಸಂಬಳದ 24 ಪಟ್ಟು ಅಥವಾ ₹25 ಲಕ್ಷ, ಯಾವುದು ಕಡಿಮೆಯೋ ಆ ಹಣಕಾಸು ಸಹಾಯದ ಸೌಲಭ್ಯವನ್ನು ಪಡೆದುಕೊಳ್ಳಿ.

ಸ್ವಯಂ ಉದ್ಯೋಗಿಗಳಿಗೆ

ಕಳೆದ ಎರಡು ವರ್ಷಗಳಿಂದ ನಿಮ್ಮ ಸರಾಸರಿ ವಾರ್ಷಿಕ ಆದಾಯದ ಎರಡು ಪಟ್ಟು ಅಥವಾ ₹ 25 ಲಕ್ಷ, ಯಾವುದು ಕಡಿಮೆಯೋ ಆ ಹಣಕಾಸು ಸಹಾಯದ ಸೌಲಭ್ಯವನ್ನು ಪಡೆದುಕೊಳ್ಳಿ.

ಸಾಲಕ್ಕಾಗಿ ಮೇಲಾಧಾರ

ಅನ್ವಯಿಸುವ ಸಾಲದ ಮಿತಿಯ ಕನಿಷ್ಠ 150% ಮೌಲ್ಯದೊಂದಿಗೆ ವಸತಿ/ವಾಣಿಜ್ಯ ಆಸ್ತಿ ಅಥವಾ ಸಲೀಸಾಗಿ ಮಾರಬಹುದಾದ ಭದ್ರತೆಯನ್ನು ಸಾಲಕ್ಕೆ ಮೇಲಾಧಾರವಾಗಿ ಅಡಮಾನ ಇಡಬೇಕಾಗುತ್ತದೆ.

ಖಾತರಿದಾರ

ನಿಮ್ಮ ಸಂಗಾತಿ (ಅನ್ವಯವಾದಲ್ಲಿ) ಅಥವಾ ಅರ್ಹ  ಇತರರು ಸಾಲಕ್ಕೆ ಗ್ಯಾರಂಟಿಯಾಗಿ ಕಾರ್ಯನಿರ್ವಹಿಸಬಹುದು.

ವಿಷಯಗಳನ್ನು ಸರಳ ಮತ್ತು ನೇರಗೊಳಿಸಿ

ಸ್ಮಾರ್ಟ್ ಖರ್ಚು ಮತ್ತು ಉಳಿತಾಯಕ್ಕಾಗಿ ಸ್ಮಾರ್ಟ್ ಕ್ಯಾಲ್ಕುಲೇಟರ್

ಇ ಎಮ್ ಐ ಕ್ಯಾಲ್ಕುಲೇಟರ್

ಸಾಲದ ಮೊತ್ತ
25000 1000000
ಬಡ್ಡಿ ದರ
2% 18%
ಸಾಲದ ಅವಧಿ
1 ತಿಂಗಳುಗಳು 60 ತಿಂಗಳುಗಳು

ನೀವು ಪಾವತಿಸುವಿರಿ

₹13,800/ತಿಂಗಳುಗಳು

ನಿಮಗಾಗಿ ಯಾವ ಉತ್ಪನ್ನವು ಖಚಿತವಾಗಿಲ್ಲವೇ?

ಒಟ್ಟಿಗೆ ಅತ್ಯುತ್ತಮ ಫಿಟ್ ಅನ್ನು ಕಂಡುಹಿಡಿಯೋಣ

  • ಯಾವುದೇ ಸ್ಪ್ಯಾಮ್ ಕರೆಗಳಿಲ್ಲ
  • ಮೀಸಲಾದ ಕೆಬಿಎಲ್ ತಜ್ಞರು
  • ನಿಮ್ಮ ಸಮಯಕ್ಕೆ ಕರೆಯನ್ನು ಹೊಂದಿಸಿ

