ಕೆಬಿಎಲ್ ಗುತ್ತಿಗೆ (ಲೀಸ್) ಮತ್ತು ನಗದು ಸಾಲ
ಈ ಸೌಲಭ್ಯವನ್ನು ಗುತ್ತಿಗೆ ಪಡೆದ ಆಸ್ತಿಯ ಮೂಲಕ ಸಂಪಾದನೆ ಮಾಡಲು ಬಯಸುವ ಆಸ್ತಿ ಮಾಲಿಕರನ್ನು ಕೇಂದ್ರೀಕರಿಸಿ ವಿನ್ಯಾಸಗೊಳಿಸಲಾಗಿದೆ. ನಿಮ್ಮ ಆಸ್ತಿಯ ಮೌಲ್ಯವು ನೀವು ನವೀಕರಿಸಲು ಅಥವಾ ಹೊಸ ಉದ್ಯಮಗಳಲ್ಲಿ ಹೂಡಿಕೆ ಮಾಡಲು ನೀವು ಯೋಜಿಸುತ್ತಿದ್ದಲ್ಲಿ ನಿಮಗೆ ನಾವು ಸಹಾಯಮಾಡುತ್ತೇವೆ. ಈ ಸಾಲ ಸೌಲಭ್ಯ ನಿಮ್ಮ ನಿವ್ವಳ ಬಾಡಿಗೆಯ 80% ವರೆಗೆ ಸಾಲ ಪಡೆಯಲು ಅನುಕೂಲಿಸುತ್ತದೆ. ವರ್ಷಕ್ಕೆ 12% ರಿಂದ ಪ್ರಾರಂಭವಾಗುವ ಬಡ್ಡಿದರದೊಂದಿಗೆ, ತಮ್ಮ ಆಸ್ತಿಯಿಂದ ಪಡೆಯಬಹುದಾದ ಗಳಿಕೆಯನ್ನು ಮುಂದುವರಿಸುತ್ತಾ ಅದರ ಗಳಿಕೆಯ ಸಾಮರ್ಥ್ಯವನ್ನು ಲಾಭಕ್ಕೆ ಬದಲಾವಣೆ ಮಾಡಿಕೊಳ್ಳಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. Read more
ಈ ಸಾಲ ನಿಮಗಾಗಿ ಏಕೆ
ನಿಮಗೆ ಬೇಕಾದುದನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ
ನೀವು ಗುತ್ತಿಗೆ ನೀಡಿದ ಆಸ್ತಿಯ ಸಾಮರ್ಥ್ಯದ ಮೇಲೆ ಸಾಲವನ್ನು ಪಡೆಯಿರಿ
ಬಾಡಿಗೆ ಆದಾಯದಿಂದ ಸುಲಭವಾಗಿ ಮರುಪಾವತಿ ಮಾಡಿ
ತ್ವರಿತ ಮಂಜೂರಾತಿಗಳೊಂದಿಗೆ ₹ 5 ಕೋಟಿ ವರೆಗೆ ಸಾಲ ಸೌಲಭ್ಯ ಪಡೆಯಿರಿ ಹೊಂದಿ
ಅರ್ಹತೆ
- ಗುತ್ತಿಗೆ ನೀಡಿದ ಆಸ್ತಿಯ ನಿಜ ಮಾಲೀಕರು
- ಗುತ್ತಿಗೆದಾರರು ಪ್ರತಿಷ್ಠಿತ ಘಟಕಗಳಾಗಿರಬೇಕು
- FEMA ಮಾರ್ಗಸೂಚಿಗಳ ಅನುಸರಣೆಯೊಂದಿಗಿರುವ ಭಾರತೀಯ ನಿವಾಸಿಗಳ ರೀತಿಯೇ
ಅಗತ್ಯವಿರುವ ದಾಖಲೆಗಳು
- ಅರ್ಜಿದಾರರ/ಖಾತರಿದಾರರ ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳು
- ಆದಾಯ ಪುರಾವೆ
- ಗುತ್ತಿಗೆ ಒಪ್ಪಂದ
- ಬ್ಯಾಂಕ್ ಲೆಕ್ಕವಿವರಣೆ
- ನಿರ್ದೇಶಕರು / ಪಾಲುದಾರರು /ಸಹ ಬಾಧ್ಯಸ್ಥರು/ಖಾತರಿದಾರರ ನಿವ್ವಳ ಮೌಲ್ಯದ ಹೇಳಿಕೆ
- ಪರವಾನಗಿ/ಅನುಮೋದನೆಗಳು
- ಮಾರಾಟ ಒಪ್ಪಂದ/ಮಾರಾಟ ಪತ್ರ/ಅಂದಾಜು
- ತೆರಿಗೆ ಪಾವತಿಸಿದ ರಸೀದಿಗಳು
- ಕಟ್ಟಡ ಯೋಜನೆ
1,2,3 ಹಂತಗಳು ಅಷ್ಟು ಸುಲಭ...
3 ಸರಳ ಹಂತಗಳಲ್ಲಿ ಕೆಬಿಎಲ್ ಗುತ್ತಿಗೆ ಹಾಗೂ ನಗದು ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಿ
ಹಂತ 1
ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ
ನಿಮ್ಮ ಹತ್ತಿರದ ಕರ್ನಾಟಕ ಬ್ಯಾಂಕ್ ಶಾಖೆಗೆ ಹೋಗಿ
ಹಂತ 2
ನಿಮ್ಮ ಮೂಲ ವಿವರಗಳೊಂದಿಗೆ ಪ್ರಾರಂಭಿಸಿ
ನಿಮ್ಮ ಸಾಲದ ಅವಶ್ಯಕತೆಯೊಂದಿಗೆ ನಿಮ್ಮ ಮೂಲ ವಿವರಗಳನ್ನು ಒದಗಿಸಿ.
ಹಂತ 3
ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ
ನಿಮ್ಮ ಖಾತೆಯನ್ನು ತೆರೆದಾಗ ನಮ್ಮ ಶಾಖೆಯ ಅಧಿಕಾರಿಗಳು ನಿಮಗೆ ತಿಳಿಸುತ್ತಾರೆ
ನಿಮಗಾಗಿ ಇರಬಹುದಾದ ಇತರ ಆಯ್ಕೆಗಳನ್ನು ವೀಕ್ಷಿಸಿ
ಸಾವಿರಾರು ಜನರು ನಂಬುವ ಹಾಗೂ ಆರ್ಥಿಕ ಉತ್ಕೃಷ್ಟತೆಗಾಗಿ ಆಯ್ಕೆಯಾಗಿರುವುದು
ಸುಲಭವಾಗಿ ತಿಳಿದುಕೊಳ್ಳುವುದರ ಮೂಲಕ ಸಾಲಗಳನ್ನು ಸರಳಗೊಳಿಸಿಕೊಳ್ಳಿ
ನಿಮಗೆ ಮಾಹಿತಿ ನೀಡುವ ಬೈಟ್-ಗಾತ್ರದ ಸಂಪನ್ಮೂಲಗಳು
ಪ್ರಶ್ನೆಗಳಿವೆಯೇ? ನಮ್ಮ ಬಳಿ ಉತ್ತರಗಳಿವೆ
ಸಾಲವನ್ನು ಮರುಪಾವತಿಸಲು ನೀವು ಗರಿಷ್ಠ 120 ತಿಂಗಳ ಅವಧಿಯನ್ನು ಹೊಂದಿರುತ್ತೀರಿ. ಹಣಕಾಸು ಹೊಂದಿಸುವ ಯೋಜನೆಗಾಗಿ ಸಾಕಷ್ಟು ಸಮಯವನ್ನು ಪಡೆದಿರುತ್ತೀರಿ
ಈಕ್ವೇಟೆಡ್ ಮಾಸಿಕ ಇನ್‌ಸ್ಟಾಲ್‌ಮೆಂಟ್ ಎನ್ನುವುದು ರಚನಾತ್ಮಕ ಪಾವತಿ ವಿಧಾನವಾಗಿದ್ದು ಅದು ನಿಮ್ಮ ಸಾಲವನ್ನು ಸ್ಥಿರ ಮಾಸಿಕ ಮೊತ್ತದಲ್ಲಿ ಮರುಪಾವತಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಇದು ಬಡ್ಡಿ ಮತ್ತು ಅಸಲು ಎರಡನ್ನೂ ಒಳಗೊಂಡಿರುತ್ತದೆ, ನಿಮ್ಮ ಮಾಸಿಕ ಬಜೆಟ್‌ಗೆ ಆರಾಮವಾಗಿ ಹೊಂದಿಕೊಂಡು ನಿಮ್ಮ ಸಾಲದ ಮೊತ್ತವನ್ನು ಕಡಿಮೆ ಮಾಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
ನಮ್ಮೊಂದಿಗೆ ಈಗಾಗಲೇ ಅಡಮಾನ ಇಟ್ಟಿರುವ ನಿಮ್ಮ ಆಸ್ತಿಯ ಮೇಲೆ ಸಾಲವನ್ನು ಸುರಕ್ಷಿತಗೊಳಿಸಲಾಗಿರುತ್ತದೆ, ಹಾಗಾಗಿ ಇದು ನೇರವಾದ ಪ್ರಕ್ರಿಯೆಯಾಗಿದೆ.