ಅರ್ಹತೆ

ಭಾರತೀಯ ಪಾಸ್‌ಪೋರ್ಟ್ ಹೊಂದಿರುವ 21 ವರ್ಷ ವಯಸ್ಸಿನ ವ್ಯಕ್ತಿಗಳು

ಭಾರತೀಯ ನಿವಾಸಿ
  • ಸಂಬಳ ಪಡೆಯುವ ವ್ಯಕ್ತಿ: ಮಾಸಿಕ ವೇತನ ₹ 10,000
  • ಸ್ವಯಂ ಉದ್ಯೋಗಿ: ವಾರ್ಷಿಕ ಆದಾಯ ₹1,20,000
  • NRI ಗಳಿಗೆ ಅನ್ವಯವಾಗುವ ನಿರ್ದಿಷ್ಟ ನಿಯಮಗಳು ಮತ್ತು ಷರತ್ತುಗಳ ಮಾದರಿ

ಅಗತ್ಯವಿರುವ ದಾಖಲೆಗಳು

  • ಅರ್ಜಿದಾರರ/ಸಾಲಗಾರ, ನಿರ್ದೇಶಕರು/ಪಾಲುದಾರರು/ಸಹ ಬಾಧ್ಯಸ್ಥರು/ಜಾಮೀನುದಾರರ ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳು
  • ನಿರ್ದೇಶಕರು/ಪಾಲುದಾರರು/ಸಹ ಬಾಧ್ಯಸ್ಥರು/ಖಾತರಿದಾರರ ಆದಾಯ ತೆರಿಗೆ ರಿಟರ್ನ್ಸ್
  • ತೆರಿಗೆ ಪಾವತಿಸಿದ ರಸೀದಿಗಳು
  • ಆದಾಯ ಪುರಾವೆ
  • ಬ್ಯಾಂಕ್ ಲೆಕ್ಕವಿವರಣೆ

1,2,3 ಹಂತಗಳು, ಅಷ್ಟು ಸುಲಭ...

3 ಸರಳ ಹಂತಗಳಲ್ಲಿ ಕೆ‌ಬಿ‌ಎಲ್ ಸುವಿಧಾ ಓವರ್‌ಡ್ರಾಫ್ಟ್ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಿ

ಹಂತ 1

ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ

ನಿಮ್ಮ ಹತ್ತಿರದ ಕರ್ನಾಟಕ ಬ್ಯಾಂಕ್ ಶಾಖೆಗೆ ಹೋಗಿ

ಹಂತ 2

ನಿಮ್ಮ ಮೂಲ ವಿವರಗಳೊಂದಿಗೆ ಪ್ರಾರಂಭಿಸಿ

ನಿಮ್ಮ ಸಾಲದ ಅವಶ್ಯಕತೆಯೊಂದಿಗೆ ನಿಮ್ಮ ಮೂಲಭೂತ ವಿವರಗಳನ್ನು ಒದಗಿಸಿ.

ಹಂತ 3

ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ

ನಿಮ್ಮ ಖಾತೆಯನ್ನು ತೆರೆದಾಗ ನಮ್ಮ ಶಾಖೆಯ ಅಧಿಕಾರಿಗಳು ನಿಮಗೆ ತಿಳಿಸುತ್ತಾರೆ

1,2,3 ಹಂತಗಳು, ಅಷ್ಟು ಸುಲಭ...

ನಿಮಗಾಗಿ ಇರಬಹುದಾದ ಇತರ ಆಯ್ಕೆಗಳನ್ನು ವೀಕ್ಷಿಸಿ

ಸಾವಿರಾರು ಜನರ ನಂಬಿಕೆಯ ಉತ್ಕೃಷ್ಟ ಆರ್ಥಿಕ ಸೇವೆ

ಕೆ‌ಬಿ‌ಎಲ್ ಅಡಮಾನ ಸಾಲ

  • ಗರಿಷ್ಠ ₹7.5 ಕೋಟಿಯವರೆಗೆ
  • ಬಡ್ಡಿ ದರ 9.93*% -12.93*% ಪ್ರತಿ ವರ್ಷಕ್ಕೆ
  • 120 ತಿಂಗಳವರೆಗಿನ ಸಾಲದ ಅವಧಿ

ಕೆ‌ಬಿ‌ಎಲ್ ಗೃಹ ಟಾಪ್-ಅಪ್ ಸಾಲ

  • ಗರಿಷ್ಠ ₹1 ಕೋಟಿವರೆಗಿನ ಸಾಲದ ಮೊತ್ತ
  • ಬಡ್ಡಿ ದರ 9.27*% - 10.95*% ಪ್ರತಿ ವರ್ಷಕ್ಕೆ.
  • 120 ತಿಂಗಳವರೆಗಿನ ಸಾಲದ ಅವಧಿ/span>

ಸರಳ ಮಾಹಿತಿಗಳ ಮೂಲಕ ಸಾಲವನ್ನು ಅರ್ಥೈಸಿ

ಚುಟುಕು ಮಾಹಿತಿಗಳು ನಿಮಗಾಗಿ

match-made
ಬ್ಯಾಂಕಿಂಗ್ ಸ್ವರ್ಗದಲ್ಲಿ ಮಾಡಿದ ಹೊಂದಾಣಿಕೆ: ಉಳಿತಾಯ ಖಾತೆ ಆವೃತ್ತಿ

navigating-pers
ನಿಮ್ಮ ಆರಂಭಿಕ 20 ರ ದಶಕದಲ್ಲಿ ವೈಯಕ್ತಿಕ ಸಾಲಗಳನ್ನು ನ್ಯಾವಿಗೇಟ್ ಮಾಡುವುದು- ಇದು ಒಳ್ಳೆಯ ಐಡಿಯಾವೇ?

savings-accoun
ಉಳಿತಾಯ ಖಾತೆ: ರೂಢಿಗಳನ್ನು ಮುರಿಯುವುದು ಮತ್ತು ಸಂಪತ್ತನ್ನು ನಿರ್ಮಿಸುವುದು

vehicle-loans
ಮಹತ್ವಾಕಾಂಕ್ಷೆಯ ಡೆಲಿವರಿ ಪಾಲುದಾರರು ಮತ್ತು ಕ್ಯಾಬ್ ಚಾಲಕರಿಗೆ ವಾಹನ ಸಾಲಗಳು

why-should
ನೀವು ಅರೆ ಸುಸಜ್ಜಿತ ಅಪಾರ್ಟ್ಮೆಂಟ್ಗೆ ಏಕೆ ಹೋಗಬೇಕು?

ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ
ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ

ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ
ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ

the-wisdom
ನಿವೃತ್ತ ಜನರಿಗೆ ತ್ವರಿತ ಚಿನ್ನದ ಸಾಲಗಳ ಬುದ್ಧಿವಂತಿಕೆ - ಆರ್ಥಿಕ ಭದ್ರತೆಯನ್ನು ಅನ್ಲಾಕ್ ಮಾಡಿ

ಪ್ರಶ್ನೆಗಳಿವೆಯೇ? ನಮ್ಮ ಬಳಿ ಉತ್ತರಗಳಿವೆ

ಈ ಸಾಲದ ಮರುಪಾವತಿಯ ನಿಯಮಗಳು ಯಾವುವು?

ಓವರ್‌ಡ್ರಾಫ್ಟ್ ಸೌಲಭ್ಯದ ನಿಯಮಗಳ ಪ್ರಕಾರ ಮರುಪಾವತಿಯು ಬೇಡಿಕೆಯ ಮೇರೆಗೆ, ನಿಮ್ಮ ಹಣಕಾಸು ನಿರ್ವಹಣೆಯಲ್ಲಿ ಹೊಂದಾಣಿಕೆಯನ್ನು ನೀಡುತ್ತದೆ