ಗೃಹ ಟಾಪ್-ಅಪ್ ಯೋಜನೆಗೆ ಬಡ್ಡಿದರಗಳು 9% ರಿಂದ ಪ್ರಾರಂಭವಾಗುತ್ತವೆ. ನಿಮ್ಮ ಆದಾಯ, ಕ್ರೆಡಿಟ್ ಇತಿಹಾಸ ಮತ್ತು ನಿಮ್ಮ ಮೇಲಾಧಾರದ ಮೌಲ್ಯದಂತಹ ವಿವಿಧ ಅಂಶಗಳನ್ನು ಅವಲಂಬಿಸಿ ನಿಖರವಾದ ದರವು ಬದಲಾಗಬಹುದು. ನಮ್ಮ ಸ್ಪರ್ಧಾತ್ಮಕ ದರಗಳು ನಿಮ್ಮ ಓವರ್‌ಡ್ರಾಫ್ಟ್ ಸೌಲಭ್ಯವು ಕೈಗೆಟುಕುವ ಬೆಲೆಯಲ್ಲಿದೆ ಹಾಗೂ ನಿಮ್ಮ ಹಣಕಾಸಿನ ಪರಿಸ್ಥಿತಿಗೆ ಹೊಂದಿಕೆಯಾಗುತ್ತದೆ ಎನ್ನುವುದನ್ನು ಖಚಿತಪಡಿಸುತ್ತದೆ.
ಸಾಲವು 120 ತಿಂಗಳವರೆಗೆ ಹೊಂದಿಕೊಳ್ಳುವ ಮರುಪಾವತಿ ಅವಧಿಯನ್ನು ನೀಡುತ್ತದೆ, ಯಾವುದೇ ಒತ್ತಡವಿಲ್ಲದೆ ನಿಮ್ಮ ಹಣಕಾಸನ್ನು ಯೋಜಿಸಲು ನಿಮಗೆ ಅವಕಾಶವನ್ನೂ ನೀಡುತ್ತದೆ.
ಕೆಬಿಎಲ್ ಗುತ್ತಿಗೆ ಹಾಗೂ ನಗದು ಸಾಲವು ಆಸ್ತಿಯ ಮಾಲೀಕರಿಗೆ ತಾವು ಗುತ್ತಿಗೆ ನೀಡಿದ ಆಸ್ತಿಗಳನ್ನು ತಮ್ಮ ಪೂರ್ಣ ಸಾಮರ್ಥ್ಯಕ್ಕೆ ಬಳಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನೀವು ಹೊಸ ವ್ಯಾಪಾರ ಉದ್ಯಮಗಳಿಗೆ ಹೂಡಿಕೆ ಮಾಡಲು ಯೋಜಿಸುತ್ತಿರಲಿ ಅಥವಾ ಇತರ ವೈಯಕ್ತಿಕ ಹಣಕಾಸಿನ ಗುರಿಗಳನ್ನು ಹೊಂದಿರಲಿ ಈ ಸಾಲವನ್ನು ನಿಮ್ಮ ಮಹತ್ವಾಕಾಂಕ್ಷೆಗಳಿಗೆ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ನಿಮ್ಮ ನಿವ್ವಳ ಬಾಡಿಗೆ ಕರಾರುಗಳ ಮೇಲೆ 80% ವರೆಗೆ ಸಾಲವನ್ನು ಪಡೆಯಬಹುದು. KBL ಗುತ್ತಿಗೆ ಹಾಗೂ ನಗದು ಸಾಲವು ನಿಮ್ಮ ಆಸ್ತಿಯ ಗುಪ್ತ ಮೌಲ್ಯವನ್ನು ಉಪಯೋಗಿಸಿಕೊಳ್ಳಲು ನಿಮಗೆ ಅನುವು ಮಾಡಿಕೊಡುತ್ತದೆ. ಇದು ₹5 ಕೋಟಿ ವರೆಗಿನ ಗಣನೀಯ ಸಾಲದ ಮೊತ್ತವನ್ನು ಒದಗಿಸುತ್ತದೆ. 120 ತಿಂಗಳವರೆಗೆ ಆರಾಮದಾಯಕ ಮರುಪಾವತಿ ಅವಧಿಯೊಂದಿಗೆ, ನಿಮ್ಮ ಆಸ್ತಿಯ ಗಳಿಕೆಯ ಸಾಮರ್ಥ್ಯವನ್ನು ನೀವು ಬಳಸಿಕೊಳ್ಳಬಹುದು ಹಾಗೂ ಅದರಿಂದ ನಿರಂತರ ಆದಾಯದ ಪ್ರಯೋಜನಗಳನ್ನು ಆನಂದಿಸಬಹುದು.