OD ಎಂದರೆ ಓವರ್‌ಡ್ರಾಫ್ಟ್, ಒಂದು ರೀತಿಯ ಕ್ರೆಡಿಟ್ ಸೌಲಭ್ಯವಾಗಿದ್ದು ನಿಮ್ಮ ಖಾತೆಯಲ್ಲಿ ಯಾವುದೇ ಬ್ಯಾಲೆನ್ಸ್ ಇಲ್ಲದಿದ್ದರೂ ಸಹ ಅಥವಾ ಶೂನ್ಯಕ್ಕಿಂತ ಕಡಿಮೆಯಿದ್ದರೂ ಸಹ ಹಣವನ್ನು ತೆಗೆದುಕೊಳ್ಳಲು ನಿಮಗೆ ಅನುಮತಿಯನ್ನು ನೀಡುತ್ತದೆ. ಅಂದರೆ, ಇದು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಒಂದು ನಿರ್ದಿಷ್ಟ ಮಿತಿಯವರೆಗೆ ಪೂರ್ವ-ಅನುಮೋದಿತ ಸಾಲವನ್ನು ಹೊಂದಿರುವಂತೆ ಇದ್ದು, ಅದನ್ನು ನೀವು ಯಾವಾಗ ಬೇಕಾದರೂ ಬಳಸಬಹುದು.

ಓವರ್‌ಡ್ರಾಫ್ಟ್‌ಗೆ ಭದ್ರತೆಯಾಗಿ ನೀವು ಮೇಲಾಧಾರವನ್ನು ಒದಗಿಸಬೇಕಾಗುತ್ತದೆ. ಇದು ವಸತಿ ಅಥವಾ ವಾಣಿಜ್ಯ ಆಸ್ತಿಗಳ ಅಡಮಾನ ಅಥವಾ ಲಿಕ್ವಿಡ್‌ ಭದ್ರತೆಗಳ ರೂಪದಲ್ಲಿರಬಹುದು. ಮೇಲಾಧಾರದ ಮೌಲ್ಯವು ಸಾಲದ ಮಿತಿಯ ಕನಿಷ್ಠ 150% ಆಗಿರಬೇಕು. ಇದು ಸಾಲ ನೀಡುವುದು ಸುರಕ್ಷಿತ ಎನ್ನುವುದನ್ನು ಖಚಿತಪಡಿಸುತ್ತದೆ. ನಿಮಗೆ ಸಾಲ ಕೊಡಬಹುದು ಎಂದು ಭರವಸೆ ನೀಡುತ್ತದೆ.

ಸುವಿಧಾ ಓಡಿ ಯೋಜನೆಗೆ ಬಡ್ಡಿದರಗಳು ವರ್ಷಕ್ಕೆ 11.68% ಬಡ್ಡಿ ದರದಿಂದ ಪ್ರಾರಂಭವಾಗುತ್ತವೆ. ನಿಮ್ಮ ಆದಾಯ, ಕ್ರೆಡಿಟ್ ಇತಿಹಾಸ ಹಾಗೂ ನಿಮ್ಮ ಮೇಲಾಧಾರದ ಮೌಲ್ಯ ಮುಂತಾದ ವಿವಿಧ ಅಂಶಗಳನ್ನು ಅವಲಂಬಿಸಿ ಬಡ್ಡಿದರ ದರವು ಬದಲಾಗಬಹುದು. ನಮ್ಮ ಸ್ಪರ್ಧಾತ್ಮಕ ದರಗಳು ನಿಮ್ಮ ಓವರ್‌ಡ್ರಾಫ್ಟ್ ಸೌಲಭ್ಯವನ್ನು ಕೈಗೆಟುಕುವ ಬೆಲೆಯಲ್ಲಿದೆ ಹಾಗೂ ನಿಮ್ಮ ಹಣಕಾಸಿನ ಪರಿಸ್ಥಿತಿಗೆ ಹೊಂದಿಕೆಯಾಗುತ್ತದೆ ಎನ್ನುವುದನ್ನು ಖಚಿತಪಡಿಸುತ್ತದೆ.

ಈ ಸಾಲವು 24 ತಿಂಗಳವರೆಗೆ ಹೊಂದಿಕೊಳ್ಳುವ ಮರುಪಾವತಿ ಅವಧಿಯನ್ನು ನೀಡುತ್ತದೆ ಮತ್ತು ಯಾವುದೇ ಒತ್ತಡವಿಲ್ಲದೆ ನಿಮ್ಮ ಹಣಕಾಸು ಹೊಂದಾಣಿಕೆಯನ್ನು ಯೋಜಿಸಲು ನಿಮಗೆ ಅವಕಾಶ ನೀಡುತ್ತದೆ.