ಯಾವುದೇ ಸಾಲವನ್ನು ತೆಗೆದುಕೊಳ್ಳುವ ನಿರ್ಧಾರದಲ್ಲಿ ಬಡ್ಡಿದರಗಳು ಪ್ರಮುಖ ಅಂಶವಾಗಿದ್ದು ಮತ್ತು ಕೆಬಿಎಲ್ ನ ಗುತ್ತಿಗೆ ಹಾಗೂ ನಗದು ಸಾಲದೊಂದಿಗೆ, ನೀವು ವರ್ಷಕ್ಕೆ 12% ನ ಆಕರ್ಷಕ ಆರಂಭಿಕ ಬಡ್ಡಿ ದರದಿಂದ ಪ್ರಯೋಜನವನ್ನು ಪಡೆಯಬಹುದು. ಈ ಸ್ಪರ್ಧಾತ್ಮಕ ಬಡ್ಡಿ ದರವು ಸುರಕ್ಷಿತ ಸಾಲದ ಹೊಂದಾಣಿಕೆಯೊಂದಿಗೆ ಕೈಗೆಟುಕುವ ರೀತಿಯಲ್ಲಿ ರಚಿಸಲಾಗಿದೆ. ನಿಮ್ಮ ಹಣಕಾಸು ಕಾರ್ಯಕ್ರಮಗಳು ಎಚ್ಚರಿಕೆಯಿಂದ ಮಾಡಿದ್ದಾಗಿದ್ದೆಂಬುದನ್ನು ತೋರಿಸುತ್ತದೆ. ಪದ್ಧತಿಗಳಿಗೆ ಬದ್ಧರಾಗಿದ್ದೇವೆ. ಈ ರೀತಿಯಾಗಿ, ನೀವು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಹಾಗೂ ನಿಮ್ಮ ಹಣಕಾಸಿನ ಮೇಲೆ ಅನಗತ್ಯ ಒತ್ತಡವಿಲ್ಲದೆ ನಿಮ್ಮ ಆಸ್ತಿಯ ಸಾಮರ್ಥ್ಯವನ್ನು ತಿಳಿದುಕೊಂಡು ಆರ್ಥಿಕವಾಗಿ ಬಳಸಿಕೊಂಡು ಅದನ್ನು ಆನಂದಿಸಬಹುದು.
ಸಾಲವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಹಣಕಾಸಿನ ಸ್ಥಿರತೆ ಹಾಗೂ ಮರುಪಾವತಿ ಮಾಡುವ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಿಕೊಳ್ಳಿ. ಸಾಲದ ಉದ್ದೇಶ ಆಸ್ತಿಯನ್ನು ಒತ್ತೆ ಇಡುವ ಸಂಕಲ್ಪವನ್ನು ಸಮರ್ಥಿಸುವಂತಿರಲಿ. ಅನಿರೀಕ್ಷಿತ ಸಂದರ್ಭಗಳಿಂದ ರಕ್ಷಿಸಿಕೊಳ್ಳಲು ಆಸ್ತಿಯ ಮೇಲೆ ವಿಮೆಯನ್ನು ಮಾಡಿಸುವ ಸಲಹೆಯನ್ನು ನೀಡಲಾಗುತ್ತದೆ. ಪ್ರಕ್ರಿಯಾ ಶುಲ್ಕಗಳು ಮತ್ತು ಸಂಭವನೀಯ ಪೂರ್ವಪಾವತಿ ದಂಡಗಳು ಸೇರಿದಂತೆ ಸಾಲಕ್ಕೆ ಸಂಬಂಧಿಸಿದ ವೆಚ್ಚಗಳನ್ನು ಕಡಿಮೆ ಅಂದಾಜು ಮಾಡಬೇಡಿ. ನಿಮ್ಮ ಆಸ್ತಿಯನ್ನು ನಿಮಗೆ ನಷ್ಟವಾಗುವ ರೀತಿ ಉಪಯೋಗಿಸಬೇಡಿ. ಹಾಗೂ ಆರ್ಥಿಕ ತೊಂದರೆ ಉಂಟಾದ ಸಂದರ್ಭದಲ್ಲಿ ಮರುಪಾವತಿಗಾಗಿ ಯಾವಾಗಲೂ ಬದಲಿ ಯೋಜನೆಯನ್ನು ಹೊಂದಿರಿಸಿಕೊಳ್ಳಿ