ನಿಮಗೆ ಹೆಚ್ಚು ಅಗತ್ಯವಿರುವಾಗ ಕೆ‌ಬಿ‌ಎಲ್ ಸುವಿಧಾ ಓವರ್‌ಡ್ರಾಫ್ಟ್ ಸಾಲ

ಹಠಾತ್ ವೆಚ್ಚಗಳು, ನೀವು ಬಯಸುವ ರಜೆಗಳು ಅಥವಾ ಸರಳವಾದ ಹಣಕಾಸಿನ ರಕ್ಷಣೆಗೆ ಸೂಕ್ತವಾಗಿದೆ, ನಮ್ಮ ಓವರ್‌ಡ್ರಾಫ್ಟ್ ಸೌಲಭ್ಯವು ಹಣಕಾಸಿನ ಸಹಾಯವು ನಿಮಗೆ ತ್ವರಿತವಾಗಿ ದೊರಕುವಂತೆ ವಿನ್ಯಾಸಗೊಳಿಸಲಾಗಿದೆ. ಗರಿಷ್ಠ ₹25 ಲಕ್ಷದವರೆಗಿನ ಸಾಲದ ಮೊತ್ತ ಮತ್ತು ಸ್ಪರ್ಧಾತ್ಮಕ ಬಡ್ಡಿ ದರಗಳು ವರ್ಷಕ್ಕೆ 14% ಬಡ್ಡಿ ದರದಿಂದ ಪ್ರಾರಂಭವಾಗುತ್ತವೆ, ನಿಮ್ಮ ಜೀವನದ ಅನಿರೀಕ್ಷಿತ ಕ್ಷಣಗಳನ್ನು ನಿಭಾಯಿಸಲು ನೀವು ಈಗ ಸಜ್ಜಾಗಿದ್ದೀರಿ. ನಮ್ಮ ಓವರ್‌ಡ್ರಾಫ್ಟ್ ಸಾಲವು ಸಂಬಳ ಪಡೆಯುವ ವ್ಯಕ್ತಿಗಳು ಮತ್ತು ಸ್ವಯಂ ಉದ್ಯೋಗಿ ವೃತ್ತಿಪರರ ಅವಶ್ಯಕತೆಗಳನ್ನು ಪೂರೈಸುತ್ತದೆ. ಸೂಕ್ತವಾದ ಹಣಕಾಸು ಸಾಲದ ಮಿತಿಗಳನ್ನು ಮತ್ತು 24 ತಿಂಗಳವರೆಗೆ ಅನುಕೂಲಕರ ಮರುಪಾವತಿ ಅವಧಿಯನ್ನು ನೀಡುತ್ತದೆ. ನಿಮಗೆ ಅಗತ್ಯವಿರುವಾಗ ನಿಮಗೆ ಅಗತ್ಯವಿರುವ ಹಣಕಾಸಿನ ಬೆಂಬಲವನ್ನು ನೀವು ಹೊಂದಿರುವಿರಿ ಎನ್ನುವುದನ್ನು ಖಚಿತಪಡಿಸುತ್ತದೆ.

ನಮ್ಮ ದರಗಳು ಸ್ಪರ್ಧಾತ್ಮಕವಾಗಿದ್ದು ವರ್ಷಕ್ಕೆ 11.68*% ಅಡ್ಡಿ ದರದೊಂದಿಗೆ ಪ್ರಾರಂಭವಾಗುತ್ತವೆ. ನಿಮಗೆ ಅಗತ್ಯವಿರುವಾಗ ಹೆಚ್ಚುವರಿ ಹಣವನ್ನು ಪಡೆಯಲು ಸಾಲ ಸೌಲಭ್ಯವನ್ನು ರೂಪಿಸಲಾಗಿದೆ. ಸಾಮಾನ್ಯ ರೀತಿಯ ಸಾಲಗಳಿಗಿಂತ ಭಿನ್ನವಾಗಿ, ಓವರ್‌ಡ್ರಾಫ್ಟ್ ಸಾಲದ ಮೇಲಿನ ಬಡ್ಡಿಯನ್ನು ಬಳಸಿದ ಮೊತ್ತದ ಮೇಲೆ ಮಾತ್ರವೇ ಲೆಕ್ಕಹಾಕಲಾಗುತ್ತದೆ. ಮಂಜೂರಾದ ಒಟ್ಟು ಸಾಲದ ಮೇಲೆ ಅಲ್ಲ. ನಿಮ್ಮ ತಕ್ಷಣದ ಅಗತ್ಯತೆಗೆ ಅನುಗುಣವಾಗಿ ಸಾಲ ಪಡೆಯುವ ಹೊಂದಾಣಿಕೆಯನ್ನು ನಿಮಗೆ ನೀಡುತ್ತದೆ. ಇದರರ್ಥ ನೀವು ಎಷ್ಟು ಹಣವನ್ನು ಉಪಯೋಗಿಸಿಕೊಂಡಿದ್ದೀರಿ ಹಾಗೂ ಎಷ್ಟು ಸಮಯದವರೆಗೆ ಎನ್ನುವುದರ ಮೇಲೆ ನೀವು ಪಾವತಿಸುವ ಬಡ್ಡಿಯನ್ನು ನಿಯಂತ್ರಿಸಬಹುದು. ಸುವಿಧಾ ಒವರ್ಡ್ರಾಫ್ಟ್‌ ಸಾಲ ನಿಮ್ಮ ಹಣಕಾಸು ವಹಿವಾಟಿಗೆ ಅನುಕೂಲಕರವಾಗಿ ಹೊಂದಿಕೆಯಾಗುವ ಪಾರದರ್ಶಕ ಆರ್ಥಿಕ ಸೌಲಭ್ಯವಾಗಿದೆ.

ಸಾಲವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಹಣಕಾಸಿನ ಸ್ಥಿರತೆ ಹಾಗೂ ಮರುಪಾವತಿ ಮಾಡುವ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಿಕೊಳ್ಳಿ. ಸಾಲದ ಉದ್ದೇಶ ಆಸ್ತಿಯನ್ನು ಒತ್ತೆ ಇಡುವ ಅಗತ್ಯವನ್ನು ಸಮರ್ಥಿಸಲಿ. ಅನಿರೀಕ್ಷಿತ ಸಂದರ್ಭಗಳಿಂದ ರಕ್ಷಿಸಿಕೊಳ್ಳಲು ಆಸ್ತಿಯ ಮೇಲೆ ವಿಮೆಯನ್ನು ಮಾಡಿಸುವ ಸಲಹೆಯನ್ನು ನೀಡಲಾಗುತ್ತದೆ. ಸಾಲ ಪರಿಶೀಲನಾ(ಪ್ರೊಸೆಸಿಂಗ್) ಶುಲ್ಕಗಳು ಮತ್ತು ಮುಂದಿನ ಪೂರ್ವಪಾವತಿ ದಂಡಗಳು ಸೇರಿದಂತೆ ಸಾಲಕ್ಕೆ ಸಂಬಂಧಿಸಿದ ವೆಚ್ಚಗಳನ್ನು ಕಡಿಮೆ ಅಂದಾಜು ಮಾಡಬೇಡಿ. ನಿಮ್ಮ ಆಸ್ತಿಯನ್ನು ಬೇಕಾಬಿಟ್ಟಿ ಉಪಯೋಗಿಸಿಕೊಳ್ಳುವುದನ್ನು ತಪ್ಪಿಸಿ ಹಾಗೂ ಆರ್ಥಿಕ ತೊಂದರೆ ಉಂಟಾದ ಸಂದರ್ಭದಲ್ಲಿ ಮರುಪಾವತಿಗಾಗಿ ಯಾವಾಗಲೂ ಬದಲಿ ಯೋಜನೆಯನ್ನು ಹೊಂದಿಸಿಕೊಳ್ಳಿ.